‘ಭಾರತದಲ್ಲಿ ಅಂತಹ ಬೌಲರ್ ಇಲ್ಲ, ಇಂಗ್ಲೆಂಡ್‌ಗೆ ಪ್ರಧಾನಿ ಇಲ್ಲ’; ವಾಸಿಂ ಜಾಫರ್ ಟ್ವೀಟ್ ಸಖತ್ ವೈರಲ್

ಟೀಂ ಇಂಡಿಯಾದ ಪ್ರಮುಖ ಕೊರೆತೆಯಾಗಿರುವ ವೇಗದ ಬೌಲಿಂಗ್ ಬಗ್ಗೆ ಮಾತನಾಡಿರುವ ಜಾಫರ್, ಟೀಂ ಇಂಡಿಯಾದಲ್ಲಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಇಲ್ಲ. ಹಾಗೆಯೇ 'ಇಂಗ್ಲೆಂಡ್‌ಗೆ ಪ್ರಧಾನಿ ಇಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

‘ಭಾರತದಲ್ಲಿ ಅಂತಹ ಬೌಲರ್ ಇಲ್ಲ, ಇಂಗ್ಲೆಂಡ್‌ಗೆ ಪ್ರಧಾನಿ ಇಲ್ಲ’; ವಾಸಿಂ ಜಾಫರ್ ಟ್ವೀಟ್ ಸಖತ್ ವೈರಲ್
wasim jaffer, liz truss
Follow us
TV9 Web
| Updated By: ಪೃಥ್ವಿಶಂಕರ

Updated on:Oct 21, 2022 | 11:32 AM

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಟೀಂ ಇಂಡಿಯಾದ ಮಾಜಿ ಟೆಸ್ಟ್ ಕ್ರಿಕೆಟಿಗ ವಾಸೀಂ ಜಾಫರ್ (Wasim Jaffer) ತಮ್ಮ ತಮಾಷದಾಯಕ ಪೋಸ್ಟ್​ಗಳಿಂದ ನೆಟ್ಟಿಗರಿಗೆ ಆಗಾಗ್ಗೆ ಮನರಂಜನೆಯ ರಸದೌತಣ ನೀಡುತ್ತಿರುತ್ತಾರೆ. ಇದಕ್ಕೆ ಸಾಕಷ್ಟು ನಿದರ್ಶನಗಳು ಇವೆ. ಒಮ್ಮೊಮ್ಮೆ ವಿದೇಶಿ ಆಟಗಾರರು ಟೀಂ ಇಂಡಿಯಾವನ್ನು (Team India) ತೆಗಳಿ ಮಾತನಾಡಿದಾಗ, ವಾಸಿಂ ಜಾಫರ್ ಕೂಡ ತಮ್ಮ ವಿನೋದಾತ್ಮಕ ಪೋಸ್ಟ್ ಮೂಲಕವೇ ಆ ಕ್ರಿಕೆಟಿಗರಿಗೆ ತಿರುಗೇಟು ನೀಡುತ್ತಿರುತ್ತಾರೆ. ಈಗ ಇಂತಹದ್ದೆ ಪೋಸ್ಟ್ ಹಾಕಿರುವ ಜಾಫರ್, ಈ ಬಾರಿ ಇಂಗ್ಲೆಂಡ್ ದೇಶವನ್ನು ಟಾರ್ಗೆಟ್ ಮಾಡಿದ್ದಾರೆ.

ಕೇವಲ 45 ದಿನಗಳಲ್ಲಿ ತಮ್ಮ ಬ್ರಿಟನ್ ಪ್ರಧಾನಿ ಹುದ್ದೆಯಿಂದ ಲಿಜ್ ಟ್ರಸ್ (UK prime minister Liz Truss) ಕೆಳಗಿಳಿದಿದ್ದಾರೆ. ಈಗ ಲಿಜ್ ಟ್ರಸ್ ಅವರ ರಾಜೀನಾಮೆ ಕುರಿತು ಟ್ಟಿಟರ್​ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ವಾಸಿಂ ಜಾಫರ್, ಈ ಪೋಸ್ಟ್​ನಲ್ಲಿ ಕ್ರೀಡೆ ಹಾಗೂ ರಾಜಕೀಯ ಎರಡನ್ನು ಮಿಶ್ರಣ ಮಾಡಿದ್ದಾರೆ. ವಾಸ್ತವವಾಗಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಪ್ರಮುಖ ತಂಡಗಳ ಕೊರತೆಗಳ ಬಗ್ಗೆ ಜಾಫರ್ ತಮ್ಮ ಟ್ವೀಟ್​ನಲ್ಲಿ ಸ್ವಾಟ್ ವಿಶ್ಲೇಷಣೆ (SWOT- strengths, weaknesses, opportunities, and threats) ಮಾಡಿದ್ದಾರೆ. ಇದರಲ್ಲಿ ಟೀಂ ಇಂಡಿಯಾದ ಪ್ರಮುಖ ಕೊರೆತೆಯಾಗಿರುವ ವೇಗದ ಬೌಲಿಂಗ್ ಬಗ್ಗೆ ಮಾತನಾಡಿರುವ ಜಾಫರ್, ಟೀಂ ಇಂಡಿಯಾದಲ್ಲಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಇಲ್ಲ. ಹಾಗೆಯೇ ‘ಇಂಗ್ಲೆಂಡ್‌ಗೆ ಪ್ರಧಾನಿ ಇಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Ishan Kishan: 7 ಸಿಕ್ಸರ್, 5 ಬೌಂಡರಿ; 64 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಇಶಾನ್ ಕಿಶನ್..!

