CPL 2024: ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಪ್ರಕಟ

CPL 2024: ಕೆರಿಬಿಯನ್ ದ್ವೀಪದಲ್ಲಿ ನಡೆಯಲಿರುವ ಸಿಪಿಎಲ್​-12 ಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ಬಲಿಷ್ಠ ಪಡೆಯನ್ನು ಪ್ರಕಟಿಸಿದೆ. ಈ ಟೂರ್ನಿಯು ಆಗಸ್ಟ್ 30 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಅಕ್ಟೋಬರ್ 7 ರಂದು ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

CPL 2024: ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಪ್ರಕಟ
TKR Team
Follow us
ಝಾಹಿರ್ ಯೂಸುಫ್
|

Updated on:Jul 18, 2024 | 8:01 AM

ಆಗಸ್ಟ್ 30 ರಿಂದ ಶುರುವಾಗಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ (CPL 2024) 12ನೇ ಸೀಸನ್​ಗಾಗಿ ಟ್ರಿನ್‌ಬಾಗೊ ನೈಟ್ ರೈಡರ್ಸ್ (TKR) ತನ್ನ ತಂಡವನ್ನು ಪ್ರಕಟಿಸಿದೆ. ಬಲಿಷ್ಠ ಆಟಗಾರರನ್ನು ಒಳಗೊಂಡಿರುವ ಈ ತಂಡವನ್ನು ಕೀರನ್ ಪೊಲಾರ್ಡ್ ಮುನ್ನಡೆಸಲಿದ್ದು, ಉಪನಾಯಕನಾಗಿ ನಿಕೋಲಸ್ ಪೂರನ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ತಂಡದಲ್ಲಿ ಖ್ಯಾತ ಆಲ್​ರೌಂಡರ್​ಗಳಾದ ಡ್ವೇನ್ ಬ್ರಾವೊ, ಸುನಿಲ್ ನರೈನ್ ಹಾಗೂ ಆ್ಯಂಡ್ರೆ ರಸೆಲ್ ಇರುವುದು ವಿಶೇಷ. ಹಾಗೆಯೇ ವಿದೇಶಿ ಆಟಗಾರರಾಗಿ ಅಮೆರಿಕದ ಅಲಿ ಖಾನ್ ಹಾಗೂ ಆಸ್ಟ್ರೇಲಿಯಾದ ಟಿಮ್ ಡೇವಿಡ್ ಕಾಣಿಸಿಕೊಂಡಿದ್ದಾರೆ.

ಅಲ್ಲದೆ ಹೊಸ ಆಟಗಾರರಾಗಿ ಇಂಗ್ಲೆಂಡ್ ಜೇಸನ್ ರಾಯ್ ಹಾಗೂ ಐರ್ಲೆಂಡ್​ನ ಜೋಶ್ ಲಿಟಲ್ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಸ್ಪಿನ್ನರ್ ಆಗಿ ವೆಸ್ಟ್ ಇಂಡೀಸ್​ನ ಅಕೇಲ್ ಹೊಸೈನ್ ಸಹ ತಂಡದಲ್ಲಿದ್ದಾರೆ. ಅದರಂತೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಈ ಕೆಳಗಿನಂತಿದೆ…

ಟ್ರಿನ್‌ಬಾಗೊ ನೈಟ್ ರೈಡರ್ಸ್​ ತಂಡ: ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೊ, ಸುನಿಲ್ ನರೈನ್, ಆ್ಯಂಡ್ರೆ ರಸೆಲ್, ನಿಕೋಲಸ್ ಪೂರನ್, ಅಕೇಲ್ ಹೊಸೈನ್, ಜೇಡನ್ ಸೀಲ್ಸ್, ಮಾರ್ಕ್ ದೇಯಲ್, ಕೀಸಿ ಕಾರ್ಟಿ, ಟೆರನ್ಸ್ ಹಿಂಡ್ಸ್, ವಕಾರ್ ಸಲಾಮ್​ಖೈಲ್, ಅಲಿ ಖಾನ್, ಟಿಮ್ ಡೇವಿಡ್, ಜೇಸನ್ ರಾಯ್, ಜೋಶ್ ಲಿಟಲ್.

