ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. 207 ರನ್ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸಿಎಸ್ಕೆ ತಂಡ 80 ರನ್ಗಳ ಜಯ ಸಾಧಿಸಿತು.
ಕಳೆದ ಬಾರಿಯ ಫೈನಲ್ ಪಂದ್ಯದ ಬಳಿಕ ಉಭಯ ತಂಡಗಳು ಇದೇ ಮೊದಲ ಬಾರಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲೂ ಜಯ ಸಾಧಿಸುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ವಿಯಾಗಿದೆ. ಈ ಮೂಲಕ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ತವರಿನಲ್ಲಿ 2ನೇ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಇದುವರೆಗೆ 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಗುಜರಾತ್ ಟೈಟಾನ್ಸ್ ತಂಡ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ 3 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಗೆಲುವಿನ ಅಂತರದಲ್ಲಿ ಸಮಬಲ ಸಾಧಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್ವಾಡ್(ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಝ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ಮಹೀಶ್ ತೀಕ್ಷಣ, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಶೇಕ್ ರಶೀದ್, ಮೊಯಿನ್ ಅಲಿ, ನಿಶಾಂತ್ ಸಿಂಧು, ಮಿಚೆಲ್ ಸ್ಯಾಂಟ್ನರ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ಆರ್‌ಎಸ್ ಹಂಗರ್ಗೇಕರ್, ಅರವೆಲ್ಲಿ ಅವನೀಶ್.
ಗುಜರಾತ್ ಟೈಟಾನ್ಸ್ ತಂಡ: ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಅಝ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್, ಮೋಹಿತ್ ಶರ್ಮಾ, ಶರತ್ ಬಿಆರ್, ಅಭಿನವ್ ಮನೋಹರ್, ನೂರ್ ಅಹ್ಮದ್, ಮಾನವ್ ಸುತಾರ್, ಮ್ಯಾಥ್ಯೂ ವೇಡ್, ಕೇನ್ ವಿಲಿಯಮ್ಸನ್, ಶಾರುಖ್ ಖಾನ್, ಜೋಶುವಾ ಲಿಟಲ್, ದರ್ಶನ್ ನಲ್ಕಂಡೆ, ಕಾರ್ತಿಕ್ ತ್ಯಾಗಿ, ಸುಶಾಂತ್ ಮಿಶ್ರಾ, ಸಂದೀಪ್ ವಾರಿಯರ್, ಜಯಂತ್ ಯಾದವ್.
ಗುಜರಾತ್ ಟೈಟಾನ್ಸ್ ವಿರುದ್ಧ 63 ರನ್ಗಳ ಭರ್ಜರಿ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್.
ತವರಿನಲ್ಲಿ 2ನೇ ಪಂದ್ಯದಲ್ಲೂ ಜಯ ಸಾಧಿಸಿದ ಸಿಎಸ್ಕೆ. ಇದಕ್ಕೂ ಮುನ್ನ ಆರ್ಸಿಬಿ ವಿರುದ್ಧ ಗೆಲುವು ದಾಖಲಿಸಿತ್ತು. ಇದೀಗ ಗುಜರಾತ್ ಟೈಟಾನ್ಸ್ಗೆ ಸೋಲುಣಿಸಿ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿದೆ.
19 ಓವರ್ಗಳಲ್ಲಿ 135 ರನ್ ಕಲೆಹಾಕಿರುವ ಗುಜರಾತ್ ಟೈಟಾನ್ಸ್.
ಕೊನೆಯ ಓವರ್ನಲ್ಲಿ 72 ರನ್ಗಳ ಅವಶ್ಯಕತೆ.
2ನೇ ಗೆಲುವಿನತ್ತ ದಾಪುಗಾಲಿಟ್ಟ ಚೆನ್ನೈ ಸೂಪರ್ ಕಿಂಗ್ಸ್.
ಗುಜರಾತ್ ಟೈಟಾನ್ಸ್ ತಂಡಕ್ಕೆ ಗೆಲ್ಲಲು 12 ಎಸೆತಗಳಲ್ಲಿ 79 ರನ್ಗಳ ಅವಶ್ಯಕತೆ.
ಶುಭ್ಮನ್ ಗಿಲ್ ಪಡೆಗೆ ಸೋಲು ಬಹುತೇಕ ಖಚಿತ.
ಕ್ರೀಸ್ನಲ್ಲಿ ರಾಹುಲ್ ತೆವಾಟಿಯಾ ಹಾಗೂ ಉಮೇಶ್ ಯಾದವ್ ಬ್ಯಾಟಿಂಗ್.
