ಪಂದ್ಯದ ಮಳೆಯಿಂದಾಗಿ ಅಡಚಣೆಯುಂಟಾಗುವುದು ಸಾಮಾನ್ಯ. ಈ ವೇಳೆ ಕೆಲ ಆಟಗಾರರು ಅಭ್ಯಾಸ ಮಾಡುವುದನ್ನು ಕಾಣಬಹುದು. ಇಲ್ಲ ಕೆಲ ಆಟಗಾರರು ಅಭಿಮಾನಿಗಳನ್ನು ರಂಜಿಸುವತ್ತ ಗಮನಹರಿಸುತ್ತಾರೆ. ಆದರೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲಿ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಪಂದ್ಯದ ವೇಳೆ ಆಟಗಾರನೊಬ್ಬ ಮೈದಾನದಲ್ಲೇ ಸಿಗರೇಟ್ ಸೇದುತ್ತಾ ನಿಂತಿರುವುದು ಕಂಡು ಬಂದಿದೆ. ಹೀಗೆ ಧಮ್ ಮಾರೋ ಧಮ್ ಮೂಲಕ ಮೈಮರೆತ ಆಟಗಾರ ಅಫ್ಘಾನಿಸ್ತಾನದ ಸ್ಟಾರ್ ಬ್ಯಾಟ್ಸ್ಮನ್ ಮೊಹಮ್ಮದ್ ಶಹಜಾದ್. ಶೆಹಜಾದ್ ಮಳೆಯಿಂದ ಪಂದ್ಯ ಸ್ಥಗಿತಗೊಂಡಾಗ ಮೈದಾನದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ. ಇದೀಗ ಈ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಫೆಬ್ರವರಿ 4 ರಂದು ಈ ಘಟನೆ ನಡೆದಿದ್ದು, ಮಿನಿಸ್ಟರ್ ಗ್ರೂಪ್ ಢಾಕಾ ಮತ್ತು ಕೊಮಿಲ್ಲಾ ವಿಕ್ಟೋರಿಯನ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಆದರೆ, ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯುಂಟಾಗಿತ್ತು. ಮಳೆ ಕಡಿಮೆಯಾದ ಬಳಿಕ ಮೈದಾನಕ್ಕೆ ಆಗಮಿಸಿದ ಶಹಜಾದ್ ಸಿಗರೇಟ್ ಸೇದುತ್ತಾ ತಿರುಗಾಡುತ್ತಿದ್ದರು. ಈ ಕ್ಷಣಗಳನ್ನು ಕ್ಯಾಮೆರಾಮ್ಯಾನ್ ಸೆರೆಹಿಡಿದಿದ್ದಾರೆ. ಇದೀಗ ಶಹಜಾದ್ ಧೂಮಪಾನ ಮಾಡುತ್ತಿರುವ ವಿಡಿಯೋ ಮತ್ತು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Mohammad Shahzad was reprimanded for smoking on the ground in the BPL yesterday. pic.twitter.com/fZoPdnPKh5
— Mufaddal Vohra (@mufaddal_vohra) February 5, 2022
ಶಹಜಾದ್ ಅವರ ಈ ನಡೆಯ ಬಗ್ಗೆ ಇದೀಗ ಭಾರೀ ಟೀಕೆ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆ ಅಭಿಮಾನಿಗಳ ಮನ ಗೆದ್ದಿದ್ದ ಶಹಜಾದ್ ಇದೀಗ 3 ತಮ್ಮ ನಡೆಗಳಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವುದು ವಿಶೇಷ. ಹೌದು, 3 ದಿನಗಳ ಹಿಂದೆಯಷ್ಟೇ ಸಿಲ್ಹೆಟ್ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಇದಾದ ಬಳಿಕ ಔಟ್ ಆಗಿ ಪೆವಿಲಿಯನ್ ಕಡೆ ಹಿಂತಿರುಗುವ ವೇಳೆ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದ ಪ್ರಸಿದ್ಧ ಗೀತೆ ಶ್ರೀವಲ್ಲಿಗೆ ನೃತ್ಯ ಮಾಡುತ್ತಾ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಮೈದಾನದಲ್ಲೇ ಧೂಮಪಾನ ಮಾಡುವ ಶಹಜಾದ್ ಟೀಕೆಗೆ ಗುರಿಯಾಗಿದ್ದಾರೆ.
Afghanistan Cricket Player #Shahzad Join This Trend Donig #Srivalli Step And #ThaggedeLe ???#BPLT20 #Pushpa ??#PushpaTheRise #PushpaTheRule pic.twitter.com/m0BoFKiKtu
— Ala Bezawada Lo (@PrasadKoratanAA) January 28, 2022
ಇನ್ನು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಪಿಎಲ್ ಆಯೋಜಕರು ಈಗಾಗಲೇ ಶಹಜಾದ್ ಅವರಿಗೆ ಮೊದಲ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಶಿಸ್ತು ಕ್ರಮಕ್ಕಾಗಿ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಅತ್ತ ಮೊಹಮ್ಮದ್ ಶಹಜಾದ್ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(BPL 2022: Mohammad Shahzad gets reprimanded for smoking on the ground)