IPL 2022 ರಲ್ಲಿ ಕ್ರಿಸ್ ಗೇಲ್ (Chris Gayle) ಅಬ್ಬರ ಇರಲಿಲ್ಲ ಹೀಗಾಗಿ ಅಭಿಮಾನಿಗಳು ನಿರಾಶೆಗೊಂಡಿದ್ದರು. ಆದರೆ ಭಾರತೀಯ, ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಆ ನಿರಾಶೆ ಈಗ ದೂರವಾಗುತ್ತದೆ. ಏಕೆಂದರೆ, ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ (Universe boss Chris Gayle) ಅವರು ಬ್ಯಾಟ್‌ನೊಂದಿಗೆ ಬೌಲರ್‌ಗಳ ನಿದ್ದೆಗೆಡಿಸಲು ಭಾರತಕ್ಕೆ ಬರುತ್ತಿದ್ದಾರೆ. ಇಲ್ಲ, ಐಪಿಎಲ್ ಅಲ್ಲ ಆದರೆ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ (Legends League cricket) ಭಾಗವಹಿಸಲು ಗೇಲ್ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಈ ಲೀಗ್‌ನ ಸಂಘಟಕರು ಹಂಚಿಕೊಂಡಿದ್ದಾರೆ. ಇದು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಸೀಸನ್ ಆಗಿದ್ದು ಇದರಲ್ಲಿ ಕೆರಿಬಿಯನ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮೊದಲ ಬಾರಿಗೆ ಆಡಲಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಅನ್ನು 17 ಸೆಪ್ಟೆಂಬರ್ 2022 ರಿಂದ ಆಯೋಜಿಸಲಾಗುವುದು. ಈ ಪಂದ್ಯಾವಳಿಯು 4 ತಂಡಗಳ ನಡುವೆ ಆಡಲಾಗುತ್ತದೆ ಮತ್ತು ಅಕ್ಟೋಬರ್ 8 ರಂದು ಕೊನೆಗೊಳ್ಳುತ್ತದೆ. ಅದೇನೆಂದರೆ, ಈ ಕ್ರಿಕೆಟ್ ಲೀಗ್ ಇಡೀ 22 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಕ್ರಿಸ್ ಗೇಲ್ ಅಬ್ಬರಿಸುವ ನಿರೀಕ್ಷೆ ಇದೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ದೊಡ್ಡ ಮುಖ
ಅಂತರಾಷ್ಟ್ರೀಯ ಕ್ರಿಕೆಟ್ ತೊರೆದಿರುವ ಕ್ರಿಕೆಟಿಗರು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡುತ್ತಾರೆ. ಕ್ರಿಸ್ ಗೇಲ್ ಎರಡನೇ ಆವೃತ್ತಿಯ ದೊಡ್ಡ ಮುಖವಾಗಿದ್ದಾರೆ, ಅವರನ್ನು ಹೊರತುಪಡಿಸಿ ಮೊಹಮ್ಮದ್ ಕೈಫ್, ಆರ್‌ಪಿ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಚಾಮಿಂದಾ ವಾಸ್ ಅವರಂತಹ ಕ್ರಿಕೆಟಿಗರು ಕೂಡ ಆಗಲಿದ್ದಾರೆ. ಈ ಎಲ್ಲಾ ಆಟಗಾರರು ಲೀಗ್‌ನಲ್ಲಿ ಆಡಲು ತಮ್ಮ ಲಭ್ಯತೆಯನ್ನು ವ್ಯಕ್ತಪಡಿಸಿದ್ದಾರೆ.
#BossLogonKaGame going universal with this next entry. Guess who confirmed for #LegendsLeagueCricket.@llct20#BossLogonKaGame #LLCT20 #BossGame pic.twitter.com/KshNHNMnlU
— Legends League Cricket (@llct20) August 5, 2022
ಗೇಲ್ ಸೇರ್ಪಡೆಯಿಂದ ಲೀಗ್‌ನ ಆಟವೇ ಬದಲಾಗಲಿದೆ
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಮನ್ ರಹೇಜಾ, “ಕ್ರಿಸ್ ಗೇಲ್ ಅವರ ಸೇರ್ಪಡೆಯೊಂದಿಗೆ ನಮ್ಮ ಲೀಗ್ಗೆ ಈಗ ಹೊಸ ಹುರುಪು ಬಂದಿದೆ. ಈ ಟೂರ್ನಿಯಲ್ಲಿ ಈಗ ಇನ್ನಷ್ಟು ಸ್ಫೋಟಕ ಕ್ರಿಕೆಟ್ ಕಾಣಿಸಲಿದೆ. ಅಭಿಮಾನಿಗಳು ಮತ್ತು ಕ್ರಿಕೆಟ್ ನೋಡುತ್ತಿರುವವರು ಈಗ ಲೆಜೆಂಡ್ಸ್ ಲೀಗ್‌ನಲ್ಲಿ ಹೆಚ್ಚಿನ ಬೆಂಕಿಯ ಶಕ್ತಿಯನ್ನು ನೋಡುತ್ತಾರೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಜೊತೆಗೆ ಅಭಿಮಾನಿಗಳು ಮೊದಲಿಗಿಂತ ಹೆಚ್ಚು ಮನರಂಜನೆಯ ಕ್ರಿಕೆಟ್ ಅನ್ನು ನೋಡುತ್ತಾರೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