DCW vs UPW Live Score, WPL 2023: ಡಿವೈ ಪಾಟೀಲ್ ಸ್ಟೇಡಿಯಂ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ (UP Warriorz) ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಯಕಿ ಮೆಗ್ ಲ್ಯಾನಿಂಗ್ ಅವರ 70 ರನ್ಗಳ ನೆರವಿನೊಂದಿಗೆ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಕಲೆಹಾಕಿತು. 212 ರನ್ಗಳ ಕಠಿಣ ಗುರಿ ಪಡೆದ ಯುಪಿ ವಾರಿಯರ್ಸ್ ಪರ ತಹ್ಲಿಯಾ ಮೆಗ್ಕ್ರಾಥ್ ಅಜೇಯ 90 ರನ್ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. ಅಂತಿಮವಾಗಿ ಯುಪಿ ವಾರಿಯರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 169 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 42 ರನ್ಗಳಿಂದ ಜಯಭೇರಿ ಬಾರಿಸಿತು.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರೊಡ್ರಿಗಸ್, ಆಲಿಸ್ ಕ್ಯಾಪ್ಸಿ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ಟಾರಾ ನೋರಿಸ್.
ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರೊಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ಟಾರಾ ನೋರಿಸ್, ಜಸಿಯಾ ಅಖ್ತರ್, ಮಿನ್ನು ಮಣಿ, ಅಪರ್ಣಾ ಮೊಂಡಲ್, ಟೈಟಾಸ್ ಸಾಧು, ಸ್ನೇಹಾ ದೀಪ್ತಿ, ಲಾರಾ ಹ್ಯಾರಿಸ್, ಪೂನಂ ಯಾದವ್
ಯುಪಿ ವಾರಿಯರ್ಸ್ ತಂಡ: ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಲಬ್ಯುರೆನಿಮ್ ಇಸ್ಮಾಯಿಲ್, ಲಬ್ಯುರೆನಿಮ್ ಬೆಲೆಕ್ಸ್ , ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ರಿ.
ಯುಪಿ ವಾರಿಯರ್ಸ್ ಪರ 50 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ನೊಂದಿಗೆ ಅಜೇಯ 90 ರನ್ ಬಾರಿಸಿದ ತಹ್ಲಿಯಾ ಮೆಕ್ಗ್ರಾಥ್
ತಹ್ಲಿಯಾ ಏಕಾಂಗಿ ಹೋರಾಟದ ಹೊರತಾಗಿಯೂ 42 ರನ್ಗಳಿಂದ ಸೋಲನುಭವಿಸಿದ ಯುಪಿ ವಾರಿಯರ್ಸ್
6 ಎಸೆತಗಳಲ್ಲಿ 57 ರನ್ಗಳ ಗುರಿ
ಕ್ರೀಸ್ನಲ್ಲಿ ತಹ್ಲಿಯಾ-ಸಿಮ್ರಾನ್ ಬ್ಯಾಟಿಂಗ್
ಜೆಸ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ತಹ್ಲಿಯಾ
ಕೊನೆಯ 2 ಓವರ್ಗಳಲ್ಲಿ 75 ರನ್ಗಳ ಗುರಿ
ಕ್ರೀಸ್ನಲ್ಲಿ ತಹ್ಲಿಯಾ-ಸಿಮ್ರಾನ್ ಬ್ಯಾಟಿಂಗ್
36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ತಹ್ಲಿಯಾ ಮೆಕ್ಗ್ರಾಥ್
ಯುಪಿ ವಾರಿಯರ್ಸ್ಗೆ ಗೆಲ್ಲಲು 4 ಓವರ್ಗಳಲ್ಲಿ 99 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ದೇವಿಕಾ ವೈದ್ಯ-ತಹ್ಲಿಯಾ ಬ್ಯಾಟಿಂಗ್
