2023ರ ವಿಶ್ವಕಪ್‌ನ (ODI World Cup 2023) ಸಿದ್ಧತೆಯ ಬಾಗವಾಗಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ತಂಡಗಳು ಏಕದಿನ ಸರಣಿಯಲ್ಲಿ ಒಂದಷ್ಟು ಪ್ರಯೋಗಗಳನ್ನು ನಡೆಸಿವೆ. ಎರಡೂ ತಂಡಗಳು ಸರಣಿಯ ಮೊದಲ ಮತ್ತು ಎರಡನೇ ಪಂದ್ಯಗಳಲ್ಲಿ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಹೊಸಬರಿಗೆ ಆದ್ಯತೆ ನೀಡಿದ್ದವು. ಇದರಲ್ಲಿ ಭಾರತ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದ್ದನ್ನು ಬಿಟ್ಟರೆ, ಆಸ್ಟ್ರೇಲಿಯಾಕ್ಕೆ ಮಾತ್ರ ಈ ತಂತ್ರ ಕೈಹಿಡಿಯಲಿಲ್ಲ. ಈ ನಡುವೆ ತಂಡದ ಯೋಚನೆಯ ಹೊರತಾಗಿ ಹೊಸ ತಂತ್ರ ಬಳಸಲು ಮುಂದಾದ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (David Warner) ಇದೀಗ ನಗೆ ಪಾಟಲಿಗೆ ಈಡಾಗಿದ್ದಾರೆ. ಇಂದೋರ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವಾರ್ನರ್ ಚಾಣಾಕ್ಷತನ ತೋರಲು ಯತ್ನಿಸಿದರಾದರೂ ರವಿಚಂದ್ರನ್ ಅಶ್ವಿನ್ (Ravichandran Ashwin) ಮುಂದೆ ಅವರ ಜಾಣತನವೆಲ್ಲ ವ್ಯರ್ಥವಾಯಿತು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯವು ಭಾನುವಾರ ಸೆಪ್ಟೆಂಬರ್ 24 ರಂದು ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯವನ್ನು ಟೀಂ ಇಂಡಿಯಾ ಅತ್ಯಂತ ಸುಲಭವಾಗಿ ಗೆದ್ದುಕೊಂಡಿತು. ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳ ಸ್ಫೋಟಕ ಪ್ರದರ್ಶನದಿಂದಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾ 399 ರನ್ ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ಆಡಲು ಭಾರತದ ಬೌಲರ್‌ಗಳು ಅವಕಾಶ ನೀಡಲಿಲ್ಲ. ಹೀಗಾಗಿ ಇಡೀ ತಂಡ ಕೇವಲ 217 ರನ್‌ಗಳಿಗೆ ಆಲೌಟ್ ಆಗಿ 99 ರನ್ಗಳಿಂದ ಸೋಲೊಪ್ಪಿಕೊಂಡಿತು.
IND vs AUS: ಆಸೀಸ್ ವಿರುದ್ಧ 3 ವಿಕೆಟ್ ಉರುಳಿಸಿ ದಿಗ್ಗಜರ ದಾಖಲೆ ಮುರಿದ ಅಶ್ವಿನ್..!
ವಾಸ್ತವವಾಗಿ ಭಾರತ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಅಂತಹ ಆರಂಭ ಸಿಗಲಿಲ್ಲ. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಡೇವಿಡ್ ವಾರ್ನರ್ ತಮ್ಮ ಅರ್ಧಶತಕದ ಇನ್ನಿಂಗ್ಸ್ ಮೂಲಕ ತಂಡದ ಇನ್ನಿಂಗ್ಸ್ ನಿಭಾಯಿಸಲು ಯತ್ನಿಸಿದರು. ಈ ನಡುವೆ ಭಾರತದ ಸ್ಪಿನ್ನರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಹೊಸ ತಂತ್ರ ಪ್ರಯೋಗಿಸಿದ ವಾರ್ನರ್, ಎಡಗೈ ಬದಲು ಬಲಗೈ ಬ್ಯಾಟ್ಸ್‌ಮನ್ ಆಗಿ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದರು. ಅಲ್ಲದೆ ಸ್ವೀಪ್ ಶಾಟ್ ಆಡುವ ಮೂಲಕ ಒಂದು ಬೌಂಡರಿ ಕೂಡ ಬಾರಿಸಿದರು.
