ಸತತ ಐದು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2023 ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಫಿರೋಜ್ ಷಾ ಕೋಟ್ಲಾ ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ ತಂದುಕೊಟ್ಟಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಈ ಪಂದ್ಯದಲ್ಲಿ ಸುಲಭವಾಗಿ ಗುರಿ ಮುಟ್ಟುವ ಸೂಚನೆ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೊನೆ ಕೊನೆಯಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡು ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್‌ಗಳಲ್ಲಿ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ನಾಯಕ ವಾರ್ನರ್ ಅರ್ಧಶತಕದ ಸ್ಫೋಟಕ ಆರಂಭ ನೀಡಿದರಾದರೂ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಡೆಲ್ಲಿ ತಿಣುಕಾಡುತ್ತ ಗೆಲುವು ಸಾಧಿಸಿತು.
ಸತತ ಐದು ಪಂದ್ಯಗಳ ಸೋಲಿನ ನಂತರ 6ನೇ ಪಂದ್ಯದಲ್ಲಿ ಡೆಲ್ಲಿ ಟೂರ್ನಿಯ ಮೊದಲ ಗೆಲುವು ಸಾಧಿಸಿದೆ. 20ನೇ ಓವರ್‌ನಲ್ಲಿ 7 ರನ್ ಕಲೆಹಾಕಿದೆ ಅಕ್ಷರ್ ಪಟೇಲ್ ತಂಡಕ್ಕೆ ಮೊದಲ ಗೆಲುವು ತಂದುಕೊಟ್ಟರು.
ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಅಂತಿಮ ಓವರ್‌ನಲ್ಲಿ ಗೆಲುವಿಗೆ 6 ಎಸೆತಗಳಲ್ಲಿ 7 ರನ್‌ಗಳ ಅಗತ್ಯವಿದ್ದು, ಅಕ್ಷರ್ ಪಟೇಲ್ 13 ರನ್ ಮತ್ತು ಲಲಿತ್ ಯಾದವ್ 4 ರನ್‌ಗಳೊಂದಿಗೆ ಆಡುತ್ತಿದ್ದಾರೆ. 19 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 121/6.
ದೆಹಲಿ ಕ್ಯಾಪಿಟಲ್ಸ್ ಪರ ಅಕ್ಷರ್ ಪಟೇಲ್ 10 ರನ್ ಮತ್ತು ಲಲಿತ್ 2 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 12 ಎಸೆತಗಳಲ್ಲಿ 12 ರನ್‌ಗಳ ಅಗತ್ಯವಿದೆ. 18 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 116/6
ದೆಹಲಿಯ ಆರನೇ ವಿಕೆಟ್ ಪತನಗೊಂಡಿದೆ. ಅಮನ್ ಖಾನ್ ಔಟ್ ಆಗಿದ್ದಾರೆ. 17ನೇ ಓವರ್‌ನ ಎರಡನೇ ಎಸೆತದಲ್ಲಿ ನಿತೀಶ್ ರಾಣಾ ಅವರ ಕೇರಂ ಬಾಲ್ಗೆ ಅಮನ್ ಖಾನ್ ಬೌಲ್ಡ್ ಆದರು. ಅಮನ್‌ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.
16ನೇ ಓವರ್‌ನ ಐದನೇ ಎಸೆತದಲ್ಲಿ ಮನೀಶ್ ಪಾಂಡೆ ಔಟಾದರು. ಅನುಕುಲ್ ರಾಯ್ ಎಸೆತದಲ್ಲಿ ಮನೀಷ್ ಬಿಗ್ ಶಾಟ್ ಆಡಲು ಬಯಸಿದ್ದರು ಆದರೆ ರಿಂಕು ಸಿಂಗ್ ಕ್ಯಾಚ್ ಹಿಡಿದರು.
ಮನೀಶ್ ಪಾಂಡೆ – 21 ರನ್, 23 ಎಸೆತಗಳು 2×4
ನರೈನ್ ಎಸೆದ 15ನೇ ಓವರ್‌ನಲ್ಲಿ ಮನೀಶ್ ಒಂದು ಬೌಂಡರಿ ಹೊಡೆದರೆ, ಕೊನೆಯ ಎಸೆತದಲ್ಲಿ ಅಕ್ಷರ್ ಕೂಡ ಬೌಂಡರಿ ಬಾರಿಸಿದರು.
ವರುಣ್ ಚಕ್ರವರ್ತಿ 14ನೇ ಓವರ್‌ನ ಮೊದಲ ಎಸೆತದಲ್ಲಿ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದರು. ವಾರ್ನರ್ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದರು ಆದರೆ ಎಲ್ಬಿ ಬಲೆಗೆ ಬಿದ್ದು ಔಟಾದರು. ಸಂಕಷ್ಟದಲ್ಲಿ ಡೆಲ್ಲಿ.
ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದಿರುವ ನಾಯಕ ವಾರ್ನರ್ 10ನೇ ಓವರ್‌ನ 2ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು.
ಅನುಕುಲ್ ರಾಯ್ ಅವರ ಓವರ್‌ನಲ್ಲಿ ದೆಹಲಿಯ ಮೂರನೇ ವಿಕೆಟ್ ಪತನವಾಗಿದೆ, ಫಿಲಿಪ್ ಸಾಲ್ಟ್ 5 ರನ್‌ಗಳಿಗೆ ಔಟಾದರು. 9 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ 70/3
ದೆಹಲಿಗೆ ಮತ್ತೊಂದು ಹೊಡೆತ ಬಿದ್ದಿದೆ. ಮಿಚೆಲ್ ಮಾರ್ಷ್ ಔಟ್. ಕೋಲ್ಕತ್ತಾ ತಂಡದ ನಾಯಕ ನಿತೀಶ್ ರಾಣಾ ಎಂಟನೇ ಓವರ್‌ನ ಎರಡನೇ ಎಸೆತದಲ್ಲಿ ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡಿದರು. ಮಿಚೆಲ್ ಲಾಂಗ್ ಆಫ್‌ನಲ್ಲಿ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು ಆದರೆ ಅಲ್ಲಿ ಅವರು ಡೇವಿಡ್ ವೀಸಾಗೆ ಕ್ಯಾಚ್ ನೀಡಿದರು.
ಎರಡನೇ ಇನ್ನಿಂಗ್ಸ್‌ನ ಪವರ್‌ಪ್ಲೇ ಮುಗಿದಿದೆ. ಈ ಆರು ಓವರ್‌ಗಳಲ್ಲಿ ಡೆಲ್ಲಿ 61 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು.
ಡೆಲ್ಲಿ 50 ರನ್ ಪೂರೈಸಿದೆ. ಡೇವಿಡ್ ವಾರ್ನರ್ ಆರನೇ ಓವರ್‌ನಲ್ಲಿ 4 ಬೌಂಡರಿ ಬಾರಿಸಿದರು. ಸುನಿಲ್ ನರೈನ್ ಅವರ ಈ ಓವರ್‌ನಲ್ಲಿ ಬರೋಬ್ಬರಿ 17 ರನ್ ಬಂತು.
ಪೃಥ್ವಿ ಶಾ ಔಟಾಗಿದ್ದಾರೆ. ವರುಣ್ ಚಕ್ರವರ್ತಿ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ವರುಣ್ ಬೌಲ್ ಮಾಡಿದ ನಾಲ್ಕನೇ ಓವರ್‌ನ ಮೂರನೇ ಎಸೆತವನ್ನು ಆಫ್ ಸ್ಟಂಪ್‌ನ ಹೊರಗೆ ಬೌಲ್ಡ್ ಮಾಡಿದರು, ಅದನ್ನು ಶಾ ಕಟ್ ಮಾಡಲು ಪ್ರಯತ್ನಿಸಿದರು ಆದರೆ ಚೆಂಡು ಅವರ ಬ್ಯಾಟ್‌ನ ಅಂಚನ್ನು ತಾಗಿ ಸ್ಟಂಪ್‌ಗೆ ಬಡಿಯಿತು.
