DC vs RCB highlights IPL 2023: ಕ್ಯಾಚ್ ಬಿಟ್ಟ ಕಾರ್ತಿಕ್; ಪಂದ್ಯ ಕೈಚೆಲ್ಲಿದ ಆರ್ಸಿಬಿ
Delhi Capitals vs Royal challengers bangalore IPL 2023 highlights in Kannada: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫಾಫ್ ಡುಪ್ಲೆಸಿಸ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 50ನೇ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ ಹಾಗೂ ಮಹಿಪಾಲ್ ಅವರ ಅರ್ಧಶತಕ ನೆರವಿನಿಂದ 4 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.ವಾಸ್ತವವಾಗಿ ಈ ಪಂದ್ಯದಲ್ಲಿ ಡೆಲ್ಲಿ ಪರ ಕೇವಲ 45 ಎಸೆತಗಳಲ್ಲಿ 87 ರನ್ ಬಾರಿಸಿದ್ದ ಸಾಲ್ಟ್ ಆರಂಭದಲ್ಲೇ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ಗೆ ಕ್ಯಾಚ್ ನೀಡಿದ್ದರು. ಆದರೆ ಕ್ಯಾಚ್ ತೆಗೆದುಕೊಳ್ಳುವಲ್ಲಿ ಕಾರ್ತಿಕ್ ಎಡವಿದರು. ಜೀವದಾನದ ಲಾಭ ಪಡೆದ ಸಾಲ್ಟ್ ಆರ್ಸಿಬಿ ಬೌಲರ್ಗಳನ್ನು ಬೆಂಡೆತ್ತಿದರು. ಇದೇ ಕಾರ್ತಿಕ್ ಲಕ್ನೋ ವಿರುದ್ಧದ ಪಂದ್ಯದಲ್ಲೂ ಆರ್ಸಿಬಿ ಸೋಲಿಗೆ ಕಾರಣರಾಗಿದ್ದರು.
LIVE NEWS & UPDATES
-
17ನೇ ಓವರ್‌ನಲ್ಲಿ ಗೆಲುವು
ಆರ್ಸಿಬಿ ನೀಡಿದ 181 ರನ್ಗಳ ಗುರಿಯನ್ನು ಡೆಲ್ಲಿ ತಂಡ 17ನೇ ಓವರ್‌ನಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿತು.
-
ಸಾಲ್ಟ್ ಔಟ್
45 ಎಸೆತಗಳಲ್ಲಿ 87 ರನ್ ಬಾರಿಸಿದ್ದ ಸಾಲ್ಟ್ ಕರಣ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. 3ನೇ ವಿಕೆಟ್ ಪತನ
-
-
30 ಎಸೆತಗಳಲ್ಲಿ 16 ರನ್ ಬೇಕು
ಸಾಲ್ಟ್ ಹಾಗೂ ರುಸ್ಸೋ ಅದ್ಭುತವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಸದ್ಯ ಡೆಲ್ಲಿ ಗೆಲುವಿನ ಸನಿಹದಲ್ಲಿದ್ದು, 30 ಎಸೆತಗಳಲ್ಲಿ 16 ರನ್ ಬೇಕು
-
ದೆಹಲಿಯ 150 ರನ್ ಪೂರ್ಣ
ರಿಲೆ ರುಸ್ಸೋ 13ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು ಮತ್ತು ಇದರೊಂದಿಗೆ ದೆಹಲಿಯ 150 ರನ್ ಪೂರ್ಣಗೊಂಡಿತು. ಡೆಲ್ಲಿ ಗೆಲುವಿನ ಸನಿಹದಲ್ಲಿದೆ.
