Rohit Sharma: ನವೆಂಬರ್ 13ಕ್ಕೆ ಟಿ20 ವಿಶ್ವಕಪ್ ಫೈನಲ್: ಟೀಮ್ ಇಂಡಿಯಾ ಆಯ್ಕೆ ಡಿಸೆಂಬರ್​ನಲ್ಲಿಯಂತೆ..!

| Updated By: ಝಾಹಿರ್ ಯೂಸುಫ್

Updated on: Sep 10, 2022 | 3:54 PM

Rohit Sharma: ಇದೀಗ ರೋಹಿತ್ ಶರ್ಮಾ ಅವರ ಈ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಟೀಮ್ ಇಂಡಿಯಾ ನಾಯಕನಿಗೇನೇ ಪ್ರಮುಖ ಟೂರ್ನಿ ಯಾವಾಗ ಶುರುವಾಗಲಿದೆ ಎಂಬುದರ ಮಾಹಿತಿಯಿಲ್ಲ.

Rohit Sharma: ನವೆಂಬರ್ 13ಕ್ಕೆ ಟಿ20 ವಿಶ್ವಕಪ್ ಫೈನಲ್: ಟೀಮ್ ಇಂಡಿಯಾ ಆಯ್ಕೆ ಡಿಸೆಂಬರ್​ನಲ್ಲಿಯಂತೆ..!
Rohit Sharma
Follow us on

ಏಷ್ಯಾಕಪ್ (Asia Cup 2022)​ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ (Team India) ಟಿ20 ವಿಶ್ವಕಪ್​ಗಾಗಿ ಸಜ್ಜಾಗಬೇಕಿದೆ. ಇದಕ್ಕಾಗಿ ಬಿಸಿಸಿಐ ಕಡಿಮೆ ಸಮಯದಲ್ಲಿ ಎರಡು ಸರಣಿಗಳನ್ನು ಆಯೋಜಿಸುತ್ತಿದೆ. ಅದರಂತೆ ಟೀಮ್ ಇಂಡಿಯಾ ಇದೇ ತಿಂಗಳು ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿ ಹಾಗೂ ಸೌತ್ ಆಫ್ರಿಕಾ ವಿರುದ್ದ ಸೀಮಿತ ಓವರ್​ಗಳ ಸರಣಿಗಳನ್ನು ಆಡಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾಗುವ ಆಟಗಾರರೇ ಟೀಮ್ ಇಂಡಿಯಾ ಪರ ಟಿ20 ವಿಶ್ವಕಪ್​ನಲ್ಲೂ ಕಣಕ್ಕಿಳಿಯಲಿದೆ. ಆದರೆ ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾವನ್ನು ಯಾವಾಗ ಆಯ್ಕೆ ಮಾಡಲಿದ್ದಾರೆ ಎಂಬ ವಿಷಯ ಖುದ್ದು ನಾಯಕ ರೋಹಿತ್ ಶರ್ಮಾಗೆ ಗೊತ್ತಿಲ್ಲ. ಅದರಲ್ಲೂ ಟಿ20 ವಿಶ್ವಕಪ್ ಯಾವಾಗ ಶುರುವಾಗಲಿದೆ ಎಂಬುದು ಕೂಡ ಗೊತ್ತಿಲ್ವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇಂತಹದೊಂದು ಅನುಮಾನಕ್ಕೆ ಕಾರಣವಾಗಿದ್ದು ಏಷ್ಯಾಕಪ್​ನಲ್ಲಿನ ಸುದ್ದಿಗೋಷ್ಠಿ. ಮಾಧ್ಯಮಗೋಷ್ಠಿಯಲ್ಲಿ ಕಾಣಿಸಿಕೊಂಡ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾವನ್ನು ಯಾವಾಗ ಆಯ್ಕೆ ಮಾಡಲಿದ್ದಾರೆ ಎಂದು ಪ್ರಶ್ನಿಸಲಾಗಿತ್ತು. ಇದೇ ಪ್ರಶ್ನೆಯನ್ನು ರೋಹಿತ್ ಶರ್ಮಾ ಜೊತೆಗಿದ್ದವರನ್ನು ಪ್ರಶ್ನಿಸಿದ್ದರು.

