CSK vs RR, IPL 2021: ಬಲಿಷ್ಠ ಸಿಎಸ್​ಕೆಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್​

TV9 Digital Desk

| Edited By: Zahir Yusuf

Updated on:Oct 02, 2021 | 11:23 PM

Chennai Super Kings vs Rajasthan Royals, Live Score: ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್ 9 ಮತ್ತು ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದಿವೆ.

CSK vs RR, IPL 2021: ಬಲಿಷ್ಠ ಸಿಎಸ್​ಕೆಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್​
CSK vs RR

ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 47ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (RR vs CSK) ವಿರುದ್ದ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್​ ಅವರ ಭರ್ಜರಿ ಶತಕದ ನೆರವಿನಿಂದ 20 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 189 ರನ್​ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಅವರ ಬಿರುಸಿನ ಅರ್ಧಶತಕದ ನೆರವಿನಿಂದ 17.3 ಓವರ್​ನಲ್ಲಿ 190 ರನ್​ ಬಾರಿಸುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆರ್​ಆರ್ ತಂಡ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.

ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತಿವಾಟಿಯಾ, ಆಕಾಶ್ ಸಿಂಗ್, ಮಯಾಂಕ್ ಮಾರ್ಕಂಡೆ, ಚೇತನ್ ಸಕಾರಿಯಾ, ಮುಸ್ತಫಿಜುರ್ ರೆಹಮಾನ್

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಕೆಎಂ ಆಸಿಫ್, ಜೋಶ್ ಹ್ಯಾಝಲ್‌ವುಡ್

LIVE NEWS & UPDATES

The liveblog has ended.
 • 02 Oct 2021 11:17 PM (IST)

  ರಾಜಸ್ಥಾನ್ ರಾಯಲ್ಸ್​ಗೆ 7 ವಿಕೆಟ್​ಗಳ ಭರ್ಜರಿ ಜಯ

  CSK 189/4 (20)

  RR 190/3 (17.3)

   

 • 02 Oct 2021 11:11 PM (IST)

  18 ಎಸೆತಗಳಲ್ಲಿ 4 ರನ್​ಗಳ ಅವಶ್ಯಕತೆ

  ಸ್ಯಾಮ್​ ಎಸೆತಕ್ಕೆ ಬಿಗ್ ಹಿಟ್​…ಗ್ಲೆನ್ ಫಿಲಿಪ್ಸ್​ ಬ್ಯಾಟ್​ನಿಂದ ಭರ್ಜರಿ ಸಿಕ್ಸರ್

  RR 186/3 (17)

    

  ಕ್ರೀಸ್​ನಲ್ಲಿ ಶಿವಂ ದುಬೆ-ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್

 • 02 Oct 2021 11:08 PM (IST)

  ಫಿಲಿಪ್ಸ್​-ಫೋರ್

  ಸ್ಯಾಮ್ ಕರನ್ ಎಸೆತದಲ್ಲಿ ಫೋರ್​ನೊಂದಿಗೆ ಐಪಿಎಲ್ ರನ್ ಖಾತೆ ತೆರೆದ ಗ್ಲೆನ್ ಫಿಲಿಪ್ಸ್

 • 02 Oct 2021 11:01 PM (IST)

  ಸ್ಯಾಮ್ಸನ್ ಔಟ್

  ಶಾರ್ದೂಲ್ ಠಾಕೂರ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ರುತುರಾಜ್​ ಗಾಯಕ್ವಾಡ್​ಗೆ ಕ್ಯಾಚ್ ನೀಡಿದ ಸಂಜು ಸ್ಯಾಮ್ಸನ್

  RR 170/3 (15.4)

   

 • 02 Oct 2021 10:59 PM (IST)

  ದುಬೆ ಭರ್ಜರಿ ಬ್ಯಾಟಿಂಗ್

  ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕವರ್ಸ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಶಿವಂ ದುಬೆ

  RR 169/2 (15.1)

    

