ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್; ವಿಶ್ವಕಪ್‌ನಿಂದ ಹೊರಬಿದ್ದ ಸ್ಟಾರ್ ಆಲ್‌ರೌಂಡರ್..!
Wanindu Hasaranga: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಕೇವಲ 50 ರನ್ಗಳಿಗೆ ಆಲೌಟ್ ಆಗುವ ಮೂಲಕ ಮುಜುಗರದ ಸೋಲಿಗೆ ತುತ್ತಾಗಿದ್ದ ಶ್ರೀಲಂಕಾ ತಂಡಕ್ಕೆ ವಿಶ್ವಕಪ್ಗೂ ಮುನ್ನ ಬಿಗ್ ಶಾಕ್ ಎದುರಾಗಿದೆ. ಲಂಕಾ ಪ್ರಿಮಿಯರ್ ಲೀಗ್ ವೇಳೆ ಇಂಜುರಿಗೆ ತುತ್ತಾಗಿದ್ದ ತಂಡದ ಸ್ಟಾರ್ ಆಲ್‌ರೌಂಡರ್ ವನಿಂದು ಹಸರಂಗ ಇದೀಗ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ.
ಏಷ್ಯಾಕಪ್ (Asia Cup 2023) ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಕೇವಲ 50 ರನ್ಗಳಿಗೆ ಆಲೌಟ್ ಆಗುವ ಮೂಲಕ ಮುಜುಗರದ ಸೋಲಿಗೆ ತುತ್ತಾಗಿದ್ದ ಶ್ರೀಲಂಕಾ ತಂಡಕ್ಕೆ ವಿಶ್ವಕಪ್ಗೂ (ICC World Cup 2023) ಮುನ್ನ ಬಿಗ್ ಶಾಕ್ ಎದುರಾಗಿದೆ. ಲಂಕಾ ಪ್ರಿಮಿಯರ್ ಲೀಗ್ ವೇಳೆ ಇಂಜುರಿಗೆ ತುತ್ತಾಗಿದ್ದ ತಂಡದ ಸ್ಟಾರ್ ಆಲ್‌ರೌಂಡರ್ ವನಿಂದು ಹಸರಂಗ (Wanindu Hasaranga) ಇದೀಗ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ ವೇಳೆ ತೊಡೆಯ ಸೆಳೆತಕ್ಕೆ ಒಳಗಾಗಿದ್ದ ಹಸರಂಗ ವಿಶ್ವಕಪ್‌ಗಾಗಿ ಫಿಟ್‌ನೆಸ್ ಅನ್ನು ಮರಳಿ ಪಡೆಯುವ ಸಲುವಾಗಿ ಏಷ್ಯಾಕಪ್ನಿಂದ ಹೊರಗುಳಿದಿದ್ದರು. ಆದರೀಗ ಅವರು ವಿಶ್ವಕಪ್ನಿಂದಲೂ ಹೊರಗುಳಿದಿರುವುದು ಲಂಕಾ ತಂಡಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.
ವಾಸ್ತವವಾಗಿ ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದ ಹಸರಂಗ ತರಬೇತಿ ವೇಳೆ ಮತ್ತೊಂದು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಹಸರಂಗ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದ್ದು, ಇದರಿಂದ ಅವರು ಚೇತರಿಸಿಕೊಳ್ಳಲು 6 ರಿಂದ 8 ವಾರಗಳು ಬೇಕಾಗುತ್ತದೆ ಎಂದು ವರದಿಯಾಗಿದೆ.
