IND vs NZ: ಡಿಡಿ ಸ್ಪೋರ್ಟ್ಸ್ನಲ್ಲಿ ಭಾರತ- ಕಿವೀಸ್ ಟಿ20, ಏಕದಿನ ಸರಣಿಯ ನೇರ ಪ್ರಸಾರ
IND vs NZ: ಉಭಯ ದೇಶಗಳ ನಡುವಿನ ಟಿ20 ಮತ್ತು ಏಕದಿನ ಸರಣಿಯ ಪ್ರಸಾರದ ಹಕ್ಕನ್ನು ಡಿಡಿ ಸ್ಪೋರ್ಟ್ಸ್ ಪಡೆದುಕೊಂಡಿದೆ. ಸ್ವತಃ ಡಿಡಿ ಸ್ಪೋರ್ಟ್ಸ್ ಬುಧವಾರ ಸಂಜೆ ತನ್ನ ಟ್ವಿಟರ್ ಖಾತೆಯ ಮೂಲಕ ಇದನ್ನು ಖಚಿತಪಡಿಸಿದೆ.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದ ಭಾರತ ಮತ್ತು ನ್ಯೂಜಿಲೆಂಡ್ (India and New Zealand) ತಂಡಗಳು ಟಿ20 ಸರಣಿಯಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಈ ಎರಡು ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ. ವಿಶ್ವಕಪ್‌ನ ಸೆಮಿಫೈನಲ್‌ನಿಂದಲೇ ನಿರ್ಗಮಿಸಿರುವ ಈ ಎರಡು ತಂಡಗಳು ಈ ಟಿ20 ಸರಣಿಯನ್ನು ವಶಪಡಿಸಿಕೊಂಡು ಕೊಂಚ ನೆಮ್ಮದಿಯನ್ನು ಪಡೆಯುವ ಬಯಕೆಯಲ್ಲಿವೆ. ಇದೆಲ್ಲವುಗಳ ನಡುವೆ ಉಭಯ ದೇಶಗಳ ನಡುವಿನ ಟಿ20 ಮತ್ತು ಏಕದಿನ ಸರಣಿಯ ಪ್ರಸಾರದ ಹಕ್ಕನ್ನು ಡಿಡಿ ಸ್ಪೋರ್ಟ್ಸ್ (DD Sports) ಪಡೆದುಕೊಂಡಿದೆ. ಸ್ವತಃ ಡಿಡಿ ಸ್ಪೋರ್ಟ್ಸ್ ಬುಧವಾರ ಸಂಜೆ ತನ್ನ ಟ್ವಿಟರ್ ಖಾತೆಯ ಮೂಲಕ ಇದನ್ನು ಖಚಿತಪಡಿಸಿದೆ.
ಈ ಹಿಂದೆ ಭಾರತವು ಈ ವರ್ಷ ಜುಲೈ-ಆಗಸ್ಟ್ ತಿಂಗಳುಗಳಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತು. ಅಲ್ಲಿ 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಿತ್ತು. ಈ ಎರಡು ಸರಣಿಗಳನ್ನು ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. ಆ ಸರಣಿಗಳನ್ನು ಸಹ ಭಾರತದಲ್ಲಿ ಡಿಡಿ ಸ್ಪೋರ್ಟ್ಸ್ ನೇರ ಪ್ರಸಾರ ಮಾಡಿತ್ತು. ಹಾಗೆಯೇ ವೆಸ್ಟ್ ಇಂಡೀಸ್‌ನಲ್ಲಿ ಫ್ಯಾನ್‌ಕೋಡ್ ನೇರ ಪ್ರಸಾರದ ಜವಬ್ದಾರಿವಹಿಸಿಕೊಂಡಿತ್ತು. ಆದರೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಡಿಜಿಟಲ್ ಹಕ್ಕುಗಳನ್ನು ಅಮೇಜಾನ್ ಪ್ರೈಂ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ನ್ಯೂಜಿಲೆಂಡ್‌ಗೆ ಭಾರತ ಪ್ರವಾಸ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ (ನವೆಂಬರ್ 18) ನಡೆಯಲಿದೆ. ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ನಿರಾಸೆ ಕಂಡಿರುವ ಉಭಯ ತಂಡಗಳು ಹೇಗಾದರೂ ಮಾಡಿ ಈ ಸರಣಿ ಕಪ್ ಗೆಲ್ಲುವ ಹಂಬಲದಲ್ಲಿವೆ. ಈ ಪ್ರವಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಇದನ್ನೂ ಓದಿ: India vs New Zealand: ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯ ಅನುಮಾನ: ಇಲ್ಲಿದೆ ವೆಲ್ಲಿಂಗ್ಟನ್ ಹವಾಮಾನ ವರದಿ
ಟಿ20 ವೇಳಾಪಟ್ಟಿ:
ಮೊದಲ ಟಿ20 ಪಂದ್ಯ- ವೆಲ್ಲಿಂಗ್ಟನ್- ನವೆಂಬರ್ 18
ಎರಡನೇ ಟಿ20 ಪಂದ್ಯ- ಟೌರಂಗ- ನವೆಂಬರ್ 20
ಮೂರನೇ ಟಿ20 ಪಂದ್ಯ- ನೇಪಿಯರ್- ನವೆಂಬರ್ 22
ODI ವೇಳಾಪಟ್ಟಿ:
ಮೊದಲ ಏಕದಿನ ಪಂದ್ಯ- ಆಕ್ಲೆಂಡ್- ನವೆಂಬರ್ 25
ಎರಡನೇ ಏಕದಿನ ಪಂದ್ಯ- -ಹ್ಯಾಮಿಲ್ಟನ್- ನವೆಂಬರ್ 27
ಮೂರನೇ ಏಕದಿನ ಪಂದ್ಯ- ಕ್ರೈಸ್ಟ್ ಚರ್ಚ್- ನವೆಂಬರ್ 30
ತಂಡಗಳು:
ನ್ಯೂಜಿಲೆಂಡ್ ಟಿ20 ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಡೇರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ,
ನ್ಯೂಜಿಲೆಂಡ್ ಏಕದಿನ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ
ಭಾರತ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್
ಭಾರತ ಏಕದಿನ ತಂಡ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಹಾಲ್, ಅರ್ಶ್ದೀಪ್ ಸಿಂಗ್, ದೀಪಕ್ ಚಹಾರ್, ಕುಲ್ದೀಪ್ ಸೇನ್, ಉಮ್ರಾನ್ ಮಲಿಕ್
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Thu, 17 November 22