AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿ ನಿವೃತ್ತಿ ಹೊಂದುವಂತೆ ಒತ್ತಾಯಿಸಲಾಗಿತ್ತೇ? ಕೋಚ್ ಅಚ್ಚರಿಯ ಹೇಳಿಕೆ

Virat Kohli Test retirement:  ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ  210 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 16608 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 9230 ರನ್ ಕಲೆಹಾಕಿದ್ದಾರೆ. ಇದರ ನಡುವೆ 30 ಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದಾರೆ.

ವಿರಾಟ್ ಕೊಹ್ಲಿ ನಿವೃತ್ತಿ ಹೊಂದುವಂತೆ ಒತ್ತಾಯಿಸಲಾಗಿತ್ತೇ? ಕೋಚ್ ಅಚ್ಚರಿಯ ಹೇಳಿಕೆ
Virat Kohli
ಝಾಹಿರ್ ಯೂಸುಫ್
|

Updated on: May 13, 2025 | 7:31 AM

Share

ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ (Virat Kohli) ಯುಗಾಂತ್ಯವಾಗಿದೆ. ಈ ಯುಗಾಂತ್ಯದ ಬೆನ್ನಲ್ಲೇ ದೆಹಲಿ ರಣಜಿ ತಂಡದ ಕೋಚ್ ಸರಣ್‌ದೀಪ್ ಸಿಂಗ್ ನೀಡಿರುವ ಹೇಳಿಕೆಯು ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ವಿರಾಟ್ ಕೊಹ್ಲಿ ತಿಂಗಳುಗಳ ಹಿಂದೆ ಇಂಗ್ಲೆಂಡ್​ನಲ್ಲಿ ಚೆನ್ನಾಗಿ ಆಡಬೇಕೆಂದು ಕೋಚ್ ಜೊತೆ ಚರ್ಚಿಸಿದ್ದರು. ಆದರೆ ಇದೀಗ ಸರಣಿ ಆರಂಭಕ್ಕೆ ವಾರಗಳಿರುವಾಗ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ದೆಹಲಿ ತಂಡದ ಕೋಚ್ ಸರಣ್‌ದೀಪ್ ಸಿಂಗ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ವಿರಾಟ್ ಕೊಹ್ಲಿ ದೆಹಲಿ ಪರ ರಣಜಿ ಪಂದ್ಯವಾಡಿದ್ದರು. ಈ ವೇಳೆ ಅವರು ರೆಡ್ ಬಾಲ್ ಕ್ರಿಕೆಟ್​ನಲ್ಲಿ ಮತ್ತಷ್ಟು ಸಾಧನೆ ಮಾಡುವ ಇಂಗಿತವನ್ನು ಸಹ ವ್ಯಕ್ತಪಡಿಸಿದ್ದರು.

ಅಲ್ಲದೆ ಟೆಸ್ಟ್ ಕ್ರಿಕೆಟ್​ನಿಂದ ಹಿಂದೆ ಸರಿಯುವ ಯಾವುದೇ ಸೂಚನೆಯನ್ನು ಸಹ ನೀಡಿರಲಿಲ್ಲ. ಅವರು ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿದ್ದರು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕೌಂಟಿ ಕ್ರಿಕೆಟ್ ಪಂದ್ಯಗಳನ್ನು ಆಡುತ್ತೀರಾ ಎಂದು ನಾನು ಅವರನ್ನು ಕೇಳಿದ್ದೆ?. ಅದಕ್ಕೆ ಇಲ್ಲ, ನಾನು ಭಾರತ-ಎ ಪಂದ್ಯಗಳನ್ನು ಆಡುತ್ತೇನೆ ಎಂದಿದ್ದರು.

ಇದನ್ನೂ ಓದಿ
Image
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
Image
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
Image
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
Image
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಅಂದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧತೆ ಮಾಡಿಕೊಳ್ಳಲು ಅವರು ಭಾರತ ಎ ತಂಡದ ವಿರುದ್ಧ 2 ಪಂದ್ಯಗಳನ್ನು ಆಡಲಿದ್ದೇನೆ ಎಂದು ತಿಳಿಸಿದ್ದರು. ಅಷ್ಟೇ ಅಲ್ಲದೆ, ಈ ಬಾರಿ ಇಂಗ್ಲೆಂಡ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವಿರಾಟ್ ಕೊಹ್ಲಿ ವ್ಯಕ್ತಪಡಿಸಿದ್ದರು ಎಂದು ಸರಣ್​ದೀಪ್ ಸಿಂಗ್ ಹೇಳಿದ್ದಾರೆ.

ಈ ಬಾರಿಯೂ ಇಂಗ್ಲೆಂಡ್‌ ಸರಣಿಯಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ರನ್ ಗಳಿಸಲು ಬಯಸಿದ್ದರು. 2018 ರಲ್ಲಿ 3-4 ಶತಕಗಳನ್ನು ಬಾರಿಸಿದ್ದೆ. ಅದನ್ನೇ ಪುನರಾವರ್ತಿಸುವುದಾಗಿ ಕೊಹ್ಲಿ ನನ್ನ ಜೊತೆ ಹೇಳಿದ್ದರು. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವುದನ್ನು ಅವರು ಖಚಿತಪಡಿಸಿದ್ದರು. ಆದರೆ ಇದೀಗ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ ಎಂದು ಸರಣ್​ದೀಪ್ ಸಿಂಗ್ ಹೇಳಿದ್ದಾರೆ.

ಇತ್ತ ವಿರಾಟ್ ಕೊಹ್ಲಿಗೆ ಆಪ್ತರಾಗಿರುವ ದೆಹಲಿ ಕೋಚ್ ನೀಡಿರುವ ಹೇಳಿಕೆಯು ಹೊಸ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಇಂಗ್ಲೆಂಡ್ ಸರಣಿಯಲ್ಲಿ ಚೆನ್ನಾಗಿ ಆಡಬೇಕೆಂದು ಬಯಸಿದ್ದ ಕೊಹ್ಲಿಯಿಂದ ಒತ್ತಾಯ ಪೂರ್ವಕ ನಿವೃತ್ತಿ ಘೋಷಿಸುವಂತೆ ಮಾಡಿದ್ರಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇದನ್ನೂ ಓದಿ: IPL 2025: 3 ಬಿಗ್ ಮ್ಯಾಚಸ್: RCB ತಂಡದ ಹೊಸ ವೇಳಾಪಟ್ಟಿ ಇಲ್ಲಿದೆ

ಒಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ 14 ವರ್ಷಗಳ ಕಾಲ ಕಿಂಗ್ ಆಗಿ ಮೆರೆದಿದ್ದ ವಿರಾಟ್ ಕೊಹ್ಲಿ ಬೀಳ್ಕೊಡುಗೆಯ ಪಂದ್ಯವಿಲ್ಲದೇ ತನ್ನ ದೀರ್ಘಾವಧಿ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ. ಇಂತಹದೊಂದು ಅಂತ್ಯ ಅವಶ್ಯಕತೆಯಿತ್ತಾ ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಸರಣ್​ದೀಪ್ ಸಿಂಗ್ ನೀಡಿರುವ ಹೇಳಿಕೆಯು ಉತ್ತರವಾಗಿ ನಿಂತಿದೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