 • 02 Oct 2021 10:59 PM (IST)

  ಅರ್ಧಶತಕ ಪೂರೈಸಿದ ಶಿವಂ ದುಬೆ

  31 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಶಿವಂ ದುಬೆ

  RR 160/2 (14)

    

 • 02 Oct 2021 10:47 PM (IST)

  13 ಓವರ್ ಮುಕ್ತಾಯ

  RR 153/2 (13)

    

 • 02 Oct 2021 10:46 PM (IST)

  ಸ್ಯಾಮ್ಸನ್ ಶಾಟ್

  ಸ್ಯಾಮ್ಸನ್ ಬ್ಯಾಟ್​ನಿಂದ ಹ್ಯಾಝಲ್​ವುಡ್​ ಎಸೆತಕ್ಕೆ ಬ್ಯೂಟಿಫುಲ್ ಬೌಂಡರಿ

 • 02 Oct 2021 10:45 PM (IST)

  ದು-ಬೌಂಡರಿ

  ಜೋಶ್ ಹ್ಯಾಝಲ್​ವುಡ್ ಎಸೆತದಲ್ಲಿ ಬೌಂಡರಿ ಬಾರಿಸಿದ ಶಿವಂ ದುಬೆ

 • 02 Oct 2021 10:43 PM (IST)

  RR 141/2 (12)

  ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್-ಶಿವಂ ದುಬೆ ಬ್ಯಾಟಿಂಗ್

 • 02 Oct 2021 10:40 PM (IST)

  ಡೇಂಜರಸ್-ದುಬೆ

  ಸ್ಯಾಮ್ ಕರನ್ ಎಸೆತಕ್ಕೆ ಭರ್ಜರಿ ಸಿಕ್ಸ್ ಉತ್ತರ ನೀಡಿದ ಶಿವಂ ದುಬೆ

 • 02 Oct 2021 10:39 PM (IST)

  ದುಬೆ-ಅಬ್ಬರ

  ಸ್ಯಾಮ್ ಕರನ್ ಎಸೆತದಲ್ಲಿ ಸೂಪರ್ ಶಾಟ್...ದುಬೆ ಬ್ಯಾಟ್​ನಿಂದ ಬೌಂಡರಿ

 • 02 Oct 2021 10:36 PM (IST)

  ಫ್ರೀಹಿಟ್

  ಲೈನ್ ನೋಬಾಲ್ ಎಸೆದ ಕೆಎಂ ಆಸಿಫ್...ಫ್ರೀ ಹಿಟ್​ನಲ್ಲಿ ಕೇವಲ 1 ರನ್​ ಮಾತ್ರಗಳಿಸಲು ಶಕ್ತರಾದ ಶಿವಂ ದುಬೆ

  RR 127/2 (11)

    

  ದುಬೆ-ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್

 • 02 Oct 2021 10:29 PM (IST)

  ಸಿಕ್ಸರ್ ಶಿವಂ

  ಮೊಯೀನ್ ಅಲಿಯ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ಶಿವಂ ದುಬೆ

  RR 117/2 (9.4)

   

 • 02 Oct 2021 10:28 PM (IST)

  9 ಓವರ್ ಮುಕ್ತಾಯ

  RR 104/2 (9)

    

  ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್-ಶಿವಂ ದುಬೆ ಬ್ಯಾಟಿಂಗ್

 • 02 Oct 2021 10:25 PM (IST)

  ದುಬೆ ಬ್ಯೂಟಿ

  ರವೀಂದ್ರ ಜಡೇಜಾ ಎಸೆತದಲ್ಲಿ ಶಿವಂ ದುಬೆ ಬಿಗ್ ಸಿಕ್ಸ್​

  RR 101/2 (8.1)

   

 • 02 Oct 2021 10:21 PM (IST)