ಆದರೆ ಇದಾದ ಬಳಿಕ ರೋಹಿತ್ ಶರ್ಮಾ ನೀಡಿದ ಉತ್ತರವೇ ಪತ್ರಕರ್ತರ ಗೊಂದಲಕ್ಕೆ ಕಾರಣವಾಗಿತ್ತು. ಮುಂದಿನ ಡಿಸೆಂಬರ್ 16 ಅಥವಾ 17 ರಂದು ನಿಮಗೆ ತಂಡದ ಮಾಹಿತಿ ಸಿಗಲಿದೆ ಎಂದೇಳಿ ಹೊರಟು ಹೋದರು. ಅಚ್ಚರಿ ಎಂದರೆ ಟಿ20 ವಿಶ್ವಕಪ್​ ನವೆಂಬರ್ ತಿಂಗಳಲ್ಲೇ ಮುಗಿಯಲಿದೆ. ಅಂದರೆ ಫೈನಲ್ ಪಂದ್ಯ ನವೆಂಬರ್ 13 ರಂದು ಮೆಲ್ಬೋರ್ನ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಗೆಯೇ ಟಿ20 ವಿಶ್ವಕಪ್ ಇದೇ ಅಕ್ಟೋಬರ್ 16 ರಿಂದ ಶುರುವಾಗಲಿದೆ. ಆದರೆ ರೋಹಿತ್ ಶರ್ಮಾ ಡಿಸೆಂಬರ್​ನಲ್ಲಿ ತಂಡದ ಆಯ್ಕೆ ನಡೆಯಲಿದೆ. ಡಿಸೆಂಬರ್ 16 ಅಥವಾ 17 ರಂದು ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದು ಗೊತ್ತಾಗುತ್ತೆ ಎಂದೇಳುವ ಮೂಲಕ ಎಲ್ಲರನ್ನೂ ಗೊಂದಲಕ್ಕೆ ಸಿಲುಕಿಸಿದರು.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದೀಗ ರೋಹಿತ್ ಶರ್ಮಾ ಅವರ ಈ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಟೀಮ್ ಇಂಡಿಯಾ ನಾಯಕನಿಗೇನೇ ಪ್ರಮುಖ ಟೂರ್ನಿ ಯಾವಾಗ ಶುರುವಾಗಲಿದೆ ಎಂಬುದರ ಮಾಹಿತಿಯಿಲ್ಲ. ಯಾವಾಗ ತಂಡದ ಆಯ್ಕೆ ನಡೆಯಲಿದೆ ಎಂಬುದರ ಬಗ್ಗೆ ಕೂಡ ಗೊತ್ತಿಲ್ಲ. ಹಿಂಗಾದ್ರೆ ಟೀಮ್ ಇಂಡಿಯಾ ಹೆಂಗಿರುತ್ತೆ ಎಂಬುದನ್ನು ಊಹಿಸಿಕೊಳ್ಳಬಹುದು ಎಂದು ಅನೇಕರು ವ್ಯಂಗ್ಯವಾಡಿದ್ದಾರೆ.

ಅಲ್ಲದೆ ರೋಹಿತ್ ಶರ್ಮಾಗೆ ಟಿ20 ವಿಶ್ವಕಪ್ ಯಾವಾಗ, ತಂಡದ ಆಯ್ಕೆ ನಡೆಯುವ ದಿನಾಂಕ ಗೊತ್ತಿಲ್ಲ. ಹೀಗಾಗಿಯೇ ಡಿಸೆಂಬರ್ 16, 17 ಎಂದೇಳಿ ತಕ್ಷಣವೇ ಸುದ್ದಿಗೋಷ್ಠಿಯಿಂದ ಹೊರನಡೆದಿದ್ದಾರೆ ಎಂದು ಅನೇಕು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಡಿದ ಸಣ್ಣದೊಂದು ಎಡವಟ್ಟು ಇದೀಗ ನಗೆಪಾಟಲಿಗೀಡಾಗಿರುವುದಂತು ನಿಜ.