AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ಹಜಾರೆ ಟೂರ್ನಿ 2021: IPL 2022 ರಲ್ಲಿ ಚಾನ್ಸ್​ ಪಡೆಯಲು ಕೊನೆಯ ಅವಕಾಶ

Vijay Hazare Trophy 2021: ಮೊದಲ ದಿನದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವಿನ್ನರ್ ತಮಿಳುನಾಡು ತಂಡವನ್ನು ಎದುರಿಸಲಿದೆ. ಮುಂಬೈ ತಂಡದ ನಾಯಕನಾಗಿ ಶಮ್ಸ್ ಮುಲಾನಿ ತಂಡವನ್ನು ಮುನ್ನಡೆಸಲಿದ್ದು, ಬಿ ಗುಂಪಿನ ಈ ಪಂದ್ಯ ತಿರುವನಂತಪುರದಲ್ಲಿ ನಡೆಯಲಿದೆ.

ವಿಜಯ್ ಹಜಾರೆ ಟೂರ್ನಿ 2021: IPL 2022 ರಲ್ಲಿ ಚಾನ್ಸ್​ ಪಡೆಯಲು ಕೊನೆಯ ಅವಕಾಶ
Karnataka Team
TV9 Web
| Updated By: Digi Tech Desk|

Updated on:Dec 08, 2021 | 10:50 AM

Share

ಭಾರತದ ದೇಶೀಯ ಕ್ರಿಕೆಟ್‌ನ ಒನ್​ಡೇ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಬುಧವಾರದಿಂದ ಶುರುವಾಗಲಿದೆ. ಸೈಯದ್ ಮುಷ್ತಾಕ್ ಟ್ರೋಫಿ ನಂತರ, ಐಪಿಎಲ್‌ನ ಮೆಗಾ ಹರಾಜಿಗೂ ಮುನ್ನ ಭಾರತದ ಯುವ ಕ್ರಿಕೆಟಿಗರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಇದು ಕೊನೆಯ ಅವಕಾಶವಾಗಿದೆ. ಏಕೆಂದರೆ ಮುಂದಿನ ತಿಂಗಳು ಐಪಿಎಲ್ ಹರಾಜು ನಡೆಯಲಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಯುವ ಕ್ರಿಕೆಟಿಗರು ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯಬಹುದು. ಅಷ್ಟೇ ಅಲ್ಲದೆ ಭರ್ಜರಿ ಪ್ರದರ್ಶನ ನೀಡಿದ ಆಟಗಾರರ ಖರೀದಿಗಾಗಿ ಪ್ರಮುಖ ಫ್ರಾಂಚೈಸಿಗಳು ಪೈಪೋಟಿ ನಡೆಸುವುದರಿಂದ ದೊಡ್ಡ ಮೊತ್ತದ ಬಿಡ್ ಕೂಡ ಪಡೆಯಬಹುದಾಗಿದೆ. ಹೀಗಾಗಿ ಈ ಬಾರಿ ವಿಜಯ್ ಹಜಾರೆ ಟೂರ್ನಿಯು ಭಾರತೀಯ ಯುವ ಕ್ರಿಕೆಟಿಗರ ಪಾಲಿಗೆ ಮಹತ್ವದ ಟೂರ್ನಿಯಾಗಿ ಮಾರ್ಪಟ್ಟಿದೆ.

ಬುಧವಾರದಿಂದ ಆರಂಭವಾಗುವ ಈ ಟೂರ್ನಿ ಡಿಸೆಂಬರ್ 26ರವರೆಗೆ ನಡೆಯಲಿದ್ದು, ಒಟ್ಟು 105 ಪಂದ್ಯಗಳು ನಡೆಯಲಿವೆ. ದೇಶದ 38 ತಂಡಗಳು ಇದರಲ್ಲಿ ಭಾಗವಹಿಸಲಿದ್ದು, ಆರು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಎಲೈಟ್ ಗುಂಪಿನಲ್ಲಿ 6 ತಂಡಗಳನ್ನು ಇರಿಸಲಾಗಿದೆ. ಹಾಗೆಯೇ ಪ್ಲೇಟ್ ಗುಂಪಿನಲ್ಲಿ 8 ತಂಡಗಳು ಇರುತ್ತವೆ. ಗುಂಪು ಹಂತದಲ್ಲಿ ಪ್ರತಿ ತಂಡವು ತಲಾ 6 ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಡಿಸೆಂಬರ್ 19ರಿಂದ ನಾಕೌಟ್ ಹಂತದ ಪಂದ್ಯಗಳು ಶುರುವಾಗಲಿದೆ. ಡಿಸೆಂಬರ್ 19 ರಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 21 ಮತ್ತು 22 ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ಸೆಮಿಫೈಲ್ ಡಿಸೆಂಬರ್ 24 ರಂದು ನಡೆಯಲಿದ್ದು, ಫೈನಲ್ ಪಂದ್ಯವು ಡಿಸೆಂಬರ್ 25 ರಂದು ಜರುಗಲಿದೆ. ಇನ್ನು ಐಪಿಎಲ್ ಮೆಗಾ ಹರಾಜು ಜನವರಿಯಲ್ಲಿ ನಡೆಯುವ ಕಾರಣ ಟೂರ್ನಿಯ ಬೆಸ್ಟ್ ಪ್ಲೇಯರ್ಸ್​​​ಗೆ ಐಪಿಎಲ್​ನಲ್ಲಿ ಅವಕಾಶವನ್ನು ನಿರೀಕ್ಷಿಸಬಹುದು.

