
ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025)ರ ಅರ್ಧಕ್ಕಿಂತ ಹೆಚ್ಚು ಪ್ರಯಾಣ ಪೂರ್ಣಗೊಂಡಿದೆ. ಈಗ ಎಲ್ಲಾ ತಂಡಗಳ ದೃಷ್ಟಿ ಪ್ಲೇಆಫ್ನತ್ತ ನೆಟ್ಟಿದ್ದು, ಕೆಲವು ತಂಡಗಳ ಮುಂದಿನ ಪ್ರಯಾಣ ತುಂಬಾ ಕಷ್ಟಕರವಾಗಿದೆ. ಹೀಗಾಗಿ ಪ್ರತಿ ತಂಡಕ್ಕೂ ಈಗ ಪ್ರತಿಯೊಂದು ಪಂದ್ಯವೂ ಬಹಳ ಮುಖ್ಯವಾಗಿದೆ. ಆದರೆ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಒಂದು ಬಾರಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ (RR) ತಂಡಗಳ ಪ್ರಯಾಣ ಲೀಗ್ ಹಂತದಲ್ಲೇ ಅಂತ್ಯಗೊಳ್ಳುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಎಲ್ಲಾ ತಂಡಗಳು ಪ್ಲೇಆಫ್ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿವೆ.
ಈ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿದೆ. ರಜತ್ ಪಟಿದಾರ್ ನಾಯಕತ್ವದಲ್ಲಿ ತಂಡವು ಆಡಿರುವ 10 ಪಂದ್ಯಗಳಲ್ಲಿ 7 ರಲ್ಲಿ ಜಯಗಳಿಸಿದ್ದು 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ಬೆಂಗಳೂರು ತಂಡಕ್ಕೆ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇದ್ದು, ಒಂದು ಪಂದ್ಯ ಗೆದ್ದರೂ ಪ್ಲೇಆಫ್ ತಲುಪಲಿದೆ. ಗುಜರಾತ್ ಟೈಟನ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ತಂಡವು ಆಡಿರುವ 8 ಪಂದ್ಯಗಳಲ್ಲಿ 6 ಜಯಗಳೊಂದಿಗೆ 12 ಅಂಕಗಳನ್ನು ಗಳಿಸಿದೆ. ಈಗ, ಪ್ಲೇಆಫ್ ತಲುಪಲು ಗಿಲ್ ಪಡೆ ಕೇವಲ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಮುಂಬೈ ಇಂಡಿಯನ್ಸ್ ತಂಡ 10 ಪಂದ್ಯಗಳಲ್ಲಿ 6 ರಲ್ಲಿ ಜಯಗಳಿಸಿದ್ದು, 12 ಅಂಕಗಳನ್ನು ಸಹ ಹೊಂದಿದೆ. ಇದೀಗ ಹಾರ್ದಿಕ್ ಪಡೆ ಪ್ಲೇಆಫ್ ತಲುಪಲು ಉಳಿದಿರುವ 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಲೇಬೇಕು. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಆಡಿರುವ 9 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿದ್ದು, 12 ಅಂಕಗಳನ್ನು ಹೊಂದಿದೆ. ಪ್ಲೇಆಫ್ ತಲುಪಲು ಅಕ್ಷರ್ ಪಡೆ 2 ಪಂದ್ಯಗಳನ್ನು ಗೆಲ್ಲಬೇಕು. ಡಿಸಿ ತಂಡಕ್ಕೆ ಇನ್ನೂ 5 ಪಂದ್ಯಗಳು ಬಾಕಿ ಇವೆ.
ಅಗ್ರ ನಾಲ್ಕು ತಂಡಗಳನ್ನು ಹೊರತುಪಡಿಸಿ, ಇತರ ತಂಡಗಳಿಗೆ ಹಾದಿ ತುಂಬಾ ಕಷ್ಟಕರವಾಗಿದೆ. ಹೀಗಾಗಿ ಪ್ರತಿಯೊಂದು ಪಂದ್ಯವೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಪಂಜಾಬ್ ಕಿಂಗ್ಸ್ ಪ್ಲೇಆಫ್ ತಲುಪಲು 5 ಪಂದ್ಯಗಳಲ್ಲಿ 3 ರಲ್ಲಿ ಗೆಲ್ಲಬೇಕು. ಲಕ್ನೋ ಸೂಪರ್‌ಜೈಂಟ್ಸ್ ತಂಡ ಕೂಡ ಆಡಬೇಕಾಗಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಲೇಬೇಕು. ಇದಲ್ಲದೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ಉಳಿದಿರುವ ಐದು ಪಂದ್ಯಗಳಲ್ಲಿ ಐದನ್ನೂ ಗೆಲ್ಲಲೇಬೇಕು.
IPL 2025: ಸಾವನ್ನೇ ಗೆದ್ದು ಬಂದ ರಿಷಬ್ ಪಂತ್ಗೆ 27 ಕೋಟಿಯ ಒತ್ತಡವನ್ನು ಗೆಲ್ಲಲಾಗ್ತಿಲ್ಲ..!
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರಿಸ್ಥಿತಿ ಈಗ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. SRH ಇನ್ನೂ 5 ಪಂದ್ಯಗಳನ್ನು ಆಡಬೇಕಾಗಿದೆ. ಇದರಲ್ಲಿ ಒಂದೇ ಒಂದು ಸೋಲು ಕೂಡ ತಂಡವನ್ನು ಈ ಸೀಸನ್ನಿಂದ ಹೊರದಬ್ಬಬಹುದು. ಇದರರ್ಥ SRH ತನ್ನ ಐದು ಪಂದ್ಯಗಳನ್ನು ಗೆಲ್ಲಲೇಬೇಕು. ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇಆಫ್ ತಲುಪುವ ಸಾಧ್ಯತೆಗಳು ಬಹುತೇಕ ನಗಣ್ಯ. ಎರಡೂ ತಂಡಗಳಿಗೆ ತಲಾ 5 ಪಂದ್ಯಗಳು ಉಳಿದಿವೆ. ಎರಡೂ ತಂಡಗಳು ಐದು ಪಂದ್ಯಗಳಲ್ಲಿ ಗೆದ್ದರೂ 16 ಅಂಕಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಒಂದು ಪವಾಡ ಮಾತ್ರ ಈ ಎರಡು ತಂಡಗಳನ್ನು ಪ್ಲೇಆಫ್‌ಗೆ ಕೊಂಡೊಯ್ಯಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