WCL 2024: ಗೇಲ್ ಸಿಡಿಲಬ್ಬರ: ವೆಸ್ಟ್ ಇಂಡೀಸ್​ ಚಾಂಪಿಯನ್ಸ್​ಗೆ ಜಯ

World Championship of Legends 2024: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಎಂಬುದು ಮಾಜಿ ಆಟಗಾರರ ಟೂರ್ನಿ. ಈ ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್, ಪಾಕಿಸ್ತಾನ್, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 6 ತಂಡಗಳು ಕಣಕ್ಕಿಳಿಯುತ್ತಿದೆ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಈ ಟೂರ್ನಿಯ 9 ಪಂದ್ಯಗಳು ಮುಗಿದಿದೆ.

WCL 2024: ಗೇಲ್ ಸಿಡಿಲಬ್ಬರ: ವೆಸ್ಟ್ ಇಂಡೀಸ್​ ಚಾಂಪಿಯನ್ಸ್​ಗೆ ಜಯ
Chris Gayle
Follow us
|

Updated on: Jul 08, 2024 | 11:27 AM

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟೂರ್ನಿಯ 9ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ (Chris Gayle). ಸೌತ್ ಆಫ್ರಿಕಾ ಚಾಂಪಿಯನ್ಸ್​ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಎನ್​ ಮೆಕೆಂಜಿ ಶೂನ್ಯಕ್ಕೆ ಔಟಾದರೆ, ಮತ್ತೋರ್ವ ಆರಂಭಿಕ ಲೆವಿ ಕೇವಲ 20 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ನಾಯಕ ಜಾಕ್ಸ್ ಕಾಲಿಸ್ 18 ರನ್​ಗಳಿಸಿದರೆ, ಜೆಪಿ ಡುಮಿನಿ 23 ರನ್​ಗಳ ಕೊಡುಗೆ ನೀಡಿದರು. ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಶ್ವೆಲ್ ಪ್ರಿನ್ಸ್ 35 ಎಸೆತಗಳಲ್ಲಿ 46 ರನ್ ಬಾರಿಸಿದರೆ, ಡೇನ್ ವಿಲಾಸ್ 17 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 44 ರನ್ ಚಚ್ಚಿದರು. ಈ ಮೂಲಕ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು.

ಕ್ರಿಸ್ ಗೇಲ್ ಸಿಡಿಲಬ್ಬರ:

175 ರನ್​ಗಳ ಕಠಿಣ ಗುರಿ ಪಡೆದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಕ್ಕೆ ನಾಯಕ ಕ್ರಿಸ್ ಗೇಲ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಗೇಲ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್​ಗಳ ಸುರಿಮಳೆಗೈದರು.

ಅಲ್ಲದೆ ಕೇವಲ 40 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 70 ರನ್ ಬಾರಿಸಿ ಕ್ರಿಸ್ ಗೇಲ್ ಔಟಾದರು. ಅಷ್ಟರಲ್ಲಾಗಲೇ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡದ ಸ್ಕೋರ್ 13 ಓವರ್​ಗಳಲ್ಲಿ 124 ಕ್ಕೆ ತಲುಪಿತ್ತು.

ಕ್ರಿಸ್ ಗೇಲ್ ಬ್ಯಾಟಿಂಗ್ ವಿಡಿಯೋ:

ಆ ಬಳಿಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಚಾಡ್ವಿಕ್ ವಾಲ್ಟರ್ 29 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 56 ರನ್ ಬಾರಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು 19.1 ಓವರ್​ಗಳಲ್ಲಿ ಗುರಿ ತಲುಪಿ 6 ವಿಕೆಟ್​ಗಳ ಜಯ ಸಾಧಿಸಿತು.

ಸೌತ್ ಆಫ್ರಿಕಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಿಚರ್ಡ್ ಲೆವಿ (ವಿಕೆಟ್ ಕೀಪರ್) , ನೀಲ್ ಮೆಕೆಂಜಿ , ಜಾಕ್ಸ್ ಕಾಲಿಸ್ (ನಾಯಕ) , ಜೀನ್-ಪಾಲ್ ಡುಮಿನಿ , ಆಶ್ವೆಲ್ ಪ್ರಿನ್ಸ್ , ಜಸ್ಟಿನ್ ಒಂಟಾಂಗ್ , ಡೇನ್ ವಿಲಾಸ್ , ವೆರ್ನಾನ್ ಫಿಲಾಂಡರ್ , ಚಾರ್ಲ್ ಲ್ಯಾಂಗೆವೆಲ್ಡ್ , ಡೇಲ್ ಸ್ಟೇನ್ , ಇಮ್ರಾನ್ ತಾಹಿರ್.

ಇದನ್ನೂ ಓದಿ: Team India: ಕೊನೆಯ 10 ಓವರ್​ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಪ್ಲೇಯಿಂಗ್ 11: ಡ್ವೇನ್ ಸ್ಮಿತ್ , ಕ್ರಿಸ್ ಗೇಲ್ (ನಾಯಕ) , ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್) , ಜೊನಾಥನ್ ಕಾರ್ಟರ್ , ಕಿರ್ಕ್ ಎಡ್ವರ್ಡ್ಸ್ , ಆಶ್ಲೇ ನರ್ಸ್ , ನವೀನ್ ಸ್ಟೀವರ್ಟ್ , ರಾಯದ್ ಎಮ್ರಿಟ್ , ಟಿನೋ ಬೆಸ್ಟ್ , ಸ್ಯಾಮ್ಯುಯೆಲ್ ಬದ್ರೀ , ಸುಲೈಮಾನ್ ಬೆನ್ , ಜೇಸನ್ ಮೊಹಮ್ಮದ್.

