AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಭರ್ಜರಿ ಶತಕ ಸಿಡಿಸಿದ ಕನ್ನಡಿಗ ದೇವದತ್ ಪಡಿಕ್ಕಲ್; 3ನೇ ಕ್ರಮಾಂಕ ಫಿಕ್ಸ್

Devdutt Padikkal Century in SL Practice Match: ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಶತಕ (103*) ಸಿಡಿಸಿ ಮಿಂಚಿದ್ದಾರೆ. ಗಾಯಗೊಂಡಿರುವ ಸಾಯಿ ಸುದರ್ಶನ್ ಅನುಪಸ್ಥಿತಿಯಲ್ಲಿ ಈ ಇನ್ನಿಂಗ್ಸ್, ಆಗಸ್ಟ್ 15 ರಂದು ಆರಂಭವಾಗುವ ಗಾಲ ಟೆಸ್ಟ್‌ನಲ್ಲಿ ಭಾರತ ತಂಡದ ನಂಬರ್ 3 ಸ್ಥಾನಕ್ಕೆ ಪಡಿಕ್ಕಲ್ ಅವರ ಹಕ್ಕನ್ನು ಬಲಪಡಿಸಿದೆ. ಅವರ ಈ ಪ್ರದರ್ಶನ ಟೆಸ್ಟ್ ತಂಡದಲ್ಲಿ ಮರಳಿ ಅವಕಾಶ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸಿದೆ.

IND vs SL: ಭರ್ಜರಿ ಶತಕ ಸಿಡಿಸಿದ ಕನ್ನಡಿಗ ದೇವದತ್ ಪಡಿಕ್ಕಲ್; 3ನೇ ಕ್ರಮಾಂಕ ಫಿಕ್ಸ್
Devdutt Padikkal
ಪೃಥ್ವಿಶಂಕರ
|

Updated on:Aug 08, 2026 | 3:09 PM

Share

ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ (India vs Sri Lanka ) ನಡುವಿನ ಮೂರು ಪಂದ್ಯಗಳ ಅಭ್ಯಾಸ ಪಂದ್ಯ ಕೊಲಂಬೊದ ಎನ್‌ಸಿಸಿ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಶ್ರೀಲಂಕಾ ತಂಡ ಮೊದಲ ದಿನದಾಟದಲ್ಲಿ ಪೂರ್ಣ 90 ಓವರ್​ಗಳನ್ನು ಆಡಿ 8 ವಿಕೆಟ್‌ಗಳನ್ನು ಕಳೆದುಕೊಂಡು 363 ರನ್ ಕಲೆಹಾಕಿತು. ಎರಡನೇ ದಿನದಂದು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡದ ಪರ ಕನ್ನಡಿಗ ದೇವದತ್ ಪಡಿಕ್ಕಲ್ (Devdutt Padikkal) ಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪಡಿಕ್ಕಲ್ 121 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ 103 ರನ್ ಬಾರಿಸಿ ರಿಟೈರ್ಡ್​ ಹರ್ಟ್​ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಭಾರತಕ್ಕೆ ಕಳಪೆ ಆರಂಭ

ಎರಡನೇ ದಿನದಂದು ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಯಶಸ್ವಿ ಜೈಸ್ವಾಲ್ ಖಾತೆಯನ್ನು ತೆರೆಯದೆ ಕೇವಲ 2 ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಬಹುಬೇಗನೇ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್, ನಾಯಕ ರಾಹುಲ್ ಜೊತೆಗೆ ಎರಡನೇ ವಿಕೆಟ್​ಗೆ 92 ರನ್​ಗಳ ಜೊತೆಯಾಟ ನಡೆಸಿದರು. ಇದೇ ವೇಳೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಆದರೆ ನಾಯಕ ರಾಹುಲ್ 40 ರನ್​ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು.

ಶತಕ ಬಾರಿಸಿದ ಪಡಿಕ್ಕಲ್

ರಾಹುಲ್ ವಿಕೆಟ್ ಪತನದ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸಿದ ಪಡಿಕ್ಕಲ್ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದರು. ಮೂರನೇ ಕ್ರಮಾಂಕದಲ್ಲಿ ಶತಕದ ಇನ್ನಿಂಗ್ಸ್ ಆಡುವ ಮೂಲಕ ಪಡಿಕ್ಕಲ್ ಆಗಸ್ಟ್ 15 ರಿಂದ ಆರಂಭವಾಗಲಿರುವ ಗಾಲೆ ಟೆಸ್ಟ್​ಗೆ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಏಕೆಂದರೆ ಮೂರನೇ ಕ್ರಮಾಂಕದಲ್ಲಿ ಆಡಬೇಕಿದ್ದ ಸಾಯಿ ಸುದರ್ಶನ್ ಗಾಯದ ಕಾರಣದಿಂದಾಗಿ ಇನ್ನೂ ಶ್ರೀಲಂಕಾಕ್ಕೆ ಬಂದಿಲ್ಲ. ಅವರು ಇನ್ನೂ ಕಾಲ್ಬೆರಳಿನ ನೋವಿನಿಂದ ಬಳಲುತ್ತಿದ್ದಾರೆ. ಪರಿಣಾಮವಾಗಿ, ಆಗಸ್ಟ್ 15 ರಂದು ಗಾಲೆಯಲ್ಲಿ ನಡೆಯುವ ಮೊದಲ ಟೆಸ್ಟ್‌ನಲ್ಲಿ ನಂಬರ್-3 ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿತ್ತು.