ಮುಸ್ತಫಿಜುರ್ ರೆಹಮಾನ್ ಎಸೆದ 17ನೇ ಓವರ್ನ ಎರಡನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ರಶೀದ್ ಖಾನ್.
ಚೆಂಡು ಬೌಂಡರಿ ಲೈನ್ನಲ್ಲಿ ನೇರವಾಗಿ ರಚಿನ್ ರವೀಂದ್ರ ಕೈಗೆ… ರಶೀದ್ ಖಾನ್ (1) ಔಟ್.
7 ವಿಎಕಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ ಗುಜರಾತ್ ಟೈಟಾನ್ಸ್.
ತುಷಾರ್ ದೇಶಪಾಂಡೆ ಎಸೆದ 16ನೇ ಓವರ್ನ 2ನೇ ಎಸೆತದಲ್ಲಿ ರಚಿನ್ ರವೀಂದ್ರಗೆ ಕ್ಯಾಚ್ ನೀಡಿದ ಅಝ್ಮತುಲ್ಲಾ ಒಮರ್ಝಾಹಿ (11).
ಗುಜರಾತ್ ಟೈಟಾನ್ಸ್ ತಂಡದ 6ನೇ ವಿಕೆಟ್ ಪತನ.
ಕ್ರೀಸ್ನಲ್ಲಿ ರಾಹುಲ್ ತೆವಾಟಿಯಾ ಹಾಗೂ ರಶೀದ್ ಖಾನ್ ಬ್ಯಾಟಿಂಗ್.
ಮತೀಶ ಪತಿರಾಣ ಎಸೆದ 15ನೇ ಓವರ್ನ 4ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಸಾಯಿ ಸುದರ್ಶನ್.
31 ಎಸೆತಗಳಲ್ಲಿ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸಾಯಿ ಸುದರ್ಶನ್.
ಗುಜರಾತ್ ಟೈಟಾನ್ಸ್ ತಂಡಕ್ಕೆ 30 ಎಸೆತಗಳಲ್ಲಿ 93 ರನ್ಗಳ ಅವಶ್ಯಕತೆ.
ಗುಜರಾತ್ ಟೈಟಾನ್ಸ್ ತಂಡಕ್ಕೆ ಗೆಲ್ಲಲು ಕೊನೆಯ 6 ಓವರ್ಗಳಲ್ಲಿ 97 ರನ್ಗಳ ಅವಶ್ಯಕತೆ.
4 ಪ್ರಮುಖ ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಸಿಎಸ್ಕೆ.
ಕ್ರೀಸ್ನಲ್ಲಿ ಸಾಯಿ ಸುದರ್ಶನ್ ಹಾಗೂ ಅಝ್ಮತುಲ್ಲಾ ಒಮರ್ಝಾಹಿ ಬ್ಯಾಟಿಂಗ್.
ತುಷಾರ್ ದೇಶಪಾಂಡೆ ಎಸೆದ 12ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಬಾರಿಸಿದ ಡೇವಿಡ್ ಮಿಲ್ಲರ್.
ಬೌಂಡರಿ ಲೈನ್ನಿಂದ ಓಡಿ ಬಂದು ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಅಜಿಂಕ್ಯ ರಹಾನೆ.
ಸಿಎಸ್ಕೆ ತಂಡಕ್ಕೆ 4ನೇ ಯಶಸ್ಸು.
ಕ್ರೀಸ್ನಲ್ಲಿ ಸಾಯಿ ಸುದರ್ಶನ್ ಹಾಗೂ ಅಝ್ಮತುಲ್ಲಾ ಒಮರ್ಝಾಹಿ ಬ್ಯಾಟಿಂಗ್.
ಡೇರಿಲ್ ಮಿಚೆಲ್ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ಡೇವಿಡ್ ಮಿಲ್ಲರ್.
5ನೇ ಎಸೆತದಲ್ಲಿ ಬ್ಯಾಕ್ವರ್ಡ್ ಸ್ಕ್ವೇರ್ನತ್ತ ಬೌಂಡರಿ ಸಿಡಿಸಿದ ಸಾಯಿ ಸುದರ್ಶನ್.
10 ಓವರ್ಗಳ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ತಂಡದ ಸ್ಕೋರ್ 80 ರನ್ಗಳು.
