DC vs RCB Highlights, IPL 2025: ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ
Delhi Capitals vs Royal Challengers Bengaluru Highlights in Kannada: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ, ಆರ್‌ಸಿಬಿ 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಐಪಿಎಲ್ 2025 ರ 46 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ, ಈ ಸೀಸನ್ನ ಏಳನೇ ಗೆಲುವು ದಾಖಲಿಸಿತು. ಅದೇ ಸಮಯದಲ್ಲಿ, ಇದು ತವರಿನಿಂದ ಹೊರಗೆ ಆರ್ಸಿಬಿಯ ಸತತ ಆರನೇ ಗೆಲುವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
LIVE NEWS & UPDATES
-
ಆರ್‌ಸಿಬಿಗೆ 6 ವಿಕೆಟ್‌ಗಳ ಜಯ
163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 18.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಜಯದ ನಗೆಬೀರಿತು. ಕೃನಾಲ್ ಪಾಂಡ್ಯ 47 ಎಸೆತಗಳಲ್ಲಿ 73 ರನ್ ಗಳಿಸಿ ಅಜೇಯರಾಗುಳಿದರು. ಅದೇ ಸಮಯದಲ್ಲಿ ವಿರಾಟ್ ಕೊಹ್ಲಿ ಕೂಡ 51 ರನ್ ಗಳ ಕೊಡುಗೆ ನೀಡಿದರು. ಟಿಮ್ ಡೇವಿಡ್ 5 ಎಸೆತಗಳಲ್ಲಿ ಅಜೇಯ 19 ರನ್ ಗಳಿಸುವ ಮೂಲಕ ಪಂದ್ಯವನ್ನು ಮುಗಿಸಿದರು.
-
ಕೊಹ್ಲಿ ಔಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡವು 145 ರನ್‌ಗಳಿಗೆ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದರು.
-
-
ವಿರಾಟ್ ಅರ್ಧಶತಕ
ವಿರಾಟ್ ಕೊಹ್ಲಿ ಕೂಡ ತಮ್ಮ ಅರ್ಧಶತಕವನ್ನು ಪೂರೈಸಿದ್ದಾರೆ. ಅವರು 45 ಎಸೆತಗಳನ್ನು ಎದುರಿಸಿ 50 ರನ್ ಗಳಿಸಿದರು. ಕೃನಾಲ್ ಪಾಂಡ್ಯ ಕೂಡ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇಬ್ಬರು ಆಟಗಾರರ ನಡುವೆ ಉತ್ತಮ ಪಾಲುದಾರಿಕೆ ಕಂಡುಬರುತ್ತಿದೆ.
-
24 ಎಸೆತಗಳಲ್ಲಿ 38 ರನ್‌ಗಳು ಬೇಕು
ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದೆ. ಈಗ ಆರ್‌ಸಿಬಿಗೆ 24 ಎಸೆತಗಳಲ್ಲಿ 38 ರನ್‌ಗಳ ಅವಶ್ಯಕತೆಯಿದೆ. ಕೃನಾಲ್ ಪಾಂಡ್ಯ 56 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 49 ರನ್ ಗಳಿಸಿದ್ದಾರೆ.
-
ಕೃನಾಲ್ ಪಾಂಡ್ಯ ಅರ್ಧಶತಕ
ಕೃನಾಲ್ ಪಾಂಡ್ಯ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೃನಾಲ್ ಪಾಂಡ್ಯ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಅರ್ಧಶತಕ ಗಳಿಸಿದ್ದಾರೆ. ಇದರಿಂದಾಗಿ ಆರ್‌ಸಿಬಿ 15 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 114 ರನ್ ಗಳಿಸಿದೆ.
-
-
100 ರನ್ ದಾಟಿದ ಆರ್‌ಸಿಬಿ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಓವರ್‌ಗಳಿಗೆ 105 ರನ್ ಗಳಿಸಿದೆ. ಈಗ ಗೆಲ್ಲಲು 36 ಎಸೆತಗಳಲ್ಲಿ 58 ರನ್‌ಗಳು ಬೇಕಾಗಿವೆ. ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೃನಾಲ್ ಅರ್ಧಶತಕಕ್ಕೆ ಕೇವಲ 3 ರನ್‌ಗಳ ದೂರದಲ್ಲಿದ್ದಾರೆ.
