AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ತಂಡ ಖರೀದಿಸಿದ ಯುಜ್ವೇಂದ್ರ ಚಹಲ್ ಗೆಳತಿ

Champions League t10: ಚಾಂಪಿಯನ್ಸ್ ಲೀಗ್ ಟಿ10 ಎಂಬುದು ಮಾಜಿ ಆಟಗಾರರ ಹತ್ತು ಓವರ್​ಗಳ ಪಂದ್ಯಾವಳಿ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈಗಾಗಲೇ 8 ಫ್ರಾಂಚೈಸಿಗಳು ಟೂರ್ನಿಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದು, ಅದರಂತೆ ಆಗಸ್ಟ್ 22 ರಿಂದ ನೂತನ ಟಿ10 ಲೀಗ್ ಶುರುವಾಗಲಿದೆ.

ಕ್ರಿಕೆಟ್ ತಂಡ ಖರೀದಿಸಿದ ಯುಜ್ವೇಂದ್ರ ಚಹಲ್ ಗೆಳತಿ
Yuzvendra Chahal - Rj Mahvash
ಝಾಹಿರ್ ಯೂಸುಫ್
|

Updated on: Jul 09, 2025 | 11:55 AM

Share

ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಅವರ ಗೆಳತಿ ಆರ್​ಜೆ ಮಹ್ವಾಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿರುವುದು ಕ್ರಿಕೆಟ್ ತಂಡದ ಖರೀದಿಯೊಂದಿಗೆ ಎಂಬುದು ವಿಶೇಷ. ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಚಹಲ್ ಜೊತೆ ಕಾಣಿಸಿಕೊಂಡಿದ್ದ ಮಹ್ವಾಶ್ ಇದೀಗ ಚಾಂಪಿಯನ್ಸ್ ಲೀಗ್ ಟಿ10 ಟೂರ್ನಿಯಲ್ಲಿ ತಂಡವೊಂದನ್ನು ಖರೀದಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಆಟಗಾರರನ್ನು ಒಳಗೊಂಡಿರುವ ಹೊಸ ಟಿ10 ಲೀಗ್ ಶೀಘ್ರದಲ್ಲೇ ಶುರುವಾಗಲಿದೆ. ಚಾಂಪಿಯನ್ ಲೀಗ್ ಟಿ10 ಹೆಸರಿನಲ್ಲಿ ಮೂಡಿಬರಲಿರುವ ಈ ಟೂರ್ನಿಯ ಫ್ರಾಂಚೈಸಿ ಒಂದಕ್ಕೆ ಆರ್​ಜೆ ಮಹ್ವಾಶ್ ಸಹ-ಮಾಲೀಕರಾಗಿದ್ದಾರೆ. ಒಟ್ಟು 8 ತಂಡಗಳು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಇದರಲ್ಲಿ ಒಂದು ತಂಡಕ್ಕೆ ಮಹ್ವಾಶ್ ಬಂಡವಾಳ ಹೂಡಿದ್ದಾರೆ.

ಆರ್​ಜೆ ಮಹ್ವಾಶ್ ಯಾರು?

ಆರ್​ಜೆ ಮಹ್ವಾಶ್  ಭಾರತದ ಅತ್ಯಂತ ಜನಪ್ರಿಯ ರೇಡಿಯೋ ಜಾಕಿ. ಹಾಗೆಯೇ ಸೋಷಿಯಲ್ ಮೀಡಿಯಾ ಇಂಫುಲೆನ್ಸರ್. ಈ ಹಿಂದೆ ಅವರು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. ಚಾಂಪಿಯನ್ಸ್ ಟ್ರೋಫಿ 2025ರ ವೇಳೆ ಮಹ್ವಾಶ್ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಕಾಣಿಸಿಕೊಂಡಿದ್ದರು. ಇದರೊಂದಿಗೆ ಚಹಲ್, ಮಹ್ವಾಶ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿತು.