ಯುಪಿ ವಾರಿಯರ್ಸ್ಗೆ ಗೆಲ್ಲಲು 36 ಎಸೆತಗಳಲ್ಲಿ 109 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ದೇವಿಕಾ ವೈದ್ಯ-ತಹ್ಲಿಯಾ ಬ್ಯಾಟಿಂಗ್
ಕ್ರೀಸ್ನಲ್ಲಿ ತಹ್ಲಿಯಾ-ದೀಪ್ತಿ ಶರ್ಮಾ ಬ್ಯಾಟಿಂಗ್
ಟಾರಾ ನೋರಿಸ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ತಹ್ಲಿಯಾ
ಮೊದಲ 6 ಓವರ್ಗಳಲ್ಲಿ ಕೇವಲ 33 ರನ್ ಕಲೆಹಾಕಿದ ಯುಪಿ ವಾರಿಯರ್ಸ್
ಕ್ರೀಸ್ನಲ್ಲಿ ದೀಪ್ತಿ ಶರ್ಮಾ-ತಹ್ಲಿಯಾ ಬ್ಯಾಟಿಂಗ್
ಮರಿಝನ್ನೆ ಕಪ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಶ್ವೇತಾ ಸೆಹ್ರಾವತ್ (1)
ಜೊನಾಸೆನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಸುಲಭ ಕ್ಯಾಚ್ ನೀಡಿದ ಕಿರಣ್ ನವಗಿರೆ (2)
ಜೆಸ್ ಜೊನಾಸನ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಅಲಿಸ್ಸಾ ಹೀಲಿ (24)
2 ಓವರ್ಗಳಲ್ಲಿ 22 ರನ್
ಕ್ರೀಸ್ನಲ್ಲಿ ಅಲಿಸ್ಸಾ ಹೀಲಿ ಹಾಗೂ ಶ್ವೇತಾ ಸೆಹ್ರಾವತ್ ಬ್ಯಾಟಿಂಗ್
ಮೊದಲ ಓವರ್ನಲ್ಲಿ 9 ರನ್
ಕ್ರೀಸ್ನಲ್ಲಿ ಅಲಿಸ್ಸಾ ಹೀಲಿ ಹಾಗೂ ಶ್ವೇತಾ ಸೆಹ್ರಾವತ್ ಬ್ಯಾಟಿಂಗ್
ಮರಿಝನ್ನೆ ಎಸೆದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಹೀಲಿ
ಬ್ಯಾಕ್ ಟು ಬ್ಯಾಕ್ 2 ಬೌಂಡರಿ
ಯುಪಿ ವಾರಿಯರ್ಸ್ಗೆ 212 ರನ್ಗಳ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್
ದೀಪ್ತಿ ಶರ್ಮಾ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಜೆಸ್
ತಹ್ಲಿಯಾ ಓವರ್ನಲ್ಲಿ 1 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 19 ರನ್ ಕಲೆಹಾಕಿದ ಜೆಸ್ – ಜೆಮಿಮಾ
ಕ್ರೀಸ್ನಲ್ಲಿ ಜೆಸ್ ಜೊನಾಸನ್ – ಜೆಮಿಮಾ ಬ್ಯಾಟಿಂಗ್
ಅಂಜಲಿ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಆಕರ್ಷಕ ಸಿಕ್ಸ್ ಬಾರಿಸಿದ ಜೆಸ್
ಶಬ್ನಿಮ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಅಲೀಸ್ ಕ್ಯಾಪ್ಸೆ (21)…ಸೋಫಿ ಉತ್ತಮ ಕ್ಯಾಚ್…ಕ್ಯಾಪ್ಸೆ ಔಟ್
ಕ್ರೀಸ್ನಲ್ಲಿ ಜೆಮಿಮಾ ಹಾಗೂ ಅಲೀಸ್ ಕ್ಯಾಪ್ಸೆ ಬ್ಯಾಟಿಂಗ್
ರಾಜೇಶ್ವರಿ ಗಾಯಕ್ವಾಡ್ ಎಸೆತದಲ್ಲಿ ಬೌಲ್ಡ್ ಆದ ಮೆಗ್ ಲ್ಯಾನಿಂಗ್ (72)
ಸೋಫಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ 2 ಬೌಂಡರಿ ಬಾರಿಸಿದ ಮೆಗ್ ಲ್ಯಾನಿಂಗ್
ಕ್ರೀಸ್ನಲ್ಲಿ ಜೆಮಿಮಾ-ಲ್ಯಾನಿಂಗ್ ಬ್ಯಾಟಿಂಗ್
ಮಳೆ ನಿಂತ ಬಳಿಕ ಮತ್ತೆ ಶುರುವಾದ ಪಂದ್ಯ
ಡೆಲ್ಲಿ ಕ್ಯಾಪಿಟಲ್ಸ್ ತಂಡದ 2ನೇ ವಿಕೆಟ್ ಪತನ
