AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಕಾನ್ಪುರ ಟೆಸ್ಟ್​ನಲ್ಲೂ ಪೂಜಾರ ಬ್ಯಾಟ್ ಸದ್ದು ಮಾಡಲಿಲ್ಲ; ಟೀಂ ಇಂಡಿಯಾದಲ್ಲಿ ಮುಗಿಯಿತಾ ಚೇತೇಶ್ವರ್ ಯುಗ?

IND vs NZ: ಪೂಜಾರ ಮೊದಲ ಇನಿಂಗ್ಸ್‌ನಲ್ಲಿ 26 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟ್‌ನಿಂದ 22 ರನ್‌ಗಳು ಬಂದವು. ಎರಡೂ ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ ಒಟ್ಟು ರನ್‌ಗಳು 48.

IND vs NZ: ಕಾನ್ಪುರ ಟೆಸ್ಟ್​ನಲ್ಲೂ ಪೂಜಾರ ಬ್ಯಾಟ್ ಸದ್ದು ಮಾಡಲಿಲ್ಲ; ಟೀಂ ಇಂಡಿಯಾದಲ್ಲಿ ಮುಗಿಯಿತಾ ಚೇತೇಶ್ವರ್ ಯುಗ?
ಚೇತೇಶ್ವರ ಪೂಜಾರ
TV9 Web
| Edited By: |

Updated on: Nov 28, 2021 | 12:28 PM

Share

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯವು ಭಾರತದ ಅನೇಕ ಆಟಗಾರರಿಗೆ ಮುಖ್ಯವಾಗಿದೆ. ದೇಶದ ಅನೇಕ ದೊಡ್ಡ ಆಟಗಾರರು ಈ ಪಂದ್ಯದಲ್ಲಿ ಆಡುತ್ತಿಲ್ಲ ಮತ್ತು ಅವರ ಸ್ಥಾನದಲ್ಲಿ ಅನೇಕ ಯುವಕರು ತಮ್ಮನ್ನು ತಾವು ಸಾಬೀತುಪಡಿಸುವ ಅವಕಾಶವನ್ನು ಪಡೆದಿದ್ದಾರೆ. ಯುವಕರ ಜತೆಗೆ ತಂಡದ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಅವರಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ತಮ್ಮ ಕಳಪೆ ಫಾರ್ಮ್‌ನಿಂದಾಗಿ ಪೂಜಾರ ದೀರ್ಘಕಾಲ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದರು. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಅವರು ತಂಡದ ಉಪನಾಯಕ ಮತ್ತು ಪ್ರಮುಖ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅವರು ರನ್ ಮತ್ತು ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಪೂಜಾರ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲರಾದರು. ಇದೀಗ ತಂಡದಲ್ಲಿ ಅವರ ಸ್ಥಾನದಲ್ಲಿ ಬಿಕ್ಕಟ್ಟು ಹೆಚ್ಚಿದೆ.

ಪೂಜಾರ ಮೊದಲ ಇನಿಂಗ್ಸ್‌ನಲ್ಲಿ 26 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟ್‌ನಿಂದ 22 ರನ್‌ಗಳು ಬಂದವು. ಎರಡೂ ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ ಒಟ್ಟು ರನ್‌ಗಳು 48. ಅದಕ್ಕಿಂತ ಹೆಚ್ಚಾಗಿ, ತಂಡಕ್ಕೆ ಅವರ ವಿಕೆಟ್ ಹೆಚ್ಚು ಬೇಕಾದಾಗ ಪೂಜಾರ ಅವರ ವಿಕೆಟ್ ಕಳೆದುಕೊಂಡರು. 2021ರಲ್ಲಿ ಪೂಜಾರ ಅವರ ದಾಖಲೆ ನೋಡಿದರೆ ಅವರ ರನ್‌ಗಳ ಬರ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. 2021 ರಲ್ಲಿ ಆಡಿದ ಟೆಸ್ಟ್ ಪಂದ್ಯದ 21 ಇನ್ನಿಂಗ್ಸ್‌ಗಳಲ್ಲಿ, ಅವರು 30.42 ಸರಾಸರಿಯಲ್ಲಿ ಒಟ್ಟು 639 ರನ್ ಗಳಿಸಿದ್ದಾರೆ. ಅವರು 50, 77, 25, 56, 73, 15, 21, 7, 0, 17, 8, 15, 4, 12, 9, 45, 1, 91, 4, 61, 26, 22 ರ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಎರಡು ಅರ್ಧ ಶತಕಗಳನ್ನು ಗಳಿಸಿದರು ಆದರೆ ಅಂದಿನಿಂದ ಅವರ ಬ್ಯಾಟ್ ಶಾಂತವಾಗಿದೆ. ಬಹಳ ದಿನಗಳಿಂದ ಅವರ ಬ್ಯಾಟ್‌ನಿಂದ ಶತಕ ಬಂದಿಲ್ಲ. ಪೂಜಾರ ತಮ್ಮ ಕೊನೆಯ ಶತಕವನ್ನು 2019 ರಲ್ಲಿ ಗಳಿಸಿದರು. ಅವರು 2019 ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಶತಕವನ್ನು ಗಳಿಸಿದರು. ಆ ಪಂದ್ಯದಲ್ಲಿ ಪೂಜಾರ 193 ರನ್ ಗಳಿಸಿದರು.