Into the Warner-verse 🤯#TestedByTheBest #IndiaCricketKaNayaGhar pic.twitter.com/S15kOb7zVq
— JioCinema (@JioCinema) September 24, 2023
ಈ ಯಶಸ್ಸು ವಾರ್ನರ್ ಅವರ ಸ್ಥೈರ್ಯವನ್ನು ಹೆಚ್ಚಿಸಿತು. ಹೀಗಾಗಿ ವಾರ್ನರ್ ಮತ್ತೆ ಬಲಗೈ ಬ್ಯಾಟರ್ ರೀತಿ ಬ್ಯಾಟ್ ಮಾಡಲಾರಂಭಿಸಿದರು. ಆದರೆ ವಾರ್ನರ್ ಅವರ ಈ ಜಾಣಾತನವನ್ನು ಗಮನಿಸಿದ ಅಶ್ವಿನ್ ತಮ್ಮ ಲೈನ್ ಬದಲಿಸಿ ಬೌಲ್ ಮಾಡಲು ಆರಂಭಿಸಿದರು. ಈ ವೇಳೆ ತಮ್ಮ ಬ್ಯಾಟಿಂಗ್ ಶೈಲಿ ಬದಲಿಸಿ ಬಲಗೈ ಬ್ಯಾಟಿಂಗ್ ಮಾಡುತ್ತಿದ್ದ ವಾರ್ನರ್ ರಿವರ್ಸ್ ಸ್ವೀಪ್ ಆಡುವ ಉದ್ದೇಶದಿಂದ ತಮ್ಮ ಸಹಜವಾದ ಎಡಗೈ ನಿಲುವಿನಲ್ಲಿ ಶಾಟ್ ಆಡಲು ಯತ್ನಿಸಿದರು. ಆದರೆ ಚೆಂಡು ವಾರ್ನರ್ ಅವರ ಬ್ಯಾಟನ್ನು ತಪ್ಪಿಸಿಕೊಂಡು ಅವರ ಪ್ಯಾಡ್ಗೆ ಬಡಿಯಿತು. ಟೀಂ ಇಂಡಿಯಾದ ಮನವಿ ಮೇರೆಗೆ ಅಂಪೈರ್ ಕೂಡ ವಾರ್ನರ್ ಅವರನ್ನು ಎಲ್ ಬಿಡಬ್ಲ್ಯೂ ಔಟ್ ಎಂದು ತೀರ್ಪು ನೀಡಿದರು. ಹೀಗಾಗಿ ಅತಿ ಬುದ್ಧಿವಂತಿಕೆ ತೋರಲು ಹೋದ ವಾರ್ನರ್ ಸಪ್ಪೆ ಮೊರೆಯಿಂದ ಪೆವಿಲಿಯನ್‌ಗೆ ಮರಳಬೇಕಾಯಿತು.
Two wickets in an over for @ashwinravi99 💪💪
David Warner and Josh Inglis are given out LBW!
Live – https://t.co/OeTiga5wzy… #INDvAUS @IDFCFIRSTBank pic.twitter.com/z62CFHTgq1
— BCCI (@BCCI) September 24, 2023
ವಾರ್ನರ್ ಅತಿ ಬುದ್ಧಿವಂತಿಕೆ ತೋರಿಸಲು ಹೋಗಿ ತಮ್ಮಿಂದ ತಾವೇ ವಿಕೆಟ್ ಕೈಚೆಲ್ಲಿದರು. ವಾಸ್ತವವಾಗಿ, ವಾರ್ನರ್ ಎದುರಿಸಿದ ಆ ಚೆಂಡು ಬ್ಯಾಟ್‌ಗೆ ಬಡಿದ ನಂತರ ಅವರ ಪ್ಯಾಡ್‌ಗೆ ಬಡಿದಿತ್ತು. ಆದರೆ ಇದು ವಾರ್ನರ್ ಅವರ ಗಮನಕ್ಕೆ ಬರಲಿಲ್ಲ. ಹೀಗಾಗಿ ವಾರ್ನರ್, ಜೋಶ್ ಇಂಗ್ಲಿಸ್ ಅವರೊಂದಿಗೆ ಚರ್ಚೆ ನಡೆಸಿ, ರಿವ್ಯೂವ್ ತೆಗೆದುಕೊಳ್ಳದೆ ಪೆವಿಲಿಯನ್‌ಗೆ ಮರಳಿದರು. ಸ್ಟೇಡಿಯಂನಲ್ಲಿದ್ದ ದೊಡ್ಡ ಪರದೆಯ ಮೇಲೆ ರಿಪ್ಲೇ ಪ್ಲೇ ಮಾಡಿದಾಗ, ಚೆಂಡು ವಾರ್ನರ್ ಬ್ಯಾಟ್‌ನ ಕೆಳಭಾಗಕ್ಕೆ ಬಡಿದು ಪ್ಯಾಡ್‌ಗೆ ಬಡಿದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿತು. ಹೀಗಾಗಿ ವಾರ್ನರ್ 2 ರಿವ್ಯೂವ್ಗಳು ಬಾಕಿ ಇದ್ದರೂ ಅದನ್ನು ಬಳಸಿಕೊಳ್ಳದೆ ತಮ್ಮ ವಿಕೆಟ್ ಅನ್ನು ಅವರೇ ಕೈಚೆಲ್ಲಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:23 am, Mon, 25 September 23