  ಸ್ಯಾಮ್ಸನ್ ರಿವರ್ಸ್ ಶಾಟ್

  ಮೊಯೀನ್ ಅಲಿ ಎಸೆತಕ್ಕೆ ರಿವರ್ಸ್ ಶಾಟ್ ಬಾರಿಸಿದ ಸಂಜು ಸ್ಯಾಮ್ಸನ್...ಫೋರ್

 • 02 Oct 2021 10:17 PM (IST)

  7 ಓವರ್ ಮುಕ್ತಾಯ

  RR 89/2 (7)

  ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಬ್ಯಾಟಿಂಗ್

 • 02 Oct 2021 10:16 PM (IST)

  ಸ್ಯಾಮ್ಸನ್ ಶಾಟ್

  ಆಸಿಫ್ ಎಸೆತಕ್ಕೆ ಲೆಗ್​ ಸೈಡ್​ನತ್ತ ಬ್ಯೂಟಿಫುಲ್ ಬೌಂಡರಿ ಬಾರಿಸಿದ ಸ್ಯಾಮ್ಸನ್

 • 02 Oct 2021 10:13 PM (IST)

  ಜೈಸ್ವಾಲ್ ಔಟ್

  ಕೆಎಂ ಆಸಿಫ್ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್ (50)

 • 02 Oct 2021 10:11 PM (IST)

  ಪವರ್​ಪ್ಲೇ ಮುಕ್ತಾಯ

  ಶಾರ್ದೂಲ್ ಎಸೆತಕ್ಕೆ ಸಂಜು ಸ್ಯಾಮ್ಸನ್ ಬ್ಯೂಟಿಫುಲ್ ಆಫ್​ಸೈಡ್ ಬೌಂಡರಿ..ಫೋರ್

  RR 81/1 (6)

 • 02 Oct 2021 10:08 PM (IST)

  ಎವಿನ್ ಲೂಯಿಸ್ ಔಟ್

  ಶಾರ್ದೂಲ್ ಠಾಕೂರ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಎವಿನ್ ಲೂಯಿಸ್ (27)

 • 02 Oct 2021 10:06 PM (IST)

  19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯಶಸ್ವಿ ಜೈಸ್ವಾಲ್

  ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್

  19 ಎಸೆತಗಳಲ್ಲಿ ಅರ್ಧಶತಕ

  RR 75/0 (5)

   

 • 02 Oct 2021 10:05 PM (IST)

  ಎಸ್​ ಎಸ್ ಯಶಸ್ವಿ

  ಜೋಶ್ ಹ್ಯಾಝಲ್​ವುಡ್​ ಓವರ್​ನಲ್ಲಿ ಮೂರನೇ ಸಿಕ್ಸ್​ ಸಿಡಿಸಿದ ಯಶಸ್ವಿ ಜೈಸ್ವಾಲ್

 • 02 Oct 2021 10:04 PM (IST)

  ಯಶಸ್ವಿ ಅಬ್ಬರ

  ಹ್ಯಾಝಲ್​ವುಡ್​ಗೆ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್​ ಬಳಿಕ ಯಶಸ್ವಿ ಜೈಸ್ವಾಲ್ ಆಫ್​ ಸೈಡ್​ನತ್ತ ರಾಕೆಟ್ ಶಾಟ್--ಫೋರ್

 • 02 Oct 2021 10:03 PM (IST)

  ಬ್ಯಾಕ್ ಟು ಬ್ಯಾಕ್ ಸಿಕ್ಸರ್

  ಜೋಶ್ ಹ್ಯಾಝಲ್​ವುಡ್​ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್​ ಸಿಕ್ಸ್ ಸಿಡಿಸಿದ ಯಶಸ್ವಿ ಜೈಸ್ವಾಲ್

 • 02 Oct 2021 10:02 PM (IST)

  ಯಶಸ್ವಿ ಶಾಟ್

  ಜೋಶ್ ಹ್ಯಾಝಲ್​ವುಡ್​ ಎಸೆತಕ್ಕೆ ಮಿಡ್​ ವಿಕೆಟ್​ನತ್ತ ಸಿಕ್ಸರ್ ಸಿಡಿಸಿದ ಯಶಸ್ವಿ ಜೈಸ್ವಾಲ್

 • 02 Oct 2021 10:00 PM (IST)

