Shreyas Iyer: ಆರ್‌ಸಿಬಿ ನಾಯಕನಾಗುವ ಬಯಕೆ: ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲು ಮುಂದಾದ ಭಾರತದ ಸ್ಟಾರ್ ಬ್ಯಾಟರ್
Shreyas Iyer to Leave Delhi Capitals: ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆಗೊಳಿಸಲಿದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಇದೀಗ ಐಪಿಎಲ್ 2022 ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯುವುದಿಲ್ಲ ಎಂದು ವರದಿಗಳು ತಿಳಿಸಿವೆ.
ಇತ್ತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮಹಾಟೂರ್ನಿ ರಂಗೇರುತ್ತಿದ್ದರೆ ಅತ್ತ ಐಪಿಎಲ್ 2022ರ (IPL 2022) ಕುರಿತು ಮಹತ್ವದ ಬೆಳವಣಿಗೆ ಸಾಗುತ್ತಿದೆ. ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಗು ಮುನ್ನ ಈ ವರ್ಷ ಅಂತ್ಯದಲ್ಲಿ ಮೆಗಾ ಆಕ್ಷನ್ (Mega Auction) ನಡೆಯಲಿದೆ. ಇದಕ್ಕೂ ಮುನ್ನ ಎಂಟು ಫ್ರಾಂಚೈಸಿಗಳಿಗೆ ಬಿಸಿಸಿಐ (BCCI) ತಮ್ಮ ತಂಡದಲ್ಲಿರುವ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಿದೆ. ಉಳಿದ ಆಟಗಾರರು ದೊಡ್ಡ ಹರಾಜು ಪ್ರಕ್ರಿಯೆಗೆ ಲಭ್ಯವಾಗಲಿದ್ದಾರೆ. ಇದರ ಜೊತೆಗೆ ಲಖನೌ ಮತ್ತು ಅಹಮದಾಬಾದ್ ಎರಡು ಹೊಸ ಫ್ರಾಂಚೈಸಿಗಳು ಐಪಿಎಲ್ ಹರಾಜು (IPL Auction) ಪ್ರಕ್ರಿಯೆಗೂ ಮುನ್ನವೇ ಹರಾಜಿಗೆ ಲಭ್ಯವಿರುವ ಆಟಗಾರರ ಪೈಕಿ ಮೂವರು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಮುಂಬೈ ಇಂಡಿಯನ್ಸ್ (Mumbai Indians) ತಂಡ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಕೈಬಿಡಲು ನಿರ್ಧಾರ ಮಾಡಿದೆ. ಇದರ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಡೆಲ್ಲಿ ಕ್ಯಾಪಿಟಲ್ಸ್ನ (Delhi Capitals) ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ (Shreyas Iyer) ತಂಡ ತೊರೆಯಲಿದ್ದಾರಂತೆ.
ಹೌದು, 2022ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯುವುದಿಲ್ಲ ಎಂದು ವರದಿಗಳು ತಿಳಿಸಿವೆ. ಇದಕ್ಕೆ ಕಾರಣಕೂಡ ಹೊರಬಿದ್ದಿದೆ. ಐಪಿಎಲ್ 2021ರ ಪ್ಲೇ ಆಫ್ಸ್‌ವರೆಗೂ ಡೆಲ್ಲಿ ತಂಡವನ್ನು ನಾಯಕ ರಿಷಬ್ ಪಂತ್ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಡೆಲ್ಲಿಯ ಮಾಜಿ ನಾಯಕ ಅಯ್ಯರ್‌ಗೆ ಕ್ಯಾಪ್ಟನ್ ಪಟ್ಟವಿಲ್ಲ. ನಾಯಕತ್ವದ ನಿರಿಕ್ಷೆಯಲ್ಲಿರುವ ಶ್ರೇಯಸ್ ಅಯ್ಯರ್ ಡೆಲ್ಲಿ ತಂಡ ಬಿಟ್ಟು ದೊಡ್ಡ ಹರಾಜಿಗೆ ಲಭ್ಯರಿದ್ದಾರೆ ಎನ್ನಲಾಗಿದೆ.
