IPL 2022: RCBಗೆ ಡೇವಿಡ್ ವಾರ್ನರ್ ನಾಯಕರಾಗಲಿದ್ದಾರೆ ಎಂದ ಆಸ್ಟ್ರೇಲಿಯಾ ಕ್ರಿಕೆಟಿಗ

| Updated By: ಝಾಹಿರ್ ಯೂಸುಫ್

Updated on: Nov 15, 2021 | 8:02 PM

David Warner: ಒಟ್ಟಿನಲ್ಲಿ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ 7 ಪಂದ್ಯಗಳಿಂದ 289 ರನ್​ ಬಾರಿಸಿರುವ ವಾರ್ನರ್ ಇದೀಗ ಐಪಿಎಲ್ ಫ್ರಾಂಚೈಸಿಗಳ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಅದರಲ್ಲೂ ನಾಯಕನ ಹುಡುಕಾಟದಲ್ಲಿರುವ ಅಹಮದಾಬಾದ್, ಲಕ್ನೋ ಹಾಗೂ ಆರ್​ಸಿಬಿ ತಂಡವು ಡೇವಿಡ್ ವಾರ್ನರ್​ ಅವರ ಖರೀದಿಗೆ ಹೆಚ್ಚಿನ ಆಸಕ್ತಿ ತೋರಲಿದ್ದಾರೆ.

IPL 2022: RCBಗೆ ಡೇವಿಡ್ ವಾರ್ನರ್ ನಾಯಕರಾಗಲಿದ್ದಾರೆ ಎಂದ ಆಸ್ಟ್ರೇಲಿಯಾ ಕ್ರಿಕೆಟಿಗ
David Warner
Follow us on

ಡೇವಿಡ್ ವಾರ್ನರ್….ಟಿ20 ವಿಶ್ವಕಪ್​ ಮುಕ್ತಾಯದ ಬೆನ್ನಲ್ಲೇ ವಾರ್ನರ್ (David Warner)​ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ಐಪಿಎಲ್ ಸೀಸನ್ 14ನಲ್ಲಿ ಕಳಪೆ ಫಾರ್ಮ್​ ಪ್ರದರ್ಶಿಸಿದ್ದ ವಾರ್ನರ್ ಅವರನ್ನು ಎಸ್​ಆರ್​ಹೆಚ್ (SRH)​ ತಂಡವು 6 ಪಂದ್ಯಗಳಿಂದ ಹೊರಗಿಟ್ಟಿತ್ತು. ಇದರ ಬೆನ್ನಲ್ಲೇ ಮುಂದಿನ ಸೀಸನ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಪರ ವಾರ್ನರ್ ಆಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಟಿ20 ವಿಶ್ವಕಪ್​ ಮೂಲಕ ಡೇವಿಡ್​ ವಾರ್ನರ್​ ಫಾರ್ಮ್​ ಟೆಂಪ್ರವರಿ…ಕ್ಲಾಸ್ ಪರ್ಮನೆಂಟ್ ಎಂಬುದನ್ನು ಸಾರಿದ್ದಾರೆ. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್​ನ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಇದರ ಬೆನ್ನಲ್ಲೇ ವಾರ್ನರ್ ಮುಂದಿನ ಸೀಸನ್​ನಲ್ಲಿ ಯಾವ ತಂಡದ ಪರ ಆಡಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಎಸ್​ಆರ್​ಹೆಚ್​ ಪರ ಆಡುವುದು ಅನುಮಾನ. ಹೀಗಾಗಿಯೇ ಡೇವಿಡ್ ವಾರ್ನರ್ ಆರ್​ಸಿಬಿ ತಂಡದ ನಾಯಕರಾಗಲಿದ್ದಾರೆ ಎಂದು ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೇಳಿದ್ದಾರೆ.

