Tilak Varma: ತಿಲಕ್ ವರ್ಮಾ ಸಿಡಿಸಿದ ಹೆಲಿಕಾಫ್ಟರ್ ಶಾಟ್ಗೆ ಸ್ತಬ್ಧವಾದ ಚಿನ್ನಸ್ವಾಮಿ ಸ್ಟೇಡಿಯಂ: ರೋಚಕ ವಿಡಿಯೋ ನೋಡಿ
RCB vs MI, IPL 2023: 16ನೇ ಓವರ್ ವರೆಗೂ ಆರ್ಸಿಬಿ ಹಿಡಿತದಲ್ಲೇ ಇದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಕಡಿಮ ಮೊತ್ತಕ್ಕೆ ಕಟ್ಟು ಹಾಕುವ ಪ್ಲಾನ್ನಲ್ಲಿತ್ತು. ಆದರೆ, ಕೊನೆಯ ಮೂರು ಓವರ್ಗಳಲ್ಲಿ ಆರ್ಸಿಬಿ ಬೌಲರ್ಗಳ ಬೆವರಿಳಿಸಿದ್ದು ತಿಲಕ್ ವರ್ಮಾ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2023) ಮುಂಬೈ ಇಂಡಿಯನ್ಸ್ ತಂಡದ ಸೋಲಿನ ಆರಂಭ ಈ ಬಾರಿ ಕೂಡ ಮುಂದುವರೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ (RCB vs MI) 8 ವಿಕೆಟ್ಗಳ ಸೋಲು ಕಂಡಿತು. ಈ ಮೂಲಕ ಕಳೆದ 11 ಸೀಸನ್ಗಳಲ್ಲಿ ತಾನು ಆಡಿದ ಎಲ್ಲ ಮೊದಲ ಪಂದ್ಯದಲ್ಲಿ ಸೋತ ಕೆಟ್ಟ ದಾಖಲೆ ಬರೆಯಿತು. 50 ರನ್ಗು ಮೊದಲೇ ಪ್ರಮುಖ 4 ವಿಕೆಟ್ ಕಳೆದುಕೊಂಡ ರೋಹಿತ್ ಶರ್ಮಾ ಪಡೆಯ ಮೊತ್ತ 100 ದಾಟುವುದು ಕಷ್ಟವಾಗಿತ್ತು. ಆದರೆ, 20ನೇ ಓವರ್ ವರೆಗೂ ಟೊಂಕ ಕಟ್ಟಿ ಕ್ರೀಸ್ನಲ್ಲಿ ನಿಂತ ಯುವ ಬ್ಯಾಟರ್ ತಿಲಕ್ ವರ್ಮಾ (Tilak Varma) 171 ರನ್ಗಳ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. 46 ಎಸೆತಗಳಲ್ಲಿ 9 ಫೋರ್ ಹಾಗೂ 4 ಸಿಕ್ಸರ್ನೊಂದಿಗೆ ಇವರು ಅಜೇಯ 84 ರನ್ ಸಿಡಿಸಿದರು.
16ನೇ ಓವರ್ ವರೆಗೂ ಆರ್ಸಿಬಿ ಹಿಡಿತದಲ್ಲೇ ಇದ್ದ ಪಂದ್ಯದಲ್ಲಿ ಮುಂಬೈ ಅನ್ನು ಕಡಿಮ ಮೊತ್ತಕ್ಕೆ ಕಟ್ಟು ಹಾಕುವ ಪ್ಲಾನ್ನಲ್ಲಿತ್ತು. ಆದರೆ, ಕೊನೆಯ ಮೂರು ಓವರ್ಗಳಲ್ಲಿ ಆರ್ಸಿಬಿ ಬೌಲರ್ಗಳ ಬೆವರಿಳಿಸಿದ್ದು ತಿಲಕ್ ವರ್ಮಾ. ಮನಬಂದಂತೆ ಬ್ಯಾಟ್ ಬೀಸಿದ ಇವರು ಫೋರ್-ಸಿಕ್ಸರ್ಗಳ ಮಳೆ ಸುರಿಸಿದರು. ಅದರಲ್ಲೂ ಕೊನೆಯ 20ನೇ ಓವರ್ನ ಹರ್ಷಲ್ ಪಟೇಲ್ ಬೌಲಿಂಗ್ ಅನ್ನು ಧೂಳಿಪಟ ಮಾಡಿಬಿಟ್ಟರು.
