ದೆಹಲಿ ಪ್ರೀಮಿಯರ್ ಲೀಗ್ನ 2ನೇ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಹಿಮಾಂಶು ಚೌಹಾಣ್ ಅವರ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ ಕಿಂಗ್ಸ್ ಬ್ಯಾಟರ್ಗಳು ಪೆವಿಲಿಯನ್ ಪೆರೇಡ್ ನಡೆಸಿದರು.
ಪರಿಣಾಮ 50 ರನ್ಗಳಿಸುವಷ್ಟರಲ್ಲಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ದಾಳಿಗಿಳಿದ ಸಿಮರ್ಜೀತ್ ಸಿಂಗ್ ಹಾಗೂ ರೌನಕ್ ವಘೇಲಾ ಸಹ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಇದರೊಂದಿಗೆ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು 8.1 ಓವರ್ಗಳಲ್ಲಿ 61 ರನ್ಗಳಿಸಿ ಆಲೌಟ್ ಆಯಿತು.
62 ರನ್ಗಳ ಗುರಿಯನ್ನು ಬೆನ್ನತ್ತಲು ಈಸ್ಟ್ ಡೆಲ್ಲಿ ರೈಡರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಅನೂಜ್ ರಾವತ್ ಹಾಗೂ ಹಿಮ್ಮತ್ ಸಿಂಗ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಸಿಡಿಲಬ್ಬರ ಆರಂಭಿಸಿದ ಅನೂಜ್ 12 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 25 ರನ್ ಬಾರಿಸಿದರು.
ಮತ್ತೊಂದೆಡೆ 13 ಎಸೆತಗಳನ್ನು ಎದುರಿಸಿದ ಹಿಮ್ಮತ್ ಸಿಂಗ್ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 31 ರನ್ ಚಚ್ಚಿದ್ದರು. ಈ ಮೂಲಕ ಕೇವಲ 4.1 ಓವರ್ಗಳಲ್ಲಿ 62 ರನ್ ಬಾರಿಸಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈಸ್ಟ್ ಡೆಲ್ಲಿ ರೈಡರ್ಸ್ ತಂಡ: ಅನೂಜ್ ರಾವತ್, ಸಿಮರ್ಜೀತ್ ಸಿಂಗ್, ಹಿಮ್ಮತ್ ಸಿಂಗ್, ಹಿಮಾಂಶು ಚೌಹಾಣ್, ಹರ್ಷ್ ತ್ಯಾಗಿ, ವೈಭವ್ ಶರ್ಮಾ, ಮಯಾಂಕ್ ರಾವತ್, ಸಮರ್ಥ್ ಸೇಠ್, ಪ್ರಣವ್ ಪಂತ್, ಸುಜಲ್ ಸಿಂಗ್, ಹಾರ್ದಿಕ್ ಶರ್ಮಾ, ರೌನಕ್ ವಘೇಲಾ, ಅಗ್ರಿಮ್ ಶರ್ಮಾ, ಶಂತನು ಸಿಂಗ್, ಭಗವಾನ್ ಯಾದವ್, ಭಗವಾನ್ ಯಾದವ್ ಚೌಧರಿ, ಸಾಗರ್ ಖತ್ರಿ, ಶಿವಂ ಕುಮಾರ್ ತ್ರಿಪಾಠಿ, ರಿಷಭ್ ರಾಣಾ, ಲಕ್ಷಯ ಸಾಂಗ್ವಾನ್.
ಇದನ್ನೂ ಓದಿ: IPL 2025: RCB ಪರ ಆಡುವ ಇಂಗಿತ ವ್ಯಕ್ತಪಡಿಸಿದ ರಿಂಕು ಸಿಂಗ್
ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡ: ಯಶ್ ಧುಲ್, ಪ್ರಿನ್ಸ್ ಚೌಧರಿ, ಹಿತೇನ್ ದಲಾಲ್, ಜಾಂಟಿ ಸಿಧು, ಲಕ್ಷಯ್ ಥರೇಜಾ, ಯೋಗೇಶ್ ಶರ್ಮಾ, ಮನಿ ಗ್ರೆವಾರ್, ಕೇಶವ್ ದಬಾಸ್, ಶೌರ್ಯ ಮಲಿಕ್, ಸೌರವ್ ದಾಗರ್, ಆರ್ಯನ್ ರಾಣಾ, ಸಿದ್ಧಾಂತ್ ಬನ್ಸಾಲ್, ರಜನೀಶ್ ದಾದರ್, ಸುಮಿತ್ ಕುಮಾರ್, ಕೌಶಲ್ ಸುಮನ್, ದೀಪ್ ಬಲ್ಯಾನ್, ವಿಶಾಂತ್ ಭಾಟಿ, ಧ್ರುವ ಕೌಶಿಕ್, ಅಜಯ್ ಗುಲಿಯಾ.