ಇದನ್ನೂ ಓದಿ: RCB… ಅದೊಂದು ತಂಡವೇ ಅಲ್ಲ: ಮಾಜಿ ಆಟಗಾರ ಕಿಡಿ

ಕಳೆದ ಬಾರಿ ರನ್ನರ್ ಅಪ್:

ಕೆರಿಬಿಯನ್ ಪ್ರೀಮಿಯರ್ ಲೀಗ್ ಸೀಸನ್-11 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ಫೈನಲ್​ ಹಂತಕ್ಕೇರಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧ ಮುಗ್ಗರಿಸುವ ಮೂಲಕ 4ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಕೈಚೆಲ್ಲಿಕೊಂಡಿದ್ದರು.

ಸಿಪಿಎಲ್ ಟ್ರೋಫಿ​ ವಿನ್ನರ್ಸ್-ರನ್ನರ್ಸ್ ಪಟ್ಟಿ:

ವರ್ಷ ವಿಜೇತರು ಗೆಲುವು ರನ್ನರ್ ಅಪ್ ಸ್ಥಳ
2023 ಗಯಾನಾ ಅಮೆಝಾನ್ ವಾರಿಯರ್ಸ್ 9 ವಿಕೆಟ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ಗಯಾನಾ
2022 ಜಮೈಕಾ ತಲ್ಲಾವಾಸ್ 8 ವಿಕೆಟ್ ಬಾರ್ಬಡೋಸ್ ರಾಯಲ್ಸ್ ಗಯಾನಾ
2021 ಸೇಂಟ್ ಕಿಟ್ಸ್ ಮತ್ತು ನೆವಿಸ್ ಪ್ಯಾಟ್ರಿಯೋಟ್ಸ್ 3 ವಿಕೆಟ್ ಸೇಂಟ್ ಲೂಸಿಯಾ ಕಿಂಗ್ಸ್ ಬಾಸೆಟೆರೆ
2020 ಟ್ರಿನ್‌ಬಾಗೊ ನೈಟ್ ರೈಡರ್ಸ್ 8 ವಿಕೆಟ್ ಸೇಂಟ್ ಲೂಸಿಯಾ ಝೌಕ್ಸ್ ತರೌಬಾ
2019 ಬಾರ್ಬಡೋಸ್ ಟ್ರೈಡೆಂಟ್ಸ್ 27 ರನ್ ಗಯಾನಾ ಅಮೆಝಾನ್ ವಾರಿಯರ್ಸ್ ತರೌಬಾ
2018 ಟ್ರಿನ್‌ಬಾಗೊ ನೈಟ್ ರೈಡರ್ಸ್ 8 ವಿಕೆಟ್ ಗಯಾನಾ ಅಮೆಝಾನ್ ವಾರಿಯರ್ಸ್ ತರೌಬಾ
2017 ಟ್ರಿನ್‌ಬಾಗೊ ನೈಟ್ ರೈಡರ್ಸ್ 3 ವಿಕೆಟ್ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪ್ಯಾಟ್ರಿಯೋಟ್ಸ್ ತರೌಬಾ
2016 ಜಮೈಕಾ ತಲ್ಲಾವಾಸ್ 9 ವಿಕೆಟ್ ಗಯಾನಾ ಅಮೆಝಾನ್ ವಾರಿಯರ್ಸ್ ಬಾಸೆಟೆರೆ
2015 ಟ್ರಿನಿಡಾಡ್ ಮತ್ತು ಟೊಬಾಗೊ ರೆಡ್ ಸ್ಟೀಲ್ 20 ರನ್ ಬಾರ್ಬಡೋಸ್ ಟ್ರೈಡೆಂಟ್ಸ್ ಪೋರ್ಟ್ ಆಫ್ ಸ್ಪೇನ್
2014 ಬಾರ್ಬಡೋಸ್ ಟ್ರೈಡೆಂಟ್ಸ್ 8 ರನ್ (D/L) ಗಯಾನಾ ಅಮೆಝಾನ್ ವಾರಿಯರ್ಸ್ ಬಾಸೆಟೆರೆ
2013 ಜಮೈಕಾ ತಲ್ಲಾವಾಸ್ 7 ವಿಕೆಟ್ ಗಯಾನಾ ಅಮೆಝಾನ್ ವಾರಿಯರ್ಸ್ ಪೋರ್ಟ್ ಆಫ್ ಸ್ಪೇನ್

Published On - 8:00 am, Thu, 18 July 24