ಪತ್ನಿ ಜೊತೆಗೂ ಮ್ಯಾಚ್ ಚೆನ್ನಾಗಿಯೇ ಆಡುತ್ತೇನೆ: ಟೀಮ್ ಇಂಡಿಯಾ ವೇಗಿಯ ಹೇಳಿಕೆ ವೈರಲ್

India vs South Africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಸರಣಿಯು ಡಿಸೆಂಬರ್ 10 ರಿಂದ ಶುರುವಾಗಲಿದೆ. ಈ ಸರಣಿಗೆ ಆಯ್ಕೆ ಮಾಡಲಾದ ಟಿ20, ಏಕದಿನ ಮತ್ತು ಟೆಸ್ಟ್​ ತಂಡಗಳಲ್ಲಿ ಮುಖೇಶ್ ಕುಮಾರ್​ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಈ ಸರಣಿಯ ಸೀಮಿತ ಓವರ್​ಗಳ ಪಂದ್ಯಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದಾರೆ.

ಪತ್ನಿ ಜೊತೆಗೂ ಮ್ಯಾಚ್ ಚೆನ್ನಾಗಿಯೇ ಆಡುತ್ತೇನೆ: ಟೀಮ್ ಇಂಡಿಯಾ ವೇಗಿಯ ಹೇಳಿಕೆ ವೈರಲ್
Mukesh Kumar-Divya
Updated By: ಝಾಹಿರ್ ಯೂಸುಫ್

Updated on: Dec 09, 2023 | 3:17 PM

ಟೀಮ್ ಇಂಡಿಯಾ ವೇಗಿ ಮುಕೇಶ್ ಕುಮಾರ್ (Mukesh Kumar) ನವೆಂಬರ್ 28 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಬಹುಕಾಲದ ಗೆಳೆತಿ ದಿವ್ಯಾ ಸಿಂಗ್ ಅವರನ್ನು ವರಿಸಿದ್ದ ಭಾರತ ತಂಡದ ವೇಗಿ ಇತ್ತೀಚೆಗೆ ಆರಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಕೇಶ್ ಕುಮಾರ್ ಹೇಳಿದ ಮಾತುಗಳು ಈಗ ವೈರಲ್ ಆಗಿದೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಮುಕೇಶ್ ಕುಮಾರ್ ಅವರಲ್ಲಿ ಹೊಸ ಇನಿಂಗ್ಸ್ ಬಗ್ಗೆ ಪ್ರಶ್ನಿಸಲಾಗಿತ್ತು. ಈ ವೇಳೆ ಫಲ್ಟರ್ ರಹಿತವಾಗಿ ಮಾತನಾಡಿದ ಟೀಮ್ ಇಂಡಿಯಾ, ತುಂಬಾ ಸಂತೋಷವಾಗುತ್ತಿದೆ. ನಾವಿಬ್ಬರೂ ಮೊದಲಿನಿಂದಲೂ ಜೊತೆಗಿದ್ದೇವೆ. ಇದೀಗ ಈಕೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ್ದೇನೆ. ಈಕೆಯ ಜೊತೆಯೂ ಮ್ಯಾಚ್ ಚೆನ್ನಾಗಿಯೇ ಆಡುತ್ತೇನೆ ಎಂದಿದ್ದಾರೆ.

ಇದೀಗ ಮುಕೇಶ್ ಕುಮಾರ್ ಹೇಳಿದ ಡಬಲ್ ಮೀನಿಂಗ್ ಮಾತುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮಾತುಗಳ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ನಾನಾ ರೀತಿಯ ಪ್ರತಿಕ್ರಿಯೆಗಳ ಮೂಲಕ ಟೀಮ್ ಇಂಡಿಯಾ ಕ್ರಿಕೆಟಿಗನ್ನು ಕಾಲೆಳೆದಿದ್ದಾರೆ.

ಭಾರತ-ಸೌತ್ ಆಫ್ರಿಕಾ ಸರಣಿ:

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಸರಣಿಯು ಡಿಸೆಂಬರ್ 10 ರಿಂದ ಶುರುವಾಗಲಿದೆ. ಈ ಸರಣಿಗೆ ಆಯ್ಕೆ ಮಾಡಲಾದ ಟಿ20, ಏಕದಿನ ಮತ್ತು ಟೆಸ್ಟ್​ ತಂಡಗಳಲ್ಲಿ ಮುಖೇಶ್ ಕುಮಾರ್​ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಈ ಸರಣಿಯ ಸೀಮಿತ ಓವರ್​ಗಳ ಪಂದ್ಯಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಟಿ20 ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಏಕದಿನ ತಂಡದ ನಾಯಕರಾಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ.

ಭಾರತ – ಸೌತ್ ಆಫ್ರಿಕಾ ಸರಣಿ ವೇಳಾಪಟ್ಟಿ:

ಟಿ20 ಸರಣಿ ವೇಳಾಪಟ್ಟಿ:

  • ಡಿಸೆಂಬರ್ 10- ಮೊದಲ ಟಿ20 ಪಂದ್ಯ (ಡರ್ಬನ್)
  • ಡಿಸೆಂಬರ್ 12- ಎರಡನೇ ಟಿ20 ಪಂದ್ಯ (ಗೆಬರ್ಹ)
  • ಡಿಸೆಂಬರ್ 14- ಮೂರನೇ ಟಿ20 ಪಂದ್ಯ (ಜೋಹಾನ್ಸ್​ಬರ್ಗ್​)

ಏಕದಿನ ಸರಣಿ ವೇಳಾಪಟ್ಟಿ:

  • ಡಿಸೆಂಬರ್ 17- ಮೊದಲ ಏಕದಿನ ಪಂದ್ಯ (ಜೋಹಾನ್ಸ್​ಬರ್ಗ್​)
  • ಡಿಸೆಂಬರ್ 19- ಎರಡನೇ ಏಕದಿನ ಪಂದ್ಯ (ಗೆಬರ್ಹ)
  • ಡಿಸೆಂಬರ್ 21- ಮೂರನೇ ಏಕದಿನ ಪಂದ್ಯ (ಪಾರ್ಲ್​)

ಟೆಸ್ಟ್ ಸರಣಿ ವೇಳಾಪಟ್ಟಿ:

  • ಡಿಸೆಂಬರ್ 26 ರಿಂದ- ಮೊದಲ ಟೆಸ್ಟ್ ಪಂದ್ಯ (ಸೆಂಚುರಿಯನ್)
  • ಜನವರಿ 3 ರಿಂದ- ಎರಡನೇ ಟೆಸ್ಟ್ ಪಂದ್ಯ (ಕೇಪ್​ಟೌನ್)

ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ:

ಭಾರತ ಟೆಸ್ಟ್​ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.

ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹರ್.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಯುವ ಆಲ್​ರೌಂಡರ್ ಎಂಟ್ರಿ: ಹಾರ್ದಿಕ್ ಪಾಂಡ್ಯಗೆ ಪ್ರತಿಸ್ಪರ್ಧಿ?

ಭಾರತ ಏಕದಿನ ತಂಡ: ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಾಹಲ್ , ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ದೀಪಕ್ ಚಹರ್.

 

Published On - 3:01 pm, Sat, 9 December 23