ಭಾರತ ಮತ್ತು ಪಾಕಿಸ್ತಾನ (India and Pakistan) ನಡುವಿನ ಪಂದ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಎರಡೂ ತಂಡಗಳು ಅಕ್ಟೋಬರ್ 23 ರಂದು ಪರಸ್ಪರ ವಿರುದ್ಧ ಆಡುವುದರೊಂದಿಗೆ ತಮ್ಮ ಟಿ20 ವಿಶ್ವಕಪ್ (T20 World Cup) ಅಭಿಯಾನವನ್ನು ಆರಂಭಿಸಲಿವೆ. ಟೀಂ ಇಂಡಿಯಾ ಜೊತೆಗೆ ಭಾರತದಲ್ಲೂ ಈ ಪಂದ್ಯಕ್ಕೆ ಭರ್ಜರಿ ತಯಾರಿ ನಡೆದಿದೆ. ಇಡೀ ದೇಶವೇ ರೋಹಿತ್ ಶರ್ಮಾ ಸೇನೆಯ ಉತ್ಸಾಹವನ್ನು ನಾನಾ ರೀತಿಯಲ್ಲಿ ಹೆಚ್ಚಿಸುತ್ತಿದೆ. ಇದರ ಭಾಗವಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan) ಕೂಡ ಕವಿತೆಯೊಂದನ್ನು ವಾಚನ ಮಾಡುವುದರೊಂದಿಗೆ ರೋಹಿತ್ (Rohit Sharma) ಸೇನೆಗೆ ಶಕ್ತಿ ತುಂಬಿದ್ದಾರೆ.
ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಈ ಕವಿತೆಯನ್ನು ವಾಚಿಸಿರುವ ಅಮಿತಾಬ್ ಬಚ್ಚನ್, ಈ ಒಂದೂವರೆ ನಿಮಿಷದ ವಿಡಿಯೋದಲ್ಲಿ ಟಿ20 ವಿಶ್ವಕಪ್ ಆಡುತ್ತಿರುವ ಟೀಮ್ ಇಂಡಿಯಾವನ್ನು ಹುರಿದುಂಬಿಸಿದ್ದಾರೆ. ಅಮಿತಾಬ್ ಬಚ್ಚನ್, ವಾಚಿಸಿದ ಈ ಕವಿತೆಯ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.
Iss Sunday hone waali T20 Worldcup match ke liye @SrBachchan ji aur KBC ki team ki taraf se #TeamIndia ko all the best! ??
Dekhiye #KaunBanegaCrorepati, aaj raat 9 baje, sirf Sony par.#KBC2022 pic.twitter.com/cfTWwx15E4
— sonytv (@SonyTV) October 20, 2022
ಮೆಲ್ಬೋರ್ನ್‌ನಲ್ಲಿ ರೋಹಿತ್ ಪಡೆಗೆ ಸ್ವಾಗತ
ಇನ್ನು ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಮೆಲ್ಬೋರ್ನ್ ತಲುಪಿದೆ. ಮೆಲ್ಬೋರ್ನ್ ತಲುಪಿದ ನಂತರ ಟೀಂ ಇಂಡಿಯಾಗೆ ವಿಮಾನ ನಿಲ್ದಾಣದಲ್ಲಿಯೂ ಅದ್ಧೂರಿ ಸ್ವಾಗತ ದೊರೆಯಿತು. ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ತಂಡವನ್ನು ಸ್ವಾಗತಿಸಿದರು. ಈಗ ಮೆಲ್ಬೋರ್ನ್ ತಲುಪಿರುವ ರೋಹಿತ್ ಬಳಗ ಪಾಕ್ ವಿರುದ್ಧದ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದೆ.
ಇದನ್ನೂ ಓದಿ: ‘ಭಾರತದಲ್ಲಿ ಅಂತಹ ಬೌಲರ್ ಇಲ್ಲ, ಇಂಗ್ಲೆಂಡ್‌ಗೆ ಪ್ರಧಾನಿ ಇಲ್ಲ’; ವಾಸಿಂ ಜಾಫರ್ ಟ್ವೀಟ್ ಸಖತ್ ವೈರಲ್
ಅಭ್ಯಾಸ ಪಂದ್ಯ ರದ್ದು
ರೋಹಿತ್ ಶರ್ಮಾ ತಂಡ ಈ ಹಿಂದೆ ಬ್ರಿಸ್ಬೇನ್‌ನಲ್ಲಿ ವಿಶ್ವಕಪ್ ಅಭ್ಯಾಸ ಪಂದ್ಯವನ್ನು ಆಡಿತ್ತು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ, ನ್ಯೂಜಿಲೆಂಡ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಮೆಲ್ಬೋರ್ನ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ
ಬ್ಯೂರೋ ಆಫ್ ಮೆಟ್ರೋಲಜಿ ವರದಿಗಳ ಪ್ರಕಾರ, ಭಾನುವಾರ ಮೆಲ್ಬೋರ್ನ್‌ನಲ್ಲಿ ಶೇ. 80 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆ ದಿನ ಮೆಲ್ಬೋರ್ನ್‌ನಲ್ಲಿ ಒಂದು ಮಿಲಿಮೀಟರ್ನಿಂದ 5 ಮಿ.ಮೀ ವರೆಗೆ ಮಳೆಯಾಗಬಹುದು ಎಂದು ವರದಿಯಾಗಿದೆ. ವಿಶೇಷವಾಗಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅಭಿಮಾನಿಗಳು ಆಗಸದತ್ತ ಮುಖಮಾಡುವ ಪರಿಸ್ಥಿತಿ ಎದುರಾಗಿದೆ. ಇದು ಸಾಲದೆಂಬಂತೆ ಈ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ಐಸಿಸಿ ನಿಗದಿ ಪಡಿಸದೆ ಇರುವುದರಿಂದ ಆ ದಿನ ಮಳೆ ಬಾರದಿರಲಿ ಎಂಬುದು ಅಭಿಮಾನಿಗಳ ಕೊರಿಕೆಯಾಗಿದೆ.
ಟಿ20 ವಿಶ್ವಕಪ್ಗೆ ಉಭಯ ತಂಡಗಳು
ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಶಾನ್ ಮಸೂದ್, ಮೊಹಮ್ಮದ್ ನವಾಜ್, ಶಾಹೀನ್ ಶಾ ಆಫ್ರಿದಿ, ಖುಷ್ದಿಲ್ ಶಾ, ಮೊಹಮ್ಮದ್ ವಾಸಿಂ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