ವಿಕೆಟ್ಗಳ ಸಿಕ್ಸರ್ ಸಿಡಿಸಿದ ಹಸರಂಗ; ಲೀಗ್ನಿಂದ ಹೊರಬಿದ್ದ 3 ಬಾರಿಯ ಚಾಂಪಿಯನ್ ಜಾಫ್ನಾ ಕಿಂಗ್ಸ್
28ರವರೆಗೆ ಗಡುವು
ಸ್ಪೋರ್ಟ್ಸ್ ಅವರ್ ವರದಿಯ ಪ್ರಕಾರ, ಎಸ್‌ಎಲ್‌ಸಿ ಅಧಿಕಾರಿಗಳು ವಿಶ್ವಕಪ್‌ಗೆ ತಂಡವನ್ನು ಇನ್ನೂ ಅಂತಿಮಗೊಳಿಸಿಲ್ಲ. 15 ಸದಸ್ಯರ ತಂಡವನ್ನು ಅಂತಿಮಗೊಳಿಸಲು ಐಸಿಸಿ ಸೆಪ್ಟೆಂಬರ್ 28ರವರೆಗೆ ಗಡುವು ನೀಡಿದ್ದು, ಲಂಕಾ ಮಂಡಳಿ ಸೆಪ್ಟೆಂಬರ್ 27 ರಂದು ವಿಶ್ವಕಪ್ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಹಸರಂಗ ಹೊರತಾಗಿ ವೇಗದ ಬೌಲರ್ ದುಷ್ಮಂತ ಚಮೀರಾ ಕೂಡ ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ವಿಶ್ವಕಪ್ ಮತ್ತು ಏಷ್ಯಾಕಪ್‌ನ ಕ್ವಾಲಿಫೈಯರ್ ಪಂದ್ಯಗಳನ್ನು ಕಳೆದುಕೊಂಡಿದ್ದ ಬಲಗೈ ವೇಗಿ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ.
ಲಂಕಾ ತಂಡಕ್ಕೆ ಭಾರಿ ಹೊಡೆತ
ಹಸರಂಗಾ ಅವರನ್ನು ವಿಶ್ವಕಪ್‌ನಿಂದ ಕೈಬಿಟ್ಟಿರುವುದು ಶ್ರೀಲಂಕಾ ತಂಡಕ್ಕೆ ಎರಡು ಹಿನ್ನಡೆಯುಂಟು ಮಾಡಿದೆ. ಏಕೆಂದರೆ ಹಸರಂಗ ಲೆಗ್ ಸ್ಪಿನ್ನರ್ ಮಾತ್ರವಲ್ಲದೆ, ಕೆಳ ಕ್ರಮಾಂಕದಲ್ಲಿ ಬ್ಯಾಟರ್ ಕೂಡ ಆಗಿದ್ದರು. ಏಷ್ಯಾಕಪ್‌ನಲ್ಲಿ ಶ್ರೀಲಂಕಾ ಈ ಆಲ್‌ರೌಂಡರ್‌ಗೆ ಯಾವುದೇ ಬದಲಿ ಆಟಗಾರನನ್ನು ಹೆಸರಿಸದಿದ್ದರೂ, ವಿಶ್ವಕಪ್‌ನಲ್ಲಿ ಮಾತ್ರ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಾಗಲೇಬೇಕಿದೆ.
ಸದ್ಯಕ್ಕೆ, ಎಸ್‌ಎಲ್‌ಸಿ ಆಯ್ಕೆಗಾರರು ಇಬ್ಬರು ಸ್ಟ್ಯಾಂಡ್‌ಬೈ ಆಟಗಾರರಾದ ಬಲಗೈ ಲೆಗ್ ಸ್ಪಿನ್ನರ್ ದುಶನ್ ಹೇಮಂತ ಮತ್ತು ಆಲ್‌ರೌಂಡರ್ ಚಾಮಿಕಾ ಕರುಣಾರತ್ನ ಅವರನ್ನು ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿದೆ.
ವಿಶ್ವಕಪ್‌ಗೆ ಶ್ರೀಲಂಕಾ ಸಂಭಾವ್ಯ ತಂಡ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣರತ್ನೆ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಕುಸಲ್ ಮೆಂಡಿಸ್, ಕುಸಲ್ ಪೆರೆರಾ, ಸದೀರ ಸಮರವಿಕ್ರಮ, ದುನಿತ್ ವೆಲ್ಲಲಾಗೆ, ಪ್ರಮೋದ್ ಮಧುಶನ್, ಮತೀಶ ಪತಿರಾಣ,ದುಷ್ಮಂತ ಚಮೀರ, ಲಹಿರು ಕುಮಾರ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Sun, 24 September 23