-
ಹರ್ಷಲ್ಗೆ 3 ಸಿಕ್ಸರ್
13ನೇ ಓವರ್ ಡೆಲ್ಲಿಗೆ ದೊಡ್ಡ ಓವರ್ ಆಗಿದೆ. ಓವರ್‌ನಲ್ಲಿ 3 ಸಿಕ್ಸರ್ ಬಂದವು. ಹರ್ಷಲ್ ಪಟೇಲ್ ಅವರ ಈ ಓವರ್‌ನಲ್ಲಿ ಸಾಲ್ಟ್ ಮೂರನೇ ಮತ್ತು ಐದನೇ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು. ರುಸ್ಸೋ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆ ಓವರ್‌ನಲ್ಲಿ 23 ರನ್ ಬಂದವು.
-
-
ಮಾರ್ಷ್ ಔಟ್
11ನೇ ಓವರ್ ಬೌಲ್ ಮಾಡಲು ಬಂದ ಹರ್ಷಲ್ ಪಟೇಲ್ ಓವರ್‌ನ ಮೂರನೇ ಎಸೆತದಲ್ಲಿ ಮಾರ್ಷ್ ವಿಕೆಟ್ ಉರುಳಿಸಿದರು.
-
ಸಾಲ್ಟ್ ಅರ್ಧಶತಕ
ಕರಣ್ ಬೌಲ್ ಮಾಡಿದ 9ನೇ ಓವರ್‌ನಲ್ಲಿ 2 ಬೌಂಡರಿ ಬಾರಿಸಿದ ಸಾಲ್ಟ್ ಅರ್ಧಶತಕ ಪೂರೈಸಿದರೆ, ಇತ್ತ ಡೆಲ್ಲಿ ಕೂಡ 100ರ ಗಡಿ ದಾಟಿದೆ.
-
8 ಓವರ್ ಅಂತ್ಯಕ್ಕೆ 86/1
ಹಸರಂಗ ಬೌಲ್ ಮಾಡಿದ 8ನೇ ಓವರ್‌ನ ಮೊದಲ ಎಸೆತದಲ್ಲೇ ಮಾರ್ಷ್ ಬೌಂಡರಿ ಹೊಡೆದರು.
-
ಮಾರ್ಷ್ ಸಿಕ್ಸರ್
ವಾರ್ನರ್ ವಿಕೆಟ್ ಬಳಿಕ ಬಂದ ಮಾರ್ಷ್ 1 ಸಿಕ್ಸರ್ ಹಾಗೂ 1 ಬೌಂಡರಿ ಮೂಲಕ ಪವರ್ ಪ್ಲೇ ಮುಗಿಸಿದರು. ಡೆಲ್ಲಿ 70/1
-
ವಾರ್ನರ್ ಔಟ್
ಹೇಜಲ್ವುಡ್ ಬೌಲ್ ಮಾಡಿದ ಪವರ್ ಪ್ಲೇನ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ವಾರ್ನರ್ ವಿಕೆಟ್ ಉರುಳಿಸಿದರು.
-
ಸಿರಾಜ್ ದುಬಾರಿ
5ನೇ ಓವರ್ ಬೌಲ್ ಮಾಡಿದ ಸಿರಾಜ್ 19 ರನ್ ಬಿಟ್ಟುಕೊಟ್ಟರು. ಈ ಓವರ್‌ನಲ್ಲಿ ಸಾಲ್ಟ್ 2 ಸಿಕ್ಸರ್ ಹಾಗೂ 1 ಬೌಂಡರಿ ಹೊಡೆದರು.
-
ಹಸರಂಗ ದುಬಾರಿ
ಹಸರಂಗ ಬೌಲ್ ಮಾಡಿದ 4ನೇ ಓವರ್‌ನಲ್ಲಿ ವಾರ್ನರ್ 1 ಬೌಂಡರಿ ಹಾಗೂ 1 ಸಿಕ್ಸರ್ ಹೊಡೆದರು.