ದೆಹಲಿ ಪರ ವಾರ್ನರ್ 24 ರನ್ ಹಾಗೂ ಪೃಥ್ವಿ ಶಾ 9 ರನ್ ಗಳಿಸಿ ಆಡುತ್ತಿದ್ದಾರೆ. 4 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ 34/0.
2ನೇ ಓವರ್‌ನಲ್ಲಿ 3 ಬೌಂಡರಿ ಬಂದವು. ಮೊದಲ ಎಸೆತವನ್ನು ಶಾ ಬೌಂಡರಿಗಟ್ಟಿದರೆ, 3 ಮತ್ತು 4ನೇ ಎಸೆತವನ್ನು ವಾರ್ನರ್ ಬೌಂಡರಿ ಬಾರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ಆರಂಭವಾಗಿದೆ. ಡೇವಿಡ್ ವಾರ್ನರ್ ಜೊತೆ ಇನ್ನಿಂಗ್ಸ್ ಆರಂಭಿಸಲು ಪೃಥ್ವಿ ಶಾ ಬಂದಿದ್ದಾರೆ. ಡೆಲ್ಲಿ ಗೆಲ್ಲಲು 128 ರನ್ ಗಳಿಸಬೇಕಿದೆ.
20ನೇ ಓವರ್ ಮುಖೇಶ್ 2, 3, 4ನೇ ಎಸೆತದಲ್ಲಿ ಸತತ ಮೂರು ಸಿಕ್ಸರ್ ಹೊಡೆಸಿಕೊಂಡರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ರಸೆಲ್ 38 ರನ್ ಬಾರಿಸಿ ಅಜೇಯರಾಗಿ ಉಳಿದರು.
19ನೇ ಓವರ್‌ನಲ್ಲಿ ಸ್ಪಿನ್ನರ್ ಕುಲ್ದೀಪ್ ಬೌಲಿಂಗ್ ಮಾಡಿದರೂ. ರಸೆಲ್ಗೆ ಯಾವುದೇ ಬಿಗ್ ಶಾಟ್ ಆಡಲು ಸಾಧ್ಯವಾಗಲಿಲ್ಲ.
ಆಂಡ್ರೆ ರಸೆಲ್ 14 ರನ್ ಹಾಗೂ ವರುಣ್ 0 ರನ್ ಗಳಿಸಿ ಆಡುತ್ತಿದ್ದಾರೆ. 17 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 100/9
ಕೋಲ್ಕತ್ತಾದ ಒಂಬತ್ತನೇ ವಿಕೆಟ್ ಪತನ, ಉಮೇಶ್ ಯಾದವ್ 3 ರನ್ ಗಳಿಸಿ ಔಟಾದರು. 16 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 97/9
ಕುಲ್ದೀಪ್ ಯಾದವ್ ಓವರ್‌ನಲ್ಲಿ ಕೋಲ್ಕತ್ತಾ ತಂಡ ಸತತ 2 ವಿಕೆಟ್ ಕಳೆದುಕೊಂಡಿತು. 43 ರನ್ ಗಳಿಸಿ ರಾಯ್ ಔಟಾದರೆ, ಆ ಬಳಿಕ ಬಂದ ಅನುಕೂಲ್ ರಾಯ್ 0 ರನ್ ಗಳಿಸಿ ಔಟಾದರು.
14ನೇ ಓವರ್‌ನ 2ನೇ ಎಸೆತವನ್ನು ರಸೆಲ್ ಸಿಕ್ಸರ್ಗಟ್ಟಿದರು. ಆ ಬಳಿಕ 4ನೇ ಎಸೆತದಲ್ಲಿ ಬೌಂಡರಿ ಹೊಡೆದರು.ಜೇಸನ್ ರಾಯ್ 43 ರನ್ ಹಾಗೂ ಆಂಡ್ರೆ ರಸೆಲ್ 12 ರನ್ ಗಳಿಸಿ ಆಡುತ್ತಿದ್ದಾರೆ. 14 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 92/6.