ಕ್ರೀಸ್ನಲ್ಲಿ ಸಾಯಿ ಸುದರ್ಶನ್ (21) ಹಾಗೂ ಡೇವಿಡ್ ಮಿಲ್ಲರ್ (12) ಬ್ಯಾಟಿಂಗ್.
ಡೇರಿಲ್ ಮಿಚೆಲ್ ಎಸೆದ 8ನೇ ಓವರ್ನ ಮೂರನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ವಿಜಯ್ ಶಂಕರ್.
42ರ ಇಳಿ ವಯಸ್ಸಿನಲ್ಲೂ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಧೋನಿ.
12 ಎಸೆತಗಳಲ್ಲಿ 12 ರನ್ ಬಾರಿಸಿ ಔಟಾದ ವಿಜಯ್ ಶಂಕರ್.
7 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಗುಜರಾತ್ ಟೈಟಾನ್ಸ್.
ಗುಜರಾತ್ ಟೈಟಾನ್ಸ್ಗೆ ಗೆಲ್ಲಲು 78 ಎಸೆತಗಳಲ್ಲಿ 155 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಸಾಯಿ ಸುದರ್ಶನ್ ಹಾಗೂ ಬಲಗೈ ಬ್ಯಾಟರ್ ವಿಜಯ್ ಶಂಕರ್ ಬ್ಯಾಟಿಂಗ್.
ಪವರ್ಪ್ಲೇನಲ್ಲಿ ಕೇವಲ 43 ರನ್ ನೀಡಿದ ಸಿಎಸ್ಕೆ ತಂಡ.
3 ಓವರ್ಗಳಲ್ಲಿ 21 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದ ದೀಪಕ್ ಚಹರ್.
ಕ್ರೀಸ್ನಲ್ಲಿ ಸಾಯಿ ಸುದರ್ಶನ್ ಹಾಗೂ ವಿಜಯ್ ಶಂಕರ್ ಬ್ಯಾಟಿಂಗ್.
ಶುಭ್ಮನ್ ಗಿಲ್ (8) ಹಾಗೂ ವೃದ್ದಿಮಾನ್ ಸಾಹ (21) ಔಟ್.
ದೀಪಕ್ ಚಹರ್ ಎಸೆದ 5ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ವೃದ್ಧಿಮಾನ್ ಸಾಹ.
ಡೀಪ್ ಸ್ಕ್ವೇರ್ ಲೆಗ್ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ತುಷಾರ್ಗೆ ನೇರ ಕ್ಯಾಚ್… ಸಾಹ ಔಟ್.
17 ಎಸೆತಗಳಲ್ಲಿ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವೃದ್ದಿಮಾನ್ ಸಾಹ.
ಕ್ರೀಸ್ನಲ್ಲಿ ಸಾಯಿ ಸುದರ್ಶನ್ ಹಾಗೂ ವಿಜಯ್ ಶಂಕರ್ ಬ್ಯಾಟಿಂಗ್.
ದೀಪಕ್ ಚಹರ್ ಎಸೆದ 3ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ಸಾಹ.
3ನೇ ಎಸೆತದಲ್ಲಿ ಸಾಹ ಬ್ಯಾಟ್ನಿಂದ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ.
5ನೇ ಎಸೆತದಲ್ಲಿ ಶುಭ್ಮನ್ ಗಿಲ್ ಎಲ್ಬಿಡಬ್ಲ್ಯೂ…ಸಿಎಸ್ಕೆ ತಂಡಕ್ಕೆ ಮೊದಲ ಯಶಸ್ಸು.
5 ಎಸೆತಗಳಲ್ಲಿ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶುಭ್ಮನ್ ಗಿಲ್.
ಕ್ರೀಸ್ನಲ್ಲಿ ಸಾಯಿ ಸುದರ್ಶನ್ ಹಾಗೂ ವೃದ್ಧಿಮಾನ್ ಸಾಹ ಬ್ಯಾಟಿಂಗ್.
ಮುಸ್ತಫಿಜುರ್ ರೆಹಮಾನ್ ಎಸೆದ 2ನೇ ಓವರ್ನ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಸಾಹ.
5ನೇ ಎಸೆತದಲ್ಲಿ ಸ್ಲಿಪ್ ಮೂಲಕ ಚೆಂಡು ಬೌಂಡರಿಗೆ…ಸಾಹ ಹೆಸರಿಗೆ ಮತ್ತೊಂದು ಫೋರ್.
ದೀಪಕ್ ಚಹರ್ ಎಸೆದ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್.