ಸೋಫಿ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಮರಿಝನ್ನೆ ಕಪ್ (16)
ಮಳೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ನಡುವಣ ಪಂದ್ಯ ಸ್ಥಗಿತ
ಕ್ರೀಸ್ನಲ್ಲಿ ಮೆಗ್ ಲ್ಯಾನಿಂಗ್ (53) ಹಾಗೂ ಮರಿಝನ್ನೆ ಕಪ್ (9) ಬ್ಯಾಟಿಂಗ್
ಶಫಾಲಿ ವರ್ಮಾ (17) ಔಟ್
ಭರ್ಜರಿ ಸಿಕ್ಸ್ ಬಾರಿಸಿ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್
ತಹ್ಲಿಯಾ ಮೆಗ್ರಾಥ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಶಾಟ್ ಬಾರಿಸಿದ ಶಫಾಲಿ ವರ್ಮಾ…ಕಿರಣ್ ನವಗಿರೆ ಅದ್ಭುತ ಡೈವಿಂಗ್ ಕ್ಯಾಚ್…ಶಫಾಲಿ ವರ್ಮಾ (17) ಔಟ್
ರಾಜೇಶ್ವರಿ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಮೆಗ್ ಲ್ಯಾನಿಂಗ್
ಮೊದಲ 6 ಓವರ್ಗಳಲ್ಲಿ 62 ರನ್ ಕಲೆಹಾಕಿದ ಶಫಾಲಿ ವರ್ಮಾ-ಲ್ಯಾನಿಂಗ್
ಕ್ರೀಸ್ನಲ್ಲಿ ಮೆಗ್ ಲ್ಯಾನಿಂಗ್-ಶಫಾಲಿ ವರ್ಮಾ ಬ್ಯಾಟಿಂಗ್
ಶಫಾಲಿ ವರ್ಮಾ (12) – ಮೆಗ್ ಲ್ಯಾನಿಂಗ್ (31) ಬಿರುಸಿನ ಬ್ಯಾಟಿಂಗ್
ಅಂಜಲಿ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಫಾಲಿ ವರ್ಮಾ
ಮೆಗ್ ಲ್ಯಾನಿಂಗ್ ಬಿರುಸಿನ ಬ್ಯಾಟಿಂಗ್…ಈಗಾಗಲೇ 2 ಫೋರ್ ಹಾಗೂ 1 ಸಿಕ್ಸ್ ಬಾರಿಸಿರುವ ಡೆಲ್ಲಿ ಕ್ಯಾಪ್ಟನ್
ನಾಯಕಿಗೆ ಸಾಥ್ ನೀಡುತ್ತಿರುವ ಶಫಾಲಿ ವರ್ಮಾ
ಮೊದಲ ಓವರ್ ಮುಕ್ತಾಯ
ಶಬ್ನಿಮ್ ಓವರ್ನ 5ನೇ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಮೆಗ್ ಲ್ಯಾನಿಂಗ್
ಕ್ರೀಸ್ನಲ್ಲಿ ಮೆಗ್ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಬ್ಯಾಟಿಂಗ್
ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರೊಡ್ರಿಗಸ್, ಆಲಿಸ್ ಕ್ಯಾಪ್ಸಿ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ಟಾರಾ ನೋರಿಸ್.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಬೌಲಿಂಗ್ ಆಯ್ದುಕೊಂಡಿದ್ದಾರೆ.
Hello from the DY Patil Stadium ?️?
The @DelhiCapitals take on @UPWarriorz in Match 5⃣ of the #TATAWPL ??
Which side will end up winning two games in a row❓
Follow the match ? https://t.co/Yp7UtgDSsl#DCvUPW pic.twitter.com/FglhjQ6UIf
— Women’s Premier League (WPL) (@wplt20) March 7, 2023
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಶುರು: 7.30 ಕ್ಕೆ
ಸ್ಥಳ: ಡಿವೈ ಪಾಟೀಲ್ ಸ್ಟೇಡಿಯಂ, ಮುಂಬೈ
Published On - 6:31 pm, Tue, 7 March 23