Deodhar Trophy 2023: ದೇಶೀಯ ಅಂಗಳದ ಲೀಸ್ಟ್-ಎ ಕ್ರಿಕೆಟ್ ಟೂರ್ನಿ ದೇವಧರ್ ಟ್ರೋಫಿಯ ವೇಳಾಪಟ್ಟಿ ಪ್ರಕಟವಾಗಿದೆ. ಜುಲೈ 24 ರಿಂದ ಶುರುವಾಗಲಿರುವ ಈ ಏಕದಿನ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದೆ. ಅದರಂತೆ ಉತ್ತರ ವಲಯ, ದಕ್ಷಿಣ ವಲಯ, ಕೇಂದ್ರ ವಲಯ, ಈಶಾನ್ಯ ವಲಯ, ಪಶ್ಚಿಮ ವಲಯ ಮತ್ತು ಪೂರ್ವ ವಲಯ ತಂಡಗಳು ಪ್ರಶಸ್ತಿಗಾಗಿ ಸೆಣಸಲಿದೆ.
ಇನ್ನು ಈ ಬಾರಿಯ ದೇವಧರ್ ಟ್ರೋಫಿಗೆ ಆತಿಥ್ಯವಹಿಸುತ್ತಿರುವುದು ಪುದುಚೇರಿ (ಪಾಂಡಿಚೇರಿ). ಅಂದರೆ ಎಲ್ಲಾ ಪಂದ್ಯಗಳನ್ನು ಪುದುಚೇರಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಜುಲೈ 24 ರಿಂದ ಶುರುವಾಗುವ ಟೂರ್ನಿಯ ಫೈನಲ್ ಪಂದ್ಯವು ಆಗಸ್ಟ್ 3 ರಂದು ಸೀಚೆಮ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ:
ದಕ್ಷಿಣ ವಲಯ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ರೋಹನ್ ಕುನ್ನುಮ್ಮಲ್ (ಉಪನಾಯಕ), ಎನ್ ಜಗದೀಸನ್ (ವಿಕೆಟ್ ಕೀಪರ್), ರೋಹಿತ್ ರಾಯುಡು, ಕೆಬಿ ಅರುಣ್ ಕಾರ್ತಿಕ್, ದೇವದತ್ ಪಡಿಕ್ಕಲ್, ರಿಕಿ ಭುಯಿ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ವಿಧ್ವತ್ ಕಾವೇರಪ್ಪ, ವಿ. ಕೌಶಿಕ್, ಮೋಹಿತ್ ರೆಡ್ಕರ್, ಸಿಜೋಮನ್ ಜೋಸೆಫ್, ಅರ್ಜುನ್ ತೆಂಡೂಲ್ಕರ್, ಸಾಯಿ ಕಿಶೋರ್.
ಮೀಸಲು ಆಟಗಾರರು: ಸಾಯಿ ಸುದರ್ಶನ್, ನಿಕಿನ್ ಜೋಸ್, ಪ್ರದೋಶ್ ರಣಜನ್ ಪಾಲ್, ನಿತೀಶ್ ಕುಮಾರ್ ರೆಡ್ಡಿ, ಕೆಎಸ್ ಭರತ್.
ಪಶ್ಚಿಮ ವಲಯ ತಂಡ: ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಹಾರ್ವಿಕ್ ದೇಸಾಯಿ, ಹೆಟ್ ಪಟೇಲ್, ಸರ್ಫರಾಝ್ ಖಾನ್, ಅಂಕೀತ್ ಬವಾನೆ, ಸಮರ್ಥ್ ವ್ಯಾಸ್, ಶಿವಂ ದುಬೆ, ಅತಿತ್ ಸೇಠ್, ಪಾರ್ಥ್ ಭುತ್, ಶಮ್ಸ್ ಮುಲಾನಿ, ಅರ್ಝಾನ್ ನಾಗವಾಸ್ವಾಲ್ಲಾ, ಚಿಂತನ್ ಗಜಾ, ರಾಜವರ್ಧನ್ ಹಂಗರ್ಗೆಕರ್.
ಮೀಸಲು ಆಟಗಾರರು: ಚೇತನ್ ಸಕರಿಯಾ, ತುಷಾರ್ ದೇಶಪಾಂಡೆ, ಯುವರಾಜ್ ದೊಡಿಯಾ, ಎ ಖಾಝಿ, ಕಥನ್ ಪಟೇಲ್.
ಉತ್ತರ ವಲಯ ತಂಡ: ನಿತೀಶ್ ರಾಣಾ (ನಾಯಕ), ಅಭಿಷೇಕ್ ಶರ್ಮಾ, ಪ್ರಭ್ಸಿಮ್ರಾನ್ ಸಿಂಗ್, ಎಸ್ ಜಿ ರೋಹಿಲ್ಲಾ, ಎಸ್ ಖಜುರಿಯಾ, ಮನ್ ದೀಪ್ ಸಿಂಗ್, ಹಿಮಾಂಶು ರಾಣಾ, ವಿವ್ರಾಂತ್ ಶರ್ಮಾ, ನಿಶಾಂತ್ ಸಿಂಧು, ರಿಷಿ ಧವನ್, ಯುಧ್ವೀರ್ ಸಿಂಗ್, ಸಂದೀಪ್ ಶರ್ಮಾ, ಹರ್ಷಿತ್ ರಾಣಾ, ವೈಭವ್ ಅರೋರಾ, ಮಯಾಂಕ್ ಮಾರ್ಕಂಡೆ.
ಮೀಸಲು ಆಟಗಾರರು: ಮಯಾಂಕ್ ದಾಗರ್, ಮಯಾಂಕ್ ಯಾದವ್, ಅರ್ಸ್ಲಾನ್ ಖಾನ್, ಶುಭಂ ಅರೋರಾ, ಯುವರಾಜ್ ಸಿಂಗ್, ಮನನ್ ವೋಹ್ರಾ, ಅಕಿಬ್ ನಬಿ, ಶಿವಾಂಕ್ ವಶಿಷ್ಟ್.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!
Published On - 3:40 pm, Wed, 12 July 23