ಮೊದಲ ಓವರ್ನಲ್ಲಿ 7 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವೃದ್ಧಿಮಾನ್ ಸಾಹ ಬ್ಯಾಟಿಂಗ್.
ಮೋಹಿತ್ ಶರ್ಮಾ ಎಸೆದ 20ನೇ ಓವರ್ನ 3ನೇ ಎಸೆತದಲ್ಲಿ ಸ್ಟೈಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಸಮೀರ್ ರಿಝ್ವಿ.
6 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ನೊಂದಿಗೆ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಿಝ್ವಿ.
5ನೇ ಎಸೆತದಲ್ಲಿ ಥರ್ಡ್ಮ್ಯಾನ್ ಬೌಂಡರಿಯತ್ತ ಫೋರ್ ಬಾರಿಸಿದ ರವೀಂದ್ರ ಜಡೇಜಾ.
ಕೊನೆಯ ಓವರ್ನಲ್ಲಿ ಕೇವಲ 8 ರನ್ ಮಾತ್ರ ನೀಡಿದ ಮೋಹಿತ್ ಶರ್ಮಾ.
ಗುಜರಾತ್ ಟೈಟಾನ್ಸ್ ತಂಡಕ್ಕೆ 207 ರನ್ಗಳ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್.
ಸಿಎಸ್ಕೆ ಟಾಪ್ ಸ್ಕೋರರ್:
ಗುಜರಾತ್ ಟೈಟಾನ್ಸ್ ಪರ 4 ಓವರ್ಗಳಲ್ಲಿ 49 ರನ್ ನೀಡಿ 2 ವಿಕೆಟ್ ಪಡೆದ ರಶೀದ್ ಖಾನ್.
ರಶೀದ್ ಖಾನ್ ಎಸೆದ 19ನೇ ಓವರ್ನ 2ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ದುಬೆ.
23 ಎಸೆತಗಳಲ್ಲಿ 51 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಶಿವಂ ದುಬೆ.
3ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸಮೀರ್ ರಿಝ್ವಿ.
6ನೇ ಎಸೆತದಲ್ಲಿ ರಿಝ್ವಿ ಬ್ಯಾಟ್ನಿಂದ ಮತ್ತೊಂದು ಭರ್ಜರಿ ಸಿಕ್ಸ್.
ಮೋಹಿತ್ ಶರ್ಮಾ ಎಸೆದ 18ನೇ ಓವರ್ನ 2ನೇ ಎಸೆತದಲ್ಲಿ ನೇರವಾಗಿ ಸಿಕ್ಸ್ ಬಾರಿಸಿದ ಶಿವಂ ದುಬೆ.
22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶಿವಂ ದುಬೆ.
18 ಓವರ್ ಮುಕ್ತಾಯದ ವೇಳೆಗೆ ಸಿಎಸ್ಕೆ ಸ್ಕೋರ್ 183 ರನ್ಗಳು.
ಕ್ರೀಸ್ನಲ್ಲಿ ಶಿವಂ ದುಬೆ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.
16 ಓವರ್ಗಳಲ್ಲಿ 165 ರನ್ ಕಲೆಹಾಕಿರುವ ಸಿಎಸ್ಕೆ.
ಪ್ರತಿ ಓವರ್ಗೆ 10.31 ಸರಾಸರಿಯಲ್ಲಿ ರನ್ ಕಲೆಹಾಕುತ್ತಾ ಬಂದಿರುವ ಸಿಎಸ್ಕೆ ಬ್ಯಾಟರ್ಗಳು.
ಕೊನೆಯ 4 ಓವರ್ಗಳು ಮಾತ್ರ. ಡೆತ್ ಓವರ್ಗಳ ಮೂಲಕ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆ.
ಕ್ರೀಸ್ನಲ್ಲಿ ಶಿವಂ ದುಬೆ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.
ಸ್ಪೆನ್ಸರ್ ಜಾನ್ಸನ್ ಎಸೆದ 15ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ದುಬೆ.
5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಿವಂ ದುಬೆ.
15 ಓವರ್ಗಳ ಮುಕ್ತಾಯದ ವೇಳೆಗೆ 155 ರನ್ ಕಲೆಹಾಕಿದ ಚೆನ್ನೈ ಸೂಪರ್ ಕಿಂಗ್ಸ್.
ಕ್ರೀಸ್ನಲ್ಲಿ ಶಿವಂ ದುಬೆ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.
ರಶೀದ್ ಖಾನ್ ಎಸೆದ 14ನೇ ಓವರ್ನ ಕೊನೆಯ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಿವಂ ದುಬೆ.
