IPL 2024: ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಬಲಿಷ್ಠ ಪಡೆಯನ್ನೇ ರೂಪಿಸಿದೆ. ಹರಾಜಿಗೂ ಮುನ್ನ 19 ಆಟಗಾರರನ್ನು ಉಳಿಸಿಕೊಂಡಿದ್ದ ಸಿಎಸ್ಕೆ ಆಕ್ಷನ್ ಮೂಲಕ 6 ಆಟಗಾರರನ್ನು ಖರೀದಿಸಿದೆ. ವಿಶೇಷ ಎಂದರೆ ಈ ಆರು ಆಟಗಾರರಲ್ಲಿ ಇಬ್ಬರು ನ್ಯೂಝಿಲೆಂಡ್ ಕ್ರಿಕೆಟಿಗರು. ನ್ಯೂಝಿಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟರ್ ಡೇರಿಲ್ ಮಿಚೆಲ್ ಅವರನ್ನು ಬರೋಬ್ಬರಿ 14 ಕೋಟಿ ರೂ. ನೀಡಿ ಸಿಎಸ್ಕೆ ಖರೀದಿಸಿದೆ. ಹಾಗೆಯೇ ಕಿವೀಸ್ ಪಡೆಯ ಯುವ ಆಲ್ರೌಂಡರ್ ಆಟಗಾರ ರಚಿನ್ ರವೀಂದ್ರ ಅವರನ್ನು 1.8 ಕೋಟಿಗೆ ತಮ್ಮದಾಗಿಸಿಕೊಂಡಿದ್ದಾರೆ.
ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಲ್ವರು ನ್ಯೂಝಿಲೆಂಡ್ ಆಟಗಾರರು ಸೇರ್ಪಡೆಯಾದಂತಾಗಿದೆ. ಇದಕ್ಕೂ ಮುನ್ನ ಸಿಎಸ್ಕೆ ತಂಡವು ನ್ಯೂಝಿಲೆಂಡ್ನ ಡೆವೊನ್ ಕಾನ್ವೆ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರನ್ನು ಉಳಿಸಿಕೊಂಡಿತ್ತು. ಇದೀಗ ರಚಿನ್ ರವೀಂದ್ರ ಹಾಗೂ ಡೇರಿಲ್ ಮಿಚೆಲ್ ಆಯ್ಕೆಯಾಗಿದ್ದಾರೆ.
ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ನಾಲ್ವರು ಕಿವೀಸ್ ಆಟಗಾರರು ಜೊತೆಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಒಂದು ವೇಳೆ ಹೀಗಾದರೆ ಸಿಎಸ್ಕೆ ಪಡೆಯು ಚೆನ್ನೈ ಸೂಪರ್ ಕಿವೀಸ್ ಆಗಿ ಗುರುತಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಇನ್ನು ಈ ಬಾರಿಯ ಹರಾಜಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ ಮೂರನೇ ವಿದೇಶಿ ಆಟಗಾರ ಮುಸ್ತಫಿಜುರ್ ರೆಹಮಾನ್. ಬಾಂಗ್ಲಾದೇಶ್ ತಂಡದ ಎಡಗೈ ವೇಗಿಯನ್ನು ಸಿಎಸ್ಕೆ 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿದೆ. ಹಾಗೆಯೇ ಟೀಮ್ ಇಂಡಿಯಾ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು 4 ಕೋಟಿ ರೂ. ನೀಡಿ ಆಯ್ಕೆ ಮಾಡಿಕೊಂಡಿದೆ. ಇದಲ್ಲದೆ ಯುವ ಆಟಗಾರರಾದ ಸಮೀರ್ ರಿಝ್ವಿ ಅವಿನಾಶ್ ಕೂಡ ಸಿಎಸ್ಕೆ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಅತ್ತ ಕಡೆ ಕಳೆದ ಬಾರಿಯ ಚಾಂಪಿಯನ್ ಪಡೆಯನ್ನು ಉಳಿಸಿಕೊಂಡಿದ್ದ ಸಿಎಸ್ಕೆ ಫ್ರಾಂಚೈಸಿ ಇದೀಗ ಡೇರಿಲ್ ಮಿಚೆಲ್, ರಚಿನ್ ರವೀಂದ್ರ, ಮುಸ್ತಫಿಜುರ್ ರೆಹಮಾನ್ನಂತಹ ಆಟಗಾರರನ್ನು ಖರೀದಿಸಿ ತನ್ನ ಬಳಗವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡಿರುವುದು ವಿಶೇಷ.
ಚೆನ್ನೈ ಸೂಪರ್‌ಕಿಂಗ್ಸ್: ಎಂಎಸ್ ಧೋನಿ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್‌ವಾಡ್, ಅಜಿಂಕ್ಯ ರಹಾನೆ, ಶೇಖ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ಶಿವಂ ದುಬೆ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜವರ್ಧನ್ ಹಂಗರ್ಗೇಕರ್, ದೀಪಕ್ ಚೋಹ್ಲನ್, ಮಹಿಶ್ ತೀಕ್ಷಣ, ಶೇಕ್ ರಶೀದ್, ಸಿಮರ್ಜಿತ್ ಸಿಂಗ್, ತುಷಾರ್ ದೇಶಪಾಂಡೆ, ಮತೀಶ ಪತಿರಾಣ.
ಇದನ್ನೂ ಓದಿ: IPL 2024: ಗುಜರಾತ್ ಟೈಟಾನ್ಸ್ ಬೇಡವೇ ಬೇಡವೆಂದು ಕೈ ಬಿಟ್ಟ ಆಟಗಾರರಿಗೆ ಕೋಟಿ ಸುರಿದ RCB
ಸಿಎಸ್ಕೆ ಹರಾಜಿನಲ್ಲಿ ಖರೀದಿಸಿದ ಆಟಗಾರರು: