Abhimanyu Easwaran: ಭರ್ಜರಿ ಶತಕದೊಂದಿಗೆ ವಿಶೇಷ ಸಾಧನೆ ಮಾಡಿದ ಅಭಿಮನ್ಯು ಈಶ್ವರನ್

| Updated By: ಝಾಹಿರ್ ಯೂಸುಫ್

Updated on: Jul 27, 2023 | 3:15 PM

Deodhar Trophy 2023: ಲೀಸ್ಟ್ ಎ ಕ್ರಿಕೆಟ್​ನಲ್ಲಿ 8ನೇ ಶತಕ ಸಿಡಿಸುವ ಮೂಲಕ ಅಭಿಮನ್ಯು ಈಶ್ವರನ್ 3500 ರನ್​ಗಳನ್ನು ಪೂರೈಸಿದ್ದಾರೆ.

Abhimanyu Easwaran: ಭರ್ಜರಿ ಶತಕದೊಂದಿಗೆ ವಿಶೇಷ ಸಾಧನೆ ಮಾಡಿದ ಅಭಿಮನ್ಯು ಈಶ್ವರನ್
(ಸಾಂದರ್ಭಿಕ ಚಿತ್ರ)
Follow us on

Deodhar Trophy 2023: ಪುದುಚೇರಿಯಲ್ಲಿ ನಡೆಯುತ್ತಿರುವ ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಅಭಿಮನ್ಯು ಈಶ್ವರನ್ ಶತಕ ಬಾರಿಸಿದ್ದಾರೆ. ಈ ಶತಕದೊಂದಿಗೆ ಲೀಸ್ಟ್ ಎ ಕ್ರಿಕೆಟ್​ನಲ್ಲಿ 3500 ರನ್​ ಕಲೆಹಾಕಿದ ವಿಶೇಷ ಸಾಧನೆ ಮಾಡಿದ್ದಾರೆ. ಈಶಾನ್ಯ ವಲಯ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪೂರ್ವ ವಲಯ ತಂಡ ಬೌಲಿಂಗ್ ಆಯ್ದುಕೊಂಡಿತು. ಇತ್ತ ಮೊದಲು ಬ್ಯಾಟ್ ಮಾಡಿದ ಪೂರ್ವ ವಲಯ ತಂಡವು ರಿಯಾನ್ ಪರಾಗ್ ಅವರ ಸ್ಪಿನ್ ಮೋಡಿ ಮುಂದೆ ಮುಂಡಿಯೂರಿದ್ದರು. ಕೇವಲ 68 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಈಶಾನ್ಯ ವಲಯ ತಂಡಕ್ಕೆ ಈ ಹಂತದಲ್ಲಿ ರೆಕ್ಸ್ ಸಿಂಗ್ ಆಸರೆಯಾದರು.

74 ಎಸೆತಗಳನ್ನು ಎದುರಿಸಿದ ರೆಕ್ಸ್​ ಸಿಂಗ್ 10 ಫೋರ್​ಗಳೊಂದಿಗೆ ಅಜೇಯ 65 ರನ್ ಬಾರಿಸಿದರು. ಇದರಿಂದ ಈಶಾನ್ಯ ವಲಯ ತಂಡವು 169 ರನ್​ಗಳಿಸಲು ಸಾಧ್ಯವಾಯಿತು. ಪೂರ್ವ ವಲಯ ಪರ 10 ಓವರ್​ಗಳಲ್ಲಿ 30 ರನ್ ನೀಡಿ ರಿಯಾನ್ ಪರಾಗ್ 4 ವಿಕೆಟ್ ಪಡೆದರೆ, ಶಹಬಾಝ್ ಅಹ್ಮದ್, ಮುಖ್ತಾರ್ ಹುಸೇನ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

170 ರನ್​ಗಳ ಸುಲಭ ಗುರಿ ಪಡೆದ ಪೂರ್ವ ವಲಯ ತಂಡಕ್ಕೆ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ಭರ್ಜರಿ ಆರಂಭ ಒದಗಿಸಿದ್ದರು. ಆರಂಭದಿಂದಲೇ ಎಚ್ಚರಿಕೆಯ ಆಟದೊಂದಿಗೆ ರನ್​ಗಳಿಸುತ್ತಾ ಸಾಗಿದ ಈಶ್ವರನ್ 102 ಎಸೆತಗಳಲ್ಲಿ 13 ಫೋರ್​ಗಳೊಂದಿಗೆ ಅಜೇಯ ಶತಕ ಬಾರಿಸಿದರು. ಪರಿಣಾಮ 31.3 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಈಶ್ವರನ್ ವಿಶೇಷ ಸಾಧನೆ:

ಅಭಿಮನ್ಯು ಈಶ್ವರನ್ ಲೀಸ್ಟ್​ ಎ ಕ್ರಿಕೆಟ್​ನಲ್ಲಿ ಇದುವರೆಗೆ 8 ಶತಕ ಬಾರಿಸಿದ್ದಾರೆ. ಇದೀಗ ಮೂಡಿಬಂದ ಶತಕದೊಂದಿಗೆ  ಲೀಸ್ಟ್​ ಎ ಕ್ರಿಕೆಟ್​ನಲ್ಲಿ 3,514 ರನ್‌ಗಳನ್ನು ಪೂರೈಸಿದ್ದಾರೆ.

ಪೂರ್ವ ವಲಯ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ಉತ್ಕರ್ಷ್ ಸಿಂಗ್ , ವಿರಾಟ್ ಸಿಂಗ್ , ಸುಭ್ರಾಂಶು ಸೇನಾಪತಿ , ರಿಯಾನ್ ಪರಾಗ್ , ಸೌರಭ್ ತಿವಾರಿ (ನಾಯಕ) , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ , ಮುಖ್ತಾರ್ ಹುಸೇನ್ , ಆಕಾಶ್ ದೀಪ್ , ಮಣಿಶಂಕರ್ ಮುರಸಿಂಗ್.

ಇದನ್ನೂ ಓದಿ: Harry Brook: ಬೂಮ್ ಬೂಮ್ ಬ್ರೂಕ್: ಹೊಸ ವಿಶ್ವ ದಾಖಲೆ ನಿರ್ಮಿಸಿದ ಸ್ಪೋಟಕ ದಾಂಡಿಗ

ಈಶಾನ್ಯ ವಲಯ ಪ್ಲೇಯಿಂಗ್ 11: ಅನುಪ್ ಅಹ್ಲಾವತ್ , ನಿಲೇಶ್ ಲಾಮಿಚಾನೆ , ಜೆಹು ಅಂಡರ್ಸನ್ (ವಿಕೆಟ್ ಕೀಪರ್) , ಲ್ಯಾಂಗ್ಲೋನ್ಯಾಂಬಾ ಕಿಶನ್​ಗ್ಬಾಮ್ (ನಾಯಕ) , ರೆಕ್ಸ್ ರಾಜ್ ಕುಮಾರ್ , ಪಲ್ಜೋರ್ ತಮಾಂಗ್ , ಲ್ಯಾರಿ ಸಂಗ್ಮಾ , ಇಮ್ಲಿವಾಟಿ ಲೆಮ್ತೂರ್ , ಲೀ ಯೋಂಗ್ ಲೆಪ್ಚಾ , ನಬಮ್ ಅಬೋ , ಕ್ರಿವಿಟ್ಸೊ ಕೆನ್ಸೆ.