ಇಂಗ್ಲೆಂಡ್‌ಗೆ ಪ್ರಧಾನಿ ಇಲ್ಲ

ತಮ್ಮ ಟ್ವೀಟ್​ನಲ್ಲಿ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುತ್ತಿರುವ ಪ್ರಮುಖ 4 ತಂಡಗಳ ಕೊರತೆಗಳ ಬಗ್ಗೆ ಮಾತನಾಡಿರುವ ಜಾಫರ್, ಮೊದಲನೆಯಾದಾಗಿ ಟೀಂ ಇಂಡಿಯಾದಲ್ಲಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಇಲ್ಲ ಎಂದಿದ್ದಾರೆ. ಆ ಬಳಿಕ ಪಾಕ್ ತಂಡದ ಕೊರತೆಯ ಬಗ್ಗೆ ಹೇಳಿರುವ ಜಾಫರ್, ಈ ತಂಡದಲ್ಲಿ ಅನುಭವಿ ಗೇಮ್ ಫಿನಿಶರ್ ಇಲ್ಲ ಎಂದಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾದಲ್ಲಿ ಉತ್ತಮ ದಾಖಲೆಯನ್ನು ಹೊಂದಿಲ್ಲ ಎಂದಿರುವ ಜಾಫರ್, ಶ್ರೀಲಂಕಾ ತಂಡದಲ್ಲಿ ಹೆಚ್ಚು ಅನುಭವಿಗಳಿಲ್ಲ ಎಂದಿದ್ದಾರೆ. ಜೊತೆಗೆ ಇವೆಲ್ಲವುಗಳೊಂದಿಗೆ ಇಂಗ್ಲೆಂಡ್ ದೇಶದ ಸದ್ಯದ ಕೊರತೆಯನ್ನು ಹೋಲಿಕೆ ಮಾಡಿರುವ ಜಾಫರ್, ಇಂಗ್ಲೆಂಡ್‌ಗೆ ಪ್ರಧಾನಿ ಇಲ್ಲ ಎಂದು ತಮ್ಮ ಟ್ವೀಟ್​ನಲ್ಲಿ ಸೇರಿಸಿದ್ದಾರೆ.

ಆರ್ಥಿಕ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲ

ಲಿಜ್ ಟ್ರಸ್ ಯುಕೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ವಾಸಿಂ ಜಾಫರ್, ಈ ತಮಾಷದಾಯಕ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದು, ಈಗ ಈ ಟ್ವೀಟ್ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. 47 ವರ್ಷ ವಯಸ್ಸಿನ ಲಿಜ್ ಟ್ರಸ್ ತಾವು ಅಧಿಕಾರವಹಿಸಿಕೊಂಡ ಕೇವಲ 45 ದಿನಗಳ ನಂತರ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಆರ್ಥಿಕ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲರಾಗಿದ್ದರಿಂದ ರಾಜಿನಾಮೆ ನೀಡಿದ್ದಾಗಿ ಲಿಜ್ ಟ್ರಸ್ ಹೇಳಿಕೊಂಡಿದ್ದು, ಬ್ರಿಟನ್‌ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಲಿದೆ. ಮಾಜಿ ಹಣಕಾಸು ಸಚಿವ ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿ ರೇಸ್​ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ಸ್ಥಾನಕ್ಕೆ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಿದ ಬಳಿಕ ನಡೆದ ಚುನಾವಣೆಯಲ್ಲಿ ಲಿಜ್‌ ಟ್ರಸ್‌ ಮತ್ತು ಭಾರತ ಮೂಲದ ರಿಷಿ ಸುನಾಕ್‌ ನಡುವೆ ಪ್ರಧಾನಿ ಪಟ್ಟಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಸುನಕ್‌ ಅವರನ್ನು ಮಣಿಸಿ ಟ್ರಸ್‌ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 am, Fri, 21 October 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