-
ವಿರಾಟ್-ಕೃನಾಲ್ ನಡುವೆ ಉತ್ತಮ ಜೊತೆಯಾಟ
ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ನಡುವೆ ಉತ್ತಮ ಜೊತೆಯಾಟ ಕಂಡುಬರುತ್ತಿದೆ. 13 ಓವರ್‌ಗಳಲ್ಲಿ ಆರ್‌ಸಿಬಿ 3 ವಿಕೆಟ್‌ಗಳ ನಷ್ಟಕ್ಕೆ 93 ರನ್ ಗಳಿಸಿದೆ. ಕೃನಾಲ್ 39 ರನ್ ಮತ್ತು ವಿರಾಟ್ 35 ರನ್ ಗಳಿಸಿ ಆಡುತ್ತಿದ್ದಾರೆ.
-
11 ಓವರ್‌ಗಳ ನಂತರ ಆರ್‌ಸಿಬಿ ಸ್ಕೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ.
-
50 ರನ್ ದಾಟಿದ ಆರ್‌ಸಿಬಿ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 55 ರನ್ ಗಳಿಸಿತು. ವಿರಾಟ್ ಕೊಹ್ಲಿ 23 ರನ್ ಮತ್ತು ಕೃನಾಲ್ ಪಾಂಡ್ಯ 13 ರನ್ ಗಳಿಸಿ ಆಡುತ್ತಿದ್ದಾರೆ. ಆರ್‌ಸಿಬಿ ಗೆಲುವಿಗೆ ಈಗ 67 ಎಸೆತಗಳಲ್ಲಿ 108 ರನ್‌ಗಳ ಅವಶ್ಯಕತೆಯಿದೆ.
-
ಆರ್‌ಸಿಬಿ ಪವರ್‌ಪ್ಲೇ ಮುಗಿದಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪವರ್‌ಪ್ಲೇ ಮುಗಿದಿದೆ. ಆರ್‌ಸಿಬಿ ತಂಡವು ಮೊದಲ 6 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಕೇವಲ 35 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ವಿರಾಟ್ ಕೊಹ್ಲಿ ಇನ್ನೂ ಕ್ರೀಸ್‌ನಲ್ಲಿದ್ದಾರೆ ಎಂಬುದು ಒಳ್ಳೆಯ ವಿಷಯ.
-
ಪಾಟಿದಾರ್ ರನ್ ಔಟ್
ಆರ್‌ಸಿಬಿ 26 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. ನಾಯಕ ರಜತ್ ಪಾಟಿದಾರ್ ರನ್ ಔಟ್ ಆಗಿದ್ದಾರೆ. 162 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಆರಂಭವು ತುಂಬಾ ಕಳಪೆಯಾಗಿತ್ತು.
-
ಎರಡನೇ ವಿಕೆಟ್ ಪತನ
ಅಕ್ಷರ್ ಪಟೇಲ್ ಬೆಂಗಳೂರಿಗೆ ಡಬಲ್ ಹೊಡೆತ ನೀಡಿದ್ದಾರೆ. ಅದೇ ಓವರ್‌ನಲ್ಲಿ ದೆಹಲಿ ನಾಯಕ ಜಾಕೋಬ್ ಬೆಥೆಲ್ ಮತ್ತು ದೇವದತ್ ಪಡಿಕ್ಕಲ್ ಅವರನ್ನು ಪೆವಿಲಿಯನ್‌ಗೆ ವಾಪಸ್ ಕಳುಹಿಸಿದರು.
-
ಮೊದಲ ವಿಕೆಟ್ ಪತನ
ಬೆಂಗಳೂರು ಇನ್ನಿಂಗ್ಸ್‌ನ ಮೊದಲ ವಿಕೆಟ್ ಪತನಗೊಂಡಿದೆ. ಮೂರನೇ ಓವರ್‌ನಲ್ಲಿ ನಾಯಕ ಅಕ್ಷರ್ ಪಟೇಲ್ ಬೆಂಗಳೂರಿನ ಹೊಸ ಆರಂಭಿಕ ಆಟಗಾರ ಜಾಕೋಬ್ ಬೆಥೆಲ್ ಅವರ ವಿಕೆಟ್ ಪಡೆದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಬೆಥೆಲ್ 6 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು.
-
ಚೇಸ್ ಆರಂಭಿಸಿದ ಆರ್‌ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರಿ ಬೆನ್ನಟ್ಟಲು ಆರಂಭಿಸಿದೆ. ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ, ಈ ಪಂದ್ಯದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡುತ್ತಿರುವ ಯುವ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ ಅವರೊಂದಿಗೆ ಆರಂಭಿಕರಾಗಿ ಆಡಲಿದ್ದಾರೆ. ಬೆಂಗಳೂರು ಗೆಲುವಿಗೆ 163 ರನ್‌ಗಳ ಅವಶ್ಯಕತೆಯಿದೆ.
