AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

David Warner: ರೊನಾಲ್ಡೊ ರೀತಿ ಕೊಕಾ-ಕೋಲಾ ಬಾಟಲ್‌ಗಳನ್ನು ದೂರಕ್ಕೆ ತಳ್ಳಿದ ಡೇವಿಡ್ ವಾರ್ನರ್: ವಿಡಿಯೋ ವೈರಲ್

David Warner mimicked Cristiano Ronald: ಈ ಹಿಂದೆ ರೊನಾಲ್ಡೊ ಕೊಕಾ ಕೋಲಾ ಬಾಟಲ್‌ಗಳನ್ನು ಪಕ್ಕಕ್ಕೆ ಸರಿಸಿದ ಘಟನೆ ವಿಶ್ವ ಮಟ್ಟದಲ್ಲಿ ಸುದ್ದಿಯಾಗಿತ್ತು. ಸದ್ಯ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಕೂಡ ಇದೇರೀತಿ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ.

David Warner: ರೊನಾಲ್ಡೊ ರೀತಿ ಕೊಕಾ-ಕೋಲಾ ಬಾಟಲ್‌ಗಳನ್ನು ದೂರಕ್ಕೆ ತಳ್ಳಿದ ಡೇವಿಡ್ ವಾರ್ನರ್: ವಿಡಿಯೋ ವೈರಲ್
David Warner and Cristiano Ronaldo
TV9 Web
| Updated By: Vinay Bhat|

Updated on: Oct 29, 2021 | 11:34 AM

Share

ವಿಶ್ವದ ಸ್ಟಾರ್‌ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರು ಈ ಹಿಂದೆ ಯುರೋಪಿಯನ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಸುದ್ದಿಗೋಷ್ಠಿಯಲ್ಲಿ ಕೊಕಾ-ಕೋಲಾ ಬಾಟಲ್‌ಗಳನ್ನು (Coca-Cola bottles) ದೂರಕ್ಕೆ ತಳ್ಳಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ಪರಿಣಾಮ ಪಾನೀಯ ದೈತ್ಯ ಸಂಸ್ಥೆಯು 4 ಬಿಲಿಯನ್‌ ಪ್ರಮಾಣದಷ್ಟು ಶೇರ್‌ ಮೌಲ್ಯ ಕಳೆದುಕೊಂಡಿತ್ತು. ಸದ್ಯ ಆಸ್ಟ್ರೇಲಿಯಾದ (Australia) ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ (David Warner) ಕೂಡ ಇದೇರೀತಿ ಮಾಡಿ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಕೂಡ ಆಗುತ್ತಿದೆ. ಸುದ್ದಿಗೋಷ್ಠಿ ವೇಳೆಯಲ್ಲಿ ವಾರ್ನರ್ ಅವರು ಟೇಬಲ್‌ ಮೇಲಿದ್ದ ಎರಡು ಕೊಕಾ-ಕೋಲಾ ಬಾಟಲ್‌ಗಳನ್ನು ನೋಡಿ ಅವುಗಳನ್ನು ಪಕ್ಕಕ್ಕೆ ತಳ್ಳಿ ನೀರಿನ ಬಾಟಲ್‌ ಅನ್ನು ಮುಂದಿಟ್ಟುಕೊಂಡರು. ಈ ಹಿಂದೆ ರೊನಾಲ್ಡೊ ಕೂಡ ಇದೇರೀತಿ ಮಾಡಿದ್ದರು. ವಾರ್ನರ್ ಇದನ್ನು ಕೇವಲ ತಮಾಷೆಗಾಗಿ ಮಾಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್​ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಆಸೀಸ್ ಗೆಲುವಿನಲ್ಲಿ ಡೇವಿಡ್ ವಾರ್ನರ್ ಪ್ರಮುಖ ಪಾತ್ರವಹಿಸಿದರು. ಸತತ ಕಳಪೆ ಬ್ಯಾಟಿಂಗ್​ಗೆ ಕಂಗೆಟ್ಟಿದ್ದ ವಾರ್ನರ್ ಕೊನೆಗೂ ಫಾರ್ಮ್​ಗೆ ಮರಳಿ 42 ಎಸೆತಗಳಲ್ಲಿ 10 ಬೌಂಡರಿ ಬಾರಿಸಿ 65 ರನ್ ಚಚ್ಚಿದ್ದರು. ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಗೆ ಹಾಜರಾದ ವೇಳೆ ವಾರ್ನರ್ ಅವರು ಮಾಡಿದ ತಮಾಷೆ ಸದ್ಯ ಭರ್ಜರಿ ವೈರಲ್ ಆಗುತ್ತಿದೆ.