  ರಾಜಸ್ಥಾನ್ ರಾಯಲ್ಸ್ ಬಿರುಸಿನ ಆರಂಭ

  ಮೊದಲ 4 ಓವರ್​ನಲ್ಲಿ  53 ರನ್​ ಬಾರಿಸಿದ ರಾಜಸ್ಥಾನ್ ಆರಂಭಿಕರಾದ ಎವಿನ್ ಲೂಯಿಸ್-ಯಶಸ್ವಿ ಜೈಸ್ವಾಲ್

  RR 53/0 (4)

    

 • 02 Oct 2021 09:35 PM (IST)

  ಟಾರ್ಗೆಟ್-190

 • 02 Oct 2021 09:31 PM (IST)

  ಐಪಿಎಲ್ ಶತಕದ ಸರದಾರರ ಪಟ್ಟಿಗೆ ರುತುರಾಜ್ ಎಂಟ್ರಿ

 • 02 Oct 2021 09:30 PM (IST)

  ರುತುರಾಜ್ ಗಾಯಕ್ವಾಡ್- ಅಜೇಯ 101

  60 ಎಸೆತಗಳಲ್ಲಿ 101...5 ಸಿಕ್ಸರ್ ಹಾಗೂ 9 ಬೌಂಡರಿ ಬಾರಿಸಿದ ರುತುರಾಜ್

 • 02 Oct 2021 09:28 PM (IST)

  60 ಎಸೆತಗಳಲ್ಲಿ ಶತಕ ಬಾರಿಸಿದ ರುತುರಾಜ್ ಗಾಯಕ್ವಾಡ್

 • 02 Oct 2021 09:27 PM (IST)

  ಸಿಎಸ್​ಕೆ ಇನಿಂಗ್ಸ್​ ಅಂತ್ಯ

  ಮುಸ್ತಫಿಜುರ್ ಕೊನೆಯ ಎಸೆತಕ್ಕೆ ಭರ್ಜರಿ ಸಿಕ್ಸ್​ ಸಿಡಿಸಿ ಶತಕ ಪೂರೈಸಿದ ರುತುರಾಜ್ ಗಾಯಕ್ವಾಡ್

  CSK 189/4 (20)

    

 • 02 Oct 2021 09:24 PM (IST)

  ಜಡೇಜಾ ಆರ್ಭಟ

  ಮುಸ್ತಫಿಜುರ್ ಎಸೆತದಲ್ಲಿ ಮತ್ತೊಂದು ಸಿಕ್ಸ್​...ಲೆಗ್​ ಸೈಡ್​ನತ್ತ ಸೂಪರ್ ಸಿಕ್ಸ್​

 • 02 Oct 2021 09:23 PM (IST)

  ವಾಟ್ ಎ ಶಾಟ್

  ಮುಸ್ತಫಿಜುರ್ ಎಸೆತದಲ್ಲಿ ಜಡೇಜಾ ಬ್ಯಾಟ್​ನಿಂದ ಬ್ಯೂಟಿಫುಲ್ ಶಾಟ್....ಬ್ಯೂಟಿಫುಲ್ ಸಿಕ್ಸ್

 • 02 Oct 2021 09:22 PM (IST)

  ಜಡೇಜಾ ರಾಕೆಟ್ ಶಾಟ್

  ಮುಸ್ತಫಿಜುರ್ ಎಸೆತಕ್ಕೆ ಆಫ್​ಸೈಡ್​ನತ್ತ ಜಡೇಜಾ ರಾಕೆಟ್ ಶಾಟ್-ಫೋರ್

 • 02 Oct 2021 09:20 PM (IST)

  ಕೊನೆಯ 1 ಓವರ್ ಬಾಕಿ

  CSK 167/4 (19)

    

 • 02 Oct 2021 09:18 PM (IST)