ಕ್ರೀಸ್ನಲ್ಲಿ ಶಿವಂ ದುಬೆ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.
ಬೃಹತ್ ಮೊತ್ತದ ಸಿಎಸ್ಕೆ ದಾಪುಗಾಲು.
ಸ್ಪೆನ್ಸರ್ ಜಾನ್ಸನ್ ಎಸೆದ 13ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ರುತುರಾಜ್ ಗಾಯಕ್ವಾಡ್.
36 ಎಸೆತಗಳಲ್ಲಿ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸಿಎಸ್ಕೆ ತಂಡದ ನಾಯಕ ರುತುರಾಜ್.
ಕ್ರೀಸ್ನಲ್ಲಿ ಶಿವಂ ದುಬೆ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.
ಸಾಯಿ ಕಿಶೋರ್ ಎಸೆದ 11ನೇ ಓವರ್ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಬಾರಿಸಿದ ಶಿವಂ ದುಬೆ.
3ನೇ ಎಸೆತದಲ್ಲಿ ದುಬೆ ಬ್ಯಾಟ್ನಿಂದ ಲೆಗ್ ಸೈಡ್ನತ್ತ ಮತ್ತೊಂದು ಭರ್ಜರಿ ಸಿಕ್ಸ್.
11 ಓವರ್ ಮುಕ್ತಾಯದ ವೇಳೆಗೆ ಸಿಎಸ್ಕೆ ಸ್ಕೋರ್ 119.
ರಚಿನ್ ರವೀಂದ್ರ (46) ಹಾಗೂ ಅಜಿಂಕ್ಯ ರಹಾನೆ (12) ಔಟ್.
ಸಾಯಿ ಕಿಶೋರ್ ಎಸೆದ 11ನೇ ಓವರ್ನ ಮೊದಲ ಎಸೆತದಲ್ಲಿ ಮುನ್ನುಗಿ ಹೊಡೆಯಲು ಯತ್ನ. ಸ್ಟಂಪ್ ಔಟ್ ಆಗಿ ಹೊರ ನಡೆದ ಅಜಿಂಕ್ಯ.
12 ಎಸೆತಗಳಲ್ಲಿ 12 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಅಜಿಂಕ್ಯ ರಹಾನೆ.
ಸ್ಪೆನ್ಸರ್ ಜಾನ್ಸನ್ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ರುತುರಾಜ್.
9.5 ಓವರ್ಗಳಲ್ಲಿ ಶತಕ ಪೂರೈಸಿದ ಚೆನ್ನೈ ಸೂಪರ್ ಕಿಂಗ್ಸ್.
10 ಓವರ್ಗಳ ಮುಕ್ತಾಯದ ವೇಳೆಗೆ 104 ರನ್ ಕಲೆಹಾಕಿದ ಸಿಎಸ್ಕೆ.
ಕ್ರೀಸ್ನಲ್ಲಿ ಅಜಿಂಕ್ಯ ರಹಾನೆ (12) ಹಾಗೂ ರುತುರಾಜ್ ಗಾಯಕ್ವಾಡ್ (42) ಬ್ಯಾಟಿಂಗ್.
ಸಾಯಿ ಕಿಶೋರ್ ಎಸೆದ 9ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಅಜಿಂಕ್ಯ ರಹಾನೆ.
9 ಓವರ್ ಮುಕ್ತಾಯದ ವೇಳೆಗೆ 92 ರನ್ ಕಲೆಹಾಕಿದ ಸಿಎಸ್ಕೆ.
ಕ್ರೀಸ್ನಲ್ಲಿ ಅಜಿಂಕ್ಯ ರಹಾನೆ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್.
ರಶೀದ್ ಖಾನ್ ಎಸೆದ 6ನೇ ಓವರ್ನ 2ನೇ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರ ನಡೆದ ರಚಿನ್ ರವೀಂದ್ರ.
20 ಎಸೆತಗಳಲ್ಲಿ 46 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ರಚಿನ್.
ಪವರ್ಪ್ಲೇ ಮುಕ್ತಾಯ: ಮೊದಲ 6 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 69 ರನ್ ಕಲೆಹಾಕಿದ ಸಿಎಸ್ಕೆ
ಕ್ರೀಸ್ನಲ್ಲಿ ರುತುರಾಜ್ ಗಾಯಕ್ವಾಡ್ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್.
