
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL 2021) ಮೊದಲ ಕ್ವಾಲಿಫೈಯರ್ನಲ್ಲಿ (Qualifier 1) ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಎಂ. ಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (DC vs CSK) ತಂಡ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸಿಎಸ್ಕೆ ತಂಡವು ಐಪಿಎಲ್ ಸೀಸನ್ 14ನಲ್ಲಿ ಫೈನಲ್ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಸಿಎಸ್ಕೆ ನಾಯಕ ಧೋನಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪೃಥ್ವಿ ಶಾ ಹಾಗೂ ರಿಷಭ್ ಪಂತ್ ಅವರ ಅರ್ಧಶತಕದ ನೆರವನಿಂದ 5 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸಿಎಸ್ಕೆ ಪರ ರುತುರಾಜ್ ಗಾಯಕ್ವಾಡ್ (70) ಹಾಗೂ ರಾಬಿನ್ ಉತ್ತಪ್ಪ (63) ಭರ್ಜರಿ ಬ್ಯಾಟಿಂಗ್ ಮಾಡಿದರು. ಅದರಂತೆ ಕೊನೆಯ ಓವರ್ನಲ್ಲಿ ಸಿಎಸ್ಕೆಗೆ ಗೆಲ್ಲಲು 13 ರನ್ಗಳ ಅವಶ್ಯಕತೆಯಿತ್ತು. ಟಾಮ್ ಕರನ್ ಎಸೆದ ಅಂತಿಮ ಓವರ್ನಲ್ಲಿ ಮೂರು ಬೌಂಡರಿ ಬಾರಿಸುವ ಮೂಲಕ ಧೋನಿ ಸಿಎಸ್ಕೆ ತಂಡಕ್ಕೆ 4 ವಿಕೆಟ್ಗಳ ಜಯ ತಂದುಕೊಟ್ಟರು.
ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 16 ಬಾರಿ ಜಯ ಸಾಧಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಪಂದ್ಯಗಳನ್ನು ಗೆದ್ದುಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ (ನಾಯಕ), ಶ್ರೇಯಸ್ ಅಯ್ಯರ್, ಶಿಮ್ರೋನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಟಾಮ್ ಕರ್ರನ್, ಅವೇಶ್ ಖಾನ್, ಅನ್ರಿಕ್ ನೋಕಿಯಾ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
ಟಾಮ್ ಕರನ್ ಎಸೆತದಲ್ಲಿ ಧೋನಿ ಬ್ಯಾಟ್ ಎಡ್ಜ್…ಫೋರ್
ಟಾಮ್ ಕರನ್ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಧೋನಿ ಭರ್ಜರಿ ಬೌಂಡರಿ
ಟಾಮ್ ಕರನ್ ಎಸೆತದಲ್ಲಿ ಮೊಯೀನ್ ಅಲಿ ಬಿಗ್ ಹಿಟ್…ಬೌಂಡರಿ ಲೈನ್ನಲ್ಲಿ ರಬಾಡಗೆ ಕ್ಯಾಚ್
ಸಿಎಸ್ಕೆಗೆ 5 ಎಸೆತಗಳಲ್ಲಿ 13 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಮೊಯೀನ್ ಅಲಿ-ಧೋನಿ ಬ್ಯಾಟಿಂಗ್
ಅವೇಶ್ ಖಾನ್ ಎಸೆತವನ್ನು ಮಿಡ್ ವಿಕೆಟ್ನತ್ತ ಬಾರಿಸಿದ ಧೋನಿ…ಭರ್ಜರಿ ಸಿಕ್ಸ್
ಅವೇಶ್ ಖಾನ್ ಫುಲ್ ಟಾಸ್ ಎಸೆತ… ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿ ಮೊಯೀನ್ ಅಲಿ
ಅವೇಶ್ ಖಾನ್ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ (70) ಭರ್ಜರಿ ಹೊಡೆತ…ಬೌಂಡರಿ ಲೈನ್ನಿಂದ ಓಡಿ ಬಂದು ಅದ್ಭುತವಾಗಿ ಕ್ಯಾಚ್ ಹಿಡಿದ ಅಕ್ಷರ್ ಪಟೇಲ್
