Virat Kohli: ಆಲಿಬಾಗ್‌ನಲ್ಲಿ 8 ಎಕರೆ ಭೂಮಿ ಖರೀದಿಸಿದ ಕೊಹ್ಲಿ; ಅದರ ಬೆಲೆ ಕೇಳಿದ್ರೆ ಖಂಡಿತ ಬೆಚ್ಚಿ ಬೀಳ್ತೀರಾ..!

Virat Kohli: ಸಹೋದರ ವಿಕಾಸ್ ಕೊಹ್ಲಿ ಅವರು 19 ಕೋಟಿ 24 ಲಕ್ಷ 50 ಸಾವಿರಕ್ಕೆ ಡೀಲ್ ಪಡೆದು ಮಂಗಳವಾರ 1 ಕೋಟಿ 15 ಲಕ್ಷ 45 ಸಾವಿರ ಸ್ಟ್ಯಾಂಪ್ ಡ್ಯೂಟಿ ಪಾವತಿಸಿ ಭೂಮಿಯನ್ನು ವಿರಾಟ್ ಕೊಹ್ಲಿ ಹೆಸರಿಗೆ ಮಾಡಿಸಿದ್ದಾರೆ.

Virat Kohli: ಆಲಿಬಾಗ್‌ನಲ್ಲಿ 8 ಎಕರೆ ಭೂಮಿ ಖರೀದಿಸಿದ ಕೊಹ್ಲಿ; ಅದರ ಬೆಲೆ ಕೇಳಿದ್ರೆ ಖಂಡಿತ ಬೆಚ್ಚಿ ಬೀಳ್ತೀರಾ..!
Follow us
TV9 Web
| Updated By: ಪೃಥ್ವಿಶಂಕರ

Updated on:Sep 01, 2022 | 8:19 PM

ಏಷ್ಯಾಕಪ್​ನಲ್ಲಿ ಅಬ್ಬರಿಸುವ ಮೂಲಕ ತನ್ನ ಹಳೆಯ ಫಾರ್ಮ್​ಗೆ ಮರಳಲು ಯತ್ನಿಸುತ್ತಿರುವ ವಿರಾಟ್ ಕೊಹ್ಲಿ (Virat Kohli) ಈಗ ದೆಹಲಿ ಬಿಟ್ಟು ಮುಂಬೈಗೆ ವಲಸೆ ಹೋಗಲು ತೀರ್ಮಾನಿಸಿದ್ದಾರೆ. ಗಣೇಶ ಚತುರ್ಥಿಯ ಒಂದು ದಿನ ಮೊದಲು ಅಂದರೆ ಆಗಸ್ಟ್ 30 ರಂದು (ಮಂಗಳವಾರ), ವಿರಾಟ್ ಕೊಹ್ಲಿ ಪರವಾಗಿ, ಅವರ ಸಹೋದರ ವಿಕಾಸ್ ಕೊಹ್ಲಿ ಮುಂಬೈ ಪಕ್ಕದ ಆಲಿಬಾಗ್ (Alibaug area adjacent to Mumbai) ಪ್ರದೇಶದಲ್ಲಿ 8 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಅಲಿಬಾಗ್‌ನ ಜಿರಾದ್ ಎಂಬ ಪ್ರದೇಶದಲ್ಲಿ ಈ ಭೂಮಿಯನ್ನು ತೆಗೆದುಕೊಳ್ಳಲಾಗಿದ್ದು, ಇಲ್ಲಿ ವಿರಾಟ್ ಕೊಹ್ಲಿ ಐಷಾರಾಮಿ ಫಾರ್ಮ್ ಹೌಸ್ ಸಿದ್ಧಪಡಿಸಲಿದ್ದಾರೆ. ವಿರಾಟ್ ಕೊಹ್ಲಿಗಿಂತ ಮೊದಲು ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಅಜಿತ್ ಅಗರ್ಕರ್, ರೋಹಿತ್ ಶರ್ಮಾ ಕೂಡ ಆಲಿಬಾಗ್‌ನಲ್ಲಿ ಭೂಮಿ ಖರೀದಿಸಿದ್ದಾರೆ.

ಆಲಿಬಾಗ್ ಮುಂಬೈಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು ಇಲ್ಲಿ ಪ್ರಕೃತಿ ಸೌಂದರ್ಯ ಅದ್ಭುತವಾಗಿದೆ. ಅನೇಕ ಸಿನಿಮಾ ತಾರೆಯರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಇಲ್ಲಿ ಭೂಮಿ ಹೊಂದಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಫಾರ್ಮ್ ಹೌಸ್‌ಗಾಗಿ ಈ ಸ್ಥಳವನ್ನು ತುಂಬಾ ಇಷ್ಟಪಟ್ಟು ಖರೀದಿ ಮಾಡಿದ್ದಾರೆ ಎಂದಯ ವರದಿಯಾಗಿದೆ.

