ಕಾನ್ಪುರದಲ್ಲಿ ಸಾಗುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಮೂರನೇ ದಿನ ನ್ಯೂಜಿಲೆಂಡ್ ತಂಡವನ್ನು 296 ರನ್ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ (India) ದಿನದಾಟದ ಅಂತ್ಯಕ್ಕೆ 63 ರನ್ಗಳ ಮುನ್ನಡೆ ಸಾಧಿಸಿತ್ತು. ಸದ್ಯ ನಾಲ್ಕನೇ ದಿನದಾಟದಲ್ಲಿ ಭಾರತ ಆರಂಭದಲ್ಲೇ ದೊಡ್ಡ ಆಘಾತ ಅನುಭವಿಸಿದೆ. ನಾಯಕ, ಉಪ ನಾಯಕರಾದ ಅಜಿಂಕ್ಯಾ ರಹಾನೆ (Ajinkya Rahane) ಮತ್ತು ಚೇತೇಶ್ವರ್ ಪೂಜಾರ (Cheteshwar Pujara) ಮತ್ತೊಮ್ಮೆ ವೈಫಲ್ಯ ಕಂಡಿದ್ದು ಬೇಗನೆ ಔಟ್ ಆಗಿದ್ದಾರೆ. ಬೃಹತ್ ಮುನ್ನಡೆಯ ಯೋಜನೆಯೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾಕ್ಕೆ (Team India) ಕೇನ್ ಪಡೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇದರ ನಡುಗೆ ಭಾರತ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Kartik) ಮೊದಲ ಟೆಸ್ಟ್ನಲ್ಲಿ ಭಾರತ ಗೆಲ್ಲಬೇಕಾದರೆ ನ್ಯೂಜಿಲೆಂಡ್ಗೆ ಎಷ್ಟು ಟಾರ್ಗೆಟ್ ನೀಡಬೇಕು ಎಂಬ ಅಂಕಿಅಂಶಗಳನ್ನು ಹೇಳಿದ್ದಾರೆ.
“ಭಾರತ ತಂಡ ನ್ಯೂಜಿಲೆಂಡ್ಗೆ ಸುಮಾರು 275 ರನ್ಗಳ ಟಾರ್ಗೆಟ್ ನೀಡಿದರೆ ಉತ್ತಮ ಸ್ಕೋರ್ ಆಗಿರಲಿದೆ. ಕಿವೀಸ್ಗೆ ದಿನದಾಟದಲ್ಲಿ 45-30 ನಿಮಿಷ ಬ್ಯಾಟಿಂಗ್ ಮಾಡಲು ಅವಕಾಶ ಕೊಡಬೇಕು. ಪ್ರಮುಖವಾಗಿ 100 ರನ್ ಒಳಗೆ ಲ್ಯಾಥಂ ಮತ್ತು ಕೇನ್ ವಿಲಿಯಮ್ಸನ್ ವಿಕೆಟ್ ಕೀಳಬೇಕು. ಆ ಬಳಿಕ ಭಾರತಕ್ಕೆ ಗೆಲುವು ಸುಲಭವಾಗಿರಲಿದೆ” ಎಂದು ಕಾರ್ತಿಕ್ ಹೇಳಿದ್ದಾರೆ.
ನಿನ್ನೆ ಅಕ್ಷರ್ ಪಟೇಲ್(62 ಕ್ಕೆ 5) ಸ್ಪಿನ್ ಮೋಡಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ ಮೊದಲನೇ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ 142.3 ಓವರ್‌ಗಳಿಗೆ 296 ರನ್‌ಗಳಗೆ ಆಲೌಟ್ ಆಗಿದೆ. ಆ ಮೂಲಕ ಟೀಮ್ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 63 ರನ್ ಮುನ್ನಡೆ ಗಳಿಸಿ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತು.
ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಬಹುಬೇಗ ಮೊದಲನೇ ವಿಕೆಟ್ ಕಳೆದುಕೊಂಡಿತು. ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧ ಶತಕ ಸಿಡಿಸಿದ್ದ ಶುಭ್ಮನ್ ಗಿಲ್, ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ ಒಂದು ರನ್ ಗಳಿಸಿ ಕೈಲ್ ಜೇಮಿಸನ್‌ಗೆ ಬೌಲ್ಡ್ ಆದರು. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ದ್ವಿತೀಯ ಇನಿಂಗ್ಸ್‌ನಲ್ಲಿ 5 ಓವರ್‌ಗಳಿಗೆ 14 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ್ ಪೂಜಾರ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಆದರೆ, ನಾಲ್ಕನೇ ದಿನದಾಟದಲ್ಲಿ ಭೋಜನ ವಿರಾಮಕ್ಕೂ ಮುನ್ನವೇ ನ್ಯೂಜಿಲೆಂಡ್ ಪಂದ್ಯವನ್ನು ತನ್ನ ಹಿಡಿತಕ್ಕೆ ಪಡೆದುಕೊಂಡಿದೆ. ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆಯಂತಹ ಸ್ಟಾರ್ ಆಟಗಾರರು ಪೆವಿಲಿಯನ್ ಕಡೆ ಮುಖ ಮಾಡಿದ್ದಾರೆ.
IND vs NZ 1st Test, Day 4 LIVE Score
Axar Patel: ಮೂರನೇ ದಿನದಾಟದ ಬಳಿಕ ವಿಶೇಷ ಮಾಹಿತಿ ಹಂಚಿಕೊಂಡ ದಾಖಲೆ ವೀರ ಅಕ್ಷರ್ ಪಟೇಲ್
(Dinesh Karthik opined that target of around 275 will be winning one for India against New Zealand in 1st Test)