WI vs SA: ವೆಸ್ಟ್ ಇಂಡೀಸ್ ಟಿ20 ತಂಡ ಪ್ರಕಟ: ಆ್ಯಂಡ್ರೆ ರಸೆಲ್ ಔಟ್
West Indies vs South Africa: ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಮುಗಿದಿದೆ. 2 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಡ್ರಾ ನಲ್ಲಿ ಅಂತ್ಯ ಕಂಡಿತ್ತು. ಇನ್ನು ದ್ವಿತೀಯ ಟೆಸ್ಟ್ ಪಂದ್ಯವನ್ನು 40 ರನ್ಗಳಿಂದ ಗೆಲ್ಲುವಲ್ಲಿ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿದೆ. ಈ ಮೂಲಕ 1-0 ಅಂತರದಿಂದ ಸರಣಿ ಜಯಿಸಿದೆ.
ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ರೋವ್‌ಮನ್ ಪೊವೆಲ್ ಮುನ್ನಡೆಸಲಿದ್ದಾರೆ. ಇನ್ನು ಈ ಬಳಗದಲ್ಲಿ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಂದರೆ ಟಿ20 ವಿಶ್ವಕಪ್ 2024ರ ವೆಸ್ಟ್ ಇಂಡೀಸ್ ತಂಡದಲ್ಲಿ ರಸೆಲ್ ಇದ್ದರು. ಆದರೆ ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ವಿಂಡೀಸ್ ಆಲ್ರೌಂಡರ್ ಹೊರಗುಳಿದಿದ್ದಾರೆ.
ಇನ್ನು ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ವಿಶ್ರಾಂತಿ ಪಡೆದಿದ್ದ ಅಲ್ಝಾರಿ ಜೋಸೆಫ್ ಈ ಸರಣಿಗೂ ಅಲಭ್ಯರಾಗಿದ್ದಾರೆ. ಹಾಗೆಯೇ ಗಾಯಗೊಂಡಿರುವ ಆರಂಭಿಕ ಬ್ಯಾಟರ್ ಬ್ರ್ಯಾಂಡನ್ ಕಿಂಗ್ 3 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅದರಂತೆ ವೆಸ್ಟ್ ಇಂಡೀಸ್ ಟಿ20 ತಂಡದ ಈ ಕೆಳಗಿನಂತಿದೆ…
ವೆಸ್ಟ್ ಇಂಡೀಸ್ ಟಿ20 ತಂಡ: ರೋವ್‌ಮನ್ ಪೊವೆಲ್ (ನಾಯಕ), ರೋಸ್ಟನ್ ಚೇಸ್, ಅಲಿಕ್ ಅಥಾನಾಝ್, ಜಾನ್ಸನ್ ಚಾರ್ಲ್ಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಫ್ಯಾಬಿಯನ್ ಅಲೆನ್, ಶಾಯ್ ಹೋಪ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಓಬೆಡ್ ಮೆಕಾಯ್, ಗುಡಾಕೇಶ್ ಮೋಟಿ, ನಿಕೋಲಸ್ ಪೂರನ್, ಶೆರ್ಫೇನ್ ರುದರ್‌ಫೋರ್ಡ್, ರೋಮರ್ ಶೆಫರ್ಡ್.
ಇದನ್ನೂ ಓದಿ: IPL 2025: RCB ಪರ ಆಡುವ ಇಂಗಿತ ವ್ಯಕ್ತಪಡಿಸಿದ ರಿಂಕು ಸಿಂಗ್
ಸೌತ್ ಆಫ್ರಿಕಾ ಟಿ20 ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನೀಲ್ ಬಾರ್ಟ್‌ಮ್ಯಾನ್, ನಾಂಡ್ರೆ ಬರ್ಗರ್, ಡೊನೊವನ್ ಫೆರೇರಾ, ಜಾರ್ನ್ ಫೋರ್ಚುಯಿನ್, ರೀಝ ಹೆಂಡ್ರಿಕ್ಸ್, ಪ್ಯಾಟ್ರಿಕ್ ಕ್ರುಗರ್, ಕ್ವೆನಾ ಮಫಕಾ, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ರಿಯಾನ್ ರಿಕೆಲ್ಟನ್, ಜೇಸನ್ ಸ್ಮಿತ್, ಟ್ರಿಸ್ಟನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಲಿಝಾಡ್ ವಿಲಿಯಮ್ಸ್.
ಸೌತ್ ಆಫ್ರಿಕಾ-ವೆಸ್ಟ್ ಇಂಡೀಸ್ ಸರಣಿ ಯಾವಾಗ ಶುರು?
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯು ಆಗಸ್ಟ್ 23 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಸೌತ್ ಆಫ್ರಿಕಾ ತಂಡವು ಒಟ್ಟು 3 ಪಂದ್ಯಗಳನ್ನಾಡಲಿದೆ. ಮೊದಲ ಪಂದ್ಯವು ಆಗಸ್ಟ್ 23 ರಂದು ನಡೆದರೆ, 2ನೇ ಪಂದ್ಯವು ಆಗಸ್ಟ್ 25 ರಂದು ಜರುಗಲಿದೆ. ಇನ್ನು ಮೂರನೇ ಪಂದ್ಯವು ಆಗಸ್ಟ್ 27 ರಂದು ನಡೆಯಲಿದೆ. ಈ ಎಲ್ಲಾ ಪಂದ್ಯಗಳಿಗೆ ಟ್ರಿನಿಡಾಡ್–ಟೊಬಾಗೊದಲ್ಲಿರುವ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಮೈದಾನ ಆತಿಥ್ಯವಹಿಸಲಿದೆ.