ನೋಂದಣಿ ಮಾಡಿಸಿದ ಸಹೋದರ ವಿಕಾಸ್

ವಿರಾಟ್ ಕೊಹ್ಲಿ ಸದ್ಯ ದುಬೈನಲ್ಲಿ ಏಷ್ಯಾಕಪ್ ಆಡುತ್ತಿದ್ದಾರೆ. ಆರು ತಿಂಗಳ ಹಿಂದೆ ಈ ಜಮೀನು ನೋಡಿದ್ದ ವಿರುಷ್ಕಾ ಜೋಡಿ ಈಗ ಆ ಜಮೀನು ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಪವರ್ ಆಫ್ ಅಟಾರ್ನಿ ಪಡೆದು ಅವರ ಸಹೋದರ ವಿಕಾಸ್ ಕೊಹ್ಲಿ ಅವರು 19 ಕೋಟಿ 24 ಲಕ್ಷ 50 ಸಾವಿರಕ್ಕೆ ಡೀಲ್ ಪಡೆದು ಮಂಗಳವಾರ 1 ಕೋಟಿ 15 ಲಕ್ಷ 45 ಸಾವಿರ ಸ್ಟ್ಯಾಂಪ್ ಡ್ಯೂಟಿ ಪಾವತಿಸಿ ಭೂಮಿಯನ್ನು ವಿರಾಟ್ ಕೊಹ್ಲಿ ಹೆಸರಿಗೆ ಮಾಡಿಸಿದ್ದಾರೆ. ಈ ಸಂಪೂರ್ಣ ಒಪ್ಪಂದವನ್ನು ಸಮೀರ ಹ್ಯಾಬಿಟಾಟ್ಸ್ ಎಂಬ ರಿಯಲ್ ಎಸ್ಟೇಟ್ ಕಂಪನಿಯ ಮೂಲಕ ಪೂರ್ಣಗೊಳಿಸಲಾಗಿದೆ.

ಸಚಿನ್, ರೋಹಿತ್ ಜೊತೆ ವಿರಾಟ್

ಈ ಮೂಲಕ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಅಜಿತ್ ಅಗರ್ಕರ್, ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಅವರಂತೆ ಅಲಿಬಾಗ್‌ನಲ್ಲಿ ಎರಡನೇ ಮನೆ ಮಾಡುವ ಮೂಲಕ ಅವರ ನೆರೆಹೊರೆಯವರಾಗಲಿದ್ದಾರೆ. ಹತ್ತು ವರ್ಷಗಳ ಹಿಂದೆ ರವಿಶಾಸ್ತ್ರಿ ಇಲ್ಲಿ ನೆಲೆಸಿದ್ದರು. ರೋಹಿತ್ ಶರ್ಮಾ ಅವರ 3 ಎಕರೆ ಫಾರ್ಮ್ ಹೌಸ್ ಸಹ ಸಮೀಪದ ಮ್ಹತ್ರೋಲಿ-ಸರಲ್ ಪ್ರದೇಶದಲ್ಲಿ ಸಿದ್ಧವಾಗುತ್ತಿದೆ. ಕೆಲವು ದಿನಗಳ ಹಿಂದೆ ಹಾರ್ದಿಕ್ ಪಾಂಡ್ಯ ಮತ್ತು ಯುಜ್ವೇಂದ್ರ ಚಹಾಲ್ ಕೂಡ ಭೂಮಿ ಖರೀದಿಸಲು ಇಲ್ಲಿಗೆ ಬಂದಿದ್ದರು. ಹೀಗಾಗಿ ಆಲಿಬಾಗ್ ಪ್ರದೇಶ ಚಲನಚಿತ್ರ ಸ್ಟಾರ್ಸ್​, ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಮತ್ತು ಕ್ರಿಕೆಟಿಗರ ಫಾರ್ಮ್ ಹೌಸ್‌ಗೆ ಮೊದಲ ಆಯ್ಕೆಯಾಗುತ್ತಿದೆ.

6 ತಿಂಗಳ ಬಳಿಕ ಅರ್ಧಶತಕ

6 ತಿಂಗಳು ಹಾಗೂ 11 ಇನ್ನಿಂಗ್ಸ್‌ಗಳ ಬಳಿಕ ಕೊಹ್ಲಿ ಹಾಂಗ್​ ಕಾಂಗ್ ವಿರುದ್ಧ ಅರ್ಧಶತಕ ದಾಖಲಿಸಿದ್ದಾರೆ. ವಿರಾಟ್ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ 18 ಫೆಬ್ರವರಿ 2022 ರಂದು ಅರ್ಧಶತಕ ಗಳಿಸಿದ್ದರು. ಆ ಪಂದ್ಯದಲ್ಲಿ ಅವರು 41 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ಒಟ್ಟಾರೆಯಾಗಿ ಕೊಹ್ಲಿ ಟಿ20ಯಲ್ಲಿ 31ನೇ ಅರ್ಧಶತಕ ದಾಖಲಿಸಿದರು. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 32 ತಿಂಗಳ ನಂತರ ಟಿ20 ಕ್ರಿಕೆಟ್‌ನಲ್ಲಿ ಸತತ 3 ಪಂದ್ಯಗಳಲ್ಲಿ 10ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು ಕೊನೆಯ ಬಾರಿಗೆ 2020 ರ ಜನವರಿಯಲ್ಲಿ ಸತತ 3 ಪಂದ್ಯಗಳಲ್ಲಿ 10 ಕ್ಕಿಂತ ಹೆಚ್ಚು ರನ್ ಗಳಿಸಿದ್ದರು.

Published On - 8:19 pm, Thu, 1 September 22