ಅನಿವಾಸಿ ಭಾರತೀಯನಂತಿರುವ ಡೇವಿಡ್ ವಾರ್ನರ್ ಇಂಡಿಯಾದಲ್ಲಿರುವ ಅಭಿಮಾನಿಗಳಿಗೆ ಗಣೇಶ ಚತುರ್ಥಿಯ ಶುಭಾಷಯ ಕೋರಿದ್ದಾರೆ

ಬಾಲಿವುಡ್ ಹಾಡುಗಳಿಗೆ ಮೈ ಕುಲುಕಿಸುತ್ತಾ ವಾರ್ನರ್ ಮಾಡುವ ಪೋಸ್ಟ್ ಗಳು ಭಾರತೀಯರಿಗೆ ಬಹಳ ಇಷ್ಟವಾಗುತ್ತವೆ ಅನ್ನೋದು ಪ್ರಶ್ನಾತೀತ. ‘ಪುಷ್ಪ’ ಚಿತ್ರದ ಹಾಡೊಂದಕ್ಕೆ ಅವರು ಥೇಟ್ ಅಲ್ಲು ಅರ್ಜುನ್ ನಂತೆ ಕುಣಿದು ಪೋಸ್ಟ್ ಮಾಡಿದ ವಿಡಿಯೋವನ್ನು ನೀವೂ ನೋಡಿ ಮೆಚ್ಚಿರುತ್ತೀರಿ.

ಅನಿವಾಸಿ ಭಾರತೀಯನಂತಿರುವ ಡೇವಿಡ್ ವಾರ್ನರ್ ಇಂಡಿಯಾದಲ್ಲಿರುವ ಅಭಿಮಾನಿಗಳಿಗೆ ಗಣೇಶ ಚತುರ್ಥಿಯ ಶುಭಾಷಯ ಕೋರಿದ್ದಾರೆ
ಗಣೇಶ ಚತುರ್ಥಿ ಅಂಗವಾಗಿ ಭಾರತೀಯರಿಗೆ ವಿಶ್ ಮಾಡಿರುವ ಡೇವಿಡ್ ವಾರ್ನರ್
Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 31, 2022 | 7:08 PM

ಮೂವತ್ತೈದನೇ ವಯಸ್ಸಿನಲ್ಲೂ ಡೇವಿಡ್ ವಾರ್ನರ್ (David Warner) ನಿಸ್ಸಂದೇಹವಾಗಿ ವಿಶ್ವದ ಅಗ್ರಮಾನ್ಯ (top) ಬಾಟರ್​ಗಳಲ್ಲಿ ಒಬ್ಬರು. ಆಕ್ರಮಣ (aggressive) ಬ್ಯಾಟಿಂಗ್ ವೈಖರಿ, ಎದುರಾಳಿ ಯಾರೇ ಆಗಿದ್ದರು ಅವರೊಂದಿಗೆ ಸ್ನೇಹದಿಂದ ವರ್ತಿಸುವ ಸ್ವಭಾವದ ಆಸ್ಸೀ ಎಡಚ ಭಾರತದಲ್ಲೂ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತೀಯರ ಹೃದಯಗಳಲ್ಲಿ ವಾರ್ನರ್ ಸ್ಥಾನ ಗಿಟ್ಟಿಸಲು ಬೇರೆ ಕಾರಣಗಳೂ ಇವೆ. ಅವರು ಭಾರತದ ಹಬ್ಬಗಳನ್ನು ಅಚರಿಸುತ್ತಾರೆ ಮತ್ತು ಆ ದಿನಗಳಂದು ಸಮಸ್ತ ಭಾರತೀಯರಿಗೆ ಆಯಾ ಹಬ್ಬದ ಶುಭಾಷಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುತ್ತಾರೆ. ಹಾಗೆಯೇ, ವಾರ್ನರ್ ಗೆ ಬಾಲಿವುಡ್ ಹಾಡುಗಳೆಂದರೆ ಪಂಚಪ್ರಾಣ.