ಕ್ರೀಸ್ನಲ್ಲಿ ಮೊಯೀನ್ ಅಲಿ-ರುತುರಾಜ್ ಬ್ಯಾಟಿಂಗ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರುತುರಾಜ್
ಅನ್ರಿಕ್ ನೋಕಿಯಾ ಎಸೆತಕ್ಕೆ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ರುತುರಾಜ್
ಅವೇಶ್ ಖಾನ್ ಫುಲ್ ಟಾಸ್ ಎಸೆತವನ್ನು ಲೆಗ್ ಸೈಡ್ನತ್ತ ಬಾರಿಸಿ ಬೌಂಡರಿಗಿಟ್ಟಿಸಿಕೊಂಡ ರುತುರಾಜ್
ಅನ್ರಿಕ್ ನೋಕಿಯಾ ಎಸೆತವನ್ನು ಬೌಂಡರಿಗಟ್ಟಿದ ಮೊಯೀನ್ ಅಲಿ…ಫೋರ್
ಕ್ರೀಸ್ನಲ್ಲಿ ಮೊಯೀನ್ ಅಲಿ-ರುತುರಾಜ್ ಬ್ಯಾಟಿಂಗ್
ಶ್ರೇಯಸ್ ಅಯ್ಯರ್ ಉತ್ತಮ ಫೀಲ್ಡಿಂಗ್ ಅಂಬಾಟಿ ರಾಯುಡು ರನೌಟ್
ಟಾಮ್ ಕರನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಶಾರ್ದೂಲ್ ಠಾಕೂರ್ (0)
ಟಾಮ್ ಕರನ್ ಎಸೆತದಲ್ಲಿ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿ ಹೊರ ನಡೆದ ರಾಬಿನ್ ಉತ್ತಪ್ಪ (63)
ಕ್ರೀಸ್ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಬ್ಯಾಟಿಂಗ್
ಅಶ್ವಿನ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಬಿನ್ ಉತ್ತಪ್ಪ
ಕ್ರೀಸ್ನಲ್ಲಿ ಉತ್ತಪ್ಪ (52) ಹಾಗೂ ರುತುರಾಜ್ (45) ಬ್ಯಾಟಿಂಗ್
ಅಕ್ಷರ್ ಪಟೇಲ್ ಎಸೆತದಲ್ಲಿ ಸಿಕ್ಸ್ ಹಾಗೂ ಫೋರ್ ಬಾರಿಸಿದ ರುತುರಾಜ್
ಕ್ರೀಸ್ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಬ್ಯಾಟಿಂಗ್
ಕ್ರೀಸ್ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಬ್ಯಾಟಿಂಗ್
ಅವೇಶ್ ಖಾನ್ ಎಸೆತಕ್ಕೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಉತ್ತಪ್ಪ
ಒಂದೇ ಓವರ್ನಲ್ಲಿ 20 ರನ್ ಕಲೆಹಾಕಿದ ರಾಬಿನ್ ಉತ್ತಪ್ಪ
ಸಿಕ್ಸ್ ಬೆನ್ನಲ್ಲೇ ಭರ್ಜರಿ ಬೌಂಡರಿ ಬಾರಿಸಿದ ಉತ್ತಪ್ಪ…ಫೋರ್
ಅವೇಶ್ ಖಾನ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ರಾಬಿನ್ ಉತ್ತಪ್ಪ ರಾಕೆಟ್ ಶಾಟ್…ಸಿಕ್ಸ್
ಅಕ್ಷರ್ ಪಟೇಲ್ ಎಸೆತದಲ್ಲಿ ಕವರ್ಸ್ನತ್ತ ಭರ್ಜರಿ ಬೌಂಡರಿ ಬಾರಿಸಿದ ರುತುರಾಜ್
ರಬಾಡ ಎಸೆತಕ್ಕೆ ಲೆಗ್ ಸೈಡ್ನಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಉತ್ತಪ್ಪ
ಕಗಿಸೊ ರಬಾಡ ಎಸೆತದಲ್ಲಿ ರುತುರಾಜ್ ಸೂಪರ್ ಸ್ಟ್ರೈಟ್ ಹಿಟ್…ಸಿಕ್ಸ್
ಕ್ರೀಸ್ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಬ್ಯಾಟಿಂಗ್
ಕ್ರೀಸ್ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಬ್ಯಾಟಿಂಗ್
ಅವೇಶ್ ಖಾನ್ ಎಸೆತದಲ್ಲಿ ಸ್ಲಿಪ್ ಮೂಲಕ ಬೌಂಡರಿಗಟ್ಟಿಸಿಕೊಂಡ ರಾಬಿನ್ ಉತ್ತಪ್ಪ
ಅನ್ರಿಕ್ ನೋಕಿಯಾ ಎಸೆತದಲ್ಲಿ ಫಾಫ್ ಡುಪ್ಲೆಸಿಸ್ ಬೌಲ್ಡ್
20ನೇ ಓವರ್ನ ಕೊನೆಯ ಎಸೆತದಲ್ಲಿ 2 ರನ್ ಕಲೆಹಾಕುವ ಮೂಲಕ ರಿಷಭ್ ಪಂತ್ 35 ಎಸೆತಗಳಲ್ಲಿ 51 ರನ್ ಬಾರಿಸಿದರು.