-
ಸಾಲ್ಟ್ ಬೌಂಡರಿ
ಹೇಜಲ್ವುಡ್ ಬೌಲ್ ಮಾಡಿದ 3ನೇ ಓವರ್‌ನ ಮೊದಲ ಎಸೆತದಲ್ಲೇ ಸಾಲ್ಟ್ ಬೌಂಡರಿ ಹೊಡೆದರೆ, ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
-
ವಾರ್ನರ್ ಬೌಂಡರಿ
ಸಿರಾಜ್ ಬೌಲ್ ಮಾಡಿದ ಮೊದಲ ಓವರ್ನಲ್ಲೇ ವಾರ್ನರ್ 2 ಬೌಂಡರಿ ಹೊಡೆದರು. ಈ ಓವರ್ನಿಂದ 10 ರನ್ ಬಂದವು.
-
ಡೆಲ್ಲಿಗೆ 182 ರನ್ ಟಾರ್ಗೆಟ್
ಕೊಹ್ಲಿ ಹಾಗೂ ಮಹಿಪಾಲ್ ಅವರ ಅರ್ಧಶತಕದ ನೆರವಿನಿಂದ ಆರ್ಸಿಬಿ ನಿಗಧಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು.
-
ಅನುಜ್ ಸಿಕ್ಸರ್
ಡಿಕೆ ಬಳಿಕ ಬ್ಯಾಟಿಂಗ್ಗೆ ಬಂದ ಅನುಜ್ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಹೊಡೆದರು.
-
ಡಿಕೆ ಔಟ್
20ನೇ ಓವರ್‌ನ ಮೊದಲ ಎಸೆತದಲ್ಲೇ ಡಿಕೆ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.
-
ಮಹಿಪಾಲ್ ಚೊಚ್ಚಲ ಅರ್ಧಶತಕ
19ನೇ ಓವರ್‌ನ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಮಹಿಪಾಲ್ ತಮ್ಮ ಚೊಚ್ಚಲ ಅರ್ಧಶತಕ ಪೂರೈಸಿದ್ದಾರೆ.
-
ಡಿಕೆ ಸಿಕ್ಸ್
18ನೇ ಓವರ್‌ನ 3ನೇ ಎಸೆತದಲ್ಲಿ ಮಹಿಪಾಲ್ ಬೌಂಡರಿ ಹೊಡೆದರೆ, ಕೊನೆಯ ಎಸೆತದಲ್ಲಿ ಡಿಕೆ ಸಿಕ್ಸರ್ ಬಾರಿಸಿದರು.
-
ಮಹಿಪಾಲ್ ಸ್ಫೋಟಕ ಬ್ಯಾಟಿಂಗ್
17ನೇ ಓವರ್‌ನಲ್ಲಿ ಮಹಿಪಾಲ್ 2 ಬೌಂಡರಿ ಹೊಡೆದರು. ಇದರೊಂದಿಗೆ ಆರ್ಸಿಬಿ 150 ರನ್ ಕೂಡ ಪೂರ್ಣಗೊಂಡಿದೆ.
-
ಕೊಹ್ಲಿ ಔಟ್
16ನೇ ಓವರ್‌ನ ಕೊನೆಯ ಎಸೆತದಲ್ಲಿ ಕೊಹ್ಲಿ ಫೈನ್ ಲೆಗ್ನಲ್ಲಿ ಕ್ಯಾಚಿತ್ತು ಔಟಾದರು. 16 ಓವರ್ಗಳಲ್ಲಿ ಆರ್ಸಿಬಿ 137/3
-
50ನೇ ಅರ್ಧಶತಕ ಸಿಡಿಸಿದ ಕೊಹ್ಲಿ
ಐಪಿಎಲ್ನಲ್ಲಿ ಕೊಹ್ಲಿ 50ನೇ ಅರ್ಧಶತಕ ಸಿಡಿಸಿದರು. 42 ಎಸೆತಗಳಲ್ಲಿ ಕೊಹ್ಲಿ ತಮ್ಮ 50 ರನ್ ಪೂರೈಸಿದ್ದಾರೆ.
-
ಮಹಿಪಾಲ್ ಸಿಕ್ಸ್
ಮಾರ್ಷ್ ಬೌಲ್ ಮಾಡಿದ 15ನೇ ಓವರ್‌ನ 2ನೇ ಎಸೆತದಲ್ಲಿ ಮಹಿಪಾಲ್ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ ಬಾರಿಸಿದರು.