-
162 ರನ್ ಗುರಿ
ದೆಹಲಿಯ ಇನ್ನಿಂಗ್ಸ್ ಮುಗಿದಿದೆ. 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿದೆ. ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಅದ್ಭುತ ಬೌಲಿಂಗ್ ಮಾಡಿದರು. ಭುವನೇಶ್ವರ್ 3 ವಿಕೆಟ್ ಮತ್ತು ಹ್ಯಾಝೆಲ್‌ವುಡ್ 2 ವಿಕೆಟ್ ಪಡೆದರು. ಮತ್ತೊಂದೆಡೆ, ದೆಹಲಿ ಪರ ಕೆಎಲ್ ರಾಹುಲ್ ಅತಿ ಹೆಚ್ಚು 41 ರನ್ ಗಳಿಸಿದರು.
-
ಕ್ಯಾಪಿಟಲ್ಸ್‌ಗೆ 7ನೇ ಹೊಡೆತ
ಡೆಲ್ಲಿ ಕ್ಯಾಪಿಟಲ್ಸ್ 158 ರನ್‌ಗಳಿಗೆ 7ನೇ ವಿಕೆಟ್ ಕಳೆದುಕೊಂಡಿತು. ವಿಪ್ರರಾಜ್ ನಿಗಮ್ ರನ್ ಔಟ್ ಆದರು. ದೆಹಲಿ 158 ರನ್‌ಗಳಿಗೆ ಈ ವಿಕೆಟ್ ಕಳೆದುಕೊಂಡಿದೆ.
-
150 ರನ್ ದಾಟಿದ ಡೆಲ್ಲಿ ತಂಡ
ಡೆಲ್ಲಿ ತಂಡ 18.4 ಓವರ್‌ಗಳಲ್ಲಿ 150 ರನ್‌ಗಳ ಗಡಿ ದಾಟಿತು. ಟ್ರಿಸ್ಟಾನ್ ಸ್ಟಬ್ಸ್ 12 ಎಸೆತಗಳಲ್ಲಿ 25 ರನ್ ಮತ್ತು ವಿಪ್ರರಾಜ್ ನಿಗಮ್ 12 ರನ್ ಗಳಿಸುವ ಮೂಲಕ ಅವರಿಗೆ ಬೆಂಬಲ ನೀಡುತ್ತಿದ್ದಾರೆ.
-
6ನೇ ವಿಕೆಟ್ ಪತನ
120 ರನ್‌ಗಳಿಗೆ ದೆಹಲಿ ತನ್ನ ಆರನೇ ವಿಕೆಟ್ ಕಳೆದುಕೊಂಡಿದೆ. ಅಶುತೋಷ್ ಶರ್ಮಾ 3 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು.
-
ರಾಹುಲ್ ಕೂಡ ಔಟ್
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಕೆಎಲ್ ರಾಹುಲ್ 39 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರು
-
16 ಓವರ್ ಪೂರ್ಣ
ಡೆಲ್ಲಿ ಕ್ಯಾಪಿಟಲ್ಸ್ 16 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದೆ. ಕೆಎಲ್ ರಾಹುಲ್ 41 ರನ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ 5 ರನ್ ಗಳಿಸಿ ಆಡುತ್ತಿದ್ದಾರೆ. ಇಬ್ಬರೂ ಆಟಗಾರರು ದೊಡ್ಡ ಹೊಡೆತಗಳನ್ನು ಆಡಲು ಕಷ್ಟಪಡುತ್ತಿದ್ದಾರೆ.
-
ಅಕ್ಷರ್ ಪಟೇಲ್ ಔಟ್
ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಅಕ್ಷರ್ ಪಟೇಲ್ 13 ಎಸೆತಗಳಲ್ಲಿ 15 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ಡೆಲ್ಲಿ 102 ರನ್‌ಗಳಿಗೆ ಈ ವಿಕೆಟ್ ಕಳೆದುಕೊಂಡಿತು.
-
100 ರನ್ ದಾಟಿದ ಡೆಲ್ಲಿ
ಡೆಲ್ಲಿ ತಂಡ 13.1 ಓವರ್‌ಗಳಲ್ಲಿ 100 ರನ್‌ಗಳ ಗಡಿ ತಲುಪಿತು. ಕೆ.ಎಲ್. ರಾಹುಲ್ ಮತ್ತು ಅಕ್ಷರ್ ಪಟೇಲ್ ತಂಡದ ಸ್ಕೋರ್ ಹೆಚ್ಚಿಸುತ್ತಿದ್ದಾರೆ. ಇಬ್ಬರೂ ಆಟಗಾರರು ಪ್ರಸ್ತುತ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ.