ಐಪಿಲ್‌ನ ಎರಡು ಹೊಸ ತಂಡಗಳಾದ ಲಖನೌ ಮತ್ತು ಅಹಮದಾಬಾದ್ಗೆ ನಾಯಕರ ಅವಶ್ಯಕತೆ ಇದೆ. ಅಲ್ಲದೇ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ನಾಯಕತ್ವ ತೊರೆದಿದ್ದಾರೆ. ಹಾಗಾಗಿ ಬೆಂಗಳೂರು ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ. ಈ ಹಿನ್ನೆಲೆ ಈ ಅವಕಾಶಗಳನ್ನು ಶ್ರೇಯಸ್ ಅಯ್ಯರ್‌ಗೆ ವರದಾನವಾಗಲಿದೆ ಎಂದು ಹೇಳಲಾಗಿದೆ.
ಇದಕ್ಕೆ ಪುಷ್ಠಿ ಎಂಬಂತೆ, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಶ್ರೇಯಸ್ ಅಯ್ಯರ್ ನಾಯಕತ್ವ ಪಡೆಯುವ ಉದ್ದೇಶದಿಂದ ಡೆಲ್ಲಿ ಫ್ರಾಂಚೈಸಿ ತೊರೆಯುವ ಸಾಧ್ಯತೆ ಇದೆ ಎಂದು ಐಪಿಎಲ್ ಅಧಿಕಾರಿ ಮಾಹಿತಿ ಕೂಡ ನೀಡಿದ್ದಾರೆ. ಶ್ರೇಯಸ್ ಸಾರಥ್ಯದಲ್ಲಿ 2019ರಲ್ಲಿ ಪ್ಲೇ ಆಫ್ಸ್ ತಲುಪಿದ್ದ ಡೆಲ್ಲಿ 2020ರ ಆವೃತ್ತಿಯಲ್ಲಿ ರನ್ನರ್ಸ್‌ಅಪ್ ಸ್ಥಾನ ಪಡೆದಿತ್ತು. ಐಪಿಎಲ್ 2021 ಟೂರ್ನಿಯಲ್ಲಿ ಪಂತ್ ಸಾರಥ್ಯದ ಡೆಲ್ಲಿ ತಂಡ ಪ್ಲೇ ಆಪ್ಸ್‌ನಲ್ಲಿ ಸೋತು ನಿರಾಶೆ ಅನುಭವಿಸಿತು.
ಅಯ್ಯರ್ ಐಪಿಎಲ್ 2021ರ ಮೊದಲನೇ ಚರಣಕ್ಕೆ ಲಭ್ಯರಿರಲಿಲ್ಲ. ಇಂಜುರಿಯಿಂದ ಬಳಲುತ್ತಿದ್ದ ಕಾರಣ ಭಾರತದಲ್ಲಿ ನಡೆದ ಐಪಿಎಲ್ನಿಂದ ವಿಶ್ರಾಂತಿ ಪಡೆದುಕೊಂಡಿದ್ದರು. ನಂತರ ಯುಎಇ ಚರಣಕ್ಕೆ ಕಮ್ಬ್ಯಾಕ್ ಮಾಡಿದರೂ ನಾಯಕ ಜವಾಬ್ದಾರಿ ಫ್ರಾಂಚೈಸಿ ಇವರಿಗೆ ನೀಡಲಿಲ್ಲ.
Hardik Pandya: ಮುಂಬೈ ಇಂಡಿಯನ್ಸ್ನಿಂದ ಶಾಕಿಂಗ್ ನ್ಯೂಸ್: ತಂಡದಿಂದ ಮ್ಯಾಚ್ ವಿನ್ನರ್ನನ್ನೇ ಕೈಬಿಡಲು ನಿರ್ಧಾರ
T20 World Cup: ಇಂದು ಎರಡು ಪಂದ್ಯ: ಮಾಡು ಇಲ್ಲವೇ ಕಾದಾಟದಲ್ಲಿ ವಿಂಡೀಸ್-ಬಾಂಗ್ಲಾ; ಪಾಕ್ಗೆ ಸೋಲುಣಿಸುತ್ತಾ ಅಫ್ಘಾನ್
(Shreyas Iyer heading to leave Delhi Capitals as he eyes on RCB Captain post in IPL 2022)