ಇದನ್ನು ಪುಷ್ಠೀಕರಿಸುವಂತೆ ಆರ್​ಜೆ ಮಹ್ವಾಶ್ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆಯೂ ಯುಜ್ವೇಂದ್ರ ಚಹಲ್ ಜೊತೆ ಕಾಣಿಸಿಕೊಂಡರು. ಅಷ್ಟೇ ಅಲ್ಲದೆ ಪಂಜಾಬ್ ಕಿಂಗ್ಸ್ ತಂಡದ ಟೀಮ್ ಬಸ್​ನಲ್ಲಿ ಚಹಲ್ ಜೊತೆ ತೆರಳಿದ್ದರಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿ ಎಂಬ ಸುದ್ದಿಗಳು ಹುಟ್ಟಿಕೊಂಡಿದ್ದವು. ಇದಾಗ್ಯೂ ಚಹಲ್ ಆಗಲಿ, ಮಹ್ವಾಶ್ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದೀಗ ಟಿ10 ಲೀಗ್​ನಲ್ಲಿ ತಂಡವೊಂದನ್ನು ಖರೀದಿಸುವ ಮೂಲಕ ಆರ್​​ಜೆ ಮಹ್ವಾಶ್ ಕ್ರಿಕೆಟ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಬಂಡವಾಳ ಹೂಡಿ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.

ಚಾಂಪಿಯನ್ಸ್ ಲೀಗ್ ಟಿ10 ಟೂರ್ನಿಯ ತಂಡಗಳಾವುವು?

  • ಎಲೈಟ್ ಈಗಲ್ಸ್
  • ಮೈಟಿ ಮೇವ್ರಿಕ್ಸ್
  • ಸೂಪರ್ ಸೋನಿಕ್
  • ಡೈನಾಮಿಕ್ ಡೈನಾಮೋಸ್
  • ಬ್ರೇವ್ ಬ್ಲೇಝರ್ಸ್
  • ವಿಕ್ಟರಿ ವೆಂಗಾರ್ಡ್
  • ಸ್ಟೆಲ್ಲರ್ ಸ್ಟ್ರೈಕರ್ಸ್
  • ಸುಪ್ರೀಮ್ ಸ್ಟಾಲಿನ್ಸ್

ಐಕಾನ್ ಪ್ಲೇಯರ್ಸ್ ಯಾರೆಲ್ಲಾ?

  • ಪಾರ್ಥೀವ್ ಪಟೇಲ್ (ಭಾರತ)
  • ತಿಲಕರತ್ನೆ ದಿಲ್ಶಾನ್ (ಶ್ರೀಲಂಕಾ)
  • ಡ್ವೇನ್ ಸ್ಮಿತ್ (ವೆಸ್ಟ್ ಇಂಡೀಸ್)
  • ರಾಸ್ ಟೇಲರ್ (ನ್ಯೂಝಿಲೆಂಡ್)
  • ಶಾನ್ ಮಾರ್ಷ್ (ಆಸ್ಟ್ರೇಲಿಯಾ)
  • ಡೇನಿಯಲ್ ಕ್ರಿಶ್ಚಿಯನ್ (ಆಸ್ಟ್ರೇಲಿಯಾ)
  • ತಿಸಾರ ಪರೇರಾ (ಶ್ರೀಲಂಕಾ)

ಇದನ್ನೂ ಓದಿ: 29 ಸಿಕ್ಸ್, 30 ಫೋರ್: ವೈಭವ್ ಆರ್ಭಟಕ್ಕೆ ಗಿಲ್ ದಾಖಲೆ ಧೂಳೀಪಟ

ಚಾಂಪಿಯನ್ಸ್ ಲೀಗ್ ಟಿ10 ಲೀಗ್ ಯಾವಾಗ ಶುರು?

ಮಾಜಿ ಕ್ರಿಕೆಟಿಗರ ನೂತನ ಟಿ10 ಲೀಗ್​ ಆಗಸ್ಟ್ 22 ರಿಂದ ಶುರುವಾಗಲಿದೆ. 8 ತಂಡಗಳು ಕಣಕ್ಕಿಳಿಯಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಆಗಸ್ಟ್ 24 ರಂದು ಜರುಗಲಿದೆ.

Follow Us
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್