ಉದ್ಘಾಟನಾ ಪಂದ್ಯ: ಮೊದಲ ದಿನದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವಿನ್ನರ್ ತಮಿಳುನಾಡು ತಂಡವನ್ನು ಎದುರಿಸಲಿದೆ. ಮುಂಬೈ ತಂಡದ ನಾಯಕನಾಗಿ ಶಮ್ಸ್ ಮುಲಾನಿ ತಂಡವನ್ನು ಮುನ್ನಡೆಸಲಿದ್ದು, ಬಿ ಗುಂಪಿನ ಈ ಪಂದ್ಯ ತಿರುವನಂತಪುರದಲ್ಲಿ ನಡೆಯಲಿದೆ. ಮುಂಬೈ ತಂಡವು ಎಡಗೈ ಆರಂಭಿಕರಾದ ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಸಿದ್ಧೇಶ್ ಲಾಡ್ ಮತ್ತು ಆಲ್ ರೌಂಡರ್ ಶಿವಂ ದುಬೆ ಅವರನ್ನು ಒಳಗೊಂಡಿದೆ. ಹಾಗೆಯೇ ಬೌಲಿಂಗ್​ನಲ್ಲಿ ಅನುಭವಿ ಧವಳ್ ಕುಲಕರ್ಣಿ ಇದ್ದಾರೆ. ಇನ್ನೊಂದೆಡೆ ತಮಿಳುನಾಡು ತಂಡದಲ್ಲಿ ದಿನೇಶ್ ಕಾರ್ತಿಕ್ ಮತ್ತು ವಾಷಿಂಗ್ಟನ್ ಸುಂದರ್ ಇದ್ದಾರೆ. ಇನ್ನು ಕರ್ನಾಟಕ ತಂಡವು ಬುಧವಾರದ ಮತ್ತೊಂದು ಪಂದ್ಯದಲ್ಲಿ ಪುದುಚೇರಿಯನ್ನು ಎದುರಿಸಲಿರುವುದು ವಿಶೇಷ.

ಡಿಸೆಂಬರ್ 8 ರಂದು ನಡೆಯುವ ಪಂದ್ಯಗಳು ಮತ್ತು ಸಮಯ: ಗೋವಾ vs ಅಸ್ಸಾಂ, 8:30 AM ರೈಲ್ವೇ ವಿರುದ್ಧ ಸೇವೆ 8:30 AM ಪಂಜಾಬ್ ವಿರುದ್ಧ ರಾಜಸ್ಥಾನ 8:30 AM ತಮಿಳುನಾಡು vs ಮುಂಬೈ 8:30 AM ನಾಗಾಲ್ಯಾಂಡ್ vs ಮಣಿಪುರ, 9 AM ಮೇಘಾಲಯ vs ಸಿಕ್ಕಿಂ, 9 AM ತ್ರಿಪುರಾ vs ಅರುಣಾಚಲ ಪ್ರದೇಶ, 9 AM ಬಿಹಾರ vs ಮಿಜೋರಾಂ, 9 AM ಗುಜರಾತ್ vs ಜಮ್ಮು ಮತ್ತು ಕಾಶ್ಮೀರ, 9 AM ಆಂಧ್ರ ಪ್ರದೇಶ vs ಒಡಿಶಾ, ಎಲೈಟ್, 9 AM ವಿದರ್ಭ vs ಹಿಮಾಚಲ ಪ್ರದೇಶ , 9 AM ಕೇರಳ vs ಚಂಡೀಗಢ, 9 AM ಛತ್ತೀಸ್‌ಗಢ vs ಉತ್ತರಾಖಂಡ, 9 AM ಬರೋಡಾ vs ಬೆಂಗಾಲ್, 9 AM ಕರ್ನಾಟಕ vs ಪುದುಚೇರಿ, 9 AM ಜಾರ್ಖಂಡ್ vs ದೆಹಲಿ, 9 AM ಹೈದರಾಬಾದ್ vs ಹರಿಯಾಣ, 9 AM ಉತ್ತರ ಪ್ರದೇಶ vs ಸೌರಾಷ್ಟ್ರ, 9 AM ಮಧ್ಯಪ್ರದೇಶ vs ಮಹಾರಾಷ್ಟ್ರ, 9 AM

ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್​: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ

ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

Published On - 9:31 pm, Tue, 7 December 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