AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deodhar Trophy 2023: 2 ತಂಡಗಳು ಪ್ರಕಟ: ಸರ್ಫರಾಝ್, ನಿತೀಶ್ ರಾಣಾಗೆ ಸ್ಥಾನ

Deodhar Trophy 2023: ದೇವಧರ್ ಟ್ರೋಫಿಯಲ್ಲಿ ಈ ಬಾರಿ 6 ತಂಡಗಳು ಸ್ಪರ್ಧಿಸಲಿದೆ. ಅದರಂತೆ ಪಶ್ಚಿಮ ವಲಯ, ಪೂರ್ವ ವಲಯ, ಉತ್ತರ ವಲಯ, ಕೇಂದ್ರ ವಲಯ, ಈಶಾನ್ಯ ವಲಯ ಹಾಗೂ ದಕ್ಷಿಣ ವಲಯ ತಂಡಗಳು ಕಣಕ್ಕಿಳಿಯಲಿದೆ.

Deodhar Trophy 2023: 2 ತಂಡಗಳು ಪ್ರಕಟ: ಸರ್ಫರಾಝ್, ನಿತೀಶ್ ರಾಣಾಗೆ ಸ್ಥಾನ
Nitish Rana-Sarfaraz
TV9 Web
| Updated By: ಝಾಹಿರ್ ಯೂಸುಫ್|

Updated on: Jul 10, 2023 | 9:27 PM

Share

Deodhar Trophy 2023: ದೇಶೀಯ ಅಂಗಳದ ಏಕದಿನ ಟೂರ್ನಿ ದೇವಧರ್ ಟ್ರೋಫಿ ಜುಲೈ 24 ರಿಂದ ಶುರುವಾಗಲಿದೆ. 6 ತಂಡಗಳ ನಡುವಿನ ಈ ಟೂರ್ನಿಯಲ್ಲಿನ ಕಣಕ್ಕಿಳಿಯುವ ಎರಡು ತಂಡಗಳನ್ನು ಘೋಷಿಸಲಾಗಿದೆ. ಅದರಂತೆ ಐಪಿಎಲ್​ನ ಸ್ಟಾರ್ ಆಟಗಾರ ನಿತೀಶ್ ರಾಣಾ (Nitish Rana) ಉತ್ತರ ವಲಯ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಸರ್ಫರಾಝ್ ಖಾನ್ ಪಶ್ಚಿಮ ವಲಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನು ಶಿವಂ ದುಬೆ, ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ರಿಷಿ ಧವನ್ ಕೂಡ ಈ ಬಾರಿಯ ದೇವಧರ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ. 2019 ರ ಬಳಿಕ ಕೊರೋನಾ ಭೀತಿ ಹಿನ್ನಲೆಯಲ್ಲಿ ದೇವಧರ್ ಟ್ರೋಫಿಯನ್ನು ಆಯೋಜಿಸಿರಲಿಲ್ಲ. ಇದೀಗ 4 ವರ್ಷಗಳ ಬಳಿಕ ದೇಶೀಯ ಅಂಗಳ 50 ಓವರ್​ಗಳ ಟೂರ್ನಿ ಮರಳಿ ಆಯೋಜನೆಗೊಳ್ಳುತ್ತಿರುವುದು ವಿಶೇಷ.

6 ತಂಡಗಳ ನಡುವಣ ಕ್ರಿಕೆಟ್ ಕದನ:

ದೇವಧರ್ ಟ್ರೋಫಿಯಲ್ಲಿ ಈ ಬಾರಿ 6 ತಂಡಗಳು ಸ್ಪರ್ಧಿಸಲಿದೆ. ಅದರಂತೆ ಪಶ್ಚಿಮ ವಲಯ, ಪೂರ್ವ ವಲಯ, ಉತ್ತರ ವಲಯ, ಕೇಂದ್ರ ವಲಯ, ಈಶಾನ್ಯ ವಲಯ ಹಾಗೂ ದಕ್ಷಿಣ ವಲಯ ತಂಡಗಳು ಕಣಕ್ಕಿಳಿಯಲಿದೆ. ಈ ಆರು ತಂಡಗಳಲ್ಲಿ 2 ತಂಡಗಳನ್ನು ಘೋಷಣೆ ಮಾಡಲಾಗಿದ್ದು, ಈ ತಂಡಗಳಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ಪಶ್ಚಿಮ ವಲಯ ತಂಡ: ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಹಾರ್ವಿಕ್ ದೇಸಾಯಿ, ಹೆಟ್ ಪಟೇಲ್, ಸರ್ಫರಾಝ್ ಖಾನ್, ಅಂಕೀತ್ ಬವಾನೆ, ಸಮರ್ಥ್ ವ್ಯಾಸ್, ಶಿವಂ ದುಬೆ, ಅತಿತ್ ಸೇಠ್, ಪಾರ್ಥ್ ಭುತ್, ಶಮ್ಸ್ ಮುಲಾನಿ, ಅರ್ಝಾನ್ ನಾಗವಾಸ್ವಾಲ್ಲಾ, ಚಿಂತನ್ ಗಜಾ, ರಾಜವರ್ಧನ್ ಹಂಗರ್ಗೆಕರ್.

ಮೀಸಲು ಆಟಗಾರರು: ಚೇತನ್ ಸಕರಿಯಾ, ತುಷಾರ್ ದೇಶಪಾಂಡೆ, ಯುವರಾಜ್ ದೊಡಿಯಾ, ಎ ಖಾಝಿ, ಕಥನ್ ಪಟೇಲ್.

ಉತ್ತರ ವಲಯ ತಂಡ: ನಿತೀಶ್ ರಾಣಾ (ನಾಯಕ), ಅಭಿಷೇಕ್ ಶರ್ಮಾ, ಪ್ರಭ್​ಸಿಮ್ರಾನ್ ಸಿಂಗ್, ಎಸ್ ಜಿ ರೋಹಿಲ್ಲಾ, ಎಸ್ ಖಜುರಿಯಾ, ಮನ್ ದೀಪ್ ಸಿಂಗ್, ಹಿಮಾಂಶು ರಾಣಾ, ವಿವ್ರಾಂತ್ ಶರ್ಮಾ, ನಿಶಾಂತ್ ಸಿಂಧು, ರಿಷಿ ಧವನ್, ಯುಧ್ವೀರ್ ಸಿಂಗ್, ಸಂದೀಪ್ ಶರ್ಮಾ, ಹರ್ಷಿತ್ ರಾಣಾ, ವೈಭವ್ ಅರೋರಾ, ಮಯಾಂಕ್ ಮಾರ್ಕಂಡೆ.

ಇದನ್ನೂ ಓದಿ: IND vs WI: ಟೀಮ್ ಇಂಡಿಯಾದ ಆರಂಭಿಕ ಜೋಡಿ ಯಾರು?

ಮೀಸಲು ಆಟಗಾರರು: ಮಯಾಂಕ್ ದಾಗರ್, ಮಯಾಂಕ್ ಯಾದವ್, ಅರ್ಸ್ಲಾನ್ ಖಾನ್, ಶುಭಂ ಅರೋರಾ, ಯುವರಾಜ್ ಸಿಂಗ್, ಮನನ್ ವೋಹ್ರಾ, ಅಕಿಬ್ ನಬಿ, ಶಿವಾಂಕ್ ವಶಿಷ್ಟ್.