IND vs AUS: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ
India vs Australia Test Series 2024-25: ಆಸ್ಟ್ರೇಲಿಯಾದ ಲೆಜೆಂಡ್ ಅಲನ್ ಬಾರ್ಡರ್ ಹಾಗೂ ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಆಯೋಜಿಸಲಾಗುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸಿರೀಸ್ನಲ್ಲಿ ಇದುವರೆಗೆ 16 ಸರಣಿಗಳನ್ನು ಆಡಲಾಗಿದೆ. ಈ ವೇಳೆ ಭಾರತ ತಂಡವು 10 ಬಾರಿ ಸರಣಿ ಗೆದ್ದರೆ, ಆಸ್ಟ್ರೇಲಿಯಾ 5 ಸಲ ಟ್ರೋಫಿ ಎತ್ತಿ ಹಿಡಿದಿದೆ.
ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ. ಈ ಹಿಂದೆ BGT ಸರಣಿಯಲ್ಲಿ 3 ಹಾಗೂ 4 ಪಂದ್ಯಗಳನ್ನಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಭಾರತ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಯೋಜಿಸುತ್ತಿರುವುದು ವಿಶೇಷ.
ಈ ಸರಣಿಯ ಮೊದಲ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದೆ. ಪರ್ತ್ನಲ್ಲಿ ಮೊದಲ ಪಂದ್ಯ ನಡೆದರೆ, 2ನೇ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಲಿದೆ. ವಿಶೇಷ ಎಂದರೆ ಈ ಸರಣಿಯ 2ನೇ ಪಂದ್ಯವು ಡೇ ನೈಟ್ ಪಂದ್ಯವಾಗಿದೆ. ಈ ಅಹರ್ನಿಶಿ ಪಂದ್ಯವನ್ನು ಪಿಂಕ್ ಬಾಲ್ನಲ್ಲಿ ಆಡಲಾಗುತ್ತದೆ.
ಇನ್ನು ಮೂರನೇ ಪಂದ್ಯಕ್ಕೆ ಗಾಬ್ಬಾ ಮೈದಾನ ಆತಿಥ್ಯವಹಿಸಿದರೆ, ನಾಲ್ಕನೇ ಪಂದ್ಯವು ಮೆಲ್ಬೋರ್ನ್ನಲ್ಲಿ ನಡೆಯಲಿದೆ. ಅಂದರೆ ನಾಲ್ಕನೇ ಪಂದ್ಯವು ಬಾಕ್ಸಿಂಗ್ ಟೆಸ್ಟ್. ಕ್ರಿಸ್ಮಸ್ ಹಬ್ಬದ ಮರುದಿನ ನಡೆಯುವ ಪಂದ್ಯವನ್ನು ಬಾಕ್ಸಿಂಗ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇನ್ನು ಅಂತಿಮ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಜನವರಿ 3, 2025 ರಿಂದ ಶುರುವಾಗಲಿದೆ.
ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ:
ಪಂದ್ಯ | ದಿನಾಂಕ | ಸ್ಥಳ |
ಮೊದಲ ಟೆಸ್ಟ್ | ನವೆಂಬರ್ 22 ರಿಂದ 26, 2024 | ಪರ್ತ್ ಸ್ಟೇಡಿಯಂ, ಪರ್ತ್ |
ಎರಡನೇ ಟೆಸ್ಟ್ (ಪಿಂಕ್ ಬಾಲ್) | ಡಿಸೆಂಬರ್ 6 ರಿಂದ 10, 2024 | ಅಡಿಲೇಡ್ ಓವಲ್ ಸ್ಟೇಡಿಯಂ, ಅಡಿಲೇಡ್ |
ಮೂರನೇ ಟೆಸ್ಟ್ | ಡಿಸೆಂಬರ್ 14 ರಿಂದ 18, 2024 | ದಿ ಗಬ್ಬಾ ಸ್ಟೇಡಿಯಂ, ಬ್ರಿಸ್ಬೇನ್ |
ನಾಲ್ಕನೇ ಟೆಸ್ಟ್ (ಬಾಕ್ಸಿಂಗ್ ಡೇ) | ಡಿಸೆಂಬರ್ 26 ರಿಂದ 30, 2024 | ಎಂಸಿಜಿ ಸ್ಟೇಡಿಯಂ, ಮೆಲ್ಬೋರ್ನ್ |
ಐದನೇ ಟೆಸ್ಟ್ | ಜನವರಿ 3 ರಿಂದ 7, 2025 | ಸಿಡ್ನಿ ಕ್ರಿಕೆಟ್ ಸ್ಟೇಡಿಯಂ, ಸಿಡ್ನಿ |
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ:
1996-97 ರಿಂದ ಶುರುವಾದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸಿರೀಸ್ನಲ್ಲಿ ಇದುವರೆಗೆ 16 ಸರಣಿಗಳನ್ನು ಆಡಲಾಗಿದೆ. ಈ ವೇಳೆ ಭಾರತ ತಂಡವು 10 ಬಾರಿ ಸರಣಿ ಗೆದ್ದರೆ, ಆಸ್ಟ್ರೇಲಿಯಾ 5 ಸಲ ಟ್ರೋಫಿ ಎತ್ತಿ ಹಿಡಿದಿದೆ. ಇನ್ನು ಒಂದು ಸರಣಿಯು ಡ್ರಾನಲ್ಲಿ ಅಂತ್ಯ ಕಂಡಿತ್ತು.
ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿ ಹೆಸರಿಗೆ ಮತ್ತೊಂದು ಭರ್ಜರಿ ದಾಖಲೆ ಸೇರ್ಪಡೆ
ವಿಶೇಷ ಎಂದರೆ 2016 ರಿಂದ ಆಸ್ಟ್ರೇಲಿಯಾ ತಂಡವು ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಸೋಲುಣಿಸಿಲ್ಲ. ಅಂದರೆ ಕಳೆದ ನಾಲ್ಕು ಸರಣಿಗಳಲ್ಲೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಅದರಲ್ಲೂ 2020-21 ರ ಸರಣಿಯಲ್ಲಿ ಅಮೋಘ ಗೆಲುವು ದಾಖಲಿಸುವ ಮೂಲಕ ಭಾರತದ ಯುವ ಪಡೆದ ಹೊಸ ಇತಿಹಾಸ ಬರೆದಿತ್ತು. ಇದಾದ ಬಳಿಕ 2022-23 ರಲ್ಲಿ ಭಾರತದಲ್ಲಿ ಸರಣಿ ಆಡಿದ್ದ ಆಸೀಸ್ ಪಡೆಯನ್ನು 2-1 ಅಂತರದಿಂದ ಮಣಿಸಿತ್ತು. ಆದರೆ ಈ ಬಾರಿ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿರುವುದರಿಂದ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
Published On - 4:54 pm, Tue, 26 March 24