AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ರೀತಿಯ ಡ್ರೆಸ್.. ಹೇರ್​ ಸ್ಟೈಲ್​ ಕೂಡ ಸೇಮ್; ಕೊಹ್ಲಿ- ಬಾಬರ್ ಬಾಲ್ಯದ ಫೋಟೋ ಫುಲ್ ವೈರಲ್

ಈ ಫೋಟೋದಲ್ಲಿ ಕೊಹ್ಲಿ ತಿಳಿ ಕಂದು ಮತ್ತು ಬೂದು ಬಣ್ಣದ ಶರ್ಟ್ ಧರಿಸಿದ್ದು, ಬಾಬರ್ ಕೂಡ ಬಹುತೇಕ ಅದೇ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೇರ್ ಸ್ಟೈಲ್ ಕೂಡ ಒಂದೇ ತರನ್ನಾಗಿದೆ.

ಒಂದೇ ರೀತಿಯ ಡ್ರೆಸ್.. ಹೇರ್​ ಸ್ಟೈಲ್​ ಕೂಡ ಸೇಮ್; ಕೊಹ್ಲಿ- ಬಾಬರ್ ಬಾಲ್ಯದ ಫೋಟೋ ಫುಲ್ ವೈರಲ್
Babar Azam, Virat Kohli
TV9 Web
| Edited By: |

Updated on: Oct 02, 2022 | 4:58 PM

Share

ಒಂದೇ ರೀತಿಯ ಡ್ರೆಸ್ ಧರಿಸಿ ಈ ಫೋಟೋದಲ್ಲಿ ಪೋಸ್ ನೀಡುತ್ತಿರುವ ಈ ಹುಡುಗರು ಈಗ ಸ್ಟಾರ್ ಕ್ರಿಕೆಟಿಗರಾಗಿ ಬೆಳೆದಿದ್ದಾರೆ. ಯಾವುದೇ ಮಾದರಿಯಲ್ಲಿ ಪರಸ್ಪರ ಪೈಪೋಟಿ ನಡೆಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್‌ಗಳ ಮಳೆ ಸುರಿಸುತ್ತಿದ್ದಾರೆ. ದಾಖಲೆಗಳ ಮೇಲೆ ದಾಖಲೆಗಳು ಲೂಟಿಯಾಗುತ್ತಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಂತರ, ಕ್ರಿಕೆಟ್​ ಲೋಕವನ್ನು ಅಕ್ಷರಶಃ ಆಳುತ್ತಿರುವ ಕ್ರಿಕೆಟಿಗರಲ್ಲಿ ಈ ಇಬ್ಬರೇ ಪ್ರಮುಖರು. ಆಟದಲ್ಲಿ ಮಾತ್ರವಲ್ಲ ವ್ಯಕ್ತಿತ್ವದಲ್ಲೂ ಈ ಇಬ್ಬರು ಇಡೀ ವಿಶ್ವದ ಗಮನವನ್ನೇ ಸೆಳೆದಿದ್ದಾರೆ. ಹಾಗಾಗಿಯೇ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರವಾದ ಫಾಲೋವರ್ಸ್ ಇದ್ದಾರೆ. ಆಟಗಾರರಾಗಿ ಮಾತ್ರವಲ್ಲದೆ ನಾಯಕರಾಗಿಯೂ ತಮ್ಮ ತಂಡಗಳಿಗೆ ಅವಿಸ್ಮರಣೀಯ ಗೆಲುವನ್ನು ನೀಡಿದ ಈ ಸ್ಟಾರ್ ಕ್ರಿಕೆಟಿಗರು ಯಾರು ಎಂದು ನಿಮಗೆ ಗೊತ್ತಾ?

ಒಬ್ಬರು ಟೀಂ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿಯಾದರೆ, ಮತ್ತೊಬ್ಬರು ಪಾಕಿಸ್ತಾನದ ನಾಯಕ ಬಾಬರ್ ಅಜಮ್. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ರನ್ ಗುಡ್ಡೆಯನ್ನೇ ಹಾಕುತ್ತಿರುವ ಈ ಸ್ಟಾರ್ ಕ್ರಿಕೆಟಿಗರ ವಿಭಿನ್ನ ಫೋಟೋಗಳು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುತ್ತವೆ. ಅಭಿಮಾನಿಗಳು ಕೂಡ ಈ ಇಬ್ಬರ ಬಾಲ್ಯದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದರೊಂದಿಗೆ ಈ ಇಬ್ಬರ ನಡುವೆ ಕೆಲವು ಹೋಲಿಕೆಗಳನ್ನು ಮಾಡುತ್ತಿರುತ್ತಾರೆ. ಸದ್ಯ ಇಂತಹದ್ದೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಇದರ ವಿಶೇಷವೆಂದರೆ ಈ ಇಬ್ಬರು ಕ್ರಿಕೆಟಿಗರು ತಮ್ಮ ಬಾಲ್ಯದಲ್ಲಿ ಒಂದೇ ರೀತಿಯ ಡ್ರೆಸ್ ಧರಿಸಿರುವುದಲ್ಲದೆ, ಈ ಇಬ್ಬರ ಹೇರ್​ ಸ್ಟೈಲ್​ ಕೂಡ ಒಂದೇ ತರನ್ನಾಗಿದೆ.

ಈ ಫೋಟೋದಲ್ಲಿ ಕೊಹ್ಲಿ ತಿಳಿ ಕಂದು ಮತ್ತು ಬೂದು ಬಣ್ಣದ ಶರ್ಟ್ ಧರಿಸಿದ್ದು, ಬಾಬರ್ ಕೂಡ ಬಹುತೇಕ ಅದೇ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೇರ್ ಸ್ಟೈಲ್ ಕೂಡ ಒಂದೇ ತರನ್ನಾಗಿದೆ. ಈ ಫೋಟೋ ನೋಡಿದ ನೆಟ್ಟಿಗರು, ಸೋಶಿಯಲ್ ಮೀಡಿಯಾದಲ್ಲಿ ತರಹೆವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಕೊಹ್ಲಿ ದಾಖಲೆ ಮುರಿದ ಬಾಬರ್

ಕೇವಲ 2 ದಿನಗಳ ಹಿಂದೆ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಬಾಬರ್ ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ 6ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ 59 ಎಸೆತಗಳಲ್ಲಿ 87 ರನ್ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ ಬಾಬರ್ ಟಿ20 ಕ್ರಿಕೆಟ್​ನಲ್ಲಿ 3 ಸಾವಿರ ರನ್ ಪೂರೈಸಿದರು. ಈ ಸಾಧನೆಯೊಂದಿಗೆ ಪಾಕ್ ನಾಯಕ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ. ಟಿ20 ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 3 ಸಾವಿರ ರನ್ ಪೂರೈಸಿದ ವಿಶ್ವ ದಾಖಲೆ ರನ್ ಮೆಷಿನ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 81 ಇನಿಂಗ್ಸ್​ಗಳ ಮೂಲಕ ಈ ಮೈಲುಗಲ್ಲು ಸಾಧಿಸಿದ್ದರು. ಇದೀಗ ಪಾಕ್ ತಂಡದ ನಾಯಕ ಬಾಬರ್ ಆಜಂ ಕೂಡ 81 ಇನಿಂಗ್ಸ್​​ ಮೂಲಕವೇ 3 ಸಾವಿರ ರನ್​ ಪೂರೈಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.