ಅಯ್ಯರ್ ಸವಾಲು ಈ ಪ್ರದರ್ಶನದ ಹಿನ್ನೆಲೆಯಲ್ಲಿ ಪೂಜಾರ ಸ್ಥಾನಕ್ಕೆ ಬಿಕ್ಕಟ್ಟು ಎದುರಾಗಿದೆ. ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರಿಂದಲೂ ಸವಾಲು ಎದುರಾಗಿದೆ. ಅಯ್ಯರ್ ಕಾನ್ಪುರ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದರು. ಟೆಸ್ಟ್‌ನಲ್ಲಿ ಪೂಜಾರ ಬದಲಿಗೆ ಅಯ್ಯರ್‌ ಅವರಿಂದ ಭಾರತಕ್ಕೆ ಆಯ್ಕೆ ಸಿಗುತ್ತಿದೆ. ಇದಲ್ಲದೇ ಸೂರ್ಯಕುಮಾರ್ ಯಾದವ್ ಕೂಡ ಪೂಜಾರಗೆ ಸವಾಲೊಡ್ಡಿದ್ದಾರೆ. ಯಾದವ್ ಸೀಮಿತ ಓವರ್‌ಗಳಲ್ಲಿ ಭಾರತ ತಂಡದ ಭಾಗವಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಆದರೆ ಅವರು ಇನ್ನೂ ಪದಾರ್ಪಣೆ ಮಾಡಿಲ್ಲ.

ಮುಂಬೈನಲ್ಲಿ ನಡೆಯಲಿರುವ ಮುಂದಿನ ಟೆಸ್ಟ್ ಪಂದ್ಯದಲ್ಲಿ ಪೂಜಾರ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ. ಏಕೆಂದರೆ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮರಳುತ್ತಾರೆ, ಆದ್ದರಿಂದ ಯಾರಾದರೂ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಬೇಕು. ಒಂದು ವೇಳೆ ಅಯ್ಯರ್ ಶತಕ ಬಾರಿಸಿದರಿಂದ ಅವರು ತಂಡದಿಂದ ಔಟಾಗುವ ಸಾಧ್ಯತೆ ನಗಣ್ಯ. ಆದ್ದರಿಂದ ಮೊದಲ ಪಂದ್ಯದಲ್ಲಿ ತಂಡದ ನಾಯಕರಾಗಿರುವ ಪೂಜಾರ ಅಥವಾ ಅಜಿಂಕ್ಯ ರಹಾನೆ ಅವರನ್ನು ಕೈಬಿಡಬಹುದು. ಪೂಜಾರ ಸ್ಥಿತಿ ಬಹುತೇಕ ರಹಾನೆ ಸ್ಥಿತಿಯಂತೆಯೇ ಇದೆ. ಅವರೂ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದು, ಇಬ್ಬರಿಗೂ ಅಯ್ಯರ್ ಸವಾಲಾಗುತ್ತಿದ್ದಾರೆ.