  ಜಡ್ಡು ರಾಕೆಟ್

  ಚೇತನ್ ಸಕರಿಯಾ ಎಸೆತದಲ್ಲಿ ಲೆಗ್​ ಸೈಡ್​ನತ್ತ ಸೂಪರ್ ಆಗಿ ಬಾರಿಸಿದ ಜಡೇಜಾ-ಫೋರ್

 • 02 Oct 2021 09:17 PM (IST)

  CSK 158/4 (18.1)

  ಶತಕದತ್ತ ರುತುರಾಜ್ ಗಾಯಕ್ವಾಡ್ (93)

 • 02 Oct 2021 09:09 PM (IST)

  ಕೊನೆಯ 3 ಓವರ್​ಗಳು

  CSK 141/4 (17)

   ಕ್ರೀಸ್​ನಲ್ಲಿ ರುತುರಾಜ್ ಗಾಯಕ್ವಾಡ್-ರವೀಂದ್ರ ಜಡೇಜಾ ಬ್ಯಾಟಿಂಗ್

 • 02 Oct 2021 09:06 PM (IST)

  ರಾಯುಡು ಔಟ್

  ಚೇತನ್ ಸಕರಿಯಾ ಎಸೆತದಲ್ಲಿ ರಾಯುಡು ಬಿಗ್ ಹಿಟ್...ಬೌಂಡರಿ ಲೈನ್​ನಲ್ಲಿ ಗ್ಲೆನ್ ಫಿಲಿಪ್ಸ್​ ಅತ್ಯುತ್ತಮ ಕ್ಯಾಚ್

  CSK 134/4 (16.2)

    

 • 02 Oct 2021 09:03 PM (IST)

  16 ಓವರ್ ಮುಕ್ತಾಯ

  CSK 133/3 (16)

  ಕ್ರೀಸ್​ನಲ್ಲಿ ರುತುರಾಜ್-ಅಂಬಾಟಿ ರಾಯುಡು ಬ್ಯಾಟಿಂಗ್

 • 02 Oct 2021 09:02 PM (IST)

  ಡೇಂಜರಸ್ ರಾಜ

  ಆಕಾಶ್ ಸಿಂಗ್ ಎಸೆತವನ್ನು ಸ್ಟೇಡಿಯಂಗೆ ಅಟ್ಟಿದ ರುತುರಾಜ್ ಗಾಯಕ್ವಾಡ್-ಸಿಕ್ಸ್

 • 02 Oct 2021 09:01 PM (IST)

  ರಾಜ ರುತುರಾಜ ಅಬ್ಬರ

  ಆಕಾಶ್ ಸಿಂಗ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರುತುರಾಜ್

  CSK 126/3 (15.4)

    

 • 02 Oct 2021 08:49 PM (IST)

  ಮೊಯೀನ್ ಅಲಿ ಔಟ್

  ರಾಹುಲ್ ತಿವಾಠಿಯಾ ಎಸೆತದಲ್ಲಿ ಮುನ್ನುಗ್ಗಿ ಹೊಡೆಯುವ ಪ್ರಯತ್ನ...ಚೆಂಡು ವಿಕೆಟ್ ಕೀಪರ್​ ಕೈಗೆ..ಮೊಯೀನ್​ ಅಲಿ ಸ್ಟಂಪ್ ಔಟ್

  CSK 114/3 (14.3)

    

 • 02 Oct 2021 08:48 PM (IST)

  ಬ್ಯಾಕ್ ಟು ಬ್ಯಾಕ್ ಸಿಕ್ಸ್

  ರಾಹುಲ್ ಎಸೆತಕ್ಕೆ ಮತ್ತೊಂದು ಸಿಕ್ಸ್​...ಸ್ಟ್ರೈಟ್ ಹಿಟ್ ಮೂಲಕ ಸಿಕ್ಸ್​ ಸಿಡಿಸಿದ ರುತುರಾಜ್ ಗಾಯಕ್ವಾಡ್