-
ಕುಲ್ದೀಪ್ ದುಬಾರಿ
ಕುಲ್ದೀಪ್ ಬೌಲ್ ಮಾಡಿದ 4ನೇ ಓವರ್‌ನಲ್ಲಿ ಮಹಿಪಾಲ್ 1 ಸಿಕ್ಸರ್ ಹಾಗೂ 1 ಬೌಂಡರಿ ಹೊಡೆದರು. ಈ ಓವರ್‌ನಲ್ಲಿ 13 ರನ್ ಬಂದವು.
-
ಆರ್ಸಿಬಿ ಶತಕ ಪೂರ್ಣ
ಇಶಾಂತ್ ಬೌಲ್ ಮಾಡಿದ 13ನೇ ಓವರ್‌ನಲ್ಲಿ 1 ಬೌಂಡರಿ ಸೇರಿದಂತೆ 9 ರನ್ ಬಂದವು. ಇದರೊಂದಿಗೆ ಆರ್ಸಿಬಿ ಶತಕ ಕೂಡ ಪೂರೈಸಿತು.
-
ಮಹಿಪಾಲ್ ಸಿಕ್ಸ್
ಕುಲ್ದೀಪ್ ಬೌಲ್ ಮಾಡಿದ 12ನೇ ಓವರ್‌ನ 4ನೇ ಎಸೆತದಲ್ಲಿ ಮಹಿಪಾಲ್ 79 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು.
-
ಮ್ಯಾಕ್ಸ್‌ವೆಲ್ ಔಟ್
ಫಾಫ್ ಔಟಾದ ಬಳಿಕ ಬಂದ ಮ್ಯಾಕ್ಸ್‌ವೆಲ್ ಕೂಡ ಮೊದಲ ಎಸೆತದಲ್ಲೇ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
-
ಫಾಫ್ ಔಟ್
11ನೇ ಓವರ್‌ನ 3ನೇ ಎಸೆತವನ್ನು ಬಿಗ್ ಶಾಟ್ ಆಡಲು ಯತ್ನಿಸಿದ ಫಾಫ್ ಡೀಪ್ ಪಾಯಿಂಟ್ನಲ್ಲಿ ಕ್ಯಾಚಿತ್ತು ಔಟಾದರು.
-
ಫಾಫ್ ಫೋರ್, 9 ಓವರ್ ಅಂತ್ಯಕ್ಕೆ 72/0
ಅಕ್ಷರ್ ಬೌಲ್ ಮಾಡಿದ 9ನೇ ಓವರ್‌ನ 5ನೇ ಎಸೆತದಲ್ಲಿ ಫಾಫ್ ಭರ್ಜರಿ ಬೌಂಡರಿ ಬಾರಿಸಿದರು.
-
ಕೊಹ್ಲಿ ಬೌಂಡರಿ
ಕುಲ್ದೀಪ್ ಬೌಲ್ ಮಾಡಿದ 8ನೇ ಓವರ್‌ನ ಮೊದಲ ಎಸೆತದಲ್ಲೇ ಕೊಹ್ಲಿ ಸ್ಕ್ವೇರ್ ಲೆಗ್ನಲ್ಲಿ ಬೌಂಡರಿ ಬಾರಿಸಿದರು.
-
ಪವರ್ ಪ್ಲೇ ಅಂತ್ಯ, ಆರ್ಸಿಬಿ 51/0
ಖಲೀಲ್ ಬೌಲ್ ಮಾಡಿದ 6ನೇ ಓವರ್‌ನ 4ನೇ ಎಸೆತವನ್ನು ಫಾಫ್ ಲಾಂಗ್ ಆಫ್ನಲ್ಲಿ ಸಿಕ್ಸರ್ ಬಾರಿಸಿದರು. ಆ ನಂತರ ಮಿಡ್ ಆನ್ನಲ್ಲಿ ಬೌಂಡರಿ ಕೂಡ ಬಂತು.
