ವಿಶ್ವಕಪ್​ನಲ್ಲಿ ಸ್ಥಾನಪಡೆಯಲು ದಿನೇಶ್ ಕಾರ್ತಿಕ್ ಸ್ಫೋಟಕ ಆಟ? ಹಿಂಟ್ ಕೊಟ್ಟ ರೋಹಿತ್

|

Updated on: Apr 12, 2024 | 10:48 AM

ದಿನೇಶ್ ಕಾರ್ತಿಕ್ (Dinesh Karthik) ಅವರು ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಟ ಆಡುತ್ತಿದ್ದಾರೆ. ಕಳೆದ ಸೀಸನ್​ನಲ್ಲಿ ಅವರು ಉತ್ತಮವಾಗಿ ಆಡಿರಲಿಲ್ಲ. ಆದಾಗ್ಯೂ ಅವರಿಗೆ ಈ ವರ್ಷ ಚಾನ್ಸ್ ನೀಡಲಾಯಿತು. ಈ ಸೀಸನ್​ನಲ್ಲಿ ಅವರು ಅದ್ಭುತ ಆಟ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಸ್ಫೋಟಕ ಆಟ ಗಮನ ಸೆಳೆದಿದೆ. ಮುಂಬೈ ವಿರುದ್ಧದದ ಪಂದ್ಯದಲ್ಲಿ ಕೇವಲ 23 ಬಾಲ್​ಗೆ 53 ರನ್​ಗಳನ್ನು ಅವರು ಸಿಡಿಸಿದ್ದಾರೆ. ಇದರಲ್ಲಿ ಐದು ಫೋರ್ ಹಾಗೂ ನಾಲ್ಕು ಸಿಕ್ಸ್ ಇದೆ. ಅವರ ಸ್ಟ್ರೈಕ್ ರೇಟ್ […]

ವಿಶ್ವಕಪ್​ನಲ್ಲಿ ಸ್ಥಾನಪಡೆಯಲು ದಿನೇಶ್ ಕಾರ್ತಿಕ್ ಸ್ಫೋಟಕ ಆಟ? ಹಿಂಟ್ ಕೊಟ್ಟ ರೋಹಿತ್
ರೋಹಿತ್-ಕಾರ್ತಿಕ್
Follow us on

ದಿನೇಶ್ ಕಾರ್ತಿಕ್ (Dinesh Karthik) ಅವರು ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಟ ಆಡುತ್ತಿದ್ದಾರೆ. ಕಳೆದ ಸೀಸನ್​ನಲ್ಲಿ ಅವರು ಉತ್ತಮವಾಗಿ ಆಡಿರಲಿಲ್ಲ. ಆದಾಗ್ಯೂ ಅವರಿಗೆ ಈ ವರ್ಷ ಚಾನ್ಸ್ ನೀಡಲಾಯಿತು. ಈ ಸೀಸನ್​ನಲ್ಲಿ ಅವರು ಅದ್ಭುತ ಆಟ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಸ್ಫೋಟಕ ಆಟ ಗಮನ ಸೆಳೆದಿದೆ. ಮುಂಬೈ ವಿರುದ್ಧದದ ಪಂದ್ಯದಲ್ಲಿ ಕೇವಲ 23 ಬಾಲ್​ಗೆ 53 ರನ್​ಗಳನ್ನು ಅವರು ಸಿಡಿಸಿದ್ದಾರೆ. ಇದರಲ್ಲಿ ಐದು ಫೋರ್ ಹಾಗೂ ನಾಲ್ಕು ಸಿಕ್ಸ್ ಇದೆ. ಅವರ ಸ್ಟ್ರೈಕ್ ರೇಟ್ 230 ಇದೆ. ಸ್ಫೋಟಕ ಆಟ ನೋಡಿ ರೋಹಿತ್ ಶರ್ಮಾ ಅವರು ದಿನೇಶ್ ಕಾರ್ತಿಕ್ ಕಾಲೆಳೆದಿದ್ದಾರೆ.

ದಿನೇಶ್ ಕಾರ್ತಿಕ್ ಅವರು ಆರ್​ಸಿಬಿ ತಂಡಕ್ಕೆ ಆಸರೆ ಆಗುತ್ತಿದ್ದಾರೆ. ಮುಂಬೈ ವಿರುದ್ಧ ಸ್ಫೋಟಕ ಆಟ ತೋರಿದ್ದಾರೆ. ನಿನ್ನೆ ಜಸ್ಪ್ರೀತ್ ಬೂಮ್ರಾ ಬೌಲಿಂಗ್​ನಲ್ಲಿ ಸಿಕ್ಸ್ ಹೊಡೆದ ಏಕೈಕ ಆರ್​ಸಿಬಿ ಆಟಗಾರ ಎನ್ನುವ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ನೋಡಿ ರೋಹಿತ್ ಶರ್ಮಾ ಕೂಡ ಮೆಚ್ಚಿಕೊಂಡಿದ್ದಾರೆ. ಅಲ್ಲದೆ, ಅವರ ಕಾಳೆಯುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ‘ಅವರೇ ಕಾರಣ’; ಸತತ ನಾಲ್ಕನೇ ಸೋಲಿನ ಬಳಿಕ ಆರ್​ಸಿಬಿ ನಾಯಕ ಫಾಪ್ ದೂರಿದ್ದು ಯಾರನ್ನು?

‘ಕಾರ್ತಿಕ್ ತಲೆಯಲ್ಲಿ ವಿಶ್ವಕಪ್ ಓಡುತ್ತಿದೆ. ಅವರಿಗೆ ವಿಶ್ವಕಪ್ ಆಡಬೇಕು’ ಎಂದು ರೋಹಿತ್ ಹೇಳಿದ್ದಾರೆ. ಇದು ಸ್ಟಂಪ್ ಮೈಕ್​ ಮೂಲಕ ಕೇಳಿಸಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ಹಾಗೂ ಕಾರ್ತಿಕ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಖುಷಿಖುಷಿಯಿಂದ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: RCB: ಆರ್​ಸಿಬಿ ಸೋಲಿಗೆ ಕಾರಣವಾಯ್ತಾ ಕಳಪೆ ಅಂಪೈರಿಂಗ್? ಇಲ್ಲಿದೆ ಸಾಕ್ಷಿ

ಆರ್​ಸಿಬಿ 196 ರನ್​ ಗಳಿಸಿದ ಹೊರತಾಗಿಯೂ ಅದು ತಂಡಕ್ಕೆ ಆಸರೆ ಆಗಿಲ್ಲ. ದಿನೇಶ್ ಕಾರ್ತಿಕ್ ಜೊತೆ ಫಾಪ್ ಡುಪ್ಲೆಸಿಸ್ ಹಾಗೂ ರಜತ್ ಪಟಿದಾರ್ ಕೂಡ ಅರ್ಧಶತಕ ಬಾರಿಸಿದ್ದರು. ಆದರೆ, ಮುಂಬೈ ಇಂಡಿಯನ್ಸ್ ಅವರು ಆರ್​​ಸಿಬಿ ಬೌಲರ್​ಗಳ ಬೆವರಿಳಿಸಿದರು. ಕೇವಲ 15 ಓವರ್ 3 ಬಾಲ್​ಗೆ 197 ರನ್​ಗಳ ಟಾರ್ಗೆಟ್ ಚೇಸ್ ಮಾಡಿದರು. ಇಶನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:33 am, Fri, 12 April 24