IND vs WI 1st Test: ಮೊದಲ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾದಿಂದ ವಿಶಿಷ್ಟ ರೀತಿಯ ಅಭ್ಯಾಸ: ಏನೆಂದು ನೋಡಿ
India vs West Indies Test Series: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಇಶಾನ್ ಕಿಶನ್, ಅಜಿಂಕ್ಯ ರಹಾನೆ ಸೇರಿದಂತೆ ಕೆಲವು ಆಟಗಾರರು ವಿಶಿಷ್ಟ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದ್ದರು.
ಟೀಮ್ ಇಂಡಿಯಾ ಜುಲೈ 12 ರಂದು ಡೊಮಿನಿಕಾದಲ್ಲಿ ವೆಸ್ಟ್ ಇಂಡೀಸ್ (India vs West Indies) ಪ್ರವಾಸವನ್ನು ಟೆಸ್ಟ್ ಅಭಿಯಾನದೊಂದಿಗೆ ಆರಂಭ ಮಾಡಲು ಸಿದ್ಧವಾಗಿದೆ. ರೋಹಿತ್ ಪಡೆ ಈ ಸರಣಿಗಾಗಿ ಕಠಿಣ ತರಬೇತಿಯನ್ನು ನಡೆಸುತ್ತಿದೆ. ಮೊದಲ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾ (Team India) ವಿಶಿಷ್ಟವಾದ ಒನ್ ಹ್ಯಾಂಡ್ ಕ್ಯಾಚಿಂಗ್ ಡ್ರಿಲ್‌ನಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ವಿರಾಟ್ ಕೊಹ್ಲಿ (Virat Kohli), ಶುಭ್ಮನ್ ಗಿಲ್, ಇಶಾನ್ ಕಿಶನ್, ಅಜಿಂಕ್ಯ ರಹಾನೆ ಸೇರಿದಂತೆ ಕೆಲವು ಆಟಗಾರರು ವಿಶಿಷ್ಟ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದ್ದರು.
ಭಾರತೀಯ ಆಟಗಾರರು ಒಬ್ಬರಿಗೊಬ್ಬರು ತ್ರಿಕೋನಾಕಾರದ ಫ್ಲೈಯಿಂಗ್ ಡಿಸ್ಕ್ ಅನ್ನು ಎಸೆದು ಒಂದೇ ಕೈಯಲ್ಲಿ ಹಿಡಿಯುವ ಮೂಲಕ ಪ್ರ್ಯಾಕ್ಟೀಸ್ ನಡೆಸುತ್ತಿದ್ದಾರೆ. “ಅದು ಒಂದು ಅತ್ಯುತ್ತಮವಾದ ಫೀಲ್ಡಿಂಗ್ ಡ್ರಿಲ್. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ಮುಂಚಿತವಾಗಿ ಟೀಮ್‌ಇಂಡಿಯಾ ತಮ್ಮ ಫೀಲ್ಡಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ”ಎಂದು ಬಿಸಿಸಿಐ ವೀಡಿಯೊಗೆ ಶೀರ್ಷಿಕೆ ನೀಡಿದೆ.
That’s one colourful fielding drill ??#TeamIndia sharpen their reflexes ahead of the first Test against West Indies ?#WIvIND pic.twitter.com/FUtRjyLViI
— BCCI (@BCCI) July 10, 2023
IND vs WI: ಟೀಮ್ ಇಂಡಿಯಾದ ಆರಂಭಿಕ ಜೋಡಿ ಯಾರು?
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲು ಕಂಡ ಬಳಿಕ ಟೀಮ್ ಇಂಡಿಯಾವನ್ನು ಆಡುತ್ತಿದೆ. ಈ ಹಿಂದೆ ಕಳಪೆ ಪ್ರದರ್ಶನ ತೋರಿದ್ದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಮೇಲೆ ಸಾಕಷ್ಟು ಉತ್ತಡವಿದೆ. ಅತ್ತ ವೆಸ್ಟ್ ಇಂಡೀಸ್ ತಂಡ ಐಸಿಸಿ ವಿಶ್ವಕಪ್ 2023 ಕ್ವಾಲಿಫೈಯರ್‌ನಲ್ಲಿ ಹೀನಾಯ ಪ್ರದರ್ಶನ ತೋರಿ ಈ ಸರಣಿಗೆ ಬರುತ್ತಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಸರಣಿ ಬಹುಮುಖ್ಯವಾಗಿದೆ.
ಅಭ್ಯಾಸಕ್ಕೆ ಮಳೆ ಅಡ್ಡಿ: ಕೊಹ್ಲಿ ಸುತ್ತಾಟ
ಶನಿವಾರ ರೋಹಿತ್ ಶರ್ಮಾ ಒಳಗೊಂಡ ಭಾರತದ ಟೆಸ್ಟ್ ತಂಡದ ಆಟಗಾರರು ಡೊಮಿನಿಕಾಗೆ ತಲುಪಿದರು. ಬಳಿಕ ಪ್ರ್ಯಾಕ್ಟೀಸ್ ಸೆಷನ್ ಏರ್ಪಡಿಸಲಾಗಿತ್ತು. ಆದರೆ, ನಿರಂತರವಾಗಿ ಸುರಿದ ಮಳೆಗೆ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಪ್ರ್ಯಾಕ್ಟೀಸ್ ಸೆಷನ್ ಕ್ಯಾನ್ಸಲ್ ಆದ ಹಿನ್ನಲೆ ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರರು ಕೆರಿಬಿಯನ್ ನಾಡು ಸುತ್ತಲು ತೆರಳಿದ್ದಾರೆ. ಕೊಹ್ಲಿ ಸುತ್ತಾಡಿಕೊಂಡು ಸಮುದ್ರದ ಪಕ್ಕ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಜುಲೈ 12 ರಿಂದ ಜುಲೈ 16 ವರೆಗೆ ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಬಳಿಕ ಜುಲೈ 20ರಿಂದ 24 ವರೆಗೆ ದ್ವಿತೀಯ ಟೆಸ್ಟ್ ಆಯೋಜಿಸಲಾಗಿದ್ದು, ಇದು ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