Dhoni Birthday: ಧೋನಿ ಬರ್ತ್​ಡೇ ಆಚರಿಸಿ ಹೊಸ ನಿಕ್ ನೇಮ್ ಕೊಟ್ಟ ಸಲ್ಮಾನ್ ಖಾನ್

ಕ್ರಿಕೆಟ್ ಲೋಕ ಹಾಗೂ ಬಣ್ಣದ ಲೋಕದ ಮಧ್ಯೆ ಒಳ್ಳೆಯ ನಂಟಿದೆ. ಅನೇಕ ಕ್ರಿಕೆಟರ್​ಗಳು ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಳ್ಳುತ್ತಾರೆ. ಈಗ ಸಲ್ಮಾನ್ ಖಾನ್ ಅವರು ಧೋನಿ ಬರ್ತ್​ಡೇನ ಆಚರಿಸಿದ್ದಾರೆ. ಆ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.

Dhoni Birthday: ಧೋನಿ ಬರ್ತ್​ಡೇ ಆಚರಿಸಿ ಹೊಸ ನಿಕ್ ನೇಮ್ ಕೊಟ್ಟ ಸಲ್ಮಾನ್ ಖಾನ್
ಸಲ್ಮಾನ್-ಧೋನಿ
Follow us
|

Updated on: Jul 08, 2024 | 11:29 AM

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು ಭಾನುವಾರ (ಜುಲೈ) 43ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರ ಬರ್ತ್​ಡೇನ ನಟ ಸಲ್ಮಾನ್ ಖಾನ್ ಅವರು ಮುಂಬೈನಲ್ಲಿರುವ ತಮ್ಮ ಗ್ಯಾಲಾಕ್ಸಿ ಅಪಾರ್ಟ್​ಮೆಂಟ್​ನಲ್ಲಿ ಅದ್ದೂರಿಯಾಗಿ ಆಚರಿಸಿದ್ದಾರೆ. ಈ ವೇಳೆ ಧೋನಿ ಜೊತೆ ಅವರ ಪತ್ನಿ ಸಾಕ್ಷಿ ಕೂಡ ಇದ್ದರು. ಬರ್ತ್​ಡೇ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.

ಧೋನಿ ಅವರಿಗಾಗಿ ಸಲ್ಮಾನ್ ಖಾನ್ ಅವರು ವಿಶೇಷ ಕೇಕ್ ತರಿಸಿದ್ದರು. ಈ ಕೇಕ್​ನ ಧೋನಿ ಅವರು ಕತ್ತರಿಸಿದ್ದಾರೆ. ಕೇಕ್​ನ ಮೊದಲು ಪತ್ನಿ ಸಾಕ್ಷಿಗೆ ತಿನ್ನಿಸಿದ್ದಾರೆ. ಸಲ್ಮಾನ್ ಖಾನ್ ಅವರು ಧೋನಿ ಜೊತೆ ಇರೋ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಜನ್ಮದಿನದ ಶುಭಾಶಯಗಳು ಕಪ್ತಾನ್ (ಕ್ಯಾಪ್ಟನ್) ಸಹಾಬ್’ ಎಂದಿದ್ದಾರೆ. ಧೋನಿಗೆ ಸಲ್ಲು ಕೊಟ್ಟಿರೋ ವಿಶೇಷ ಹೆಸರು ಇಷ್ಟ ಆಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್, ಕಮಲ್ ಹಾಸನ್ ಜೊತೆ ಅಟ್ಲಿ ಹೊಸ ಸಿನಿಮಾ? ಸನ್ ಪಿಕ್ಚರ್ಸ್ ನಿರ್ಮಾಣ

ಸಲ್ಮಾನ್ ಹಾಗೂ ಧೋನಿ ಒಟ್ಟಾಗಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಸಂಗೀತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಸಲ್ಮಾನ್ ಖಾನ್ ಅವರು ಧೋನಿಯವರನ್ನು ತಮ್ಮ ಮನೆಗೆ ಆಮಂತ್ರಿಸಿರಬಹುದು ಎಂದು ಅನೇಕರು ಹೇಳಿದ್ದಾರೆ. ಈ ಸಂಗೀತ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು.

