Deodhar Trophy 2023: ಸಾಯಿ ಸುದರ್ಶನ್ ಸೆಂಚುರಿ: ಫೈನಲ್ಗೆ ದಕ್ಷಿಣ ವಲಯ
Deodhar Trophy 2023: ಈ ಬಾರಿಯ ದೇವಧರ್ ಟ್ರೋಫಿಯ 5 ಪಂದ್ಯಗಳಲ್ಲೂ ಜಯಭೇರಿ ಬಾರಿಸಿರುವ ದಕ್ಷಿಣ ವಲಯ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
Deodhar Trophy 2023: ಪುದುಚೇರಿಯ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆದ ದೇವಧರ್ ಟ್ರೋಫಿಯ 15ನೇ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ಎಡಗೈ ದಾಂಡಿಗ ಸಾಯಿ ಸುದರ್ಶನ್. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇಂದ್ರ ವಲಯ ತಂಡದ ನಾಯಕ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಕೇಂದ್ರ ವಲಯ ತಂಡಕ್ಕೆ ಶಿವಂ ಚೌಧರಿ (34) ಉತ್ತಮ ಆರಂಭ ಒದಗಿಸಿದ್ದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯಶ್ ದುಬೆ 99 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 77 ರನ್ ಬಾರಿಸಿದರು. ಹಾಗೆಯೇ ಕೆಳ ಕ್ರಮಾಂಕದಲ್ಲಿ ಶಿವಂ ಮಾವಿ 22 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 38 ರನ್ ಚಚ್ಚಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ಕೇಂದ್ರ ವಲಯ ತಂಡವು 9 ವಿಕೆಟ್ ನಷ್ಟಕ್ಕೆ 261 ರನ್ ಕಲೆಹಾಕಿತು.
262 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ವಲಯ ಪರ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಗಾಯಗೊಂಡು ಹೊರನಡೆದರು. ಈ ವೇಳೆ ರೋಹನ್ ಕುನ್ನಮ್ಮಳ್ (24) ಜೊತೆಗೂಡಿದ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೇಂದ್ರ ವಲಯದ ಅನುಭವಿ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಸಾಯಿ ಸುದರ್ಶನ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಅಲ್ಲದೆ 111 ಎಸೆತಗಳಲ್ಲಿ ಆಕರ್ಷಕ ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದರು.
ಇತ್ತ ಸಾಯಿಯ ಶತಕದೊಂದಿಗೆ ದಕ್ಷಿಣ ವಲಯ ತಂಡದ ಮೊತ್ತ 200 ರ ಗಡಿದಾಟಿತು. ಈ ಹಂತದಲ್ಲಿ ವಾಷಿಂಗ್ಟನ್ ಸುಂದರ್ (43) ಜೊತೆಗೂಡಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸಾಯಿ ಸುದರ್ಶನ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಅಂತಿಮವಾಗಿ 136 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 132 ರನ್ ಬಾರಿಸಿದ ಸಾಯಿ ಸುದರ್ಶನ್ 48.2 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ದಕ್ಷಿಣ ವಲಯ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
? for Sai Sudharsan ?
He gets there off 111 balls. A fantastic innings laced with 9 fours.
He gets a salute from his skipper ?
Live Stream ? – https://t.co/CpJgKT71lK
Follow the match – https://t.co/Lf15mqVJJt#DeodharTrophy | #CZvSZ pic.twitter.com/YjPjzTFXEy
— BCCI Domestic (@BCCIdomestic) August 1, 2023
ದಕ್ಷಿಣ ವಲಯ ಫೈನಲ್ಗೆ ಎಂಟ್ರಿ:
ಈ ಬಾರಿಯ ದೇವಧರ್ ಟ್ರೋಫಿಯ 5 ಪಂದ್ಯಗಳಲ್ಲೂ ಜಯಭೇರಿ ಬಾರಿಸಿರುವ ದಕ್ಷಿಣ ವಲಯ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಫೈನಲ್ಗೆ ಪ್ರವೇಶಿಸಿದೆ. ಗುರುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಪೂರ್ವ ವಲಯ ತಂಡವನ್ನು ಎದುರಿಸಲಿದೆ.
ಕೇಂದ್ರ ವಲಯ (ಪ್ಲೇಯಿಂಗ್ XI): ಶಿವಂ ಚೌಧರಿ, ಯಶ್ ದುಬೆ, ಸರನ್ಶ್ ಜೈನ್, ಉಪೇಂದ್ರ ಯಾದವ್(ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್ (ನಾಯಕ), ರಿಂಕು ಸಿಂಗ್, ಮಾಧವ್ ಕೌಶಿಕ್, ಕರ್ಣ್ ಶರ್ಮಾ, ಶಿವಂ ಮಾವಿ, ಆದಿತ್ಯ ಸರ್ವತೆ, ಯಶ್ ಠಾಕೂರ್.
ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್ರೌಂಡರ್ಗಳು..!
ದಕ್ಷಿಣ ವಲಯ (ಪ್ಲೇಯಿಂಗ್ XI): ರೋಹನ್ ಕುನ್ನುಮ್ಮಳ್, ಮಯಾಂಕ್ ಅಗರ್ವಾಲ್ (ನಾಯಕ), ಸಾಯಿ ಸುದರ್ಶನ್, ಎನ್ ಜಗದೀಸನ್ (ವಿಕೆಟ್ ಕೀಪರ್), ಸಿಜೋಮನ್ ಜೋಸೆಫ್, ರೋಹಿತ್ ರಾಯುಡು, ಮೋಹಿತ್ ರೆಡ್ಕರ್, ವಾಷಿಂಗ್ಟನ್ ಸುಂದರ್, ಅರ್ಜುನ್ ತೆಂಡೂಲ್ಕರ್, ವಾಸುಕಿ ಕೌಶಿಕ್, ವಿಜಯಕುಮಾರ್ ವೈಶಾಕ್.
Published On - 10:24 pm, Tue, 1 August 23