 • 02 Oct 2021 08:47 PM (IST)

  ರಾಜ ರುತುರಾಜ

  ರಾಹುಲ್ ತಿವಾಠಿಯಾ ಎಸೆತದಲ್ಲಿ ಮುನ್ನುಗ್ಗಿ ಬಂದು ಸಿಕ್ಸ್​ ಸಿಡಿಸಿದ ರುತುರಾಜ್

 • 02 Oct 2021 08:44 PM (IST)

  14 ಓವರ್ ಮುಕ್ತಾಯ

  CSK 100/2 (14)

   

 • 02 Oct 2021 08:42 PM (IST)

  ಅರ್ಧಶತಕ ಪೂರೈಸಿದ ರುತುರಾಜ್ ಗಾಯಕ್ವಾಡ್

  43 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ರುತುರಾಜ್ ಗಾಯಕ್ವಾಡ್

 • 02 Oct 2021 08:38 PM (IST)

  ಮ್ಯಾಕ್ಸಿಮಮ್ ಮೊಯೀನ್

  ಮಯಾಂಕ್ ಎಸೆತದಲ್ಲಿ ಮೊಯೀನ್​ ಅಲಿ ಸೂಪರ್ ಸಿಕ್ಸ್​...ಡೀಪ್ ಮಿಡ್ ವಿಕೆಟ್​ನತ್ತ ಬಾರಿಸಿ ಸಿಕ್ಸರ್​ಗಿಟ್ಟಿಸಿಕೊಂಡ ಮೊಯೀನ್ ಅಲಿ.

  CSK 97/2 (13)

    

 • 02 Oct 2021 08:33 PM (IST)

  CSK 83/2 (12)

  ಕ್ರೀಸ್​ನಲ್ಲಿ ಮೊಯೀನ್ ಅಲಿ-ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್

 • 02 Oct 2021 08:27 PM (IST)

  ಮಾರ್ಕಂಡೆ ಟು ರುತುರಾಜ್

  ಮಾರ್ಕಂಡೆ ಎಸೆತದಲ್ಲಿ ಲಾಂಗ್ ಆಫ್​ನತ್ತ ಬೌಂಡರಿ ಬಾರಿಸಿದ ರುತುರಾಜ್

 • 02 Oct 2021 08:25 PM (IST)

  10 ಓವರ್ ಮುಕ್ತಾಯ

  CSK 63/2 (10)

    

  ಕ್ರೀಸ್​ನಲ್ಲಿ ಮೊಯೀನ್ ಅಲಿ-ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್

 • 02 Oct 2021 08:20 PM (IST)

  ಕ್ರೀಸ್​ನಲ್ಲಿ ಮೊಯೀನ್ ಅಲಿ-ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್

  CSK 59/2 (9.1)

   

 • 02 Oct 2021 08:14 PM (IST)

  ರೈನಾ ಔಟ್

  ಕೇವಲ 3 ರನ್​ಗಳಿಸಿ ರಾಹುಲ್ ತಿವಾಠಿಯಾ ಎಸೆತದಲ್ಲಿ ಕ್ಯಾಚ್​ ನೀಡಿ ಹೊರನಡೆದ ಸುರೇಶ್ ರೈನಾ

  CSK 57/2 (8.3)

   

 • 02 Oct 2021 08:09 PM (IST)

  ಡುಪ್ಲೆಸಿಸ್​ ಔಟ್

  ರಾಹುಲ್ ತಿವಾಠಿಯಾ ಎಸೆತದಲ್ಲಿ ಸ್ಟಂಪ್​ಔಟ್​ ಆಗಿ ಹೊರನಡೆದ ಡುಪ್ಲೆಸಿಸ್

  CSK 49/1 (7.1)

    

 • 02 Oct 2021 08:02 PM (IST)