ಬಾಲಿವುಡ್ ಹಾಡುಗಳಿಗೆ ಮೈ ಕುಲುಕಿಸುತ್ತಾ ವಾರ್ನರ್ ಮಾಡುವ ಪೋಸ್ಟ್ ಗಳು ಭಾರತೀಯರಿಗೆ ಬಹಳ ಇಷ್ಟವಾಗುತ್ತವೆ ಅನ್ನೋದು ಪ್ರಶ್ನಾತೀತ. ‘ಪುಷ್ಪ’ ಚಿತ್ರದ ಹಾಡೊಂದಕ್ಕೆ ಅವರು ಥೇಟ್ ಅಲ್ಲು ಅರ್ಜುನ್ ನಂತೆ ಕುಣಿದು ಪೋಸ್ಟ್ ಮಾಡಿದ ವಿಡಿಯೋವನ್ನು ನೀವೂ ನೋಡಿ ಮೆಚ್ಚಿರುತ್ತೀರಿ.

ಭಾರತದೆಲ್ಲೆಡೆ ವಿನಾಯಕ ಚತುರ್ಥಿ ಆಚರಿಸುತ್ತಿರುವ ಸಂದರ್ಭದಲ್ಲಿ ವಾರ್ನರ್ ತಮ್ಮ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ಗಣೇಶನ ಮುಂದೆ ಕೈ ಜೋಡಿಸಿಕೊಂಡು ನಿಂತಿರುವ ಪೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ: ಇಂಡಿಯಾದಲ್ಲಿರುವ ನನ್ನೆಲ್ಲ ಸ್ನೇಹಿತರಿಗೆ ಗಣೇಶ ಚತುರ್ಥಿಯ ಶುಭಾಷಯಗಳು. ಸುಖ, ಸಮೃದ್ಧಿಗಳೆಲ್ಲ ನಿಮ್ಮವಾಗಲಿ ಅಂತ ಬರೆದು ಫ್ರೆಂಡ್ಸ್, ಫ್ಯಾಮಿಲಿ, ಮೇಟ್ಸ್ ಅಂತ ಟ್ಯಾಗ್ ಮಾಡಿದ್ದಾರೆ.

 

ಪ್ರಸ್ತುತವಾಗಿ, ವಾರ್ನರ್ ಡೌನ್ ಅಂಡರ್ ಪ್ರವಾಸದಲ್ಲಿರುವ ಜಿಂಬಾಬ್ವೆ ವಿರುದ್ಧ 3-ಒಂದು ದಿನದ ಪಂದ್ಯಗಳ ಸರಣಿ ಆಡುತ್ತಿರುವ ಆಸ್ಟ್ರೇಲಿಯ ತಂಡದ ಭಾಗವಾಗಿದ್ದು ಅತಿಥೇಯ ತಂಡವು ಈಗಾಗಲೇ 2-0 ಮುನ್ನಡೆ ಸಾಧಿಸಿ ಸರಣಿಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.

ಆಸ್ಟ್ರೇಲಿಯ 5 ವಿಕೆಟ್ ಗಳಿಂದ ಗೆದ್ದ ಸರಣಿಯ ಮೊದಲ ಪಂದ್ಯದಲ್ಲಿ ವಾರ್ನರ್ 66 ಎಸೆತಗಳಲ್ಲಿ 55 ರನ್ ಬಾರಿಸಿದರು. ಎರಡನೇ ಪಂದ್ಯದಲ್ಲಿ ಅವರಿಂದ ಹೇಳಿಕೊಳ್ಳುವಂಥ ಪ್ರದರ್ಶನವೇನೂ ಬರಲಿಲ್ಲ. 9 ಎಸೆತಗಳಲ್ಲಿ 13 ರನ್ ಬಾರಿಸಿ ಔಟಾದರು. ಗೆಲ್ಲಲು ಕೇವಲ 97 ರನ್ ಗಳಿಸಿಬೇಕಿದ್ದ ಆಸ್ಸೀಗಳಿಗೆ ಪಂದ್ಯ ಕೊನೆಗೊಳ್ಳಲು ಇನ್ನೂ 4 ತಾಸುಗಳಷ್ಟು ಸಮಯ ಇರುವಾಗಲೇ ಸ್ಟೀವ್ ಸ್ಮಿತ್ (ಅಜೇಯ 47) ಮತ್ತು ಅಲೆಕ್ಸ್ ಕೇರಿ (ಅಜೇಯ 26) ವಿಜಯದ ಗೆರೆ ದಾಟಿಸಿದರು.

ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಟ್ರಾನ್ಸ್ ವಿಲ್ಲೆಯಲ್ಲಿ ಶನಿವಾರ ನಡೆಯಲಿದೆ.