IPL 2024: ಸೆಕ್ಯುರಿಟಿ ಗಾರ್ಡ್​ ಮಗನಿಗೆ ಸಿಕ್ತು 3.6 ಕೋಟಿ ರೂ.

Robin Minz: ರಾಬಿನ್ ಮಿನ್ಝ್ 21 ವರ್ಷದ ಯುವ ವಿಕೆಟ್ ಕೀಪರ್. 10ನೇ ತರಗತಿಯಲ್ಲಿ ಪಾಸಾದ ಬಳಿಕ ಮಿನ್ಝ್ ಕ್ರಿಕೆಟ್​ನತ್ತ ತನ್ನ ಗಮನವನ್ನು​ ಕೇಂದ್ರೀಕರಿಸಿದ್ದರು. ಇದರ ಫಲವಾಗಿ ಜುಲೈನಲ್ಲಿ ಮುಂಬೈ ಇಂಡಿಯನ್ಸ್‌ನ ಯುಕೆ ಪ್ರವಾಸಕ್ಕಾಗಿ ಅವರನ್ನು ಆಯ್ಕೆಯಾಗಿದ್ದರು. ಅಷ್ಟೇ ಅಲ್ಕದೆ U-19 ಮತ್ತು U-25 ಜಾರ್ಖಂಡ್​ ತಂಡವನ್ನು ಮುನ್ನಡೆಸಿದ್ದಾರೆ.

IPL 2024: ಸೆಕ್ಯುರಿಟಿ ಗಾರ್ಡ್​ ಮಗನಿಗೆ ಸಿಕ್ತು 3.6 ಕೋಟಿ ರೂ.
Robin Minz
Follow us
TV9 Web
| Updated By: ಝಾಹಿರ್ ಯೂಸುಫ್

Updated on:Dec 20, 2023 | 10:53 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಮೂಲಕ ಹಲವು ಆಟಗಾರರು ತಮ್ಮ ಅದೃಷ್ಟ ಬದಲಿಸಿಕೊಂಡಿದ್ದಾರೆ. ಕೆಲ ಆಟಗಾರರು ಐಪಿಎಲ್​ ಮೂಲಕವೇ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಟ್ಟರೆ, ಮತ್ತೆ ಕೆಲ ಆಟಗಾರರು ಕೋಟಿ ಮೊತ್ತ ಪಡೆಯುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ಹೀಗೆ ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಆಟಗಾರರ ಪಟ್ಟಿಗೆ ಹೊಸ ಸೇರ್ಪಡೆ ರಾಬಿನ್ ಮಿನ್ಝ್ (Robin Minz)​.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಜಾರ್ಖಂಡ್​ಗೆ ರಾಬಿನ್ ಮಿನ್ಝಿ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹೆಸರು ನೀಡಿದ್ದರು. ಅಲ್ಲದೆ ಈ ಬಾರಿಯಾದರೂ ಹರಾಜಾದರೆ ಸಾಕು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಯುವ ಆಟಗಾರ ಈ ನಿರೀಕ್ಷೆ ಸುಳ್ಳಾಗಲಿಲ್ಲ.

ರಾಬಿನ್ ಮಿನ್ಝಿ ಹೆಸರು ಕೂಗುತ್ತಿದ್ದಂತೆ ಗುಜರಾತ್ ಟೈಟಾನ್ಸ್ ತಂಡವು ಖರೀದಿಗೆ ಆಸಕ್ತಿವಹಿಸಿತು. ಇದರ ಬೆನ್ನಲ್ಲೇ ಸಿಎಸ್​ಕೆ, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಿಡ್ಡಿಂಗ್ ನಡೆಸಿದ್ದವು. ಪರಿಣಾಮ 20 ಲಕ್ಷದಲ್ಲಿದ್ದ ರಾಬಿನ್ ಮಿನ್ಝ್ ಮೌಲ್ಯವು 3 ಕೋಟಿಯನ್ನು ದಾಟಿತು.