3ನೇ ಕ್ರಮಾಂಕ ಫಿಕ್ಸ್

ಆದರೀಗ ಅಭ್ಯಾಸ ಪಂದ್ಯದಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಪಡಿಕ್ಕಲ್ ಶತಕ ಬಾರಿಸಿದ್ದಾರೆ. ಅಲ್ಲದೆ ಪಡಿಕ್ಕಲ್ ಈ ಹಿಂದೆ ಭಾರತದ ಪರ ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಆದ್ದರಿಂದ, ಮೊದಲ ಟೆಸ್ಟ್‌ಗೆ ಸಾಯಿ ಸುದರ್ಶನ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ದೇವದತ್ ಪಡಿಕ್ಕಲ್​ಗೆ 3ನೇ ಕ್ರಮಾಂಕ ಸಿಗುವುದು ಖಚಿತ.

RCB vs SRH: 6,6,6,6.. ಅತಿ ವೇಗದ ಅರ್ಧಶತಕ ಬಾರಿಸಿದ ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್ ಇದುವರೆಗೆ ಆಡಿರುವ ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ 90 ರನ್ ಗಳಿಸಿದ್ದಾರೆ, ಇದರಲ್ಲಿ ಇಂಗ್ಲೆಂಡ್ ವಿರುದ್ಧದ ಒಂದು ಅರ್ಧಶತಕವೂ ಸೇರಿದೆ. ಆದಾಗ್ಯೂ, ಅವರು 2024 ರಲ್ಲಿ ಈ ಎರಡೂ ಪಂದ್ಯಗಳನ್ನು ಆಡಿದ್ದರು. ಆದ್ದರಿಂದ, ಬಹಳ ಸಮಯದ ನಂತರ, ದೇವದತ್ ಪಡಿಕ್ಕಲ್ ಮತ್ತೆ ಆಡುವ XI ನಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Sat, 8 August 26

Follow Us
'ಸೋಷಿಯಲ್ ಮೀಡಿಯಾ ವಿಜಿಲಾಂಟಿಸಂ ಸಹಿಸಲ್ಲ': ಪ್ರಿಯಾಂಕ್ ಖರ್ಗೆ
'ಸೋಷಿಯಲ್ ಮೀಡಿಯಾ ವಿಜಿಲಾಂಟಿಸಂ ಸಹಿಸಲ್ಲ': ಪ್ರಿಯಾಂಕ್ ಖರ್ಗೆ
ಬಿಡದಿ ಟೌನ್​ಶಿಪ್ ವಿರುದ್ಧ ಜೆಡಿಎಸ್, ಬಿಜೆಪಿ ಒಟ್ಟಾಗಿ ಹೋರಾಟ: ಅಶೋಕ್
ಬಿಡದಿ ಟೌನ್​ಶಿಪ್ ವಿರುದ್ಧ ಜೆಡಿಎಸ್, ಬಿಜೆಪಿ ಒಟ್ಟಾಗಿ ಹೋರಾಟ: ಅಶೋಕ್
ಬೆಂಗಳೂರಿನಲ್ಲಿ ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ!
ಬೆಂಗಳೂರಿನಲ್ಲಿ ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ!
ನೂರಾರು ಬಡ ವಿದ್ಯಾರ್ಥಿಗಳ ಆಸರೆ ಆಗ್ಬೇಕಿದ್ದ ವಸತಿ ನಿಲಯದಲ್ಲಿ ಅವ್ಯವಸ್ಥೆ
ನೂರಾರು ಬಡ ವಿದ್ಯಾರ್ಥಿಗಳ ಆಸರೆ ಆಗ್ಬೇಕಿದ್ದ ವಸತಿ ನಿಲಯದಲ್ಲಿ ಅವ್ಯವಸ್ಥೆ
‘ಟಾಕ್ಸಿಕ್’ ಟ್ರೇಲರ್ ಲಾಂಚ್​ಗೆ ಬಂದ ಲೇಡೀಸ್ ಆ್ಯಂಡ್ ಲೇಡೀಸ್
‘ಟಾಕ್ಸಿಕ್’ ಟ್ರೇಲರ್ ಲಾಂಚ್​ಗೆ ಬಂದ ಲೇಡೀಸ್ ಆ್ಯಂಡ್ ಲೇಡೀಸ್
ತುಮಕೂರು ಪಡಿತರದಾರರಿಗೆ ಸರ್ಕಾರ ಶಾಕ್: 14 ಸಾವಿರ ಬಿಪಿಎಲ್ ಕಾರ್ಡ್ ರದ್ದು
ತುಮಕೂರು ಪಡಿತರದಾರರಿಗೆ ಸರ್ಕಾರ ಶಾಕ್: 14 ಸಾವಿರ ಬಿಪಿಎಲ್ ಕಾರ್ಡ್ ರದ್ದು
: ಕಂದಕಕ್ಕೆ ಉರುಳಿದ ಬಸ್, 7 ಪ್ರಯಾಣಿಕರು ಸಾವು
: ಕಂದಕಕ್ಕೆ ಉರುಳಿದ ಬಸ್, 7 ಪ್ರಯಾಣಿಕರು ಸಾವು
ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ!
ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ!
ಜೋರಾದ ಖಾತೆ ಹಂಚಿಕೆ ಕಸರತ್ತು: ಸಿದ್ದರಾಮಯ್ಯ ಜೊತೆ ಡಿಕೆಶಿ ಗಂಭೀರ ಚರ್ಚೆ
ಜೋರಾದ ಖಾತೆ ಹಂಚಿಕೆ ಕಸರತ್ತು: ಸಿದ್ದರಾಮಯ್ಯ ಜೊತೆ ಡಿಕೆಶಿ ಗಂಭೀರ ಚರ್ಚೆ
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