ಜೇಸನ್ ರಾಯ್ 37 ರನ್ ಹಾಗೂ ಆಂಡ್ರೆ ರಸೆಲ್ 4 ರನ್ ಗಳಿಸಿ ಆಡುತ್ತಿದ್ದಾರೆ. ಕೊನೆಯ ಓವರ್‌ನಲ್ಲಿ ಕೋಲ್ಕತ್ತಾ ಕೇವಲ 4 ರನ್ ಗಳಿಸಿತು. ದೊಡ್ಡ ಗುರಿಯನ್ನು ನೀಡಲು ಕೋಲ್ಕತ್ತಾ ಈಗ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ.13 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 77/6.
ಇಶಾಂತ್ ಶರ್ಮಾ ತಮ್ಮ ಕೋಟಾದ ಕೊನೆಯ ಓವರ್‌ನಲ್ಲಿ ನರೈನ್ ವಿಕೆಟ್ ಉರುಳಿಸಿದ್ದಾರೆ. ಶರ್ಮಾರ ಶಾರ್ಟ್ ಬಾಲನ್ನು ಡೀಪ್ ಮಿಡ್ ವಿಕೆಟ್ ಕಡೆ ನರೈನ್ ಆಡಿದರು. ಆದರೆ ಅಲ್ಲೆ ಇದ್ದ ವಾರ್ನರ್ ಸುಲಭ ಕ್ಯಾಚ್ ತೆಗೆದುಕೊಂಡರು.
11ನೇ ಓವರ್‌ನ 2ನೇ ಎಸೆತವನ್ನು ಸ್ವಿಪ್ ಶಾಟ್ ಆಡಿದ ರಿಂಕು ಸಿಂಗ್ ಡೀಪ್ ಮಿಡ್ ವಿಕೆಟ್ನಲ್ಲಿ ಕ್ಯಾಚಿತ್ತು ಔಟಾದರು. ಹಾಗೆಯೇ ಓವರ್‌ನ ಕೊನೆಯ ಎಸೆತದಲ್ಲಿ ನರೈನ್ ಬೌಂಡರಿ ಕೂಡ ಹೊಡೆದರು.
10ನೇ ಓವರ್ ಎಸೆಯಲು ಬಂದ ಕುಲ್ದೀಪ್ ಅವರ ಎರಡನೇ ಎಸೆತವನ್ನು ಸ್ಟ್ರೈಟ್ ಹಿಟ್ ಮಾಡಿದ ರಾಯ್ ಭರ್ಜರಿ ಸಿಕ್ಸರ್ ಹೊಡೆದರು. 10 ಓವರ್ ಅಂತ್ಯಕ್ಕೆ ಕೆಕೆಆರ್ 64/4
ಅಕ್ಷರ್ ಎಸೆದ 9ನೇ ಓವರ್‌ನ 2ನೇ ಎಸೆತದಲ್ಲಿ ಮಂದೀಪ್ ಕ್ಲೀನ್ ಬೌಲ್ಡ್ ಆಗುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿದರು. ಮಂದೀಪ್ ಸಿಂಗ್ 12 ರನ್ ಗಳಿಸಿ ಔಟಾದರು.
8ನೇ ಓವರ್ ಬೌಲ್ ಮಾಡಲು ಬಂದ ಮಾರ್ಷ್ ಅವರ 3ನೇ ಎಸೆತವನ್ನು ಮಂದೀಪ್ ಓವರ್ ಡೀಪ್ ಬ್ಯಾಕ್ವರ್ಡ್ನಲ್ಲಿ ಸಿಕ್ಸರ್ಗಟ್ಟಿದರು. ಆ ನಂತರ ಕೊನೆಯ ಎಸೆತದಲ್ಲಿ ರಾಯ್ ನೀಡಿದ ಕ್ಯಾಚ್ ಹಿಡಿಯುವಲ್ಲಿ ಮಾರ್ಷ್ ವಿಫಲರಾದರು.