ನನ್ನ ಪ್ರಕಾರ ವಿರಾಟ್ ಕೊಹ್ಲಿ ಅವರ ಸ್ಥಾನಕ್ಕೆ ಸೂಕ್ತ ಆಯ್ಕೆ ಡೇವಿಡ್ ವಾರ್ನರ್. ಏಕೆಂದರೆ ವಾರ್ನರ್ ಒಬ್ಬ ಆಟಗಾರನಾಗಿ ಹಾಗೂ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಆರ್​ಸಿಬಿ ಅವರನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ವಾರ್ನರ್ ಕೂಡ ನಾಯಕತ್ವವನ್ನು ಎದುರು ನೋಡುತ್ತಿದ್ದಾರೆ, ಜೊತೆಗೆ ಅವರಿಗೆ ಬೆಂಗಳೂರಿನ ಪಿಚ್ ಕೂಡ ಅವರಿಗೆ ಸರಿಹೊಂದುತ್ತದೆ. ಹಾಗಾಗಿ ಆರ್​ಸಿಬಿ ತಂಡಕ್ಕೂ ವಾರ್ನರ್ ಸೂಕ್ತ ಆಯ್ಕೆಯಾಗಲಿದ್ದಾರೆ ಎಂದರು.

ಇದೇ ವೇಳೆ ಡೇವಿಡ್ ವಾರ್ನರ್ ಎಸ್​ಆರ್​ಹೆಚ್​ ಪರ ಆಡುವುದಿಲ್ಲ ಎಂದಿರುವ ಬ್ರಾಡ್ ಹಾಗ್, ಡೇವಿಡ್ ವಾರ್ನರ್​ ಅವರ ನಾಯಕತ್ವದ ಗುಣಗಳ ಕಾರಣದಿಂದಲೇ ಆರ್​ಸಿಬಿ ಅವರ ಖರೀದಿಗೆ ಮುಂದಾಗುವ ಸಾಧ್ಯತೆಯಿದೆ ಎಂದರು. ಏಕೆಂದರೆ 2016 ರಲ್ಲಿ ಎಸ್​ಆರ್​ಹೆಚ್​ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ನಾಯಕ ಎಂಬ ಹೆಗ್ಗಳಿಕೆ ವಾರ್ನರ್​ ಹೆಸರಿನಲ್ಲಿದೆ. ಅಷ್ಟೇ ಅಲ್ಲದೆ ಒಂದು ತಂಡವನ್ನು ಬಲಿಷ್ಠವಾಗಿ ಮುನ್ನಡೆಸಿದ ಕೀರ್ತಿ ಕೂಡ ಡೇವಿಡ್ ವಾರ್ನರ್​ಗೆ ಸಲ್ಲುತ್ತದೆ. ಹೀಗಾಗಿಯೇ ಆರ್​ಸಿಬಿಯಂತಹ ದೊಡ್ಡ ಫ್ರಾಂಚೈಸಿಗೆ ವಾರ್ನರ್ ಸೂಕ್ತ ಆಯ್ಕೆ ಎಂದಿದ್ದಾರೆ ಬ್ರಾಡ್ ಹಾಗ್.

ಒಟ್ಟಿನಲ್ಲಿ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ 7 ಪಂದ್ಯಗಳಿಂದ 289 ರನ್​ ಬಾರಿಸಿರುವ ವಾರ್ನರ್ ಇದೀಗ ಐಪಿಎಲ್ ಫ್ರಾಂಚೈಸಿಗಳ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಅದರಲ್ಲೂ ನಾಯಕನ ಹುಡುಕಾಟದಲ್ಲಿರುವ ಅಹಮದಾಬಾದ್, ಲಕ್ನೋ ಹಾಗೂ ಆರ್​ಸಿಬಿ ತಂಡವು ಡೇವಿಡ್ ವಾರ್ನರ್​ ಅವರ ಖರೀದಿಗೆ ಹೆಚ್ಚಿನ ಆಸಕ್ತಿ ತೋರಲಿದ್ದಾರೆ.

ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್​: ಚಾಂಪಿಯನ್​ ಪಟ್ಟಕ್ಕೇರಿದ 6 ತಂಡಗಳು

ಇದನ್ನೂ ಓದಿ:  Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!

 

(David Warner can replace Virat Kohli? Ex-Aus spinner explains)