Cricket News: ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ಗಿಲ್ಲ ಅವಕಾಶ; ನುಚ್ಚುನೂರಾಯ್ತು ಐಸಿಸಿಯ ಮಹಾ ಕನಸು..!

Los Angeles Olympics 2028: ಇಲ್ಲಿಯವರೆಗೆ ಒಲಿಂಪಿಕ್ ಇತಿಹಾಸದಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಆಡಲಾಗಿದೆ. ಕ್ರಿಕೆಟ್ ಅನ್ನು 1900 ರಲ್ಲಿ ಒಲಿಂಪಿಕ್ಸ್‌ಗೆ ಸೇರಿಸಲಾಗಿತ್ತು. ಆದರೆ ಅಂದಿನಿಂದ ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾಗಲು ವಿಫಲವಾಗಿದೆ.

Cricket News: ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ಗಿಲ್ಲ ಅವಕಾಶ; ನುಚ್ಚುನೂರಾಯ್ತು ಐಸಿಸಿಯ ಮಹಾ ಕನಸು..!
ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ಗಿಲ್ಲ ಅವಕಾಶ
Follow us
TV9 Web
| Updated By: ಪೃಥ್ವಿಶಂಕರ

Updated on:Jan 21, 2023 | 10:38 AM

2028ರಲ್ಲಿ ನಡೆಯಲ್ಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಲಾಸ್ ಏಂಜಲೀಸ್ (Los Angeles Olympics 2028) ಆತಿಥ್ಯವಹಿಸುತ್ತಿದ್ದು, ಈ ಬಾರಿಯಾದರೂ ಒಲಿಂಪಿಕ್​ನಲ್ಲಿ ಕ್ರಿಕೆಟ್ ನೋಡುವ ಮಹಾ ಕನಸ್ಸಿನೊಂದಿಗೆ ಕಾಯುತ್ತಿದ್ದ ಅದೇಷ್ಟೋ ಅಭಿಮಾನಿಗಳಿಗೆ ಬ್ರಹ್ಮನಿರಸನ ಎದುರಾಗಿದೆ. ಲಾಸ್ ಏಂಜಲೀಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ (Cricket ) ಅನ್ನು ಸೇರಿಸಲು ಸಾಧ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ICC) ಮಾಹಿತಿ ನೀಡಿದೆ. ಲಾಸ್ ಏಂಜಲೀಸ್ ಒಲಿಂಪಿಕ್ಸ್ ಬಳಿಕ 2032ರಲ್ಲಿ ಒಲಿಂಪಿಕ್ಸ್ ನಡೆಯಲಿದ್ದು, ಇದಕ್ಕೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಆತಿಥ್ಯ ವಹಿಸಲಿದೆ. ಹೀಗಾಗಿ 2032ರ ಒಲಿಂಪಿಕ್ಸ್​ನಲ್ಲಿಯಾದರೂ ಕ್ರಿಕೆಟ್ ಆಟವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಾ ಎಂಬುದು ಈಗ ಎಲ್ಲರ ಪ್ರಶ್ನೆಯಾಗಿದೆ.

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಇತಿಹಾಸ

ಇಲ್ಲಿಯವರೆಗೆ ಒಲಿಂಪಿಕ್ ಇತಿಹಾಸದಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಆಡಲಾಗಿದೆ. ಕ್ರಿಕೆಟ್ ಅನ್ನು 1900 ರಲ್ಲಿ ಒಲಿಂಪಿಕ್ಸ್‌ಗೆ ಸೇರಿಸಲಾಗಿತ್ತು. ಆದರೆ ಅಂದಿನಿಂದ ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾಗಲು ವಿಫಲವಾಗಿದೆ. 1900ರಲ್ಲಿ ನಡೆದ ಒಲಿಂಪಿಕ್ಸ್​ಗೆ ಪ್ಯಾರಿಸ್ ಆತಿಥ್ಯವಹಿಸಿತ್ತು. ಆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್​ ಕೂಡ ಕ್ರೀಡಾಕೂಟದ ಭಾಗವಾಗಿತ್ತು. ಈ ವೇಳೆ ಗ್ರೇಟ್ ಬ್ರಿಟನ್ ಮತ್ತು ಆತಿಥೇಯ ಫ್ರಾನ್ಸ್‌ ಮಾತ್ರ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೇವಲ 2 ತಂಡಗಳಾಗಿ ಭಾಗವಹಿಸಿದ್ದವು.

IND vs NZ: ಟಾಸ್​ ಗೆದ್ದವನೇ ಬಾಸ್; ರಾಯ್‌ಪುರದ ಪಿಚ್​ನಲ್ಲಿ ಮಿಂಚುವವರು ಯಾರು? ಇಲ್ಲಿದೆ ಪಿಚ್ ರಿಪೋರ್ಟ್

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್​ಗೆ ಅವಕಾಶ

ವಾಸ್ತವವಾಗಿ ಕಳೆದ ವರ್ಷ ಫೆಬ್ರುವರಿಯಲ್ಲಿ ಯಾವ ಕ್ರೀಡೆಗಳನ್ನು ಒಲಿಂಪಿಕ್ಸ್​ನಲ್ಲಿ ಸೇರಿಸಬೇಕು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಭೆ ನಡೆದಿತ್ತು. ಆ ಸಭೆಯಲ್ಲಿ 28 ಕ್ರೀಡೆಗಳನ್ನು ಆಯ್ಕೆ ಮಾಡುವುದರೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಈ 28 ಆಟಗಳನ್ನು ಆಡಿಸಲು ಫೈನಲ್ ಮಾಡಲಾಗಿತ್ತು. ಆದರೆ ಅದರ ನಂತರ ಇನ್ನು 8 ಕ್ರೀಡೆಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ಕ್ರೀಡೆಗಳನ್ನೂ ಸೇರ್ಪಡೆಯಾಗಬಹುದು ಎಂದು ಹೇಳಲಾಗುತ್ತಿದ್ದು, ಕ್ರಿಕೆಟ್ ಕೂಡ ಇದರಲ್ಲಿ ಒಂದಾಗಿದೆ. ಗಮನಾರ್ಹವಾಗಿ, ಕಳೆದ ವರ್ಷ, ಸುಮಾರು 24 ವರ್ಷಗಳ ನಂತರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಅನ್ನು ಸೇರಿಸಲಾಗಿತ್ತು. ಇದಕ್ಕೂ ಮುನ್ನ 1998ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಆಡಲಾಗಿತ್ತು. ಭಾರತ ಸೇರಿದಂತೆ ಎಂಟು ತಂಡಗಳು ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಕ್ರಿಕೆಟ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದವು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:55 am, Sat, 21 January 23