AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯ ಅಷ್ಟೇ… ಲಾರಾ ದಾಖಲೆ ಮುರಿಯದಿರುವುದಕ್ಕೆ ಮುಲ್ಡರ್ ವಿರುದ್ಧ ಗೇಲ್ ಆಕ್ರೋಶ

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್​ಗಳಿಸಿದ ವಿಶ್ವ ದಾಖಲೆ ಬ್ರಿಯಾನ್ ಲಾರಾ ಹೆಸರಿನಲ್ಲಿದೆ. 2004 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 400 ರನ್​ಗಳಿಸಿ ವೆಸ್ಟ್ ಇಂಡೀಸ್ ದಾಂಡಿಗ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮುರಿಯುವ ಉತ್ತಮ ಅವಕಾಶವಿದ್ದರೂ, ವಿಯಾನ್ ಮುಲ್ಡರ್ ಲೆಜೆಂಡ್​ ಆಟಗಾರನನ್ನು ಗೌರವಿಸುವ ಸಲುವಾಗಿ ತನ್ನ ವೈಯುಕ್ತಿಕ ಸಾಧನೆಯನ್ನು ಬದಿಗಿರಿಸಿ ಅಚ್ಚರಿ ಮೂಡಿಸಿದ್ದಾರೆ.

ಭಯ ಅಷ್ಟೇ... ಲಾರಾ ದಾಖಲೆ ಮುರಿಯದಿರುವುದಕ್ಕೆ ಮುಲ್ಡರ್ ವಿರುದ್ಧ ಗೇಲ್ ಆಕ್ರೋಶ
Lara - Gayle - Mulder
ಝಾಹಿರ್ ಯೂಸುಫ್
|

Updated on: Jul 09, 2025 | 12:24 PM

Share

ಬುಲವಾಯೊದಲ್ಲಿ ನಡೆದ ಝಿಂಬಾಬ್ವೆ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಆಟಗಾರ ವಿಯಾನ್ ಮುಲ್ಡರ್ ಅಜೇಯ 367 ರನ್​ ಬಾರಿಸಿದ್ದರು. ಈ ಭರ್ಜರಿ ತ್ರಿಶತಕದೊಂದಿಗೆ ಬ್ರಿಯಾನ್ ಲಾರಾ ಅವರ 400 ರನ್​ಗಳ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದ ಮುಲ್ಡರ್, ಇನಿಂಗ್ಸ್ ಡಿಕ್ಲೇರ್ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಮುಲ್ಡರ್ ಅವರ ಈ ನಿರ್ಧಾರಕ್ಕೆ ಇದೀಗ ವೆಸ್ಟ್ ಇಂಡೀಸ್​ನ ಮಾಜಿ ಆಟಗಾರ ಕ್ರಿಸ್ ಗೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕ್ರಿಸ್ ಗೇಲ್, ನಿಮಗೆ ವಿಶ್ವ ದಾಖಲೆ ಬರೆಯಲು ಅವಕಾಶ ಆಗಾಗ್ಗೆ ಸಿಗುವುದಿಲ್ಲ. ನೀವು ಮತ್ತೆ ಯಾವಾಗ ತ್ರಿಶತಕ ಗಳಿಸುತ್ತೀರಿ ಎಂದು ನಿಮಗೆ ತಿಳಿದಿಲ್ಲ. ನಿಮಗೆ ಅಂತಹ ಅವಕಾಶ ಸಿಕ್ಕಾಗಲೆಲ್ಲಾ, ನೀವು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಆದರೆ ಅವರು ತುಂಬಾ ಉದಾರರಾದರು. ಬ್ರಿಯಾನ್ ಲಾರಾ ಅವರ ವಿಶ್ವ ದಾಖಲೆ ಹಾಗೆಯೇ ಉಳಿಯಬೇಕೆಂದು ಅವರು ಬಯಸಿದ್ದರು. ನನ್ನ ಪ್ರಕಾರ ಇದು ಉತ್ತಮ ನಿರ್ಧಾರವಲ್ಲ. ಬಹುಶಃ ವಿಯಾನ್ ಮುಲ್ಡರ್ ಆತಂಕಗೊಂಡಿರಬಹುದು. ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಅವರಿಗೆ ಗೊತ್ತಾಗಿಲ್ಲ ಅನಿಸುತ್ತೆ. 