5ನೇ ಓವರ್‌ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಹೀಗಾಗಿ 6ನೇ ಓವರ್‌ನಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಕೆಕೆಆರ್ ನಾಯಕ ರಾಣಾ ಮಿಡ್ ಆನ್ನಲ್ಲಿ ಕ್ಯಾಚಿತ್ತು ಔಟಾದರು. ಪವರ್ ಪ್ಲೇನಲ್ಲೇ ಕೆಕೆಆರ್ 3 ವಿಕೆಟ್ ಕಳೆದುಕೊಂಡಿದೆ.
4ನೇ ಓವರ್ ಬೌಲ್ ಮಾಡಲು ಬಂದ ನೋಕಿಯಾ 3ನೇ ಎಸೆತದಲ್ಲೇ ಸ್ಫೋಟಕ ಬ್ಯಾಟರ್ ವೆಂಕಟೇಶ್ ಅಯ್ಯರ್ ವಿಕೆಟ್ ಉರುಳಿಸಿದರು. ಫಸ್ಟ್ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಅಯ್ಯರ್ ಶೂನ್ಯಕ್ಕೆ ಔಟಾದರು.
ಇಶಾಂತ್ ಶರ್ಮಾ ಎಸೆದ ಓವರ್‌ನಲ್ಲಿ ರಾಯ್ ಫೋರ್ ಬಾರಿಸಿದರು. 3 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 20/1. ಜೇಸನ್ ರಾಯ್ 15 ರನ್ ಹಾಗೂ ವೆಂಕಟೇಶ್ 0 ರನ್ ಗಳಿಸಿ ಆಡುತ್ತಿದ್ದಾರೆ.
ಮುಖೇಶ್ ಎಸೆದ 2ನೇ ಓವರ್‌ನ 5ನೇ ಎಸೆತ ಶಾರ್ಟ್ ಆಗಿತ್ತು. ಅದನ್ನು ಎಳೆಯಲು ಯತ್ನಿಸಿದ ಲಿಟನ್ ದಾಸ್ ಕ್ಯಾಚಿತ್ತು ಔಟಾದರು.
ಮುಖೇಶ್ ಎಸೆದ 2ನೇ ಓವರ್‌ನ ಮೊದಲ ಎಸೆತದಲ್ಲೇ ರಾಯ್ ಬೌಂಡರಿ ಬಾರಿಸಿದರು. ಆ ನಂತರ 3ನೇ ಎಸೆತ ಕೂಡ ಬೌಂಡರಿ ಸೇರಿತು.
ಕೆಕೆಆರ್ ಬ್ಯಾಟಿಂಗ್ ಆರಂಭಿಸಿದ್ದು, ಲಿಟನ್ ದಾಸ್ ಹಾಗೂ ಜೇಸನ್ ರಾಯ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಇಶಾಂತ್ ಎಸೆದ ಮೊದಲ ಓವರ್‌ನಲ್ಲಿ ಬೌಂಡರಿ ಸೇರಿದಂತೆ 5 ರನ್ ಬಂತು.
ಜೇಸನ್ ರಾಯ್, ಲಿಟನ್ ದಾಸ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಮಂದೀಪ್ ಸಿಂಗ್, ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಕುಲ್ವಂತ್ ಖೆಜ್ರೋಲಿಯಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಕುಲ್ದೀಪ್ ಯಾದವ್, ಎನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಮುಖೇಶ್ ಕುಮಾರ್
ಟಾಸ್ ಗೆದ್ದ ಡೆಲ್ಲಿ ನಾಯಕ ವಾರ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಳೆ ನಿಂತಿದ್ದು ಕೆಲವೇ ಕ್ಷಣಗಳಲ್ಲಿ ಟಾಸ್ ನಡೆಯಲಿದೆ.
ಸದ್ಯ ದಿಲ್ಲಿಯಲ್ಲಿ ಮಳೆಯಾಗುತ್ತಿದ್ದು, ಈ ಕಾರಣದಿಂದ ಟಾಸ್‌ನಲ್ಲೂ ವಿಳಂಬ ಕಾಣುತ್ತಿದೆ.
Published On - 7:11 pm, Thu, 20 April 23