-
ಫಾಫ್ ಬೌಂಡರಿ
ಮುಖೇಶ್ ಬೌಲ್ ಮಾಡಿದ 5ನೇ ಓವರ್‌ನ 2ನೇ ಎಸೆತದಲ್ಲಿ ಫಾಫ್ ಸ್ಟ್ರೈಟ್ ಹಿಟ್ ಮಾಡಿ ಬೌಂಡರಿ ಹೊಡೆದರು. ಇದಲ್ಲದೆ ಈ ಓವರ್‌ನಲ್ಲಿ ಇನ್ನೂ 2 ಬೌಂಡರಿ ಬಂದವು
-
4 ಓವರ್ ಮುಕ್ತಾಯ
ಆರ್ಸಿಬಿ ಇನ್ನಿಂಗ್ಸ್ನ 4 ಓವರ್ ಮುಗಿದಿದ್ದು ತಂಡದ ಇನ್ನಿಂಗ್ಸ್ ನಿಧಾನವಾಗಿನ ಸಾಗುತ್ತಿದೆ. 4 ಓವರ್ ಅಂತ್ಯಕ್ಕೆ 23/0
-
ಐಪಿಎಲ್ನಲ್ಲಿ 7000 ರನ್ ಪೂರೈಸಿದ ಕೊಹ್ಲಿ
ಅಕ್ಷರ್ ಬೌಲ್ ಮಾಡಿದ 2ನೇ ಓವರ್‌ನ 5ನೇ ಎಸೆತವನ್ನು ಬೌಂಡರಿಗಟ್ಟಿದ ಕೊಹ್ಲಿ, ಐಪಿಎಲ್ನಲ್ಲಿ 7000 ರನ್ ಪೂರೈಸಿದ ಮೊದಲ ಬ್ಯಾಟರ್ ಆಗಿದ್ದಾರೆ.
-
ಆರ್ಸಿಬಿ ಇನ್ನಿಂಗ್ಸ್ ಆರಂಭ
ಆರ್ಸಿಬಿ ಇನ್ನಿಂಗ್ಸ್ ಆರಂಭಿಸಿದ್ದು, ಖಲೀಲ್ ಬೌಲ್ ಮಾಡಿದ ಮೊದಲ ಓವರ್‌ನ 2ನೇ ಎಸೆತದಲ್ಲಿ ಕೊಹ್ಲಿ ಮಿಡ್ ಆಫ್ ಕಡೆ ಬೌಂಡರಿ ಹೊಡೆದರು.
-
ಆರ್ಸಿಬಿ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಕೇದಾರ್ ಜಾದವ್, ವನಿಂದು ಹಸರಂಗಾ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜಾಸ್ ಹೇಜಲ್‌ವುಡ್
-
ಡೆಲ್ಲಿ ಕ್ಯಾಪಿಟಲ್ಸ್
ಡೇವಿಡ್ ವಾರ್ನರ್, ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಷ್, ರಿಲೆ ರೋಸೋ, ಮನೀಶ್ ಪಾಂಡೆ, ಅಮನ್ ಹಕಿಮಿ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್
-
ಕೇದಾರ್ಗೆ ತಂಡದಲ್ಲಿ ಸ್ಥಾನ
ವಿಲ್ಲಿ ಬದಲು ಆರ್ಸಿಬಿ ತಂಡ ಸೇರಿಕೊಂಡಿರುವ ಕೇದಾರ್ ಜಾದವ್ ಇಂದು ಆರ್ಸಿಬಿ ಪರ ಕಣಕ್ಕಿಳಿಯುತ್ತಿದ್ದಾರೆ.
-
ಟಾಸ್ ಗೆದ್ದ ಆರ್ಸಿಬಿ ಬ್ಯಾಟಿಂಗ್ ಆಯ್ಕೆ
ಟಾಸ್ ಗೆದ್ದ ಆರ್ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
Published On - May 06,2023 7:01 PM