IPL 2023: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸಂಜು ಸ್ಯಾಮ್ಸನ್
ಅಂತಿಮ ಓವರ್ನಲ್ಲಿ ಮುಂಬೈ 21 ರನ್ ಕಲೆಹಾಕಿತು. ತಿಲಕ್ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಚಚ್ಚಿದರು. ಅದರಲ್ಲೂ ಕಾಲಿನ ಬಳಿ ಬಿದ್ದ 6ನೇ ಎಸೆತವನ್ನು ಹೆಲಿಕಾಫ್ಟರ್ ಶಾಟ್ ಮೂಲಕ ಸಿಕ್ಸರ್ ಸಿಡಿಸಿದ್ದು ಅದ್ಭುತವಾಗಿತ್ತು. ಇವರ ಈ ಹೊಡೆತ ಕಂಡು ಒಂದು ಕ್ಷಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಶಾಕ್ ಆದರು. ಇಲ್ಲಿದೆ ನೋಡಿ ಆ ವಿಡಿಯೋ.
Helicopter from Tilak!#TATAIPL #RCBvMI pic.twitter.com/4ztWZVUrqO
— Indian National Progress (@NamanChaddha2) April 2, 2023
ತಿಲಕ್ ವರ್ಮಾ ಅವರ ಈ ಮನಮೋಹಕ ಆಟದ ನೆರವಿನಿಂದಲೇ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ತಿಲಕ್ ಅವರ ಆಟದ ಬಗ್ಗೆ ಆರ್ಸಿಬಿ ನಾಯಕ ಫಾಪ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಕೂಡ ಹಾಡಿಹೊಗಳಿದ್ದಾರೆ. ”ಕೊನೆಯ 2-3 ಓವರ್ಗಳಲ್ಲಿ ನಾವು ಇನ್ನೂ ಚೆನ್ನಾಗಿ ಬೌಲಿಂಗ್ ಮಾಡಬಹುದಿತ್ತು. ತಿಲಕ್ ವರ್ಮಾ ಈ ಸಂದರ್ಭ ಚೆನ್ನಾಗಿ ಆಡಿದರು,” ಎಂದು ಫಾಫ್ ಹೇಳಿದ್ದಾರೆ. ಅಂತೆಯೆ ಕೊಹ್ಲಿ ಅವರು ಮಾತನಾಡುತ್ತಾ, ”ಮೊದಲು 17 ಓವರ್ ನಮ್ಮ ಬೌಲಿಂಗ್ ಅದ್ಭುತವಾಗಿತ್ತು. ಕೊನೆಯ 3 ಓವರ್ನ ಕ್ರೆಡಿಟ್ ತಿಲಕ್ ವರ್ಮಾಗೆ ಸಲ್ಲಬೇಕು,” ಎಂದು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ತಿಲಕ್ ವರ್ಮಾ ಆಟದ ಬಗ್ಗೆ ಮಾತನಾಡಿದ್ದು, ”ಮೊದಲ ಆರು ಓವರ್ಗಳಲ್ಲಿ ನಮ್ಮ ಆರಂಭ ಅದ್ಭುತ ಎಂಬಂತಿರಲಿಲ್ಲ. ಆದರೆ, ನಂತರದಲ್ಲಿ ತಿಲಕ್ ರ್ಮಾ ಮತ್ತು ಕೆಲ ಬ್ಯಾಟರ್ಗಳು ಸಾಕಷ್ಟು ಪ್ರಯತ್ನ ಪಟ್ಟರು. ಬೌಲಿಂಗ್ನಲ್ಲಿ ನಾವು ಅಂದುಕೊಂಡ ಯೋಜನೆಯಂತೆ ಸಾಗಲಿಲ್ಲ. ಈ ಪಿಚ್ ಬ್ಯಾಟರ್ಗಳಿಗೆ ಹೆಚ್ಚು ಸಹಕಾರಿ ನೀಡಿತು. ತಿಲಕ್ ವರ್ಮಾ ಪಾಸಿಟಿವ್ ಪ್ಲೇಯರ್, ಪ್ರತಿಭಾವಂತ ಆಟಗಾರ. ಅವರು ಹೊಡೆದ ಕೆಲವು ಶಾಟ್ ಅದ್ಭುತವಾಗಿತ್ತು. ನಾವು ಸವಾಲಿನ ಮೊತ್ತ ಕಲೆಹಾಕಲು ನೆರವಾದ ತಿಲಕ್ಗೆ ಹ್ಯಾಟ್ಸ್ ಹಾಫ್,” ಎಂದು ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