ಈ ಹಿಂದೆ ರೊನಾಲ್ಡೊ ಕೊಕಾ ಕೋಲಾ ಬಾಟಲ್‌ಗಳನ್ನು ಪಕ್ಕಕ್ಕೆ ಸರಿಸಿದ ಘಟನೆ ವಿಶ್ವ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರಿಂದ ಪಾನೀಯ ಸಂಸ್ಥೆಯ 56.10 ಡಾಲರ್‌ನಷ್ಟು ಇದ್ದ ಶೇರ್ ಮೌಲ್ಯ ತಕ್ಷಣ 55.22 ಡಾಲರ್‌ಗೆ ಇಳಿಯಿತು. ವಾರ್ನರ್ ಕೂಡ ತಮಾಷೆಗಾಗಿ ಸುದ್ದಿಗೋಷ್ಠಿಗೆ ಕೂತ ತಕ್ಷಣ ಟೇಬಲ್‌ ಮೇಲಿದ್ದ ಎರಡು ಕೊಕಾ-ಕೋಲಾ ಬಾಟಲ್‌ಗಳನ್ನು ನೋಡಿ ಅವುಗಳನ್ನು ತಮ್ಮ ಕೈಗಳಿಂದ ಟೇಬಲ್ ಅಡಿಯಲ್ಲಿ ಇಟ್ಟುಕೊಂಡರು. ಬಳಿಕ ನಗುತ್ತಾ ‘ರೊನಾಲ್ಡೋ ಮಾಡಿದ್ದು ಸರಿ ಎಂದಾರೆ, ನಾನು ಮಾಡುವುದೂ ಸರಿ’ ಎಂದು ಹೇಳಿದರು.

ಗುರುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್​ನ 22ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ತಂಡ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸತತ 2ನೇ ಗೆಲುವನ್ನು ದಾಖಲಿಸಿತು. ಅಲ್ಲದೆ ಪಾಯಿಂಟ್ ಟೇಬಲ್​ನ ಗ್ರೂಪ್ 1 ರಲ್ಲಿ 4 ಅಂಕದೊಂದಿಗೆ ಎರಡನೇ ಸ್ಥಾನಲ್ಲಿದೆ.

ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ರಾಜಪಕ್ಸ (ಔಟಾಗದೆ 33 ರನ್ 26 ಎಸೆತ, 4 ಬೌಂಡರಿ, 1ಸಿಕ್ಸರ್) ಅವರ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಶ್ರಿಲಂಕಾ ತಂಡ 154 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮುಗಿಸಿತು. ಸವಾಲಿನ ಮೊತ್ತ ಬೆನ್ನತ್ತಿದ ಆಸೀಸ್‌ಗೆ ನಾಯಕ ಆ್ಯರನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ 41 ಎಸೆತಗಳಲ್ಲೇ 70 ರನ್‌ಗಳ ಭರ್ಜರಿ ಜೊತೆಯಾಟ ಕಟ್ಟಿದರು. ಅಂತಿಮವಾಗಿ ಆಸ್ಟ್ರೇಲಿಯಾ 17 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು.

Shreyas Iyer: ಆರ್​ಸಿಬಿ ನಾಯಕನಾಗುವ ಬಯಕೆ: ಡೆಲ್ಲಿ ಕ್ಯಾಪಿಟಲ್ಸ್​ ತೊರೆಯಲು ಮುಂದಾದ ಭಾರತದ ಸ್ಟಾರ್ ಬ್ಯಾಟರ್

Hardik Pandya: ಮುಂಬೈ ಇಂಡಿಯನ್ಸ್​​ನಿಂದ ಶಾಕಿಂಗ್ ನ್ಯೂಸ್: ತಂಡದಿಂದ ಮ್ಯಾಚ್ ವಿನ್ನರ್​ನನ್ನೇ ಕೈಬಿಡಲು ನಿರ್ಧಾರ

(David Warner tried to recreate the scene by removing Coca-Cola bottles like Cristiano Ronaldo from his press conference)

ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?