-
ಫಾಫ್ ಔಟ್
ಡೆಲ್ಲಿ ಕ್ಯಾಪಿಟಲ್ಸ್ 72 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. ಫಾಫ್ ಡು ಪ್ಲೆಸಿಸ್ 26 ಎಸೆತಗಳಲ್ಲಿ 22 ರನ್ ಗಳಿಸಿ ನಿಧಾನಗತಿಯ ಇನ್ನಿಂಗ್ಸ್ ಆಡಿದ ನಂತರ ಔಟಾದರು. ಕೃನಾಲ್ ಪಾಂಡ್ಯ ಆರ್‌ಸಿಬಿಗೆ ಈ ಯಶಸ್ಸನ್ನು ನೀಡಿದ್ದಾರೆ.
-
8 ಓವರ್‌ಗಳ ನಂತರ ದೆಹಲಿ ಸ್ಕೋರ್
ಡೆಲ್ಲಿ ತಂಡ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ. ಫಾಫ್ ಡು ಪ್ಲೆಸಿಸ್ 20 ರನ್ ಮತ್ತು ಕೆಎಲ್ ರಾಹುಲ್ 9 ರನ್ ಗಳಿಸುವ ಮೂಲಕ ತಂಡವನ್ನು ನಿಭಾಯಿಸುತ್ತಿದ್ದಾರೆ.
-
ಪವರ್ ಪ್ಲೇ ನಂತರ ಡೆಲ್ಲಿ ಸ್ಕೋರ್
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನ ಪವರ್‌ಪ್ಲೇ ಮುಗಿದಿದೆ. ಮೊದಲ 6 ಓವರ್‌ಗಳಲ್ಲಿ ಅವರು 2 ವಿಕೆಟ್ ಕಳೆದುಕೊಂಡು 52 ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ. ಫಾಫ್ ಡು ಪ್ಲೆಸಿಸ್ 14 ರನ್ ಮತ್ತು ಕೆಎಲ್ ರಾಹುಲ್ 4 ರನ್ ಗಳಿಸಿ ಆಡುತ್ತಿದ್ದಾರೆ.
-
ಕರುಣ್ ನಾಯರ್ ಔಟ್
ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ವಿಕೆಟ್ ಕಳೆದುಕೊಂಡಿದೆ. ಕರುಣ್ ನಾಯರ್ 4 ಎಸೆತಗಳಲ್ಲಿ 4 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ಈ ವಿಕೆಟ್ ಅನ್ನು ಯಶ್ ದಯಾಳ್ ಪಡೆದಿದ್ದಾರೆ.
-
ದೆಹಲಿಗೆ ಮೊದಲ ಆಘಾತ
ಡೆಲ್ಲಿ ಕ್ಯಾಪಿಟಲ್ಸ್ 33 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಪೊರೆಲ್ 28 ರನ್ ಗಳಿಸಿದ ನಂತರ ಜೋಶ್ ಹ್ಯಾಜಲ್‌ವುಡ್‌ಗೆ ಬಲಿಯಾದರು.
-
ಡೆಲ್ಲಿ ಬ್ಯಾಟಿಂಗ್ ಆರಂಭ
ದೆಹಲಿಯ ಇನ್ನಿಂಗ್ಸ್ ಆರಂಭವಾಗಿದೆ. ಅಭಿಷೇಕ್ ಪೊರೆಲ್ ಮತ್ತು ಫಾಫ್ ಡು ಪ್ಲೆಸಿಸ್ ಕ್ರೀಸ್‌ನಲ್ಲಿದ್ದಾರೆ. ಮೊದಲ ಓವರ್‌ನಲ್ಲಿ ಭುವಿ 8 ರನ್ ನೀಡಿದರು.
-
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಲ್.
ಇಂಪ್ಯಾಕ್ಟ್ ಪ್ಲೇಯರ್ಸ್: ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಖ್ ದಾರ್ ಸಲಾಂ, ಮನೋಜ್ ಭಾಂಡಗೆ, ಸ್ವಪ್ನಿಲ್ ಸಿಂಗ್.
-
ಡೆಲ್ಲಿ ತಂಡ
ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ದುಷ್ಮಂತ ಚಮೀರಾ, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.
ಇಂಪ್ಯಾಕ್ಟ್ ಪ್ಲೇಯರ್ಸ್: ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಜೇಕ್ ಫ್ರೇಸರ್ ಮೆಕ್‌ಗುರ್ಕ್, ಮಾಧವ್ ತಿವಾರಿ, ವಿಜಯ್.
-
ಟಾಸ್ ಗೆದ್ದ ಆರ್‌ಸಿಬಿ
ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - Apr 27,2025 7:01 PM