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಪಂತ್ ಬ್ಯಾಟ್ ಎಡ್ಜ್…ಫೋರ್
ಬ್ರಾವೊ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಹೆಟ್ಮೆಯರ್ (37)…ಬೌಂಡರಿ ಲೈನ್ನಿಂದ ಓಡಿ ಬಂದು ಸುಲಭ ಕ್ಯಾಚ್ ಹಿಡಿದ ರವೀಂದ್ರ ಜಡೇಜಾ…ಹೆಟ್ಮೆಯರ್ ಔಟ್
ಡ್ವೇನ್ ಬ್ರಾವೊ ಎಸೆತದಲ್ಲಿ ಪಂತ್ ಬಿಗ್ ಹಿಟ್….ಸಿಕ್ಸ್
ಕ್ರೀಸ್ನಲ್ಲಿ ಪಂತ್ ಹಾಗೂ ಹೆಟ್ಮೆಯರ್ ಬ್ಯಾಟಿಂಗ್
ಬ್ರಾವೊ ಓವರ್ನಲ್ಲಿ 2 ಬೌಂಡರಿಯೊಂದಿಗೆ 13 ರನ್ ಕಲೆಹಾಕಿದ ಪಂತ್-ಹೆಟ್ಮೆಯರ್
ಬ್ರಾವೊ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಬೌಂಡರಿ ಬಾರಿಸಿದ ಹೆಟ್ಮೆಯರ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಲಾಂಗ್ ಆನ್ನತ್ತ ರಿಷಭ್ ಪಂತ್ ಭರ್ಜರಿ ಸಿಕ್ಸ್
ಬ್ರಾವೊ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಹೆಟ್ಮೆಯರ್
ಕ್ರೀಸ್ನಲ್ಲಿ ರಿಷಭ್ ಪಂತ್-ಹೆಟ್ಮೆಯರ್ ಬ್ಯಾಟಿಂಗ್
ಮೊಯೀನ್ ಅಲಿ ಎಸೆತದಲ್ಲಿ ಆಕರ್ಷಕ ಸಿಕ್ಸ್ ಸಿಡಿಸಿದ ಹೆಟ್ಮೆಯರ್
ಕ್ರೀಸ್ನಲ್ಲಿ ರಿಷಭ್ ಪಂತ್-ಹೆಟ್ಮೆಯರ್ ಬ್ಯಾಟಿಂಗ್
ಜಡೇಜಾ ಎಸೆತದಲ್ಲಿ ಎಕ್ಸ್ಟ್ರಾ ಕವರ್ಸ್ನತ್ತ ಬಾರಿಸುವ ಯತ್ನ…ಡುಪ್ಲೆಸಿಸ್ ಅಧ್ಭುತ ಕ್ಯಾಚ್…ಪೃಥ್ವಿ ಶಾ (60) ಔಟ್
ಮೊಯೀನ್ ಅಲಿ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ಅಕ್ಷರ್ ಪಟೇಲ್ (10)
ಜಡೇಜಾ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪೃಥ್ವಿ ಶಾ
ಕ್ರೀಸ್ನಲ್ಲಿ ಪೃಥ್ವಿ ಶಾ-ಅಕ್ಷರ್ ಪಟೇಲ್ ಬ್ಯಾಟಿಂಗ್
ಹ್ಯಾಝಲ್ವುಡ್ ಎಸೆತದಲ್ಲಿ ಶ್ರೇಯಸ್ ಅಯ್ಯರ್ (1) ಬಿಗ್ ಹಿಟ್ಗೆ ಯತ್ನ…ರುತುರಾಜ್ ಉತ್ತಮ ಕ್ಯಾಚ್-ಔಟ್
ಶಾರ್ದೂಲ್ ಠಾಕೂರ್ ಸ್ಲೋ ಡೆಲಿವರಿ…ನೇರವಾಗಿ ಆಕರ್ಷಕ ಸಿಕ್ಸ್ ಸಿಡಿಸಿದ ಪೃಥ್ವಿ ಶಾ
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೃಥ್ವಿ ಶಾ