ತಾಜಾ ಸುದ್ದಿ
ಮುಡಾ ಹಗರಣ ಬಿಜೆಪಿಯ ಸೃಷ್ಟಿ, ಅಧಿವೇಶನದಲ್ಲಿ ಉತ್ತರಿಸಲು ರೆಡಿ; ಶಿವಕುಮಾರ್
ಮುಡಾ ಹಗರಣ ಬಿಜೆಪಿಯ ಸೃಷ್ಟಿ, ಅಧಿವೇಶನದಲ್ಲಿ ಉತ್ತರಿಸಲು ರೆಡಿ; ಶಿವಕುಮಾರ್
ಲೇಟೆಸ್ಟ್​ ಗ್ಯಾಲಕ್ಸಿ ಫೋಲ್ಡ್​ ಫೋನ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಲೇಟೆಸ್ಟ್​ ಗ್ಯಾಲಕ್ಸಿ ಫೋಲ್ಡ್​ ಫೋನ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಮಂಗಳೂರು: ಸಾಕು ನಾಯಿಯನ್ನ ಹೊತ್ತೊಯ್ದ ಚಿರತೆ; ವಿಡಿಯೋ ಸೆರೆ
ಮಂಗಳೂರು: ಸಾಕು ನಾಯಿಯನ್ನ ಹೊತ್ತೊಯ್ದ ಚಿರತೆ; ವಿಡಿಯೋ ಸೆರೆ
ತುಮಕೂರಿನ ಅಂಗನವಾಡಿಯಲ್ಲಿ ಕುಕ್ಕರ್ ಸಿಡಿತ: ತಪ್ಪಿದ ಭಾರೀ ಅನಾಹುತ
ತುಮಕೂರಿನ ಅಂಗನವಾಡಿಯಲ್ಲಿ ಕುಕ್ಕರ್ ಸಿಡಿತ: ತಪ್ಪಿದ ಭಾರೀ ಅನಾಹುತ
ಮಜಾ ಟಾಕೀಸ್​​ನಿಂದ ಅಪರ್ಣಾ ಕರೀಯರ್​ನಲ್ಲಿ ಭಾರೀ ಬದಲಾವಣೆ: ಇಂದ್ರಜಿತ್
ಮಜಾ ಟಾಕೀಸ್​​ನಿಂದ ಅಪರ್ಣಾ ಕರೀಯರ್​ನಲ್ಲಿ ಭಾರೀ ಬದಲಾವಣೆ: ಇಂದ್ರಜಿತ್
‘ನಮ್ಮ ಮೆಟ್ರೋ ಇರುವ ತನಕ ಅಪರ್ಣಾ ಧ್ವನಿ ಇರಬೇಕು’: ಸೃಜನ್​ ಲೋಕೇಶ್​ ಮನವಿ
‘ನಮ್ಮ ಮೆಟ್ರೋ ಇರುವ ತನಕ ಅಪರ್ಣಾ ಧ್ವನಿ ಇರಬೇಕು’: ಸೃಜನ್​ ಲೋಕೇಶ್​ ಮನವಿ
ಮಗನ ಮದುವೆಯ ಶುಭ ಸಂದರ್ಭದಲ್ಲಿ ವಾರಣಾಸಿಗೆ ಗೌರವ ಸಲ್ಲಿಸಿದ ನೀತಾ ಅಂಬಾನಿ
ಮಗನ ಮದುವೆಯ ಶುಭ ಸಂದರ್ಭದಲ್ಲಿ ವಾರಣಾಸಿಗೆ ಗೌರವ ಸಲ್ಲಿಸಿದ ನೀತಾ ಅಂಬಾನಿ
ಮಜಾ ಟಾಕೀಸ್ ನಲ್ಲಿ ಕೆಲಸ ಮಾಡುವಂತೆ ಅಪರ್ಣಾಗೆ ನಾನೇ ಹೇಳಿದ್ದೆ: ಗ್ರೀಷ್ಮಾ
ಮಜಾ ಟಾಕೀಸ್ ನಲ್ಲಿ ಕೆಲಸ ಮಾಡುವಂತೆ ಅಪರ್ಣಾಗೆ ನಾನೇ ಹೇಳಿದ್ದೆ: ಗ್ರೀಷ್ಮಾ
ಅಪರ್ಣಾ ಪಾರ್ಥೀವ ಶರೀರದ ಮುಂದೆ ಮಜಾ ಟಾಕೀಸ್ ಸೃಜನ್ ಲೋಕೇಶ್ ಭಾವುಕ!
ಅಪರ್ಣಾ ಪಾರ್ಥೀವ ಶರೀರದ ಮುಂದೆ ಮಜಾ ಟಾಕೀಸ್ ಸೃಜನ್ ಲೋಕೇಶ್ ಭಾವುಕ!
ನನ್ನ ಈ ಮುಖ ಯಾರಿಗೂ ತಿಳಿಯುವುದು ಬೇಡ ಎಂದಿದ್ದರು ಅಪರ್ಣಾ
ನನ್ನ ಈ ಮುಖ ಯಾರಿಗೂ ತಿಳಿಯುವುದು ಬೇಡ ಎಂದಿದ್ದರು ಅಪರ್ಣಾ