ಹೊಸ ಟಿ20 ಲೀಗ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ಅದಕ್ಕೆ ಇಟ್ಟ ಹೆಸರೇನು ಗೊತ್ತಾ?

ಈ ಲೀಗ್​ ಜೊತೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ T20 ಲೀಗ್ ILT20 ಇದೇ ಸಮಯದಲ್ಲಿ ನಡೆಯಲಿದೆ. ಜೊತೆಗೆ, ಬಿಗ್ ಬ್ಯಾಷ್ ಲೀಗ್ ಮತ್ತು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಕೂಡ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದೆ.

ಹೊಸ ಟಿ20 ಲೀಗ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ಅದಕ್ಕೆ ಇಟ್ಟ ಹೆಸರೇನು ಗೊತ್ತಾ?
Follow us
TV9 Web
| Updated By: ಪೃಥ್ವಿಶಂಕರ

Updated on:Sep 01, 2022 | 6:32 PM

ದಕ್ಷಿಣ ಆಫ್ರಿಕಾದಲ್ಲಿ ಹೊಸ ಟಿ20 ಲೀಗ್ (Cricket South Africa T20 league) ಮುಂದಿನ ವರ್ಷದಿಂದ ಶುಭಕರವಾಗಿ ಆರಂಭವಾಗಲಿದೆ. ಒಟ್ಟು 6 ತಂಡಗಳು ಇದರಲ್ಲಿ ಭಾಗವಹಿಸಲಿವೆ. ಎಲ್ಲಾ ತಂಡಗಳು ಒಂದಲ್ಲ ಒಂದು IPL ಫ್ರಾಂಚೈಸಿಯ ಒಡೆತನದಲ್ಲಿದೆ. ಹೆಸರುಗಳನ್ನು ಕೇಳಿದರೆ ನಿಮಗೆ ಅರ್ಥವಾಗುತ್ತದೆ. ಉದಾಹರಣೆಗೆ SaiRisers ಈಸ್ಟರ್ನ್ ಕ್ಯಾಪ್, ಪ್ರಿಟೋರಿಯಾ ಕ್ಯಾಪಿಟಲ್ಸ್, ಪರ್ಲ್ ರಾಯಲ್ಸ್, MI ಕೇಪ್ ಟೌನ್, ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ಮತ್ತು ಡರ್ಬನ್ ಜೈಂಟ್ಸ್. ಈಗಾಗಲೇ ವಿವಿದ ದೇಶಗಳು ಆರಂಭಿಸಿರುವ ಟಿ20 ಲೀಗ್​ಗಳಿಗೆ ISL, PSL, CPL ಎಂದು ಹೆಸರಿಡಲಾಗಿದೆ. ಹೊಸ ಲೀಗ್ ಆರಂಭಿಸಿರುವ ಸೌತ್ ಆಫ್ರಿಕಾ ತನ್ನ ಲೀಗ್​ಗೆ ಯಾವ ಹೆಸರಿಟ್ಟಿದೆ ಎಂಬುದನ್ನು ಈಗ ಬಹಿರಂಗಗೊಳಿಸಿದೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ ತನ್ನ T20 ಫ್ರಾಂಚೈಸ್ ಲೀಗ್ ಅನ್ನು ‘SA20’ ಎಂದು ಹೆಸರಿಸಿದೆ. ಈ ತಿಂಗಳ ಸೆಪ್ಟೆಂಬರ್ 19 ರಂದು ಆಟಗಾರರ ಹರಾಜು ನಡೆಯಲಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಹೇಳಿದ್ದಾರೆ. SA20 ಗಾಗಿ ಕ್ರಿಕೆಟಿಗರ ಹೆಸರುಗಳ ನೋಂದಣಿ ಅವದಿ ಭಾನುವಾರ ಮಧ್ಯಾಹ್ನ ಮುಗಿಯಲಿದ್ದು, ಪ್ರತಿ ಫ್ರಾಂಚೈಸಿಗಳು ಒಟ್ಟು 2 ಮಿಲಿಯನ್ ಡಾಲರ್ ಹಣವನ್ನು ಹರಾಜಿನಲ್ಲಿ ವ್ಯಯಿಸಬಹುದಾಗಿದೆ. ಇದರಲ್ಲಿ ಒಂದು ತಂಡವು ಗರಿಷ್ಠ 17 ಕ್ರಿಕೆಟಿಗರನ್ನು ಖರೀದಿಸಬಹುದು.

ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ದಕ್ಷಿಣ ಆಫ್ರಿಕಾದಿಂದ ಆರು ತಂಡಗಳು ಭಾಗವಹಿಸಲಿವೆ. ಮೊದಲ ಹನ್ನೊಂದರಲ್ಲಿ ಗರಿಷ್ಠ ನಾಲ್ವರು ವಿದೇಶಿ ಕ್ರಿಕೆಟಿಗರು ಮತ್ತು ಏಳು ಸ್ಥಳೀಯ ಆಟಗಾರರಿಗೆ ಅವಕಾಶ ಸಿಗಲಿದೆ. ದೇಶೀಯ ಕ್ರಿಕೆಟಿಗರನ್ನು ಹೊರತುಪಡಿಸಿ, ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್, ಅಫ್ಘಾನಿಸ್ತಾನದ ರಶೀದ್ ಖಾನ್, ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್, ಜೋಸ್ ಬಟ್ಲರ್ ಮತ್ತು ಮೊಯಿನ್ ಅಲಿ ಈಗಾಗಲೇ SA20 ಲೀಗ್​ಗೆ ಸೇರಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ಮಿತ್, “SA20 ಜನವರಿ 2023 ರಲ್ಲಿ ಪ್ರಾರಂಭವಾಗುತ್ತದೆ. ಆದ್ದರಿಂದ ಈಗಾಗಲೇ ಈ ಹೊಸ ಲೀಗ್​ಗೆ ಕೌಂಟ್‌ಡೌನ್ ಪ್ರಾರಂಭವಾಗಿದೆ. ಜನರು SA20 ವೀಕ್ಷಿಸಲು ಇಷ್ಟಪಡುತ್ತಾರೆ ಎಂದು ಭಾವಿಸುತ್ತೇವೆ. ಈ ಪಂದ್ಯಾವಳಿಯು ದಕ್ಷಿಣ ಆಫ್ರಿಕಾದ ಹೆಮ್ಮೆಯಾಗಬಹುದು ಎಂದಿದ್ದಾರೆ. ಈ ಲೀಗ್​ ಜೊತೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ T20 ಲೀಗ್ ILT20 ಇದೇ ಸಮಯದಲ್ಲಿ ನಡೆಯಲಿದೆ. ಜೊತೆಗೆ, ಬಿಗ್ ಬ್ಯಾಷ್ ಲೀಗ್ ಮತ್ತು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಕೂಡ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದೆ.

Published On - 6:32 pm, Thu, 1 September 22