ಸಲ್ಮಾನ್ ಖಾನ್ ಅವರು ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಎಆರ್​ ಮುರುಗದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಈ ಚಿತ್ರಕ್ಕೆ ನಾಯಕಿ. ಇಬ್ಬರೂ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಧೋನಿ ಅವರು ಸಿನಿಮಾ ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಅವರು ಶೀಘ್ರವೇ ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
Budget 2024 ಹಲ್ವಾ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ
Budget 2024 ಹಲ್ವಾ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ
ಸದನದಲ್ಲಿ ನಡೆಯುತ್ತಿರುವ ಚರ್ಚೆಗಳು ಕಳವಳಕಾರಿ ಮತ್ತು ವ್ಯರ್ಥ ಅನಿಸುತ್ತಿವೆ
ಸದನದಲ್ಲಿ ನಡೆಯುತ್ತಿರುವ ಚರ್ಚೆಗಳು ಕಳವಳಕಾರಿ ಮತ್ತು ವ್ಯರ್ಥ ಅನಿಸುತ್ತಿವೆ
ಗಾಯಾಳು ನೆರವಿಗೆ ಧಾವಿಸದ ಪೊಲೀಸ್ರು, ಮಾನವೀಯತೆ ಮರೆತರಾ?
ಗಾಯಾಳು ನೆರವಿಗೆ ಧಾವಿಸದ ಪೊಲೀಸ್ರು, ಮಾನವೀಯತೆ ಮರೆತರಾ?
ಚುನಾವಣಾ ಸೋಲುಗಳಿಗೆ ಕುಮಾರಸ್ವಾಮಿ ಕುಟುಂಬ ಬೇರೆಯವರನ್ನು ದೂಷಿಸುತ್ತದೆ!
ಚುನಾವಣಾ ಸೋಲುಗಳಿಗೆ ಕುಮಾರಸ್ವಾಮಿ ಕುಟುಂಬ ಬೇರೆಯವರನ್ನು ದೂಷಿಸುತ್ತದೆ!
ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹುಚ್ಚಾಟ; ಕಾರಿನ ಹಿಂಭಾಗ ನೇತಾಡಿ ಪ್ರಯಾಣ
ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹುಚ್ಚಾಟ; ಕಾರಿನ ಹಿಂಭಾಗ ನೇತಾಡಿ ಪ್ರಯಾಣ
ಸದನದಲ್ಲಿ ‘ವಾಲ್ಮೀಕಿ' ಹಗರಣ ಗುದ್ದಾಟ: ಸಿದ್ದರಾಮಯ್ಯ ನೆಮ್ಮದಿಗೆ ಭಂಗವಿಲ್ಲ
ಸದನದಲ್ಲಿ ‘ವಾಲ್ಮೀಕಿ' ಹಗರಣ ಗುದ್ದಾಟ: ಸಿದ್ದರಾಮಯ್ಯ ನೆಮ್ಮದಿಗೆ ಭಂಗವಿಲ್ಲ
ಶೇಕಡ 58ರಷ್ಟು ಹೆಚ್ಚಲಿದೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ!
ಶೇಕಡ 58ರಷ್ಟು ಹೆಚ್ಚಲಿದೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ!
ಜೈಲಿನಲ್ಲಿರುವ ಪ್ರಜ್ವಲ್​ ರೇವಣ್ಣಗೆ ಎರಡು ಬ್ಯಾಗ್​ನಲ್ಲಿ ಬಂತು ಸ್ಪೆಷಲ್ ಊಟ
ಜೈಲಿನಲ್ಲಿರುವ ಪ್ರಜ್ವಲ್​ ರೇವಣ್ಣಗೆ ಎರಡು ಬ್ಯಾಗ್​ನಲ್ಲಿ ಬಂತು ಸ್ಪೆಷಲ್ ಊಟ
ಶಿವಕುಮಾರ್ ಸದನದಲ್ಲಿ ಮಾತಾಡುವ ಶೈಲಿ ಬದಲಿಸದಿದ್ದರೆ ವಿಪಕ್ಷ ಅನುಕರಿಸುತ್ತದೆ
ಶಿವಕುಮಾರ್ ಸದನದಲ್ಲಿ ಮಾತಾಡುವ ಶೈಲಿ ಬದಲಿಸದಿದ್ದರೆ ವಿಪಕ್ಷ ಅನುಕರಿಸುತ್ತದೆ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