ಕ್ರೀಸ್ನಲ್ಲಿ ಪೃಥ್ವಿ ಶಾ-ಶ್ರೇಯಸ್ ಅಯ್ಯರ್ ಬ್ಯಾಟಿಂಗ್
ಜೋಶ್ ಹ್ಯಾಝಲ್ವುಡ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಶಿಖರ್ ಧವನ್ (7)
ಹ್ಯಾಝಲ್ವುಡ್ ಎಸೆತಕ್ಕೆ ಶಿಖರ್ ಧವನ್ ಸ್ಟ್ರೈಟ್ ಹಿಟ್…ಫೋರ್
ದೀಪಕ್ ಚಹರ್ ಎಸೆತದಲ್ಲಿ ನಾಲ್ಕು ಬೌಂಡರಿ ಬಾರಿಸಿದ ಪೃಥ್ವಿ ಶಾ
ಚಹರ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ…ಪೃಥ್ವಿ ಶಾ ಬ್ಯಾಟ್ನಿಂದ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ
ದೀಪಕ್ ಚಹರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಪೃಥ್ವಿ ಶಾ
ಹ್ಯಾಝಲ್ವುಡ್ ಎಸೆತಕ್ಕೆ ಪೃಥ್ವಿ ಶಾ ಬಿರುಸಿನ ಹೊಡೆತ…ಚೆಂಡು ಸಿಕ್ಸರ್ಗೆ
ಜೋಶ್ ಹ್ಯಾಝಲ್ವುಡ್ ಎಸೆತದಲ್ಲಿ ಪೃಥ್ವಿ ಶಾ ಬ್ಯಾಟ್ ಎಡ್ಜ್…ವಿಕೆಟ್ ಕೀಪರ್ ತಲೆಯ ಮೇಲಿಂದ ಚೆಂಡು ಬೌಂಡರಿಗೆ..ಫೋರ್
ಕ್ರೀಸ್ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್
ಆರಂಭಿಕರು: ಪೃಥ್ವಿ ಶಾ, ಶಿಖರ್ ಧವನ್
ಬೌಲಿಂಗ್: ದೀಪಕ್ ಚಹರ್
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ (ನಾಯಕ), ಶ್ರೇಯಸ್ ಅಯ್ಯರ್, ಶಿಮ್ರೋನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಟಾಮ್ ಕರ್ರನ್, ಅವೇಶ್ ಖಾನ್, ಅನ್ರಿಕ್ ನೋಕಿಯಾ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ (ನಾಯಕ), ಶ್ರೇಯಸ್ ಅಯ್ಯರ್, ಶಿಮ್ರೋನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಟಾಮ್ ಕರ್ರನ್, ಅವೇಶ್ ಖಾನ್, ಅನ್ರಿಕ್ ನೋಕಿಯಾ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
ಟಾಸ್ ಗೆದ್ದ ಸಿಎಸ್ಕೆ ನಾಯಕ ಧೋನಿ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - 6:30 pm, Sun, 10 October 21