ಅಝ್ಮತುಲ್ಲಾ ಒಮರ್ಝಾಹಿ ಎಸೆದ 5ನೇ ಓವರ್ನ ಮೊದಲ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್. ರುತುರಾಜ್ ಗಾಯಕ್ವಾಡ್ ಬ್ಯಾಟ್ನಿಂದ ಫೋರ್.
4ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಸಿಕ್ಸ್ ಸಿಡಿಸಿದ ರಚಿನ್ ರವೀಂದ್ರ.
ಈ ಸಿಕ್ಸ್ನೊಂದಿಗೆ ಅರ್ಧಶತಕ ಪೂರೈಸಿದ ಸಿಎಸ್ಕೆ.
ಉಮೇಶ್ ಯಾದವ್ ಎಸೆದ 4ನೇ ಓವರ್ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ರಚಿನ್.
2ನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಯುವ ಎಡಗೈ ದಾಂಡಿಗ ರಚಿನ್ ರವೀಂದ್ರ.
4ನೇ ಎಸೆತದಲ್ಲಿ ಡೀಪ್ ಸ್ಕ್ವೇರ್ನತ್ತ ಆಕರ್ಷಕ ಫೋರ್ ಸಿಡಿಸಿದ ರುತುರಾಜ್ ಗಾಯಕ್ವಾಡ್.
14 ಎಸೆತಗಳಲ್ಲಿ 31 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ರಚಿನ್ ರವೀಂದ್ರ.
ಅಝ್ಮತುಲ್ಲಾ ಒಮರ್ಝಾಹಿ ಎಸೆದ 3ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ರಚಿನ್ ರವೀಂದ್ರ.
5ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ. ರಚಿನ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಬೌಂಡರಿ.
ಕ್ರೀಸ್ನಲ್ಲಿ ರಚಿನ್ ರವೀಂದ್ರ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್.
ಉಮೇಶ್ ಯಾದವ್ ಎಸೆದ 2ನೇ ಓವರ್ನ 4 ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ರಚಿನ್ ರವೀಂದ್ರ.
5ನೇ ಎಸೆತದಲ್ಲಿ ರಚಿನ್ ಬ್ಯಾಟ್ನಿಂದ ಡೀಪ್ ಸ್ಕ್ವೇರ್ನತ್ತ ಆಕರ್ಷಕ ಬೌಂಡರಿ.
2 ಓವರ್ ಮುಕ್ತಾಯದ ವೇಳೆಗೆ ಸಿಎಸ್ಕೆ ಸ್ಕೋರ್ 13.
ಕ್ರೀಸ್ನಲ್ಲಿ ರಚಿನ್ ರವೀಂದ್ರ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್.
ಮೊದಲ ಓವರ್ನಲ್ಲಿ ಕೇವಲ 2 ರನ್ ನೀಡಿದ ಅಝ್ಮತುಲ್ಲಾ ಒಮರ್ಝಾಹಿ.
ಮೊದಲ ಓವರ್ನ ಕೊನೆಯ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ರುತುರಾಜ್ ಗಾಯಕ್ವಾಡ್.
ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ ಸ್ಲಿಪ್ ಫೀಲ್ಡರ್ ಸಾಯಿ ಕಿಶೋರ್.
ಗುಜರಾತ್ ಟೈಟಾನ್ಸ್ ಪರ ಮೊದಲ ಓವರ್: ಅಝ್ಮತುಲ್ಲಾ ಒಮರ್ಝಾಹಿ
ಸಿಎಸ್ಕೆ ಆರಂಭಿಕರು: ಎಡಗೈ ದಾಂಡಿಗ ರಚಿನ್ ರವೀಂದ್ರ ಹಾಗೂ ಬಲಗೈ ಬ್ಯಾಟರ್ ರುತುರಾಜ್ ಗಾಯಕ್ವಾಡ್.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಸ್ಪೆನ್ಸರ್ ಜಾನ್ಸನ್.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಝ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರೆಹಮಾನ್. ಮತೀಶ ಪತಿರಾಣ (ಇಂಪ್ಯಾಕ್ಟ್ ಪ್ಲೇಯರ್)
ಚೈನ್ನೈನ ಎಂಎ ಚಿದರಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್ಕೆ ಹಾಗೂ ಗುಜರಾತ್ ಟೈಟಾನ್ಸ್ ಕಳೆದ ಬಾರಿ ಫೈನಲ್ ಬಳಿಕ ಮತ್ತೆ ಮುಖಾಮುಖಿಯಾಗುತ್ತಿರುವುದು ವಿಶೇಷ.
Published On - 6:52 pm, Tue, 26 March 24