Dinesh Karthik: ಅಪ್ಪನಾದ ಖುಷಿಯಲ್ಲಿ ದಿನೇಶ್ ಕಾರ್ತಿಕ್: ಅವಳಿ ಮಕ್ಕಳಿಗೆ ಜನ್ಮ ನೀಡಿದ ದೀಪಿಕಾ ಪಳ್ಳಿಕಲ್

Dinesh Karthik and Dipika Pallikal: ಶುಭ ಸುದ್ದಿಯನ್ನು ಹಂಚಿಕೊಂಡ ಕಾರ್ತಿಕ್‌ ಇದೇ ವೇಳೆ ತಾಯಿ ಮತ್ತು ಮಕ್ಕಳೊಂದಿಗಿನ ಎರಡು ಮುದ್ದಾದ ಫೋಟೊ ಕೂಡ ಹಂಚಿಕೊಂಡಿದ್ದಾರೆ. ಈ ನಡುವೆ ದೀಪಿಕಾ ಪಳ್ಳಿಕಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದ್ದಾರೆ.

Dinesh Karthik: ಅಪ್ಪನಾದ ಖುಷಿಯಲ್ಲಿ ದಿನೇಶ್ ಕಾರ್ತಿಕ್: ಅವಳಿ ಮಕ್ಕಳಿಗೆ ಜನ್ಮ ನೀಡಿದ ದೀಪಿಕಾ ಪಳ್ಳಿಕಲ್
Dinesh Karthik and Dipika Pallikal
Follow us
TV9 Web
| Updated By: Vinay Bhat

Updated on: Oct 29, 2021 | 1:20 PM

ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (Dinesh Karthik) ಮತ್ತು ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ (Dipika Pallikal ) ದಂಪತಿ ಈಗ ಅವಳಿ ಗಂಡು ಮಕ್ಕಳ ತಂದೆ-ತಾಯಿಯಾಗಿದ್ದಾರೆ. ತಮ್ಮ ಮುದ್ದು ಮಕ್ಕಳೊಂದಿಗಿನ ಫೋಟೋಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳಿಗೆ ಕಬೀರ್ ಪಳ್ಳಿಕಲ್ ಕಾರ್ತಿಕ್ ಮತ್ತು ಜಿಯಾನ್ ಪಳ್ಳಿಕಲ್ ಕಾರ್ತಿಕ್ ಎಂದು ನಾಮಕರಣ ಮಾಡಲಾಗಿದೆ.

ಕಾರ್ತಿಕ್ ಚಿತ್ರದ ಜೊತೆಗೆ ‘ಈಗ ನಾವು ಮೂರರಿಂದ ಐವರಾಗಿದ್ದೇವೆ. ನಾವು ಇದಕ್ಕಿಂತ ಸಂತೋಷವಾಗಿರಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ. ಕಾರ್ತಿಕ್‌ ಇಲ್ಲಿ ಮೂರರಿಂದ ಐದು ಎಂದಿರುವುದು, ತಮ್ಮ ಪತ್ನಿ, ಮಕ್ಕಳು ಮತ್ತು ತಮ್ಮ ತಾಯಿಯನ್ನ ಸೇರಿಸಿಕೊಂಡಿದ್ದಾರೆ.

ಶುಭ ಸುದ್ದಿಯನ್ನು ಹಂಚಿಕೊಂಡ ಕಾರ್ತಿಕ್‌ ಇದೇ ವೇಳೆ ತಾಯಿ ಮತ್ತು ಮಕ್ಕಳೊಂದಿಗಿನ ಎರಡು ಮುದ್ದಾದ ಫೋಟೊ ಕೂಡ ಹಂಚಿಕೊಂಡಿದ್ದಾರೆ. ಈ ನಡುವೆ ದೀಪಿಕಾ ಪಳ್ಳಿಕಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮಕ್ಕಳಿಗೆ ಕಬೀರ್‌ ಪಳ್ಳಿಕಲ್‌ ಕಾರ್ತಿ ಮತ್ತು ಝಿಯಾನ್‌ ಪಳ್ಳಿಕಲ್‌ ಕಾರ್ತಿಕ್‌ ಎಂದು ಹೆಸರಿಟ್ಟಿರುವುದಾಗಿಯೂ ತಿಳಿಸಿದ್ದಾರೆ.

‘ಕೋಕೋ ಚಾನೆಲ್’ ಅನ್ನು ತಮ್ಮ ಮೊದಲ ಮಗುವೆಂದೇ ಪರಿಗಣಿಸಿರುವ ಕಾರ್ತಿಕ್-ದೀಪಿಕಾ, ಅದರ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆನ್ನೂ ಹೊಂದಿದ್ದು, ಅದಕ್ಕೆ 7 ಸಾವಿರಕ್ಕೂ ಅಧಿಕ ಹಿಂಬಾಲಕರೂ ಇದ್ದಾರೆ. ಇತ್ತೀಚೆಗೆ ಐಪಿಎಲ್‌ನಲ್ಲಿ ರನ್ನರ್‌ಅಪ್ ಸ್ಥಾನ ಪಡೆದ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಭಾಗವಾಗಿದ್ದ 36 ವರ್ಷದ ಕಾರ್ತಿಕ್, 2015ರ ಆಗಸ್ಟ್‌ನಲ್ಲಿ ದೀಪಿಕಾ ಅವರನ್ನು ಹಿಂದು ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಕಾರ ವರಿಸಿದ್ದರು.

David Warner: ರೊನಾಲ್ಡೊ ರೀತಿ ಕೊಕಾ-ಕೋಲಾ ಬಾಟಲ್‌ಗಳನ್ನು ದೂರಕ್ಕೆ ತಳ್ಳಿದ ಡೇವಿಡ್ ವಾರ್ನರ್: ವಿಡಿಯೋ ವೈರಲ್

Shreyas Iyer: ಆರ್​ಸಿಬಿ ನಾಯಕನಾಗುವ ಬಯಕೆ: ಡೆಲ್ಲಿ ಕ್ಯಾಪಿಟಲ್ಸ್​ ತೊರೆಯಲು ಮುಂದಾದ ಭಾರತದ ಸ್ಟಾರ್ ಬ್ಯಾಟರ್

(Dinesh Karthik on Thursday announced Dipika Pallikal blessed with twins)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