ಅಂತಿಮವಾಗಿ ಗುಜರಾತ್ ಟೈಟಾನ್ಸ್ ತಂಡವು 3.6 ಕೋಟಿ ರೂ. ನೀಡುವ ಮೂಲಕ ಜಾರ್ಖಂಡ್​ನ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಂತೆ ಈ ಬಾರಿ ರಾಬಿನ್ ಮಿನ್ಝಿ ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಂದೆ ಸೆಕ್ಯುರಿಟಿ ಗಾರ್ಡ್​:

ರಾಬಿನ್ ಮಿನ್ಝ್ ಅವರ ತಂದೆ ನಿವೃತ್ತ ಸೇನಾಧಿಕಾರಿ. ಪ್ರಸ್ತುತ ರಾಂಚಿಯ ಮುಂಡಾ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಮಗ ಐಪಿಎಲ್​ನಂತಹ ದೊಡ್ಡ ಲೀಗ್​ಗೆ ಆಯ್ಕೆಯಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

21 ವರ್ಷದ ಯುವ ಆಟಗಾರ:

ರಾಬಿನ್ ಮಿನ್ಝ್ 21 ವರ್ಷದ ಯುವ ವಿಕೆಟ್ ಕೀಪರ್. 10ನೇ ತರಗತಿಯಲ್ಲಿ ಪಾಸಾದ ಬಳಿಕ ಮಿನ್ಝ್ ಕ್ರಿಕೆಟ್​ನತ್ತ ತನ್ನ ಗಮನವನ್ನು​ ಕೇಂದ್ರೀಕರಿಸಿದ್ದರು. ಇದರ ಫಲವಾಗಿ ಜುಲೈನಲ್ಲಿ ಮುಂಬೈ ಇಂಡಿಯನ್ಸ್‌ನ ಯುಕೆ ಪ್ರವಾಸಕ್ಕಾಗಿ ಅವರನ್ನು ಆಯ್ಕೆಯಾಗಿದ್ದರು. ಅಷ್ಟೇ ಅಲ್ಕದೆ U-19 ಮತ್ತು U-25 ಜಾರ್ಖಂಡ್​ ತಂಡವನ್ನು ಮುನ್ನಡೆಸಿದ್ದಾರೆ.

ಇದನ್ನೂ ಓದಿ: IPL 2024: ಗುಜರಾತ್ ಟೈಟಾನ್ಸ್​ ಬೇಡವೇ ಬೇಡವೆಂದು ಕೈ ಬಿಟ್ಟ ಆಟಗಾರರಿಗೆ ಕೋಟಿ ಸುರಿದ RCB

ಧೋನಿಯ ಬಿಗ್ ಫ್ಯಾನ್:

ರಾಬಿನ್ ಮಿನ್ಝ್ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅವರ ದೊಡ್ಡ ಅಭಿಮಾನಿ. ಧೋನಿ ವಿಕೆಟ್ ಕೀಪಿಂಗ್ ಮಾಡುವ ವಿಧಾನವನ್ನು ನಾನು ಇಷ್ಟಪಡುತ್ತೇನೆ. ಅವರ ಶಾಂತ ಸ್ವಭಾವ, ನಾಯಕತ್ವದಿಂದ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ರಾಬಿನ್ ಮಿನ್ಝ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಕಳೆದ ಕೆಲ ವರ್ಷಗಳ ಸತತ ಪ್ರಯತ್ನದಿಂದಾಗಿ ಇದೀಗ ರಾಬಿನ್ ಮಿನ್ಝ್​ಗೆ ಅದೃಷ್ಟ ಒಲಿದಿದೆ. ಈ ಅದೃಷ್ಟವನ್ನು ಯುವ ವಿಕೆಟ್ ಕೀಪರ್ ದಾಂಡಿಗ ಹೇಗೆ ಬಳಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

ಗುಜರಾತ್ ಟೈಟಾನ್ಸ್​ ತಂಡ: ಡೇವಿಡ್ ಮಿಲ್ಲರ್, ಶುಭಮನ್ ಗಿಲ್ (ನಾಯಕ), ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ. ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್ ಜೋಶುವಾ ಲಿಟಲ್, ಮೋಹಿತ್ ಶರ್ಮಾ. ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್ , ಶಾರುಖ್ ಖಾನ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಮಾನವ್ ಸುತಾರ್, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿನ್ಝ್​.

Published On - 10:51 am, Wed, 20 December 23