ನನ್ನ ಪ್ರಕಾರ, ನೀವು ಲೆಜೆಂಡ್ ಆಗಲು ಬಯಸಿದರೆ ಮಾತ್ರ ಲೆಜೆಂಡ್ ಆಗುತ್ತೀರಿ. ಇಲ್ಲದಿದ್ದರೆ ಎಂದಿಗೂ ಲೆಜೆಂಡ್ ಆಗುವುದಿಲ್ಲ. 367 ರನ್​ಗಳಿಸಿದ ಬಳಿಕ ನೀವು 400 ರನ್​ಗಳನ್ನು ಟಾರ್ಗೆಟ್ ಮಾಡಲೇಬೇಕಿತ್ತು. ಅಂತಹ ಅವಕಾಶಗಳನ್ನು ಯಾವತ್ತೂ ಕಳೆದುಕೊಳ್ಳಬಾರದು. ಹೀಗೆ ಉದಾರವಾದಿಯಾದರೆ, ಲೆಜೆಂಡ್ ಆಟಗಾರನಾಗುವುದು ಹೇಗೆ ಎಂದು ಕ್ರಿಸ್ ಗೇಲ್ ಪ್ರಶ್ನಿಸಿದ್ದಾರೆ.

ನಿಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಮೂಲಕ ದಾಖಲೆ ಸೃಷ್ಟಿಸಿಕೊಳ್ಳಬೇಕಿತ್ತು. ಆ ದಾಖಲೆಯನ್ನು ಮುರಿಯಲು ಸಾಧ್ಯವಾಗುತ್ತಿತ್ತೋ ಇಲ್ಲವೋ ನಮಗೆ ತಿಳಿದಿಲ್ಲ. ಆದರೆ ಅದನ್ನು ಮಾಡಲು ಪ್ರಯತ್ನಿಸದಿರುವುದು ನೀವು ಮಾಡಿದ ದೊಡ್ಡ ತಪ್ಪು. ನೀವು 367 ರನ್​ಗಳಿಸಿ ಡಿಕ್ಲೇರ್ ಘೋಷಿಸಿದರೆ ಏನರ್ಥ. ನಿಮಗೆ ಟೆಸ್ಟ್ ಪಂದ್ಯದಲ್ಲಿ 400 ರನ್​ಗಳಿಸಲು ಯಾವಾಗಲೂ ಅವಕಾಶ ಸಿಗುವುದಿಲ್ಲ. ಜೀವಮಾನದಲ್ಲಿ ಒಮ್ಮೆ ಮಾತ್ರ ಇಂತಹ ಅವಕಾಶಗಳು ಒದಗಿ ಬರುತ್ತವೆ. ಆದರೆ ನೀವು ಅದನ್ನು ಸದುಪಯೋಗಪಡಿಸಿಕೊಳ್ಳದೇ ದೊಡ್ಡ ತಪ್ಪು ಮಾಡಿದ್ದೀರಿ ಎಂದು ಕ್ರಿಸ್ ಗೇಲ್ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಎದುರಾಳಿ ತಂಡ ಮುಖ್ಯವಲ್ಲ. ದಾಖಲೆಯು ಯಾವತ್ತೂ ದಾಖಲೆಯಾಗಿದೆ.  ಇಂದು 367 ರನ್​ ಬಾರಿಸಿದ ಝಿಂಬಾಬ್ವೆಯಂತಹ ತಂಡದ ವಿರುದ್ಧ ಒಂದೇ ಒಂದು ರನ್​ಗಳಿಸಲು ಕೂಡ ಸಾಧ್ಯವಾಗುವುದಿಲ್ಲ. ಹೀಗಾಗಿ ಯಾರ ವಿರುದ್ಧ ದಾಖಲೆ ಬರೆಯುತ್ತೇವೆ ಎಂಬುದು ಮುಖ್ಯವಾಗುವುದಿಲ್ಲ. ನೀವು ಯಾವುದೇ ತಂಡದ ವಿರುದ್ಧ 100 ರನ್ ಗಳಿಸಿದರೆ ಅದು ಟೆಸ್ಟ್ ಶತಕ. ನೀವು ಡಬಲ್ ಅಥವಾ ಟ್ರಿಪಲ್ ಗಳಿಸಿದರೆ 400 ರನ್ ಗಳಿಸಿದರೂ ಅದು ಕೂಡ ದಾಖಲೆ ಪುಟಕ್ಕೆ ಸೇರುತ್ತದೆ.

ಹೀಗೆ ವಿಯಾನ್ ಮುಲ್ಡರ್​ಗೆ ಬ್ರಿಯಾನ್ ಲಾರಾ ಅವರ ವಿಶ್ವ ದಾಖಲೆ ಮುರಿಯುವ ಅವಕಾಶ ಒದಗಿ ಬಂದಿತ್ತು. ಆದರೆ ಅವರು ಅದನ್ನು ಮಾಡಿಲ್ಲ. ನನ್ನ ಪ್ರಕಾರ, ಮುಲ್ಡರ್ ಭಯಭೀತರಾಗಿ ತಪ್ಪು ಮಾಡಿದ್ದಾರೆ. ಇಲ್ಲದಿದ್ದರೆ ಇಂತಹ ಅವಕಾಶವನ್ನು ಯಾರು ಸಹ ಕಳೆದುಕೊಳ್ಳುವುದಿಲ್ಲ ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.

ದಾಖಲೆ ಮುರಿಯದಿರುವ ಬಗ್ಗೆ ವಿಯಾನ್ ಮುಲ್ಡರ್ ಹೇಳಿದ್ದೇನು?

ಝಿಂಬಾಬ್ವೆ ವಿರುದ್ಧ ಪಂದ್ಯದ ಬಳಿಕ ಮಾತನಾಡಿದ ವಿಯಾನ್ ಮುಲ್ಡರ್, ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ, ನಾವು ತುಂಬಾ ರನ್​ ಗಳಿಸಿದ್ದೇವೆ ಎಂದು ಭಾವಿಸಿದೆ. ಹೀಗಾಗಿ ಡಿಕ್ಲೇರ್ ಘೋಷಿಸಿ ಬೌಲಿಂಗ್ ಮಾಡುವುದು ಉತ್ತಮ ಎಂದೆನಿಸಿತು. ಇದರ ಹೊರತಾಗಿ ನನಗೆ ಬ್ರಿಯಾನ್ ಲಾರಾ ಅವರ ದಾಖಲೆ ಮುರಿಯಬೇಕೆಂದು ಅನಿಸುತ್ತಿರಲಿಲ್ಲ.

ಏಕೆಂದರೆ ಬ್ರಿಯಾನ್ ಲಾರಾ ಒಬ್ಬ ಉತ್ತಮ ಆಟಗಾರ. ಆ ಮಟ್ಟದ ಆಟಗಾರ ಈ ದಾಖಲೆಯನ್ನು ಕಾಯ್ದುಕೊಳ್ಳುವುದು ಸೂಕ್ತ. ಟೆಸ್ಟ್ ಪಂದ್ಯವೊಂದರಲ್ಲಿ 400 ರನ್​ಗಳ ದಾಖಲೆ ಅವರ ಹೆಸರಿನಲ್ಲಿಯೇ ಇರಲಿ ಎಂದು ಭಾವಿಸಿದೆ. ಹೀಗಾಗಿ ನನ್ನ ದಾಖಲೆಯನ್ನು ಪಕ್ಕಕ್ಕಿಟ್ಟು ಇನಿಂಗ್ಸ್ ಡಿಕ್ಲೇರ್ ಘೋಷಿಸಿದೆ.

ಇದನ್ನೂ ಓದಿ: IPL 2026: RCB ತಂಡದಿಂದ ಪ್ರಮುಖ ಆಟಗಾರನಿಗೆ ಗೇಟ್ ಪಾಸ್ ಸಾಧ್ಯತೆ

ಇನ್ನೊಮ್ಮೆ ಕೂಡ ನನಗೆ ಬ್ರಿಯಾನ್ ಲಾರಾ ಅವರ ವಿಶ್ವ ದಾಖಲೆ ಮುರಿಯುವ ಅವಕಾಶ ಸಿಕ್ಕರೂ, ಖಂಡಿತವಾಗಿಯೂ ನಾನು ಇದನ್ನೇ ಮಾಡುವೆ. ಏಕೆಂದರೆ ಬ್ರಿಯಾನ್ ಲಾರಾ ಒಬ್ಬ ದಂತಕಥೆ. ಅವರು ಈ ದಾಖಲೆಯನ್ನು ಕಾಯ್ದುಕೊಳ್ಳಲು ಅರ್ಹರು. ಹೀಗಾಗಿ ನನಗೆ ಆ ವಿಶ್ವ ದಾಖಲೆಯನ್ನು ಮುರಿಯುವ ಯಾವುದೇ ಆಸೆಯಿಲ್ಲ ಎಂದು ವಿಯಾನ್ ಮುಲ್ಡರ್ ಹೇಳಿದ್ದಾರೆ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