IPL 2022: ಎಲ್ಲಾ ಆಟಗಾರರ ಕೋವಿಡ್ ಟೆಸ್ಟ್ ವರದಿ ಪ್ರಕಟ: ಒಬ್ಬ ಆಟಗಾರ ಔಟ್

Delhi Capitals: ಡೆಲ್ಲಿ ಕ್ಯಾಪಿಟಲ್ಸ್ (DC)​: ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಕೆಎಸ್ ಭರತ್, ಮನದೀಪ್ ಸಿಂಗ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್,

IPL 2022: ಎಲ್ಲಾ ಆಟಗಾರರ ಕೋವಿಡ್ ಟೆಸ್ಟ್ ವರದಿ ಪ್ರಕಟ: ಒಬ್ಬ ಆಟಗಾರ ಔಟ್
IPL 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: Apr 18, 2022 | 7:55 PM

ಐಪಿಎಲ್ ಸೀಸನ್ 15 ಗೆ ಕೊರೋನಾತಂಕ ಎದುರಾಗಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಸೋಂಕು ಇರುವುದು ಪತ್ತೆಯಾಗಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಲ್ಲಾ ಆಟಗಾರರನ್ನು ಕೊರೋನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು. ರ್ಯಾಪಿಡ್​ ಟೆಸ್ಟ್​ನಲ್ಲಿ ಡೆಲ್ಲಿ ತಂಡದ ಆಲ್​​ರೌಂಡರ್ ಮಿಚೆಲ್ ಮಾರ್ಷ್​ ಅವರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಇದಾಗ್ಯೂ ಉಳಿದ ಎಲ್ಲಾ ಆಟಗಾರರ ವರದಿ ನೆಗೆಟಿವ್ ಬಂದಿದ್ದು, ಹೀಗಾಗಿ ಡೆಲ್ಲಿ ತಂಡದ ಆತಂಕ ದೂರವಾಗಿದೆ. ಕೊರೋನಾ ಸೋಂಕಿಗೆ ಒಳಗಾಗಿರುವ ಫಿಸಿಯೋ ಫಾರ್ಹಾರ್ಟ್ ಐಸೊಲೇಟ್​ನಲ್ಲಿದ್ದಾರೆ. ಇದೀಗ ಮಿಚೆಲ್ ಮಾರ್ಷ್ ಅವರನ್ನು ಕೂಡ ಪತ್ಯೇಕವಾಗಿರಲಿಸಲಾಗಿದೆ.

ಸದ್ಯ ಮಿಚೆಲ್ ಮಾರ್ಷ್ ಅವರ ಆರ್‌ಟಿ-ಪಿಸಿಆರ್ ವರದಿಯುವ ಪಾಸಿಟಿವ್ ಇದ್ದು, ಹೀಗಾಗಿ ಒಂದು ವಾರಗಳ ಕಾಲ ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ. ಮಾರ್ಷ್ ಹೊರತುಪಡಿಸಿ, ಎಲ್ಲಾ ಇತರ ಸದಸ್ಯರು ಆರ್‌ಟಿ-ಪಿಸಿಆರ್‌ಗೆ ನೆಗೆಟಿವ್ ಆಗಿರುವ ಕಾರಣ ಬುಧವಾರ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್​ ನಡುವಿನ ಪಂದ್ಯವು ನಿಗದಿಯಂತೆ ಜರುಗಲಿದೆ.

ಕೋವಿಡ್ ಬಗ್ಗೆ ಬಿಸಿಸಿಐ ಪ್ರೋಟೋಕಾಲ್ ಏನು? BCCI ಯ ಟೆಸ್ಟಿಂಗ್ ಪ್ರೋಟೋಕಾಲ್ ಪ್ರಕಾರ, IPL ತಂಡದ ಪ್ರತಿಯೊಬ್ಬ ಸದಸ್ಯರನ್ನು ತಂಡದ ಬಬಲ್‌ನಲ್ಲಿ ಪ್ರತಿ ಐದನೇ ದಿನಕ್ಕೆ ಟೆಸ್ಟ್ ಮಾಡಲಾಗುತ್ತದೆ. ಒಂದು ವೇಳೆ ಪಾಸಿಟಿವ್ ಕಂಡು ಬಂದರೆ ಆ ಆಟಗಾರನನ್ನು ಅಥವಾ ಸಿಬ್ಬಂದಿಯನ್ನು ಶೀಘ್ರದಲ್ಲೇ ಪತ್ಯೇಕವಾಗಿ ಇರಿಸಲಾಗುತ್ತದೆ. ಅಲ್ಲದೆ ಒಂದು ವಾರದ ಕ್ವಾರಂಟೈನ್ ಬಳಿಕವಷ್ಟೇ ಮತ್ತೆ ತಂಡವನ್ನು ಕೂಡಿಕೊಳ್ಳಬಹುದು. ಅಂದರೆ ಕ್ವಾರಂಟೈನ್ ವೇಳೆ ಕೊರೋನಾ ಟೆಸ್ಟ್​ಗಳನ್ನು ಮಾಡಲಾಗುತ್ತದೆ. ಈ ವೇಳೆ ನೆಗೆಟಿವ್ ಇದ್ದರೆ ಮಾತ್ರ ತಂಡವನ್ನು ಸೇರಿಕೊಳ್ಳಲು ಅವಕಾಶ ಇರಲಿದೆ.

ಡೆಲ್ಲಿ ಕ್ಯಾಪಿಟಲ್ಸ್ (DC)​: ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಕೆಎಸ್ ಭರತ್, ಮನದೀಪ್ ಸಿಂಗ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಕಮಲೇಶ್ ನಾಗರಕೋಟಿ, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಅಶ್ವಿನ್ ಹೆಬ್ಬಾರ್, ಅಶ್ವಿನ್ ಹೆಬ್ಬಾರ್ , ಯಶ್ ಧುಲ್, ವಿಕ್ಕಿ ಓಸ್ಟ್ವಾಲ್, ಲುಂಗಿ ಎನ್‌ಗಿಡಿ, ಟಿಮ್ ಸೀಫರ್ಟ್, ಪ್ರವೀಣ್ ದುಬೆ, ರೋವ್‌ಮನ್ ಪೊವೆಲ್, ಲಲಿತ್ ಯಾದವ್.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