Champions Trophy 2025: ದುಬೈನಲ್ಲಿ ಭಾರತ vs ಪಾಕ್ ಪಂದ್ಯ: ಚಾಂಪಿಯನ್ಸ್ ಟ್ರೋಫಿ ಕರಡು ವೇಳಾಪಟ್ಟಿ ಇಲ್ಲಿದೆ

|

Updated on: Dec 23, 2024 | 7:30 AM

Champions Trophy 2025: ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸಲಿದೆ. ಪಾಕ್​ನಲ್ಲಿ ನಡೆಯಲಿರುವ ಈ ಟೂರ್ನಿಯ ಕರಡು ವೇಳಾಪಟ್ಟಿ ಪ್ರಕಟವಾಗಿದ್ದು, ಈ ವೇಳಾಪಟ್ಟಿಯಂತೆ ಟೀಮ್ ಇಂಡಿಯಾದ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಅಂದರೆ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ಆಯೋಜನೆಗೊಳ್ಳಲಿದೆ. ಅದರಂತೆ ಭಾರತ ತಂಡವು ತನ್ನ ಪಂದ್ಯಗಳನ್ನು ಯುಎಇ ನಲ್ಲಿ ಆಡಲಿದೆ.

Champions Trophy 2025: ದುಬೈನಲ್ಲಿ ಭಾರತ vs ಪಾಕ್ ಪಂದ್ಯ: ಚಾಂಪಿಯನ್ಸ್ ಟ್ರೋಫಿ ಕರಡು ವೇಳಾಪಟ್ಟಿ ಇಲ್ಲಿದೆ
Champions Trophy 2025
Follow us on

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಟೂರ್ನಿಯ ಕರಡು ವೇಳಾಪಟ್ಟಿಯನ್ನು ಸಹ ಸಿದ್ಧಪಡಿಸಿಕೊಂಡಿದೆ. ಈ ವೇಳಾಪಟ್ಟಿಯಂತೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಶುರುವಾಗಲಿದೆ. ಇನ್ನು ಉದ್ಘಾಟನಾ ಪಂದ್ಯವನ್ನು ಕರಾಚಿಯಲ್ಲಿ ಆಯೋಜಿಸಲಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ ಎಂದು ವರದಿಯಾಗಿದೆ.

8 ತಂಡಗಳು 2 ಗುಂಪು:

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್​ನಲ್ಲಿರುವುದರಿಂದ ಮೊದಲ ಸುತ್ತಿನಲ್ಲೇ ಮುಖಾಮುಖಿಯಾಗಲಿರುವುದು ಖಚಿತ.

ಅದರಂತೆ ಫೆಬ್ರವರಿ 23 ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಣಕ್ಕಿಳಿಯಲಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ದುಬೈನ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಆಯೋಜಿಸಲು ಪಿಸಿಬಿ ನಿರ್ಧರಿಸಿದೆ. ಹಾಗೆಯೇ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ ಎಂದು ವರದಿಯಾಗಿದೆ.

ಚಾಂಪಿಯನ್ಸ್ ಟ್ರೋಫಿ ತಂಡಗಳು:

ಗ್ರೂಪ್-A

  1. ಭಾರತ
  2. ಪಾಕಿಸ್ತಾನ್
  3. ಬಾಂಗ್ಲಾದೇಶ್
  4. ನ್ಯೂಝಿಲೆಂಡ್

ಇದನ್ನೂ ಓದಿ: Team India: ಕೊನೆಯ 10 ಓವರ್​ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

ಗ್ರೂಪ್-B

  1. ಆಸ್ಟ್ರೇಲಿಯಾ
  2. ಇಂಗ್ಲೆಂಡ್
  3. ಸೌತ್ ಆಫ್ರಿಕಾ
  4. ಅಫ್ಘಾನಿಸ್ತಾನ್.

ಚಾಂಪಿಯನ್ಸ್ ಟ್ರೋಫಿ ಕರಡು ವೇಳಾಪಟ್ಟಿ ಈ ಕೆಳಗಿನಂತಿದೆ:

ದಿನಾಂಕ ಮುಖಾಮುಖಿ ಸ್ಥಳ
ಫೆಬ್ರವರಿ, 19  ಪಾಕಿಸ್ತಾನ್ vs ನ್ಯೂಝಿಲೆಂಡ್ ಕರಾಚಿ
ಫೆಬ್ರವರಿ, 20 ಬಾಂಗ್ಲಾದೇಶ್ vs ಭಾರತ ದುಬೈ
ಫೆಬ್ರವರಿ, 21 ಅಫ್ಘಾನಿಸ್ತಾನ್ vs ಸೌತ್ ಆಫ್ರಿಕಾ ಕರಾಚಿ
ಫೆಬ್ರವರಿ, 22 ಆಸ್ಟ್ರೇಲಿಯಾ vs ಇಂಗ್ಲೆಂಡ್ ಲಾಹೋರ್
ಫೆಬ್ರವರಿ, 23 ಪಾಕಿಸ್ತಾನ್ vs ಭಾರತ ದುಬೈ
ಫೆಬ್ರವರಿ, 24 ಪಾಕಿಸ್ತಾನ್ vs ಬಾಂಗ್ಲಾದೇಶ್ ರಾವಲ್ಪಿಂಡಿ
ಫೆಬ್ರವರಿ, 25 ಅಫ್ಘಾನಿಸ್ತಾನ್​ vs ಇಂಗ್ಲೆಂಡ್ ಲಾಹೋರ್
ಫೆಬ್ರವರಿ, 26 ಆಸ್ಟ್ರೇಲಿಯಾ vs ಸೌತ್ ಆಫ್ರಿಕಾ ರಾವಲ್ಪಿಂಡಿ
ಫೆಬ್ರವರಿ, 27 ಬಾಂಗ್ಲಾದೇಶ್ vs ನ್ಯೂಝಿಲೆಂಡ್ ಲಾಹೋರ್
ಫೆಬ್ರವರಿ, 28 ಅಫ್ಘಾನಿಸ್ತಾನ್ vs ಆಸ್ಟ್ರೇಲಿಯಾ ರಾವಲ್ಪಿಂಡಿ
ಮಾರ್ಚ್, 1 ನ್ಯೂಝಿಲೆಂಡ್ vs ಭಾರತ ದುಬೈ
ಮಾರ್ಚ್, 2 ಸೌತ್ ಆಫ್ರಿಕಾ vs ಇಂಗ್ಲೆಂಡ್ ರಾವಲ್ಪಿಂಡಿ
ಮಾರ್ಚ್, 4 ಸೆಮಿಫೈನ್-1 ಕರಾಚಿ/ದುಬೈ
ಮಾರ್ಚ್, 5 ಸೆಮಿಫೈನಲ್-2 ರಾವಲ್ಪಿಂಡಿ/ದುಬೈ
ಮಾರ್ಚ್, 9 ಫೈನಲ್ ಪಂದ್ಯ ಲಾಹೋರ್/ದುಬೈ