  ಪವರ್​ಪ್ಲೇ ಮುಕ್ತಾಯ

  ಮೊದಲ 6 ಓವರ್​ನಲ್ಲಿ 44 ರನ್ ಕಲೆಹಾಕಿದ ಸಿಎಸ್​ಕೆ

  CSK 44/0 (6)

    

 • 02 Oct 2021 08:00 PM (IST)

  ಡುಪ್ಲೆ-ಸಿಕ್ಸ್​

  ಮುಸ್ತಫಿಜುರ್ ಎಸೆತದಲ್ಲಿ ಫಾಫ್ ಡುಪ್ಲೆಸಿಸ್ ಭರ್ಜರಿ ಹಿಟ್...ಸಿಕ್ಸ್

 • 02 Oct 2021 07:56 PM (IST)

  5 ಓವರ್ ಮುಕ್ತಾಯ

  CSK 34/0 (5)

    

  ಕ್ರೀಸ್​ನಲ್ಲಿ ರುತುರಾಜ್ ಗಾಯಕ್ವಾಡ್-ಡುಪ್ಲೆಸಿಸ್​ ಬ್ಯಾಟಿಂಗ್

 • 02 Oct 2021 07:53 PM (IST)

  ಬ್ಯಾಕ್ ಟು ಬ್ಯಾಕ್ ಬೌಂಡರಿ

  ಚೇತನ್ ಸಕರಿಯಾ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಫಾಫ್ ಡುಪ್ಲೆಸಿಸ್

 • 02 Oct 2021 07:46 PM (IST)

  ಸಿಎಸ್​ಕೆ ಉತ್ತಮ ಆರಂಭ

  ಆಕಾಶ್ ಸಿಂಗ್ ಎಸೆತದಲ್ಲಿ ಫಸ್ಟ್​ ಸ್ಲಿಪ್​ ಮೂಲಕ ಫೋರ್...ರುತುರಾಜ್​ ಬ್ಯಾಟ್​ನಿಂದ ಮತ್ತೊಂದು ಬೌಂಡರಿ

  CSK 20/0 (3)

   

  ಕ್ರೀಸ್​ನಲ್ಲಿ ರುತುರಾಜ್ ಗಾಯಕ್ವಾಡ್-ಡುಪ್ಲೆಸಿಸ್​ ಬ್ಯಾಟಿಂಗ್

 • 02 Oct 2021 07:40 PM (IST)

  2 ಓವರ್ ಮುಕ್ತಾಯ

  CSK 12/0 (2)

    

 • 02 Oct 2021 07:35 PM (IST)

  ಮೊದಲ ಓವರ್

  ಬೌಲರ್- ಆಕಾಶ್ ಸಿಂಗ್

  ಆರಂಭಿಕರು: ಫಾಫ್ ಡುಪ್ಲೆಸಿಸ್​ ಹಾಗೂ ರುತುರಾಜ್ ಗಾಯಕ್ವಾಡ್

  ಮೊದಲ ಓವರ್​ನಲ್ಲಿ 2 ಬೌಂಡರಿ ಬಾರಿಸಿದ ರುತುರಾಜ್

  CSK 10/0 (1)

    

 • 02 Oct 2021 07:24 PM (IST)

  ಕಣಕ್ಕಿಳಿಯುವ ಕಲಿಗಳು

  ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತಿವಾಟಿಯಾ, ಆಕಾಶ್ ಸಿಂಗ್, ಮಯಾಂಕ್ ಮಾರ್ಕಂಡೆ, ಚೇತನ್ ಸಕಾರಿಯಾ, ಮುಸ್ತಫಿಜುರ್ ರೆಹಮಾನ್

  ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಕೆಎಂ ಆಸಿಫ್, ಜೋಶ್ ಹ್ಯಾಝಲ್‌ವುಡ್

 • 02 Oct 2021 07:23 PM (IST)

  ಟಾಸ್ ವಿಡಿಯೋ

Published On - Oct 02,2021 7:03 PM

Follow us on

Related Stories

Most Read Stories

Click on your DTH Provider to Add TV9 Kannada